Sunday, December 21, 2014

aily Crimes Reported as On 21/12/2014 at 17:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ ನಗರ:ಪಿರ್ಯಾದಿದಾರರಾದ ಕೆ.ನಾರಾಯಣ ಭಟ್‌ (45) ತಂದೆ:ಕೆ ಸುಬ್ರಾಯ ಭಟ್‌, ಮನೆ ನಂಬರ್‌ 8-1-40ಸಿ  ರಾಜ ಮಂದಿರ,  ಕುಂಜಿಬೆಟ್ಟು,  ಉಡುಪಿರವರ ತಾಯಿ ವರದ ಬಾಯಿ (86) ಅವರ ಅಣ್ಣ ಶೋಕ ಭಟ್‌ರವರ ಮನೆಯಾದ ಮಂಗಳೂರಿನಲ್ಲಿ ಹೆಚ್ಚಾಗಿ ವಾಸ ಮಾಡಿಕೊಂಡಿದ್ದು, ಆಗಾಗ ಕೆ.ನಾರಾಯಣ ಭಟ್‌ರವರ ಮನೆಗೆ ಹಾಗೂ ಅಕ್ಕಂದಿರ ಮನೆಗೆ ಬಂದು ಹೋಗುತ್ತಿದ್ದು, ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಮಾನಸಿಕವಾಗಿ ವಿಶ್ರಾಂತಿ ಸಿಗುವ ಸಲುವಾಗಿ ಉಡುಪಿಯ ಕೆ.ನಾರಾಯಣ ಭಟ್‌ರವರ ಅಕ್ಕನ ಮನೆಗೆ ಕಳುಹಿಸುವುದಾಗಿ ಕೆ.ನಾರಾಯಣ ಭಟ್‌ರವರ ಅಣ್ಣ ಹೇಳಿ ಉಡುಪಿ ಶಾರದ ಕಲ್ಯಾಣ ಮಂಟಪದ ಹಿಂಬದಿ ಓಕುಡೆ ಕಂಪೌಂಡ್‌ರವರ ಮನೆಗೆ ದಿನಾಂಕ:20/12/2014 ರಂದು ಗಾಯತ್ರಿ ನಾಯಕ್‌ರವರ ಮನೆಗೆ ಕರೆದುಕೊಂಡು ಬಂದಿದ್ದು, ರಾತ್ರಿ ಊಟ ಮಾಡಿ ಮಲಗಿದ್ದು, ದಿನಾಂಕ:21/12/2014ರಂದು ಬೆಳಿಗ್ಗೆ 6:30ಕ್ಕೆ ಕೆ.ನಾರಾಯಣ ಭಟ್‌ರವರ ಅಕ್ಕ ಗಾಯತ್ರಿಯವರು ಎದ್ದು ನೋಡುವಾಗ ತಾಯಿ ವರದ ಬಾಯಿಯವರು ಇಲ್ಲದೇ ಇದ್ದು ಅವರನ್ನು ಹುಡುಕಿ ನೋಡುವಾಗ ಮನೆಯ ಬಾವಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದ್ದು, ಬೆಳಿಗ್ಗೆ 6:45 ಗಂಟೆಗೆ ಕೆ.ನಾರಾಯಣ ಭಟ್‌ರವರ ಅಕ್ಕನ ಮಗ ಸಂದೀಪ್‌ರವರು ಕೆ.ನಾರಾಯಣ ಭಟ್‌ರವರಿಗೆ ಪೋನ್‌ ಮಾಡಿ ತಿಳಿಸಿದ್ದು, ಕೆ.ನಾರಾಯಣ ಭಟ್‌ರವರ ತಾಯಿ ವರದ ಬಾಯಿಯವರು ವೃದ್ದರಾಗಿದ್ದು ಹಾಗೂ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದು ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೆ.ನಾರಾಯಣ ಭಟ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 74/14  ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕರ್ತವ್ಯಕ್ಕೆ ಅಡ್ಡಿ ಪ್ರಕರಣ
  • ಬ್ರಹ್ಮಾವರ:ದಿನಾಂಕ:20/12/2014 ರಂದು ಮದ್ಯಾಹ್ನ 2:30 ಗಂಟೆಗೆ ಹೆಗ್ಗುಂಜೆ ಗ್ರಾಮದ ಶ್ರಿ ದುರ್ಗಾಪರಮೇಶ್ವರಿ ದೇವಸ್ಥಾನ ಮಂದಾರ್ತಿಗೆ ಸಂಬಂಧಪಟ್ಟ ಸರ್ವೇ ನಂಬ್ರ 170/1 ರಲ್ಲಿ ಆರೋಪಿ ಚಂದ್ರ ಆಚಾರಿರವರು ಅಕ್ರಮ ಪ್ರವೇಶ ಮಾಡಿ ಕಟ್ಟಡ ಸಾಮಾಗ್ರಿಗಳನ್ನು ಹಾಕಿರುವುದನ್ನು ತೆರವು ಗೊಳಿಸಲು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಯಾದ ಪಿರ್ಯಾದಿದಾರರಾದ ಎನ್.ಎಸ್. ದೊಡ್ಡಮನಿ (58) ಕಾರ್ಯ ನಿರ್ವಹಣಾಧಿಕಾರಿ (ಪ್ರಭಾರ), ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿರವರು ಹಾಗೂ ಸಿಬ್ಬಂದಿಗಳಾದ ಶೀನ, ಬಾಲಕೃಷ್ಣ, ಉಮೇಶ ಇವರುಗಳು ತೆರವುಗೊಳಿಸಲು ಹೋದಾಗ ಆರೋಪಿಗಳಾದ ಚಂದ್ರ ಆಚಾರಿ, ಕಲಾವತಿ, ಕೃಷ್ಣ ಆಚಾರ್ಯ, ಕೃಷ್ಣ ಆಚಾರ್ಯರವರ ಹೆಂಡತಿ, ಚಂದ್ರಯ್ಯ ಆಚಾರ್ಯರವರ ಇಬ್ಬರು ಹೆಣ್ಣು ಮಕ್ಕಳು ಇವರುಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ  ಸರಕಾರಿ ನೌಕರರಾಗಿದ್ದ ಎನ್.ಎಸ್. ದೊಡ್ಡಮನಿರವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ.ಈ ಬಗ್ಗೆ ಎನ್.ಎಸ್. ದೊಡ್ಡಮನಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 232/14 ಕಲಂ:143,147,447,353,323,504,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜೀವ ಬೆದರಿಕೆ ಪ್ರಕರಣ

