Thursday, December 25, 2014

Daily Crime Reports As On 25/12/2014 At 07:00 Hrs

ಜೀವ ಬೆದರಿಕೆ ಪ್ರಕರಣ
  • ಶಂಕರನಾರಾಯಣ:ಪಿರ್ಯಾದಿ ರಮೀಜ್‌ರಾಜ (22)ತಂದೆ:- ಮಾಬು ಸಾಬ್‌ ನಾಗಲಪೂರ ಇವರು ವಾರಾಹಿ ಬಲದಂಡೆ ನೀರಾವರಿ ಕಾಲುವೆಯ ಕಾಮಗಾರಿ ಗುತ್ತಿಗೆಯನ್ನು ಪಡೆದ ಎಸ್‌.ಎನ್‌.ಸಿ ಕಂಪೆನಿಯ ಸೂಪರ್‌ವೈಸರ್‌ಆಗಿ ಕರ್ತವ್ಯದಲ್ಲಿದ್ದು ದಿನಾಂಕ 23-12-2014 ರಂದು  ರಾತ್ರಿ 9:30 ಗಂಟೆ ಹೊತ್ತಿಗೆ ಕುಂದಾಪುರ ತಾಲೂಕು ಐರ್‌ಬೈಲ್‌ಗ್ರಾಮದ ಕಿರ್ಲಾಡಿ ಪರಿಸರದಲ್ಲಿ ವರಾಹಿ ಬಲದಂಡೆ ನೀರಾವರಿ ಕಾಲುವೆಯ 10/11 ಕಿ.ಮೀ ರಲ್ಲಿ  ಹುಂಡೈ 220 ಮೆಶಿನ್‌ನೊಂದಿಗೆ  ಕಾಮಗಾರಿಯ ಕೆಲಸದಲ್ಲಿರುವಾಗ ಆರೋಪಿತರುಗಳಾದ  ಪ್ರತಾಪ್‌ ಶೆಟ್ಟಿ, ಸುಜನ್‌ ಶೆಟ್ಟಿ, ವನಜ ದೇವಾಡಿಗ,ನಿರ್ಮಲ ಶೆಟ್ಟಿ,ಜಲಜಮ್ಮ ಶೆಟ್ಟಿ ಇವರುಗಳು  ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಸದ್ರಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಪಿರ್ಯಾದಿದಾರರನ್ನು ಮತ್ತು ಸ್ಥಳದಲ್ಲಿ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದವರನ್ನು ತಡೆದು ನಿಲ್ಲಿಸಿ ಸದ್ರಿಯವರಿಗೆ ಕಾಮಗಾರಿ ಕೆಲಸವನ್ನು ನಿರ್ವಹಿಸಿದಂತೆ ತಡೆಯೊಡ್ಡಿ ಕೆಲಸವನ್ನು ನಿಲ್ಲಿಸದೇ ಇದ್ದಲ್ಲಿ ನಿಮ್ಮ ಮಶಿನ್‌ನನ್ನು ಬೆಂಕಿಯಿಂದ ಸುಟ್ಟು ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ಮತ್ತು ಕಾಮಗಾರಿಯ ಕೆಲಸದವರು ಸ್ಥಳದಿಂದ ಹೋದ ನಂತರ ಆರೋಪಿತರು ಸ್ಥಳದಲ್ಲಿ ಇದ್ದಿದ್ದ ಎಸ್‌.ಎನ್‌.ಸಿ ಕಂಪೆನಿಗೆ ಸೇರಿದ ಹುಂಡೈ 220 ಮೆಶಿನ್‌ಗೆ ಹಾನಿ ಮಾಡಿರುವುದಾಗಿ ರಮೀಜ್‌ ರಾಜ್‌ರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 199/14 ಕಲಂ 143, 341, 506, 427, ಜೊತೆಗೆ 149  ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣ
  • ಕಾಪು: ದಿನಾಂಕ 24.12.2014 ರಂದು ಸಂಜೆ 5:00 ಗಂಟೆಗೆ ಯೇಣಗುಡ್ಡೆ ಗ್ರಾಮದ ಕಟಪಾಡಿ ಪೇಟೆಯ ರಿಕ್ಷಾ ಪಾರ್ಕಿಂಗ್‌ ಸ್ಥಳದಲ್ಲಿ  ಪ್ರಭಾಕರ ಎಂಬವರು ಭಾಗ್ಯರಾಜನಿಗೆ ಕರಡಿ ಎಂಬುದಾಗಿ ಅಡ್ಡ ಹೆಸರಿನಲ್ಲಿ ಕರೆದಾಗ ಈ ವಿಷಯಕ್ಕೆ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ,ಭಾಗ್ಯರಾಜನು ಪ್ರಭಾಕರನಿಗೆ ಅವಾಚ್ಯ ಶಬ್ದಗಳಿಂದ ಬೈದು ನಂತರ ಆತನ ರಿಕ್ಷದಲ್ಲಿರುವ ಕಬ್ಬಿಣದ ಲಿವರ್‌ನಿಂದ ಪ್ರಭಾಕರನ ತಲೆಯ ಮಧ್ಯ ಭಾಗಕ್ಕೆ ಹೊಡೆದು  ಅದರ  ಪರಿಣಾಮ ರಕ್ತ ಗಾಯವಾಗಿದ್ದು ಆತನನ್ನು  ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಅಶ್ವತ್‌(23) ತಂದೆ: ಸುಂದರ ಪೂಜಾರಿ ವಾಸ: ಕೆನರ ಬ್ಯಾಂಕ್‌ ಹತ್ತಿರ  ದುಗ್ಗಪಾಡಿ ಮಟ್ಟು ರವರು ಕಾಪು ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಕ್ರಮಾಂಕ 234/2014 ಕಲಂ 324, 504 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜಾನುವಾರು ಸಾಗಾಟ ಪ್ರಕರಣ
  • ಶಂಕರನಾರಾಯಣ: ಪ್ರಕರಣದ ಆರೋಪಿತರುಗಳಾದ ಶಾಂತರಾಮ ಶೆಟ್ಟಿ (46), ತಂದೆ:- ಕೊರಗಯ್ಯ ಶೆಟ್ಟಿ  ವಾಸ:- ಜನ್ಸಾಲೆ, ಸಿದ್ದಾಪುರ ಗ್ರಾಮ, ಕುಂದಾಪುರ ತಾಲೂಕು ,ಬಾಲಯ್ಯ ಪೂಜಾರಿ  ಪ್ರಾಯ(46), ತಂದೆ:- ದಿ. ಶೇಷು ಪೂಜಾರಿ ವಾಸ:- ನಿಲುಮಣಿಕೆ , ಸಿದ್ದಾಪುರ ಗ್ರಾಮ, ಕುಂದಾಫುರ ತಾಲೂಕು ಇವರುಗಳು ಹಳ್ಳಿಹೊಳೆ ಗ್ರಾಮದ ಸುಳುಗೋಡು ಎಂಬಲ್ಲಿ ಮೇಯುತ್ತಿದ್ದ 1 ದನ ಹಾಗೂ 2 ಗುಡ್ಡಗಳನ್ನು ಮಾಂಸ ಮಾಡಲು ಮಾರಾಟದ ಉದ್ದೇಶದಿಂದ  ದಿನಾಂಕ 24-12-2014 ರಂದು ಮದ್ಯಾಹ್ನಾ 12:15 ಗಂಟೆಗೆ ಕಳವು ಮಾಡಿಕೊಂಡು KA 20 A 8972  ನಂಬ್ರದ TATA  ACE ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿರುವಾಗ ಪಿರ್ಯಾದಿ ಪ್ರದೀಪ್‌ ಕೊಠಾರಿ (26) ತಂದೆ:- ರಘುರಾಮ ಕೊಠಾರಿ ವಾಸ:- ಕೋಟುಗುಳಿ ಮನೆ, ಹಳ್ಳಿಹೊಳೆ ಅಂಚೆ ಮತ್ತು ಗ್ರಾಮ,ಕುಂದಾಪುರ ತಾಲೂಕುರವರು ಮತ್ತು ಪಿರ್ಯಾದಿದಾರರ ಸ್ನೇಹಿತರು ವಾಹನವನ್ನು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿರುತ್ತದೆ  ಆರೋಪಿತರು ಕಳವು ಮಾಡಿದ  ಹಸುವಿನ  ಅಂದಾಜು ಮೌಲ್ಯ ಒಟ್ಟು ಮೌಲ್ಯ 10,500/- ರೂಪಾಯಿ ಆಗಬಹುದಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 200/14 ಕಲಂ 8, 9, 11 ಗೋಹತ್ಯ ನಿಷೇದ ಜೊತೆಗೆ 379 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ
  • ಕುಂದಾಪುರ ಸಂಚಾರ: ದಿನಾಂಕ 24/12/2014  ರಂದು ಸಮಯ ಸುಮಾರು ಮಧ್ಯಾಹ್ನ  2:45   ಗಂಟೆಗೆ ಕುಂದಾಪುರ ತಾಲೂಕು ಹಂಗಳೂರು   ಗ್ರಾಮದ  ಯೂನಿಟಿ  ಹಾಲ್ ಎದುರುಗಡೆ ರಾ.ಹೆ 66 ರಸ್ತೆಯಲ್ಲಿ ಆಪಾದಿತ ಅಬ್ದುಲ್‌ ಮುನಾಫ್  ಎಂಬವರು KA20-B-7375 ಅಟೋರಿಕ್ಷಾವನ್ನು ಯೂನಿಟಿ  ಹಾಲ್ ನಿಂದ  ರಾ.ಹೆ  ರಸ್ತೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಹಿಮ್ಮುಖವಾಗಿ   ಚಾಲನೆ  ಮಾಡಿಕೊಂಡು ಬಂದು, ಪಿರ್ಯಾದಿ ಸದಾಶಿವ ಕೆ (30)ವರ್ಷ ತಂದೆ ದಿ ಅಣ್ಣಪ್ಪ  ವಾಸ: ಮಹಾಮಾಯ ನಿಲಯ, ಅಂಗಡಿಬೆಟ್ಟುಕುಂಭಾಶಿ ಗ್ರಾಮ, ಕುಂದಾಪುರ. ಇವರು ಕೊಟೇಶ್ವರ ಕಡೆಯಿಂದ ಕುಂದಾಪುರ  ಕಡೆಗೆ ಸವಾರಿ  ಮಾಡಿಕೊಂಡು ಹೋಗುತ್ತಿದ್ದ  KA20-EG-5716 ನೇ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ವಾಹನ  ಸಮೇತ ರಸ್ತೆಗೆ ಬಿದ್ದು ತಲೆಗೆ, ಎಡಕೆನ್ನೆಗೆಕುತ್ತಿಗೆಗೆ ರಕ್ತಗಾಯ ಹಾಗೂ  ಒಳನೋವು  ಉಂಟಾಗಿ ಕುಂದಾಪುರ ಸರಕಾರಿ ಆಸ್ಬತ್ರೆಯಿಂದ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಕೊಟೇಶ್ವರ ಎನ್‌.ಆರ್  ಆಚಾರ್ಯ  ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 160/2014 279,337 ಭಾ.ದ.ಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಟ್ಕಾ ಚೀಟಿ ಪ್ರಕರಣ
  • ಕೊಲ್ಲೂರು: ದಿನಾಂಕ 24/12/2014 ರಂದು ಕೊಲ್ಲೂರು ಪೊಲೀಸ್ ಠಾಣಾ ಪಿ.ಎಸ್.ಐ ಜಯಂತ್‌ ಎಮ್‌ ರವರಿಗೆ ಬಂದ ಮಾಹಿತಿಯಂತೆ ಜಡ್ಕಲ್‌ ಗ್ರಾಮದ ಬೀಸನ್‌ಪಾರೆ ಬಳಿ ಮಟ್ಕಾ ಜುಗಾರಿ ಆಡುತ್ತಿರುವ ಬಗ್ಗೆ ಸಿಬ್ಬಂದಿಗಳೊಂದಿಗೆ ಸಂಜೆ 04:30 ಗಂಟೆಗೆ ಹೋದಾಗ ಆಟೋ ಸ್ಟಾಂಡ್‌ ಬಳಿ ಒಂದು ಮಾರುತಿ 800 ಕಾರು ನಿಂತಿದ್ದು, ಅದರ ಬಳಿ ಸಾರ್ವಜನಿಕರು ನಿಂತು ಮಾತನಾಡುತ್ತಿದ್ದು ಅದರಲ್ಲಿ ಇಬ್ಬರು ವ್ಯಕ್ತಿಗಳು ಹಣ ಸಂಗ್ರಹಿಸುತ್ತಿದ್ದು ಒಬ್ಬ ವ್ಯಕ್ತಿಯು ಕಾರಿನ ಒಳಗಡೆ ಕುಳಿತು ಹಣವನ್ನು ತೆಗೆದುಕೊಳ್ಳುತ್ತಿರುವುದನ್ನು ನೋಡಿ ಸಿಬ್ಬಂದಿಯವರೊಂದಿಗೆ ಅಲ್ಲಿಗೆ ದಾವಿಸಿದಾಗ ಕಾರಿನ ಹೊರಗಡೆ ಇದ್ದ ಸಾರ್ವಜನಿಕರು ಹಾಗೂ ಹಣ ಸಂಗ್ರಹಿಸುತ್ತಿರುವ ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದು ಕಾರಿನ ಒಳಗಡೆ ಇರುವ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸಂತೋಷ ಪೂಜಾರಿ (30) ತಂದೆ: ಶಂಕರ ಪೂಜಾರಿ ವಾಸ: ಸೆಳಕೋಡು ಬೈಲ್‌ ಮನೆ, ಜಡ್ಕಲ್‌ ಗ್ರಾಮ ಎಂಬುದಾಗಿ ಹಾಗೂ ತನ್ನ ಸ್ನೇಹಿತರಾದ ಬೆನ್ನಿ ಮತ್ತು ರಂಜಿತ್‌ ಎಂಬುದಾಗಿ ತಿಳಿಸಿದ್ದು ನಾವುಗಳು ಮಟ್ಕಾ ಜುಗಾರಿ ಆಟದ ಹಣ ಸಂಗ್ರಹಣೆ ಮಾಡುವುದಾಗಿ ಹೀಗೆ ಸಂಗ್ರಹಿಸಿದ ಹಣವನ್ನು ಸುಜಿತ್‌ ಎಂಬಾತನಿಗೆ ನೀಡುತ್ತಿದ್ದು ಆತನು ಗೆದ್ದವರಿಗೆ ಒಂದು ರೂಪಾಯಿಗೆ 70 ರೂಪಾಯಿಯಂತೆ ಕೊಡುವುದಾಗಿ ತಿಳಿಸಿದ ಮೇರೆಗೆ ಆತನಲ್ಲಿರುವ ರೂಪಾಯಿ 1540/- ಮತ್ತು ಮಟ್ಕಾ ಚೀಟಿ-1, ಬಾಲ್‌ ಪೆನ್‌ನ್ನು ಹಾಗೂ ಹಣ ಸಂಗ್ರಹಿಸಲು ಬಳಸಿದ ಕೆ.ಎ 02 ಎಮ್‌ 6616 ನೇ ನಂಬ್ರದ ಮಾರುತಿ 800 ಕಾರನ್ನು ನನ್ನ ವಶಕ್ಕೆ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2014 ಕಲಂ :78 (1)(iii) KP ACT ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.



No comments: