ಕಳವು ಪ್ರಕರಣ
- ಕಾರ್ಕಳ ನಗರ:ಕಾರ್ಕಳ ತಾಲೂಕಿನ ಕಸಬ ಗ್ರಾಮದ ಆನೆಕೆರೆ ಎಂಬಲ್ಲಿರುವ ಶ್ರೀ ಕೃಷ್ಣ ಕ್ಷೇತ್ರ ದೇವಸ್ಥಾನದ ಪೂರ್ವ ಬದಿಯ ಬಾಗಿಲನ್ನು ಯಾರೋ ಕಳ್ಳರು ದಿನಾಂಕ:25/12/2014 ರಂದು 20:30 ಗಂಟೆಯಿಂದ ದಿನಾಂಕ:26/12/2014 ರಂದು 05:30 ಗಂಟೆಯ ಮಧ್ಯದ ಅವಧಿಯಲ್ಲಿ ತೆರೆದು ಒಳ ಪ್ರವೇಶಿಸಿ ದೇವಸ್ಥಾನದ ಒಳ ಭಾಗದಲ್ಲಿರುವ ಶ್ರೀ ಗಣಪತಿ, ಶ್ರೀ ಕೃಷ್ಣ ಮತ್ತು ಶ್ರೀ ಲಕ್ಷ್ಮೀ ದೇವರ ಗರ್ಭ ಗುಡಿಯ ಬಾಗಿಲಿಗೆ ಅಳವಡಿಸಿದ್ದ ಬೀಗಗಳನ್ನು ಮುರಿದು ಗರ್ಭಗುಡಿಯ ಒಳ ಪ್ರವೇಶಿಸಿ ಅಲ್ಲಿದ್ದ 1)ಪತಾಕೆ-4, 1 ಸತ್ತಿಗೆ ಸೇರಿ ಸುಮಾರು 2 ಕಿಲೋ ಗ್ರಾಂ ತೂಕದ ಶ್ರೀ ಕೃಷ್ಣ ದೇವರ ಬೆಳ್ಳಿಯ ಪ್ರಭಾವಳಿ–1, ಅಂದಾಜು ಮೌಲ್ಯ 1,35,000/- ರೂಪಾಯಿ, 2)ಸುಮಾರು 350 ಗ್ರಾಂ ತೂಕದ ಶ್ರೀ ಕೃಷ್ಣ ದೇವರ ಬೆಳ್ಳಿಯ ಕಿರೀಟ-1, ಅಂದಾಜು ಮೌಲ್ಯ 14,640/- ರೂಪಾಯಿ, 3)ಸುಮಾರು 175 ಗ್ರಾಂ, ತೂಕದ ಶ್ರೀ ಕೃಷ್ಣ ದೇವರ ಬೆಳ್ಳಿಯ ಕೊಳಲು-1, ಅಂದಾಜು ಮೌಲ್ಯ 8,400/- ರೂಪಾಯಿ, 4)ಸುಮಾರು 1.750 ಗ್ರಾಂ ತೂಕದ ಶ್ರೀ ಕೃಷ್ಣ ದೇವರ ಚಿನ್ನದ ನೇತ್ರಗಳು–2, ಅಂದಾಜು ಮೌಲ್ಯ 4,383/-ರೂಪಾಯಿ, 5)ಸುಮಾರು 1.350 ಕಿಲೋ ತೂಕದ ಶ್ರೀ ಗಣಪತಿ ದೇವರ ಬೆಳ್ಳಿಯ ಕಿರೀಟ ಸಹಿತ ಮುಖವಾಡ ಮತ್ತು 4 ಕೈಗಳ ಕವಚ–1. ಅಂದಾಜು ಮೌಲ್ಯ 56,480/- ರೂಪಾಯಿ, 6)ಸುಮಾರು 6 ಇಂಚು ಎತ್ತರ, 200 ಗ್ರಾಂ ತೂಕದ ಶ್ರೀ ಕೃಷ್ಣ ದೇವರ ಬೆಳ್ಳಿಯ ಮೂರ್ತಿ-1. ಅಂದಾಜು ಮೌಲ್ಯ 10,000/- ರೂಪಾಯಿ, 7)ಸುಮಾರು 3 ಇಂಚು ಎತ್ತರ, 100 ಗ್ರಾಂ ತೂಕದ ಶ್ರೀ ಗಣಪತಿ ದೇವರ ಬೆಳ್ಳಿಯ ಮೂರ್ತಿ - 1. ಅಂದಾಜು ಮೌಲ್ಯ 5,000/- ರೂಪಾಯಿ, 8)ಸುಮಾರು 5 ಇಂಚು ಎತ್ತರ, 150 ಗ್ರಾಂ ತೂಕದ ಶ್ರೀ ಲಕ್ಷ್ಮೀ ದೇವರ ಬೆಳ್ಳಿಯ ಮೂರ್ತಿ -1. ಅಂದಾಜು ಮೌಲ್ಯ 5,000/- ರೂಪಾಯಿ, ಮತ್ತು 9)ಸ್ಟೀಲಿನ ಕಾಣಿಕೆ ಡಬ್ಬಿಗಳು–4. (ಈ 4 ಡಬ್ಬಿಗಳಲ್ಲಿ ಒಟ್ಟು ಸುಮಾರು 15,000/- ರೂಪಾಯಿ ನಗದು ಇದೆ) ಇವುಗಳು ಸೇರಿ ಒಟ್ಟು 2,52,500/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.ಈ ಬಗ್ಗೆ ಆರ್.ಕೆ. ತಿಲಕ್ (65) ತಂದೆ:ದಿವಂಗತ ಬಿ.ಆರ್ ಅಂಚನ್,ವಾಸ:ಗಿರಿಜ, ಆನೆಕೆರೆ ಕಾರ್ಕಳ, ಮೊಕ್ತೇಸರರು, ಶ್ರೀ ಕೃಷ್ಣ ಕ್ಷೇತ್ರ, ಕಾರ್ಕಳರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 210/2014 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment