ಅಸ್ಚಾಭಾವಿಕ ಮರಣ ಪ್ರಕರಣಗಳು
- ಹಿರಿಯಡ್ಕ:ಸುರೇಂದ್ರ (24) ತಂದೆ:ಕೃಷ್ಣ ನಾಯಕ್ ವಾಸ:ಕನೇಟಿಬೈಲು ಮನೆ ಕೊತ್ಯಾರು, ಪೆರ್ಡೂರು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಇವರ ತಂದೆ ಕೃಷ್ಣ ನಾಯ್ಕ (57) ರವರು ತನ್ನ ತಂಗಿಯ ಮಾನಸಿಕ ಖಾಯಿಲೆಗೆ ಚಿಕಿತ್ಸೆ ಕೊಡಿಸಿರದೂ ಗುಣಮುಖರಾಗದ ಕಾರಣ ಹಾಗೂ ಈ ಬಗ್ಗೆ ತುಂಬ ಹಣ ಖರ್ಚಾದ್ದರಿಂದ ಆರ್ಥಿಕ ಅಡಚಣೆಯಿಂದ ಮನನೊಂದ ದಿನಾಂಕ:25/12/2014 ರಂದು ಬೆಳಿಗ್ಗೆ 05:00 ಗಂಟೆ ಸಮಯಕ್ಕೆ ಮನೆ ಹತ್ತಿರದ ಗದ್ದೆಯ ಬಳಿ ಇರುವ ಗೇರು ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ. ಈ ಬಗ್ಗೆ ಸುರೇಂದ್ರ ರವರು ನಿಡೀದ ದೂರಿನಂತೆ ಹಿರಿಯಡ್ಕ ಠಾಣಾ ಯುಡಿಆರ್ ಕ್ರಮಾಂಕ 25/2014 U/s 174 CRPC ರಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.
- ಗಂಗೊಳ್ಳಿ : ದಿನಾಂಕ: 25.12.2014 ರಂದು 19:00 ಗಂಟೆಗೆ ಮರವಂತೆ ಗ್ರಾಮದ ವರಹ ಸ್ವಾಮಿ ದೇವಸ್ಥಾನ ಎದುರು ಅರಬ್ಬಿ ಸಮುದ್ರದಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಮೃತ ದೇಹ ಸಮುದ್ರದ ಕಿನಾರೆಯಲ್ಲಿ ಮಲಗಿಸಿದ್ದು ಸದ್ರಿ ಮಹಿಳೆಯು ಸಮುದ್ರಕ್ಕೆ ಹಾರಿ ಆತ್ಮ ಹತ್ಯೆ ಮಾಡಿ ಕೊಂಡಾಗ ರಸ್ತೆಯಲ್ಲಿ ಹೋಗುವರು ನೋಡಿ ಮಹಿಳೆಯ ಮೃತ ದೇಹವನ್ನು ದಡಕ್ಕೆ ತಂದು ಹಾಕಿರುವುದು. ಮಹಿಳೆಯು ದಷ್ಠ ಪುಷ್ಟವಾಗಿದ್ದು ಹಳದಿ ಬಣ್ಣದ ರವೀಕೆ ಹಾಗೂ ಲಂಗ ಧರಿಸಿದ ಉಡುಪು ಇದೆ. ಮಹಿಳೆಯನ್ನು ಕಂಡಾಗ ಯಾವುದೇ ಸಮಸ್ಯೆಯಿಂದ ಬೇಸತ್ತು ಸಮುದ್ರಕ್ಕೆ ಹಾರಿ ಆತ್ಮ ಹತ್ಯೆ ಮಾಡಿ ಕೊಂಡಿರಬಹುದಾಗಿ ಕಂಡು ಬರುತ್ತದೆ. ಮೃತ ಮಹಿಳೆಯ ಬೆನ್ನಿನ ಹಿಂಭಾಗ ಸೊಂಟದಲ್ಲಿ ಈ ಹಿಂದೆ ಶಸ್ತ್ರ ಚಿಕಿತ್ಸೆ ಆಧ ಗಾಯದ ಗುರುತು ಇದೆ ಎಂಬುದಾಗಿ ಕೃಷ್ಣ ಮೊಗವೀರ (48) ತಂದೆ: ಮಂಜ ಮೊಗವೀರವಾಸ: ಪ್ರಕೃತಿ ನಿಲಯ ಮರವಂತೆ ಗ್ರಾಮ ಕುಂದಾಪುರ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಯುಡಿಆರ್ ಕ್ರಮಾಂಕ: 28/2014, ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಕೋಟ:ಭಾಸ್ಕರ ಮರಕಾಲ (32) ತಂದೆ:ನಾಗರಾಜ ಮರಕಾಲ,ವಾಸ:ಸೀತಾ ನಿಲಯ, ಗುಂಡ್ಮಿ ಗ್ರಾಮ, ಸಾಸ್ತಾನ ಅಂಚೆ, ಉಡುಪಿ ಇವರ ತಮ್ಮ ಪ್ರಕಾಶ (28) ಎಂಬವರು ವಿಪರೀತ ಮದ್ಯ ಸೇವನೆ ಮಾಡುವ ಚಟವಿದ್ದು, ಹಣದ ಅಡಚಣೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಬಾಡಿಗೆ ಮನೆಯಾದ ಚಿತ್ರಪಾಡಿ ಎಂಬಲ್ಲಿ ಈ ದಿನ ದಿನಾಂಕ 25/12/2014 ರಂದು ಮಧ್ಯಾಹ್ನ 03:00 ಗಂಟೆಯಿಂದ 04.30 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣಾ ಯು.ಡಿ.ಆರ್ ಕ್ರಮಾಂಕ 54/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ
No comments:
Post a Comment