  • ಬೈಂದೂರು:ಪಿರ್ಯಾದಿದಾರರಾದ ಬಿ.ಎಸ್ ಸುರೇಶ್ ಶೆಟ್ಟಿ (40) ತಂದೆ:ಬಿ.ಎಸ್ ಪ್ರಭಾಕರ ಶೆಟ್ಟಿ ವಾಸ:ದೀಟಿ ದೇವಸ್ಥಾನ ರಸ್ತೆ, ಬಿಜೂರು ಗ್ರಾಮ, ಕುಂದಾಪುರ ತಾಲೂಕುರವರು ಬಿಜೂರಿನಲ್ಲಿ ಗೇರು ಉದ್ಯಮವನ್ನು ನಡೆಸಿಕೊಂಡಿದ್ದು, ದಿನಾಂಕ:09/12/2014 ರಂದು  ಬಿ.ಎಸ್ ಸುರೇಶ್ ಶೆಟ್ಟಿರವರ ಮೊಬೈಲ್ ನಂಬ್ರಕ್ಕೆ ಅಪರಾಹ್ನ 3:35 ಗಂಟೆಗೆ ಅಪರಿಚಿತ ಮೊಬೈಲ್ ನಂಬ್ರಗಳಿಂದ ಕರೆ ಬಂದಿದ್ದು, “ನಾನು ಬನ್ನಂಜೆ ರಾಜ ಮಾತನಾಡುತ್ತಿರುವುದು, ನಾನು ನಿನ್ನನ್ನು ತೆಗೆಯುತ್ತೇನೆ, ನೀನು ನನ್ನ ನಂಬ್ರಕ್ಕೆ 2 ದಿನದಲ್ಲಿ  ಕಾಲ್ ಮಾಡು ಅಂತ ಬೆದರಿಕೆ ಹಾಕಿರುತ್ತಾನೆ. ಅದರ ನಂತರ ದಿನಾಂಕ 14/12/2014 ಹಾಗೂ ದಿನಾಂಕ 17-12-2014 ರಂದು ಹಲವು ನಂಬ್ರಗಳಿಂದ ಕರೆ ಬಂದಿದ್ದು ಬಿ.ಎಸ್ ಸುರೇಶ್ ಶೆಟ್ಟಿರವರು ಸ್ವೀಕರಿಸಿರುವುದಿಲ್ಲ. ನಂತರ ದಿನಾಂಕ 19-12-2014 ರಂದು ಗಣೇಶ ಪೂಜಾರಿ ಎಂಬಾತ ಮೊಬೈಲ್‌ ನಂಬ್ರದಿಂದ ಬಿ.ಎಸ್ ಸುರೇಶ್ ಶೆಟ್ಟಿ ಮೊಬೈಲಿಗೆ ಕರೆ ಮಾಡಿ ನಿನ್ನನ್ನು ಕೊಲ್ಲಲು ಬನ್ನಂಜೆ  ರಾಜನ 4 ಜನ ಹುಡುಗನು ಸ್ಕಾರ್ಪಿಯೋ ವಾಹನದಲ್ಲಿ ಬರುತ್ತಿದ್ದಾರೆ ಎಂದು ತಿಳಿಸಿದ್ದು, ತನಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ರಕ್ಷಣೆ ನೀಡಬೇಕಾಗಿ ಬಿ.ಎಸ್ ಸುರೇಶ್ ಶೆಟ್ಟಿರವರು ದೂರು ಅರ್ಜಿ ನೀಡಿದಂತೆ  ಬೈಂದೂರು ಠಾಣಾ ಎನ್.ಸಿ  247/ಪಿ.ಟಿ.ಎನ್‌/ಬೈ/2014 ರಂತೆ  ದಾಖಲಿಸಿಕೊಂಡು ದಿನಾಂಕ:20/12/14 ರಂದು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಈ ದಿನ ಬೈಂದೂರು ಠಾಣಾ ಅಪರಾಧ ಕ್ರಮಾಂಕ 254/2014 ಕಲಂ 506ಐಪಿಸಿ ಪ್ರಕರಣ ದಾಖಲಿಸಿರುವುದಾಗಿದೆ.

No comments: