Daily Crime Reported on 01/05/2011 at 17:00 Hrs
ಹುಡುಗಿ ಕಾಣೆ ಪ್ರಕರಣ - ಮಲ್ಪೆ: ಸುಶ್ಮಾ (21) ಬಿನ್ ಸಂಜೀವ ವಾಸ: ಬಬ್ಬು ದೇವಸ್ಥಾನದ ಹತ್ತಿರ, ಕೆಳಾರ್ಕಳಬೆಟ್ಟು,ಉಡುಪಿ ತಾಲೂಕು ಎಂಬವಳು ಉಡುಪಿ ಮಿತ್ರ ನರ್ಸಿಂಗ್ ಹೋಂಮಿನಲ್ಲಿ ನರ್ಸಿಂಗ್ ಮುಗಿಸಿ ಮನೆಯಲ್ಲಿಯೇ ಇರುವುದಾಗಿದೆ। ದಿನಾಂಕ 29-04-2011 ರಂದು ಸುಷ್ಮಾಳಿಗೆ ಮದುವೆ ನಿಶ್ಚಿತಾರ್ಥದ ಕಾರ್ಯಕ್ರಮವಿದ್ದು, ದಿನಾಂಕ: 27-04-2011 ರಂದು ಸಂಜೆ 5-00 ಗಂಟೆಯಿಂದ ಯಾರಿಗೂ ತಿಳಿಸದೇ ಮನೆಯಿಂದ ಹೋದವಳು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ ಎಂಬುದಾಗಿ ಕಾಣೆಯಾದ ಹುಡುಗಿಯ ತಾಯಿ ಶ್ರೀಮತಿ ಸುಶೀಲ ರವರು ದಿನಾಂಕ 30/04/2011 ರಂದು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2011 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು- ಪಡುಬಿದ್ರಿ: ದಿನಾಂಕ 01।05.2011 ರಂದು 11:25 ಘಂಟೆಗೆ ಶ್ರೀಮತಿ ಭವಾನಿ ವಾಸ; ಮುದರಂಗಡಿ ಗರಡಿ ಬಳಿ, ಸಾಂತೂರು ಗ್ರಾಮ ಎಂಬವರು KA.20.B.7669 ನೇ ಕಾಂತಿ ಎಂಬ ಹೆಸರಿನ ಬಸ್ಸಿನಿಂದ ಪಡುಬಿದ್ರಿ ಬಸ್ಸು ನಿಲ್ದಾಣದ ಬಳಿ ಇಳಿಯುತ್ತಿರುವಾಗ ಬಸ್ಸಿನ ಚಾಲಕ ವಿಶ್ವನಾಥ ಎಂಬವರು ಒಮ್ಮೆಲೇ ಬಸ್ಸನ್ನು ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ, ಶ್ರೀಮತಿ ಭವಾನಿಯವರು ಬಸ್ಸಿನಿಂದ ರಸ್ತೆಗೆ ಬಿದ್ದು ಸಾಮಾನ್ಯ ಸ್ವರೂಪದ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಸುಧೀರ್ ಶೆಟ್ಟಿ (38) ಬಿನ್ ವಿಠಲ ಶೆಟ್ಟಿ ವಾಸ; ದೊಡ್ಡಕ್ಕನ ಸದನ , ಮುದರಂಗಡಿ ಗರಡಿ ಬಳಿ, ಸಾಂತೂರು ಗ್ರಾಮ ಎಂಬವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2011 ಕಲಂ 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಹೆಬ್ರಿ: ದಿನಾಂಕ: 30।04.11 ರಂದು ಸಂಜೆ ಶ್ರೀಧರ (28), ಬಿನ್ ಕೃಷ್ಣ ಪೂಜಾರಿ, ವಾಸ: ಹೆಬ್ಬಾಗಿಲು ಮನೆ, ಹೊಸೂರು, ಹೆಬ್ರಿ ಗ್ರಾಮ, ಕಾರ್ಕಳ ತಾಲೂಕು ಎಂಬವರು ಕೆಎ.20.ಎಸ್.8242 ನೇ ಮೋಟಾರ್ ಸೈಕಲ್‌ನಲ್ಲಿ ಸೋಮೇಶ್ವರದಿಂದ ಹೆಬ್ರಿ ಕಡೆಗೆ ಬರುತ್ತಿರುವಾಗ ಸಂಜೆ 5:45 ಗಂಟೆಗೆ ನಾಡ್ಪಾಲು ಗ್ರಾಮದ ಕೈಕಂಬ ಜಂಕ್ಷನ್ ಬಳಿ ಎದುರಿನಿಂದ ಅಂದರೆ ಮುದ್ರಾಡಿ ಕಡೆಯಿಂದ ಸೋಮೇಶ್ವರ ಕಡೆಗೆ ಕೆಎ.17.ಎನ್.258 ನೇ ಇಂಡಿಕಾ ಡಿಎಲ್‌ಎಕ್ಸ್ ಕಾರಿನ ಚಾಲಕ ರುದ್ರಪ್ಪ ಎಂಬವರು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಶ್ರೀಧರ ರವರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಅವರುಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿದೆ ಎಂಬುದಾಗಿ ಶ್ರೀಧರ್ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2011 ಕಲಂ 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಪ್ರಕರಣ - ಶಿರ್ವಾ: ದಿನಾಂಕ 30।04.2011 ರಂದು ರಾತ್ರಿ 8:30 ಗಂಟೆಯ ಸಮಯಕ್ಕೆ ಆರೋಪಿ ಸಂದೇಶ್ ಶೆಟ್ಟಿ ಎಂಬವರು ಪಿರ್ಯಾದಿ ಶ್ರೀಮತಿ ಲೀಲಾ (38) ಗಂಡ ;ರಾಗು ಶೆಟ್ಟಿ ವಾಸ ನೂಜಿ ಮಾತೃ ಛಾಯಾ ಕುರ್ಕಾಲು ಗ್ರಾಮ ಎಂಬವರ ಮನೆಗೆ ಆಕ್ರಮ ಪ್ರವೆಶಿಸಿ ತನ್ನ ತಂದೆಗೆ ಎಕೆ ಅವಮಾನ ಮಾಡಿದ್ದು ? ಎಂದು ಹೇಳಿ ಶ್ರೀಮತಿ ಲೀಲಾ ರವರಿಗೆ ಕೈಗಳಿಂದ ಗುದ್ದಿ ದೂಡಿದ್ದು ಬಿಡಿಸಲು ಬಂದ ಅವರ ಅಣ್ಣ ಮತ್ತು ಚಿಕ್ಕಮ್ಮನ ಮಕ್ಕಳಾದ ಶೋಭ ಹಾಗೂ ಪುಸ್ಪ ಎಂಬವರಿಗೂ ಕೈಗಳಿಂದ ಹೊಡೆದಿದ್ದು ದೂಡಿದ ಪರಿಣಾಮ ಅವರು ಮನೆಯ ಒಳಗಿನ ಶೊಕೇಸಿನ ಮೇಲೆ ಬಿದ್ದು ಎಡಹಣೆಗೆ, ಎಡಕೈಗೆ ಮತ್ತು ಎಡಭುಜಕ್ಕೆ ರಕ್ತಗಾಯವಾಗಿದ್ದು ನಂತರ ಆರೋಪಿಯು ಅಚಾಚ್ಯ ಶಬ್ದಗಳಿಂದ ಬೈದು ತನ್ನ ಮತ್ತು ತನ್ನ ತಂದೆಯ ಸುದ್ದಿಗೆ ಬಂದರೆ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಆರೋಪಿಸಿ ಶ್ರೀಮತಿ ಲೀಲಾ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2011 ಕಲಂ;448, 323,504,506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ - ಉಡುಪಿ: ಚಂದ್ರಶೇಖರ ಶೆಟ್ಟಿ (32) ಬಿನ್ ತಿಮ್ಮಪ್ಪ ಶೆಟ್ಟಿ ವಾಸ: ಹೇರಿಕುದ್ರು ಕಳಿನ ಬಾಗಿಲು ಮನೆ ಕುಂದಾಪುರ ತಾಲೂಕು ಎಂಬವರು ಕೆಎ 20 ಬಿ 106 ದುರ್ಗಾಂಬಾ ಬಸ್ಸಿನಲ್ಲಿ ಚಾಲಕರಾಗಿದ್ದು, ದಿನಾಂಕ: 30/04/2011 ರಂದು ಮಂಗಳೂರಿನಿಂದ ಉಡುಪಿಗೆ ಮದ್ಯಾಹ್ನ 15:00 ಗಂಟೆಗೆ ಉಡುಪಿ ತಾಲೂಕು ಆಫೀಸ್ ಬಸ್ಸು ನಿಲ್ದಾಣ ತಲುಪಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದಾಗ, ಬಸ್ಸಿನ ಎದುರು ಕೆಎ 20 ಆರ್ 1772 ಬೈಕನ್ನು ಬಸ್ಸಿಗೆ ಅಡ್ಡ ಇಟ್ಟು ಆ ಬೈಕಿನಲ್ಲಿ ಇಬ್ಬರಿದ್ದು, ಅದರಲ್ಲಿ ಒಬ್ಬರು ಬಸ್ಸಿನ ಡ್ರೈವರ್ ಸೀಟ್ ಬಾಗಿಲ ಬಳಿ ಬಂದು ಕೈಯನ್ನು ಎಳೆದು ಅವಾಚ್ಯ ಶಭ್ದಗಳಿಂದ ಬೈದು, ಆತನ ಕೈಯಲ್ಲಿದ್ದ ಹೆಲ್ಮೇಟ್ ನಿಂದ ಅವರ ಬಲ ಭಾಗದ ಭುಜಕ್ಕೆ, ತಲೆಗೆ, ಕೈಗೆ ಏಕಾಏಕಿ ಹೊಡೆದಿದ್ದು ಅದರಲ್ಲಿದ್ದ ಮತ್ತೊಬ್ಬನು ಅವಾಚ್ಯ ಶಬ್ದದಿಂದ ಬೈದು ಹೊರಗಿನಿಂದಲೇ ಕುಳಿತುಕೊಳ್ಳುವ ಸೀಟಿನ ಹತ್ತಿರ ಬಂದು, ಕೈಯನ್ನು ಹಿಡಿದು ಎಳೆದುದಾಗಿದೆ. ಕೆಎ 20 ಆರ್ 1772 ನೇ ಬೈಕಿನಲ್ಲಿ ಬಂದು ಹೊಡೆದವರ ಹೆಸರು ಸುರೇಶ್ ಎರ್ಮಾಳ್ ಮತ್ತು ಅಸಾದುಲ್ಲಾ ಎಂದು ಅಲ್ಲಿದ್ದ ಪ್ರಯಾಣಿಕರು ಕೆಲವರು ತಿಳಿಸಿರುತ್ತಾರೆ ಎಂಬುದಾಗಿ ಚಂದ್ರಶೇಖರ ಶೆಟ್ಟಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 158/2011 ಕಲಂ 341, 324, 504, ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment