Tuesday, June 16, 2015

Daily Crimes Reported as On 16/06/2015 at 07:00 Hrs



ಅಪಘಾತ ಪ್ರಕರಣ

  • ಕೋಟ: ದಿನಾಂಕ:15-06-2015 ರಂದು ರಾತ್ರಿ ಸುಮಾರು 19.00 ಗಂಟೆ ಸಮಯಕ್ಕೆ ಪಿರ್ಯಾದಿ ಗಣೇಶ್ ಆಚಾರಿ ಇವರು ಕೋಟಾ ಗಿಳಿಯಾರು ಗ್ರಾಮದ ಶಾಂಭವಿ ಶಾಲೆಯ ಬಳಿ ನಡೆದುಕೊಂಡು ಹೋಗುವಾಗ, ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ HR 55 N 4289 ನೇ ಲೈಲ್ಯಾಂಡ್ ಕಂಪೆನಿಯ ಟ್ರೈಲರ್ ವಾಹನವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬಂದು ರಾ.ಹೆ.66 ರ ಪೂರ್ವ ಬದಿಯಲ್ಲಿ  ಶಾಂಭವಿ ಶಾಲೆಯ ಎದುರು ತಲುಪುವಾಗ, ಸದ್ರಿ ವಾಹನದ ಚಾಲಕನಿಗೆ ನಿಯಂತ್ರಣ ತಪ್ಪಿ ರಸ್ತೆಯ ತೀರಾ ಎಡಕ್ಕೆ ಹೋಗುವ ಸಂದರ್ಭ ಅದನ್ನು ತಪ್ಪಿಸಲು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿ ಬರುತ್ತಿದ್ದ ಗೋಪಾಲ ಆಚಾರಿ ಎಂಬುವರು ಚಲಾಯಿಸುತ್ತಿದ್ದ KA 20 EA 5591 ನೇ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರರು ರಸ್ತೆಗೆ ಬಿದ್ದು ಅವರ ತಲೆಗೆ, ಹಣೆಗೆ, ಎಡಕಾಲಿಗೆ, ಕಣ್ಣಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ಅವರನ್ನು ಕೂಡಲೇ ಆಪಾದಿತ ಟ್ರೈಲರ್ ಚಾಲಕ ಹಾಗೂ ಪಿರ್ಯಾದುದಾರರು ಕುಂದಾಪುರ ಎನ್.ಆರ್.ಆಚಾರ್ಯ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 144/2015 ಕಲಂ:279,338  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಜಾತಿ ನಿಂದನೆ ಪ್ರಕರಣ  
  • ಅಜೆಕಾರು: ದಿನಾಂಕ 14-06-2015 ರಂದು 18:00 ಗಂಟೆಗೆ ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಕಕ್ಕೆಕಾಡು ಎಂಬಲ್ಲಿ ಪಿರ್ಯಾದಿ  ರಮೇಶ ಮುಗೇರ ಇವರು ಕ್ರಿಕೆಟ್ ಆಟವನ್ನು ಆಡುತ್ತಿರುವಾಗ ಆರೋಪಿತ 1. ಸತೀಶ ಹೆಗ್ಡೆ (45) ತಂದೆ: ಪುಟ್ಟಯ್ಯ ಹೆಗ್ಡೆ ಕಕ್ಕೆಕಾಡು ಮನೆ ಕಡ್ತಲ ಗ್ರಾಮ 2. ಸಚಿನ್ ಹೆಗ್ಡೆ ( 23 ವರ್ಷ ) ತಂದೆ: ಸತೀಶ ಹೆಗ್ಡೆ ಕಕ್ಕೆಕಾಡು ಮೇಲ್ಮನೆ ಕಡ್ತಲ ಗ್ರಾಮ ಇವರುಗಳು ಪಿರ್ಯಾದಿದಾರರಿಗೆ ವಿನಾ ಕಾರಣ ಬೈದು ಹಲ್ಲೆ ನಡೆಸಿ ಪಿರ್ಯಾಧಿದಾರರನ್ನು ನೆಲಕ್ಕೆ ದೂಡಿ ಹಾಕಿ ಎದೆಗೆ ಕಾಲಿನಿಂದ ತುಳಿದು ಪಿರ್ಯಾದಿದಾರರನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ  ಹಾಕಿದ್ದು ತಡೆಯಲು ಬಂದ ಮನ್ಮಥ ಎಂಬವರ ಮೇಲೆಯೂ ಹಲ್ಲೆ ನಡೆಸಿದ್ದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2015 ಕಲಂ 323,504 506 ಜೊತೆಗೆ 34 ಐಪಿಸಿ & ಕಲಂ 3(1) (10) ಎಸ್ ಸಿ ಎಸ್ ಟಿ ಆಕ್ಟ್  1989ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಕಿರುಕುಳ ಪ್ರಕರಣ 
  • ಹಿರಿಯಡ್ಕ: ಪಿರ್ಯಾದಿ ಶ್ರೀಮತಿ ವಿನುತಾ ಶೆಟ್ಟಿ ಇವರಿಗೆ ಸುಮಾರು ಆರು ವರ್ಷದ ಹಿಂದೆ ಅರೋಪಿ ಪ್ರಸನ್ನ ಹೆಗ್ಡೆ ಯೊಂದಿಗೆ ವಿವಾಹವಾಗಿದ್ದು ವಿವಾಹದ ಬಳಿಕ ಆರೋಪಿಯು ಆಗಾಗ್ಯೆ ಪಿರ್ಯಾದಿಗೆ ಕ್ಷುಲ್ಲಕ ಸಾಂಸಾರಿಕ ಕಾರಣಕ್ಕೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದು ಪಿರ್ಯಾದುದಾರರು  ಸಹಿಸುತ್ತಾ ಬಂದರೂ ತನ್ನ ಹಳೆ ಚಾಳಿ ಬಿಟ್ಟಿರುವುದಿಲ್ಲ. ಅಲ್ಲದೆ  ಸದಾ ಮದ್ಯ ಹಾಗೂ ಕೋಳಿ ಅಂಕದ ಜೂಜಾಟದ ಚಟವನ್ನೂ ಮೈಗೂಡಿಸಿಕೊಂಡಿದ್ದು ಅದರಲ್ಲಿ ಹಣ  ಕಳೆದುಕೊಂಡ ಸಿಟ್ಟಿನಲ್ಲಿ ಮನೆಗೆ ಬಂದು ಹಿಂಸೆ ನೀಡುತ್ತಿದ್ದು,  ಅದೇ ರೀತಿ  ದಿನಾಂಕ  12/06/15 ರಂದು ಸಂಜೆ 07-30 ಗಂಟೆಗೆ ಪಾನಮತ್ತನಾಗಿ ಮನೆಗೆ ಬಂದ ಆರೋಪಿಯು ಪಿರ್ಯಾದುದಾರರೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಪಿರ್ಯಾದುದಾರರು ಆಕ್ಷೇಪಿಸಿದಾಗ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದು ಇದರಿಂದ ಬೇಸರ ಗೊಂಡ ಪಿರ್ಯಾದುದಾರರು  ಅತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ್ದು ಈ ವೇಳೆ ಆಸುಪಾಸಿನವರು  ಸೇರಿ ಪಿರ್ಯಾದಿದಾರರನ್ನು ಮೇಲಕ್ಕೆತ್ತಿ ಚಿಕಿತ್ಸೆಗೆ ಬೈಲೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2015 U/s  498(A), 323, 504 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಇತರೇ ಪ್ರಕರಣ 
  • ಕಾರ್ಕಳ: ದಿನಾಂಕ 15.06.2015 ರಂದು 14:30 ಗಂಟೆಗೆ ಸುಮಾರಿಗೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಆಟದ ಮೈದಾನ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ   1) ಸತೀಶ ಪ್ರಾಯ: 41 ವರ್ಷ ತಂದೆ: ದಿ: ಆನಂದ ಪೂಜಾರಿ ವಾಸ: ಮಂಜುಶ್ರೀ ನಿವಾಸ ಸಚ್ಚರಿಪೇಟೆ ಮುಂಡ್ಕೂರು ಗ್ರಾಮ ಕಾರ್ಕಳ ತಾಲೂಕು 2) ವಿನಯ್ ಪ್ರಾಯ: 36 ವರ್ಷ ತಂದೆ: ದಿ: ಆನಂದ ಪೂಜಾರಿ ಸಚ್ಚರಿಪೇಟೆ ಮುಂಡ್ಕೂರು ಗ್ರಾಮ ಕಾರ್ಕಳ ತಾಲೂಕು  ಇವರು ಕೈಯಲ್ಲಿ ಕಬ್ಬಿಣ ರಾಡ್ ಮತ್ತು ಅಲೂಮಿನಿಮ್ ಚಂಬುನ್ನು ಹಿಡಿದುಕೊಂಡು ಒಬ್ಬರಿಗೊಬ್ಬರು  ಹೊಡೆದಾಡಿಕೊಂಡು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡಿರುವುದು ಕಂಡು ಬಂದಿರುವುದರಿಂದ ಸದ್ರಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು  ಕಾರ್ಕಳ ಗ್ರಾಮಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/15 ಕಲಂ 160 ಐಪಿಸಿ ಪ್ರಕಾರ ಕಾನೂನು ಕ್ರಮ ಜರುಗಿಸಿರುವುದಾಗಿದೆ. 
ಕಳವು ಪ್ರಕರಣ 
  • ಕೊಲ್ಲೂರು: ಪಿರ್ಯಾದಿ ಉಮೇಶ ದೇವಾಡಿಗ ರಂದು ಅವರ ಬಾಬ್ತು  ಕೊಲ್ಲೂರು ಗ್ರಾಮದ ಸೌಪರ್ಣಿಕಾ ರಸ್ತೆಯಲ್ಲಿರುವ  ಶ್ರೀ ಮೂಕಾಂಬಿಕಾ ಕಮ್ಯೂನಿಕೇಶನ್ ಮೊಬೈಲ್ ಅಂಗಡಿಯನ್ನು ದಿನಾಂಕ  14/06/2015 ರಿಂದ ರಾತ್ರಿ 21:00 ಗಂಟೆ ಯಿಂದ ದಿನಾಂಕ 15/06/2015 ರ ನಡುವಣ ಅವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಬಾಗಿಲಿನ ಬೀಗ ಮುರಿದು ಅಂಗಡಿ ಒಳಗಿದ್ದ LAVA X8 iris ಒಂದು ಮೊಬೈಲ್ ಅದರ ಅಂದಾಜು ಬೆಲೆ 9500/-ರೂ ಮತ್ತು SAMSUNG J-1 ಹಾಗೂ Z-1 ಮೊಬೈಲ್ ಕಳವು ಮಾಡಿದ್ದು, ಇದೆಲ್ಲದರ ಒಟ್ಟು ಮೌಲ್ಯ 23700/- ರೂ ಆಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ  82/15 ಕಲಂ; 457,380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: