ಅಪಘಾತ ಪ್ರಕರಣ
- ಪಡುಬಿದ್ರಿ: ದಿನಾಂಕ: 21/12/2014 ರಂದು 01:45 ಗಂಟೆಗೆ ಫಿರ್ಯಾದಿ ಮೇರಿ ಕ್ರಾಸ್ತಾ ಇವರು ಕೆಎ 19 ಇ 6986 ನೇ ಬೊಲೆರೋ ಜೀಪಿನಲ್ಲಿ ಉಡುಪಿ ತಾಲೂಕು ನಡ್ಸಾಲು ಗ್ರಾಮದ ಕನ್ನಂಗಾರ್ ಜಂಕ್ಷನ್ ಬಳಿ ಬರುತ್ತಿರುವಾಗ್ಗೆ ರಾ.ಹೆ. 66 ರ ಎಡಬದಿಯಲ್ಲಿರುವ ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಬೊಲೆರೋ ಜೀಪು ಪಲ್ಟಿಯಾಗಿ ರಾ.ಹೆ.66 ರ ರಸ್ತೆಯ ಮೇಲೆ ಬಿದ್ದು ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದುದಾರರಿಗೆ ಹಾಗೂ ಪ್ರಯಾಣಿಸುತ್ತಿದ್ದ ಇತರ 8 ಜನ ಹಾಗೂ ಜೀಪು ಚಾಲಕನಿಗೆ ಸಾಮಾನ್ಯ ಹಾಗೂ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಗೆ ಹಾಗೂ ಮಂಗಳೂರಿನ ಇಂಡಿಯನ್ ಆಸ್ಪತ್ರೆಗೆ ದಾಖಲು ಮಾಡಿದ್ದು, ವಾಹನ ಕೂಡ ಜಖಂ ಆಗಿರುತ್ತದೆ. ಸದ್ರಿ ಅಪಘಾತಕ್ಕೆ ಜೀಪು ನಂಬ್ರ ಕೆಎ 19 ಇ 6986 ನೇ ಚಾಲಕನಾದ ಕೋನಾರ್ಡ್ ತಾರ್ವೋ ರವರ ಅತಿವೇಗ ಹಾಗೂ ಅಜಾಗರುಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/2014 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಬೈಂದೂರು: ಪಿರ್ಯಾದಿ ಅಬ್ದುಲ್ ರಹಿಮಾನ್ ಇವರು ದಿನಾಂಕ 21/12/2014 ರಂದು ಸಂಜೆ 04.00 ಗಂಟೆಗೆ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ನಾಕಟ್ಟೆ ಎಂಬಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮವನ್ನು ಮುಗಿಸಿ ಅವರ ಸೊಸೆ ಸಮೀರಾಳ ಮಗಳಾದ ಬೀಬಿ ಖತೀಜಾ ಅಲಿಯಾಸ್ ಸನಾ ಎಂಬವಳೊಂದಿಗೆ ಅಲ್ಲಿಯೇ ಇರುವ ಅವರ ತಂಗಿಯ ಮನೆಗೆ ಹೋಗಲು ರಾ.ಹೆ 66 ರ ರಸ್ತೆಯನ್ನು ದಾಟಲು ಡಾಮರು ರಸ್ತೆಯ ಪಶ್ಚಿಮ ಬದಿಯ ಮಣ್ಣಿನ ರಸ್ತೆಯಲ್ಲಿ ನಿಂತು ಕೊಂಡಿದ್ದಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಒಂದು ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾ.ಹೆ 66 ರ ಅಲ್ಲೆ ಪಕ್ಕದಲ್ಲಿ ಮಣ್ಣು ರಸ್ತೆಯಲ್ಲಿ ನಿಂತಿದ್ದ ಬೀಬಿ ಖತೀಜಾ ಅಲಿಯಾಸ್ ಸನಾಳಿಗೆ ಡಿಕ್ಕಿ ಹೊಡೆದ ಪರಿಣಾಮ ಆಕೆಯು ಮಣ್ಣಿನ ರಸ್ತೆಗೆ ಬಿದ್ದು ಆಕೆಗೆ ಪ್ರಜ್ಞೆ ತಪ್ಪಿದ್ದು ಆಕೆಯನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಲಾಗಿದೆ ಈ ಅಪಘಾತಕ್ಕೆ ಕೆ.ಎ 47 ಎಮ್ 4056 ನೇದರ ಚಾಲಕನ ಅತೀವೇಗ ಹಾಗು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 257/2014 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment