ಅಸ್ವಾಭಾವಿಕ
ಮರಣ ಪ್ರಕರಣಗಳು
- ಕುಂದಾಪುರ:ಪಿರ್ಯಾದಿದಾರರಾದ ಜಿ. ಗುರುರಾಜ್ ರಾವ್ (61) ತಂದೆ:ದಿವಂಗತ ಜಿ. ಮಂಜುನಾಥಯ್ಯ ವಾಸ:ಪಾರ್ವತಿ, ಕೆಳಾರ್ಕಳಬೆಟ್ಟು ಅಂಚೆ, ಸಂತೆಕಟ್ಟೆ, ಉಡುಪಿ ತಾಲೂಕುರವರ ಅಕ್ಕ ಪೂರ್ಣಿಮ (63) ಎಂಬವರು ದಿನಾಂಕ:24/12/2014 ರಂದು 20:00 ಗಂಟೆಯಿಂದ ದಿನಾಂಕ:25/12/2014 ರ ಬೆಳಿಗ್ಗೆ 08:00 ಗಂಟೆ ನಡುವಿನ ಸಮಯದಲ್ಲಿ ಕುಂದಾಪುರ ತಾಲೂಕು ಕಸಬಾ ಗ್ರಾಮದ ವಿಠಲ ದೇವಸ್ಥಾನದ ಬಳಿ ಇರುವ ಮಂಜುನಾಥ ನಿಲಯ ಎಂಬ ಮನೆಯ ಅಡುಗೆ ಕೋಣೆಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರು ಸುಮಾರು 20 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಸಹಕರಿಸದೇ ಇದ್ದು, ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೆ, ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಜಿ. ಗುರುರಾಜ್ ರಾವ್‌ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 63/2014 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಕುಂದಾಪುರ:ಪಿರ್ಯಾದಿದಾರರಾದ ರಮೇಶ್ ದೇವಾಡಿಗ (22) ತಂದೆ:ಮಂಜಯ್ಯ ದೇವಾಡಿಗ, ವಾಸ:ಕೆ.ಇ.ಬಿ ಪವರ್ ಹೌಸ್ ಹಿಂಬದಿ, ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕುರವರು ಕುಂದಾಪುರದಲ್ಲಿ ಕಂಪ್ಯೂಟರ್ ಕೋರ್ಸನ್ನು ಮಾಡಿಕೊಂಡಿದ್ದು, ರಮೇಶ್ ದೇವಾಡಿಗರವರ ಮನೆಗೆ ಬೆಂಗಳೂರಿನಲ್ಲಿ ವಾಸ ಮಾಡಿಕೊಂಡಿದ್ದ ಅವರ ಚಿಕ್ಕಮ್ಮ ಇಂದಿರಾ ಮತ್ತು ಅವರ ಗಂಡ ಹಾಗೂ ಅವರ ಒಂದು ಗಂಡು ಮಗು ಅಭಿಲಾಶ್ (3) ತಂದೆ:ವೆಂಕಟೇಶ್ ವಾಸ:ಕೆ.ಇ.ಬಿ. ಪವರ್ ಹೌಸ್ ಹಿಂಬದಿ, ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು ಎಂಬವನೊಂದಿಗೆ 2ನೇ ಹೆರಿಗೆಗಾಗಿ ಊರಿಗೆ ಬಂದಿದ್ದು, ಈ ದಿನ ದಿನಾಂಕ: 25/12/2014 ರಂದು ಬೆಳಿಗ್ಗೆ 10:30 ಗಂಟೆಗೆ ಎಲ್ಲರೂ ಮನೆಯಲ್ಲಿರುವಾಗ ಮನೆಯ ಪಕ್ಕದಲ್ಲಿ ಆಟವಾಡಿಕೊಂಡಿದ್ದ ರಮೇಶ್ ದೇವಾಡಿಗರವರ ಚಿಕ್ಕಮ್ಮನ ಮಗ ಅಭಿಲಾಶ್ ಕಾಣೆಸದೆ ಇದ್ದು, ಎಲ್ಲರೂ ಸೇರಿ ಎಲ್ಲಾ ಕಡೆ ಹುಡುಕಿದರೂ ಕೂಡಾ ಸಿಕ್ಕಿರುವುದಿಲ್ಲ. ನಂತರ ರಮೇಶ್ ದೇವಾಡಿಗ ಮನೆಯ ಪಕ್ಕದಲ್ಲಿರುವ ಸುಮಾರು 4 ಅಡಿ ನೀರು ಇರುವ ಕೆರೆಯಲ್ಲಿ ಹುಡುಕಾಡುತ್ತಿರುವಾಗ ನೀರಿನ ತಳಭಾಗದಲ್ಲಿ ಮಗು ಇದ್ದು ತಕ್ಷಣ ಮಗುವನ್ನು ಮೇಲಕ್ತೆತಿ ಒಂದು ಆಟೋ ರಿಕ್ಷಾದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ವೈದ್ಯಾಧಿಕಾರಿಯವರು ಮಗುವನ್ನು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮಗು ಅಭಿಲಾಶ್‌ನ ಮೃತಪಟ್ಟ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ರಮೇಶ್ ದೇವಾಡಿಗರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 64/2014 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಕುಂದಾಪುರ:ಪಿರ್ಯಾದಿದಾರರಾದ ಅರುಣ್ ಭಂಡಾರಿ (31) ತಂದೆ:ನರಸಿಂಹ ಭಂಡಾರಿ ವಾಸ:ತೆಟ್ಟುವಟ್ಟು 76 ಹಾಲಾಡಿ ಗ್ರಾಮ, ಕುಂದಾಪುರ ತಾಲೂಕುರವರ ತಂದೆ ನರಸಿಂಹ ಭಂಡಾರಿ (70) ರವರು ಸುಮಾರು 4-5 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಪೀಡಿತರಾಗಿದ್ದು, ಅವರು ದಿನಾಂಕ:25/12/2014 ರಂದು ಕುಂದಾಪುರ ತಾಲೂಕು ಅಸೋಡು ಗ್ರಾಮದ ಅಸೋಡು ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಹಾದು ಹೋಗುವ ರೈಲ್ವೆ ಹಳಿ ದಾಟುವ ಸಮಯ ಮಧ್ಯಾಹ್ನ 12:20 ಗಂಟೆಗೆ ಯಶವಂತಪುರ-ಕಾರಾವರ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದು, ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಅರುಣ್ ಭಂಡಾರಿರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 65/2014 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಬ್ರಹ್ಮಾವರ:ದಿನಾಂಕ:24/12/2014 ರಂದು 11:45 ಗಂಟೆಗೆ ಉಡುಪಿ ತಾಲೂಕು ಕಾಡೂರು ಗ್ರಾಮದ ಎ.ಎಮ್.ಸನ್ಸ್ ಟೈಲ್ಸ್ ಫ್ಯಾಕ್ಟರಿ ಕಾಡೂರು ವಸತಿ ಗೃಹದ ಬಾಗಿಲ ಬಳಿ ಪಿರ್ಯಾದಿದಾರರಾದ ಭದ್ರೇಶ್ವರ ಬೋರೊ (40) ತಂದೆ:ಬಿಸೂರಾಮ್ ಬೋರೋ ವಾಸ:ಚರನ್ ಜಂಗಲ್, ಭಾಸ್ಕಬಟಾಡ ಜಿಲ್ಲೆ, ಶೇಷಪಾನಿ ಅಂಚೆ, ಅಸ್ಸಾಂ ರಾಜ್ಯ ಹಾಲಿ ವಾಸ:ಎ.ಎಮ್.ಸನ್ಸ್ ಟೈಲ್ಸ್ ಫ್ಯಾಕ್ಟರಿ ಕಾಡೂರು ವಸತಿಗೃಹ ಕಾಡೂರು ಗ್ರಾಮ, ಉಡುಪಿ ತಾಲೂಕುರವರ ದೊಡ್ಡಪ್ಪನ ಮಗನಾದ ಚಂದ್ರ ಬೋರೋ (20) ಎಂಬವರು ಬಿದ್ದು ಅಸ್ವಸ್ಥಗೊಂಡವರನ್ನು ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆತಂದಿದ್ದು, ದಿನಾಂಕ:25/12/14 ರಂದು 02:10 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಚಂದ್ರ ಬೊರೋರವರು ಹೃದಯಾಘಾತದಿಂದ ಅಥವಾ ಬೇರೆ ಯಾವುದೋ ಕಾಯಿಲೆಯಿಂದ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಭದ್ರೇಶ್ವರ ಬೋರೊರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ 65/14 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ
- ಹೆಬ್ರಿ:ಪಿರ್ಯಾದಿದಾರರಾದ ಅಚ್ಚನ್ ಕುಂಜ್ನಿ ಎಮ್.ಕೆ (58) ತಂದೆ:ದಿವಂಗತ ಕರಿಯಾನ್ ವಾಸ:ಅಸ್ರಂಬಳ್ಳಿ, ಕೆರಬೆಟ್ಟು ಗ್ರಾಮ, ಕಾರ್ಕಳ ತಾಲೂಕುರವರ ರಬ್ಬರ್ ತೋಟದ ಕೆಲಸದ ಬಗ್ಗೆ ಸುಮಾರು 10 ದಿನಗಳ ಹಿಂದೆ ಕೆಲಸಕ್ಕೆ ಬಂದ ಕೇರಳ ರಾಜ್ಯದ ಕ್ಯಾಲಿಕಟ್ ಜಿಲ್ಲೆಯ ತಲೆಯಾಡು ಬೇಡಿಕ್ಕುಯಿ ಎಂಬಲ್ಲಿಯ ವಾಸಿಯಾದ ಸಿಬಿಚ್ಚನ್ ಸೆಬಾಸ್ಟೀನ್ (38) ಎಂಬಾತನು ದಿನಾಂಕ:22/12/2014 ರಂದು ಬೆಳಿಗ್ಗೆ 10:30 ಗಂಟೆಗೆ ತನಗಾದ ನೆಗಡಿ ಬಗ್ಗೆ ಹೆಬ್ರಿ ಆಸ್ಪತ್ರೆಗೆ ಹೋಗಿ ಮಾತ್ರೆ ತರುತ್ತೇನೆ ಎಂಬುದಾಗಿ ಹೇಳಿ ತನ್ನ ಕೆ.ಎಲ್ 56 ಸಿ 4438 ನೇ ಮೋಟರ್ ಸೈಕಲ್‌ನಲ್ಲಿ ಹೊರಟು ಹೋದವರು ನಂತರ ಬಾರದೇ ಇದ್ದು, ಈ ಬಗ್ಗೆ ಆತನ ಮೊಬೈಲ್‌ಗೆ ಕರೆಮಾಡಿದಲ್ಲಿ ಸ್ವಿಚ್ಡ್ ಆಪ್ ಬರುತ್ತಿದ್ದು, ಬಳಿಕ ಆತನ ಹೆಂಡತಿ ಹಾಗೂ ಮನೆಯವರಿಗೆ ತಿಳಿಸಿದಲ್ಲಿ ಅಲ್ಲಿಗೂ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾರೆ.ಈ ಬಗ್ಗೆ ಅಚ್ಚನ್ ಕುಂಜ್ನಿ ಎಮ್.ಕೆ.ರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 92/14 ಕಲಂ:ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
- ಕುಂದಾಪುರ:ಪಿರ್ಯಾದಿದಾರರಾದ ರವಿ ಖಾರ್ವಿ (27) ತಂದೆ:ಕೇಶವ ಖಾರ್ವಿ, ವಾಸ:ಫೆರ್ರಿ ರೋಡ್, ಕಸಬಾ ಗ್ರಾಮ, ಕುಂದಾಪುರ ತಾಲೂಕುರವರು ದಿನಾಂಕ:23/12/2014 ರಂದು ಮಹಾಲಿಂಗೇಶ್ವರ ಎಂಟರ್‌ಪ್ರೈಸಸ್ ಬಸ್ರೂರು ಇಲ್ಲಿನ ಕೆನರಾ ಬ್ಯಾಂಕಿನ ಖಾತೆ ನಂಬ್ರ: 0603201000990 ಗೆ ಹಣ ಜಮಾ ಮಾಡಲು ಕುಂದಾಪುರ ಕೆನರಾ ಬ್ಯಾಂಕ್‌ಗೆ ಬಂದಿದ್ದು, ಬೆಳಿಗ್ಗೆ 10:40 ಗಂಟೆಗೆ ಕೆನರಾ ಬ್ಯಾಂಕ್‌ನ ಕ್ಯಾಶ್ ಕೌಂಟರ್ ಬಳಿ ರವಿ ಖಾರ್ವಿರವರು ರೂಪಾಯಿ 3,11,000/- ಹಣ ಇರುವ ಬ್ಯಾಗ್‌ನ್ನು ಇಟ್ಟುಕೊಂಡು ಚಲನ್ ಭರ್ತಿ ಮಾಡುತ್ತಿರುವ ಸಮಯ ಯಾರೋ ಅಪರಿಚಿತ ವ್ಯಕ್ತಿ ಬಂದು ರವಿ ಖಾರ್ವಿರವರಲ್ಲಿ ನಿಮ್ಮ 10 ರೂಪಾಯಿ ಮೌಲ್ಯದ ಸುಮಾರು ನೋಟುಗಳು ಬಿದ್ದಿವೆ ಅವುಗಳನ್ನು ತೆಗೆದುಕೊಳ್ಳಿ ಎಂದು ಹೇಳಿದಾಗ ರವಿ ಖಾರ್ವಿ ನೆಲದಲ್ಲಿ ಬಿದ್ದಿರುವ ನೋಟುಗಳನ್ನು ಎತ್ತಿಕೊಂಡು, ಎದ್ದು ನೋಡುವಾಗ ರೂಪಾಯಿ 3,11,000/- ಹಣ ಇರುವ ಬ್ಯಾಗ್ ಕಾಣೆಯಾಗಿದ್ದು, ಅಪರಿಚಿತ ವ್ಯಕ್ತಿಗಳಿಬ್ಬರು ಸದ್ರಿ ಹಣವಿರುವ ಬ್ಯಾಗ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ರವಿ ಖಾರ್ವಿರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 394/2014 ಕಲಂ:380 ಐಪಿಸಿಯಂತೆ ಪ್ರಕರಣ ದಾಕಲಿಸಿಕೊಳ್ಳಲಾಗಿದೆ.
ಇಸ್ಪಿಟ್ ಜುಗಾರಿ ಪ್ರಕರಣ
- ಕಾರ್ಕಳ ನಗರ:ದಿನಾಂಕ:24/12/2014 ರಂದು 18:00 ಗಂಟೆಗೆ ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಪಳ್ಳಿ ಜಂಕ್ಷನ್ ಬಳಿ ಇರುವ ನಿರ್ಮಲ ಹೋಟೇಲ್ ಹಿಂಬದಿ ಹಾಡಿ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ "ಉಲಾಯಿ-ಪಿದಾಯಿ” ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ಮಲ್ಲೇಶ (29) ತಂದೆ:ರಾಮ, ವಾಸ:ಬಂದಲ್ಪಾಡಿ. ಪಳ್ಳಿ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು 2)ಲೋಕೇಶ್ (34) ತಂದೆ:ರಾಮಸ್ವಾಮಿ, ವಾಸ:ಕೋಕೈಕಲ್ ಪಳ್ಳಿ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು 3)ಶಂಕರ (36) ತಂದೆ:ದಿವಂಗತ ಗುರುವ ವಾಸ:ಪಳ್ಳಿ ಶಾಲೆ ಬಳಿ, ಪಳ್ಳಿ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಎಂಬವರನ್ನು ಪಿರ್ಯಾದಿದಾರರಾದ ಕಬ್ಬಾಳ್ ರಾಜ್ ಪಿ.ಎಸ್.ಐ, ಕಾರ್ಕಳ ನಗರ ಪೊಲೀಸ್ ಠಾಣೆ, ಕಾರ್ಕಳರವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಪೈಕಿ ಶರಣು (25) ತಂದೆ:ಮಹಾಬಲ ವಾಸ:ಬಂದಲ್ಪಾಡಿ, ಪಳ್ಳಿ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು, ಚಂದ್ರ (30) ತಂದೆ:ಶಾಂತ, ವಾಸ:ಜೋಡುರಸ್ತೆ, ಪಳ್ಳಿ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು, ರಾಹುಲ್ ಶೆಟ್ಟಿ (28) ವಾಸ:ಕೋಕೈಕಲ್, ಪಳ್ಳಿ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಸಂತೋಷ (29) ತಂದೆ:ಬಾಬು ವಾಸ:ಕೋಕೈಕಲ್ ಪಳ್ಳಿ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಎಂಬವರು ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ. ವಶಕ್ಕೆ ಪಡೆಯಲಾದ ಆರೋಪಿಗಳ ವಶದಲಿದ್ದ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 2000 /-, ಇಸ್ವೀಟ್ ಎಲೆ-52 ಹಾಗೂ ಜುಗಾರಿ ಆಟಕ್ಕೆ ಬಳಸಿದ ಹಳೆಯ ದಿನ ಪತ್ರಿಕೆಯನ್ನು ಮುಂದಿನ ಕ್ರಮಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದಾಗಿದೆ.ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 209/2014 ಕಲಂ 87 ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment