ಕಳವು ಪ್ರಕರಣಗಳು
- ಹೆಬ್ರಿ: ದಿನಾಂಕ 29.04.2011 ರಂದು 22-00 ಗಂಟೆಯಿಂದ 30.04.2011 ರ 05-00 ಗಂಟೆಯ ನಡುವಿನ ವೇಳೆಯಲ್ಲಿ ಯಾರೋ ಕಳ್ಳರು ಹೆಬ್ರಿ ಗ್ರಾಮದ ಬೈಲುಮನೆ ರಾಘವೇಂದ್ರ ಮಠದ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿ ರೂ. 2,00,000/- ಮೌಲ್ಯದ 1) ಸುಮಾರು 2 ಗ್ರಾಂನ 1. ಅನ್ನಪೂರ್ಣೆಶ್ವರಿ ದೇವಿಯ ಚಿನ್ನದ ಕಣ್ಣು 2) ಸುಮಾರು 250 ಗ್ರಾಂ ನ ಬೆಳ್ಳಿಯ ಕೌಳಿಗೆ ಸೆಟ್ 1 ಜೊತೆ 3) 1 ಕೆಜಿಯ ಮಹಾಗಣಪತಿ ದೇವರ ಬೆಳ್ಳಿಯ ಕವಚ 4) 250 ಗ್ರಾಂನ ರಾಘವೇಂದ್ರ ಸ್ವಾಮಿಯ ಬೆಳ್ಳಿಯ ಕವಚ 5) ಕಾಣಿಕೆ ಡಬ್ಬಿ 6) 750 ಗ್ರಾಂನ ಆಂಜನೇಯ ದೇವರ ಕವಚ 7) 750 ಗ್ರಾಂನ ಬೆಳ್ಳಿಯ ಕೊಡಪಾನ 8) 350 ಗ್ರಾಂನ ಬೆಳ್ಳಿಯ ತಂಬಿಗೆ 9) ಬೆಳ್ಳಿಯ ತುಳಸಿ ಮಣಿ ಸರ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ಕಳವು ಮಾಡಿರುತ್ತಾರೆ ಈ ಬಗ್ಗೆ ಹೆಚ್।ಗೋಪಾಲ ಆಚಾರ್ಯ ತಂದೆ:ದಿ! ಸೀತಾರಾಮ ಆಚಾರ್ಯ ವಾಸ: ಬೈಲುಮನೆ ಹೆಬ್ರಿ ಗ್ರಾಮ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2011 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಕೋಟ: ದಿನಾಂಕ 08/04/2011 ರಂದು ಸಂಜೆ 19:00 ಗಂಟೆಗೆ ಶೇಖರ (25), ತಂದೆ: ಪೊದುಂಕ್ರ, ವಾಸ: ಕುಕ್ಕುಂಡಿ ಕಾಲೋನಿ, ಪೆರ್ಡೂರು ಅಂಚೆ, ಅಲಂಗಾರು ಗ್ರಾಮ, ಉಡುಪಿ ಎಂಬವರ ಮಾವ ಈರಾ (45) ರವರು ಸಾಯಿಬ್ರಕಟ್ಟೆಯ ಕಾಜರಳ್ಳಿ ಎಂಬಲ್ಲಿ ವಿಪರೀತ ಶರಾಬು ಕುಡಿದು ಬಿದ್ದಿದ್ದವರನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲು ಮಾಡಿದ್ದು, ದಿನಾಂಕ 30/04/2011 ರಂದು ಬೆಳಿಗ್ಗೆ 04:00 ಗಂಟೆಗೆ ಮೃತಪಟ್ಟಿರುವುದಾಗಿದೆ।ಈ ಬಗ್ಗೆ ಶೇಖರ ರವರು ಕೋಟ ಠಾಣೆಯಲ್ಲಿ ನೀಡಿದ ದೂರಿನಂತೆ ಅಸ್ವಾಭಾವಿಕ ಮರಣ ಸಂಖ್ಯೆ 22/11 ಕಲಂ 174 ಸಿ।ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
- ಬೈಂದೂರು: ದಿನಾಂಕ 27/04/2011 ರಂದು 09:30 ಘಂಟೆಗೆ ಕುಂದಾಪುರ ತಾಲೂಕು ತೆಗ್ಗರ್ಸೆ ಗ್ರಾಮದ ನಿರೋಡಿ, ಶಿಂಧಿ ಮನೆ ಸಮೀಪ ಆರೋಪಿಗಳಾದ ಮಂಜು ಮರಾಠಿ ತಂದೆ ಗೋವಿಂದ ಮರಾಠಿ 2। ಬಾಲಯ್ಯ ಮರಾಠಿ ತಂದೆ : ಗೋವಿಂದ ಮರಾಠಿರವರುಗಳು ಕುಪ್ಪಯ್ಯ ಮರಾಠಿ (42 ವರ್ಷ) ತಂದೆ: ದಿ। ವೆಂಕ ಮರಾಠಿ ವಾಸ: ಶಿಂಧಿ ಮನೆ ನಿರೋಡಿ ತೆಗ್ಗರ್ಸೆ ಗ್ರಾಮ ಕುಂದಾಪುರ ತಾಲೂಕು ಅವಾಚ್ಯ ಶಬ್ದಗಳಿಂದ ಬೈದು ಕೈ ಯಿಂದ ತಲೆಗೆ ಹಲ್ಲೆ ನಡೆಸಿ ನೆಲದಲ್ಲಿ ಕೆಡವಿ ಹಲ್ಲಿನಿಂದ ಬಲ ಬದಿಯ ಹೆಗಲಿಗೆ ಕಚ್ಚಿ ಕುತ್ತಿಗೆಯನ್ನು ಒತ್ತಿ ಹಿಡಿದು ಕಲ್ಲಿನಿಂದ ಹಲ್ಲೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ। ಈ ಕೃತ್ಯಕ್ಕೆ ಗದ್ದೆಯಲ್ಲಿ ಬೆಳೆಸಿದ ನೇಂದ್ರ ಬಾಳೆಗಿಡಗಳನ್ನು ಆರೋಪಿತರ ದನವು ದಿನಾಂಕ 24/04/2011 ರಂದು ಮದ್ಯಾಹ್ನ 14:30 ಘಂಟೆಗೆ ನುಗ್ಗಿ ದ್ವಂಸ ಮಾಡಿದ್ದಕ್ಕೆ ದನವನ್ನು ತಮ್ಮ ಗದ್ದೆಯಿಂದ ಆರೋಪಿತರ ಗದ್ದೆಗೆ ಓಡಿಸಿರುವುದೇ ಕಾರಣವಾಗಿರುತ್ತದೆ ಎಂಬುದಾಗಿ ಕುಪ್ಪಯ್ಯ ಮರಾಠಿರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2011 ಕಲಂ 504,323,506,ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ।
No comments:
Post a Comment