ಅಪಘಾತ ಪ್ರಕರಣ
- ಶಂಕರನಾರಾಯಣ: ದಿನಾಂಕ 15/09/2015 ರಂದು 16:30 ಗಂಟೆಗೆ ಪಿರ್ಯಾದಿದಾರರಾದ ಚಂದ್ರ ಕುಲಾಲ್ (32), ತಂದೆ: ರಾಮ ಕುಲಾಲ್, ವಾಸ: ತೆಂಕಬೈಲು ಅರೆಕಲ್ಲುಜಡ್ಡು, ಆಜ್ರಿ ಗ್ರಾಮ, ಕುಂದಾಪುರ ತಾಲೂಕು ಇವರು ತನ್ನ KA 20 D 4082 ನಂಬ್ರದ ಆಟೋ ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕುಳ್ಳಿರಿಸಿಕೊಂಡು ಬಡಾಬಾಳು–ಶಂಕರನಾರಾಯಣ ರಸ್ತೆಯಲ್ಲಿ ಬಡಾಬಾಳು ಕಡೆಯಿಂದ ಶಂಕರನಾರಾಯಣ ಕಡೆಗೆ ಹೋಗುವಾಗ ಸಿದ್ದಾಪುರ ಗ್ರಾಮದ ಸೋಣಕ್ಕೆ ಹೋಗುವ ತಿರುವಿನ ಹತ್ತಿರ ಹೋಗುತ್ತಿರುವಾಗ ಎದುರುಗಡೆಯಿಂದ ಶಂಕರನಾರಾಯಣ ಕಡೆಯಿಂದ KA 20 D 193 ನಂಬ್ರದ ಸ್ಕೂಲ್ ಬಸ್ ಚಾಲಕ ಉದಯ ಎಂಬುವವರು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಚಂದ್ರ ಕುಲಾಲ್ ರವರ ರಿಕ್ಷಾದ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಜಖಂಗೊಂಡಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2015 ಕಲಂ:279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಬ್ರಹ್ಮಾವರ: ದಿನಾಂಕ 15/09/2015 ರಂದು 13:45 ಗಂಟೆಗೆ ಅನಂತಪದ್ಮನಾಭ ಕೆ.ವಿ ಪೊಲೀಸ್ ಉಪ ನಿರೀಕ್ಷಕರು ಬ್ರಹ್ಮಾವರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಉಪ್ಪೂರು ಗ್ರಾಮದ, ಕೊಳಲಗಿರಿ ಗಿರಿ ಬಾರ್ & ರೆಸ್ಟೋರೆಂಟಿನ ಎದುರು ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಟ್ಕಾ ಚೀಟಿ ಬರೆದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆರೋಪಿ ಸುಧಾಕರ ಪೂಜಾರಿ (45), ತಂದೆ: ದಿ. ಬೊಗ್ರ ಪೂಜಾರಿ, ವಾಸ: ಕಾನ್ವೆಂಟ್ ರಸ್ತೆ ಕೊಳಲಗಿರಿ ಅಂಚೆ ಹಾವಂಜೆ ಗ್ರಾಮ ಉಡುಪಿ ತಾಲೂಕು ಇವರ ವಶದಲ್ಲಿದ್ದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ರೂಪಾಯಿ 930/-, ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್ ಪೆನ್-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 181/2015 ಕಲಂ: 78 (1)(111) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
- ಮಲ್ಪೆ: ಪಿರ್ಯಾದಿದಾರರಾದ ನೂರ್ ಜಾನ್ (45), ಗಂಡ: ದಿ.ಹಮೀದ್, ವಾಸ: 4 ನೇ ಅಡ್ಡ ರಸ್ತೆ, ವಡಬಾಂಡೇಶ್ವರ, ಮಲ್ಪೆ ಕೊಡವೂರು ಗ್ರಾಮ, ಉಡುಪಿ ಇವರ 3 ನೇ ಮಗಳಾದ ರುಬೀನಾ (22) ಇವರು ದಿನಾಂಕ 05/09/2015 ರಂದು ಬೆಳಿಗ್ಗೆ 8:00 ಗಂಟೆಗೆ ನೂರ್ ಜಾನ್ ರವರು ಕೆಲಸಕ್ಕೆ ಹೋಗುವಾಗ ರುಬೀನಾ ಹಾಗೂ 2ನೇ ಮಗಳು ಸಬೀನಾ ರವರ 5 ವರ್ಷದ ಮಗು ಇಬ್ಬರೇ ಮನೆಯಲ್ಲಿಯೇ ಇದ್ದು ಸಂಜೆ 6:00 ಗಂಟೆಗೆ ಕೆಲಸ ಮುಗಿಸಿ ವಾಪಸು ಮನೆಗೆ ಬಂದಾಗ, ರುಬೀನಾ ತನ್ನ ಅಕ್ಕ ಸಬೀನಾಳ ಮಗುವನ್ನು ಪಕ್ಕದ ಮನೆಯಲ್ಲಿ ಬಿಟ್ಟು ತಾನು ಉಡುಪಿ ಹೋಗಿ ಬರುತ್ತೇನೆ ಎಂದು ತಿಳಿಸಿ ಉಡುಪಿ ಕಡೆಗೆ ಹೋಗಿದ್ದು ಇದುವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 134/2015 ಕಲಂ: ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
- ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಪ್ರೇಮಾ ಶೆಡ್ತಿ (65), ಗಂಡ: ದಿ. ಮಹಾಲಿಂಗ ಶೆಟ್ಟಿ, ವಾಸ: ನಂದಿಕೇಶ್ವರ ಪ್ರಸನ್ನ ಹವರಾಲು, ಕಾವಡಿ ಗ್ರಾಮ ಉಡುಪಿ ತಾಲೂಕು ಇವರ ಮಗನಾದ ಪ್ರಭಾಕರ ಶೆಟ್ಟಿ (35) ದಿನಾಂಕ 15/09/2015 ರಂದು 12:00 ಗಂಟೆಯಿಂದ 15:40 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಹೇರಾಡಿ ಗ್ರಾಮದ ಚೆಂಡೆ ಎಂಬಲ್ಲಿ ರೈಲ್ವೆ ಹಳಿಯಲ್ಲಿ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 52/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment