Monday, February 02, 2015

Daily Crimes Reported as On 02/02/2015 at 07:00 Hrs

ಅಪಘಾತ ಪ್ರಕರಣ
  • ಕಾಪು: ದಿನಾಂಕ 31.01.2015 ರಂದು ಪಿರ್ಯಾದಿ ಗಣೇಶ್ ಆಚಾರ್ಯ ಇವರು ತನ್ನ ಬಾಬ್ತು  ಕೆಎ 20 ಎಕ್ಸ್‌ 482 ನೇ ನಂಬ್ರ ದ ಮೋಟಾರ್‌ ಬೈಕ್‌ನಲ್ಲಿ ಸಹಸವಾರನ್ನಾಗಿ ಪ್ರದೀಪ್‌ ಎಂಬವರನ್ನು ಕುಳ್ಳಿರಿಸಿಕೊಂಡು ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ರಾಹೇ 66ರಲ್ಲಿ ಮೋಟಾರ್‌ ಸೈಕಲ್‌ನ್ನು ಚಲಾಯಿಸಿಕೊಂಡು ಹೋಗುತ್ತಾ ಸುಮಾರು ರಾತ್ರಿ 11:45 ಗಂಟೆಯ ಸಮಯಕ್ಕೆ ಎಣಗುಡ್ಡೆ ಗ್ರಾಮದ ಕಟಪಾಡಿ ಪೆಟ್ರೋಲ್‌ ಪಂಪ್‌ನಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ  ಪಿರ್ಯಾದುದಾರರ  ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ 15 3737 ನೇ ಟ್ಯಾಂಕರ್‌ ಚಾಲಕನು ತನ್ನ ಟ್ಯಾಂಕರ್‌ನ್ನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದುದಾರರ ಮೋಟಾರ್‌ ಸೈಕಲ್‌ಗೆ ಹಿಂದಿನಿಂಧ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಹಾಗೂ ಸಹ ಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ತಲೆಯ ಹಿಂಬದಿ ಮತ್ತು ಬಲಕಣ್ಣಿನ ಮೇಲುಗಡೆ ಹಾಗೂ ಬೆನ್ನಿನ ಹಿಂದ ರಕ್ತ ಗಾಯವಾಗಿದ್ದು ಹಾಗೂ ಸಹ ಸವಾರನಿಗೆ ಬಲಕಾಲು ಗಂಟು ಹತ್ತಿರ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/2015 ಕಲಂ 279, 337 ಐಪಿಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ದಿನಾಂಕ 01/02/2015  ರಂದು ಸಮಯ ಸುಮಾರು ಸಂಜೆ 4:45 ಗಂಟೆಗೆ ಕುಂದಾಪುರ  ತಾಲೂಕು ದೇವಲ್ಕುಂದ ಗ್ರಾಮದ ಜಾಡಿಯ ಸಂಜೀವಿನಿ  ಫ್ಯಾಕ್ಟರಿಯ ಬಳಿ ರಸ್ತೆಯಲ್ಲಿ ಆಪಾದಿತ ಅಕ್ಷಯ ಎಂಬವರು KA20-B-9103 ನೇ ಮಾರುತಿ ಒಮ್ನಿ ಕಾರನ್ನು ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ  ಚಲಾಯಿಸಿಕೊಂಡು ರಸ್ತೆಯ ಬಲ ಬದಿಗೆ ಬಂದು ರಘುರಾಮ  ಎಂಬವರು ಕುಂದಾಪುರ ಕಡೆಯಿಂಡ ವಂಡ್ಸೆ ಕಡೆಗೆ ಚಲಾಯಿಸಿಕೊಂಡು  ಹೋಗುತ್ತಿದ್ದ   KA20-B-768ನೇ  ಅಟೋರಿಕ್ಷಾಕ್ಕೆ ಎದುರುಗಡೆಯಿಂದ ಢಿಕ್ಕಿ ಹೊಡೆದ ಪರಿಣಾಮ ನಾಗರಾಜ, ಹಾಗೂ  ಅಟೋರಿಕ್ಷಾದಲ್ಲಿ  ಪ್ರಯಾಣಿಸುತ್ತಿದ್ದ  ಜಲಜಾ, ಮಾಲತಿ, ಮಾನ್ಯ,ಭೀಷಾ, ಹಾಗೂ ಮಾರುತಿ  ಒಮ್ನಿ  ಕಾರಿನಲ್ಲಿದ್ದ  ಶಿಲ್ಪಾ, ಶೈಲಾರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಮಣಿಪಾಲ: ಪಿರ್ಯಾದಿ ಶ್ರೀ ಟಿ ರಾಜಶೇಖರ ರೆಡ್ಡಿರವರು ದಿನಾಂಕ 1/02/2015 ರಂದು ಸಂಜೆ 22:00 ಗಂಟೆಗೆ ನೀಡಿದ ದೂರಿನ ಸಾರಾಂಶವೇನೆಂದರೆ ಪಿಯಾದಿದಾರರ ಮಗನಾದ ಟಿ. ಪ್ರನೀತ್  ರೆಡ್ಡಿ 20 ವರ್ಷರವರು ಮಣಿಪಾಲ ಎಮ್..ಟಿ ಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು ಮಾಂಡವಿ ಎಮಾರಾಲ್ಡ್ ರೂಮ್ ನಂಬ್ರ 403  ನೇದರಲ್ಲಿ ಇತರ  ವಿದ್ಯಾರ್ಥಿಗಳೊಂದಿಗೆ ವಾಸವಾಗಿದ್ದು, ದಿನಾಂಕ 01/02/2015 ರಂದು ಬೆಳಿಗ್ಗೆ 03:30 ಗಂಟೆಗೆ 4 ನೇ  ಮಹಡಿಯಲ್ಲಿರುವ ತನ್ನ ರೂಮ್  ನಂಬ್ರ 403    ಬಾಲ್ಕನಿಯಿಂದ  ಕೆಳಗೆ ನೆಲಕ್ಕೆ  ಬಿದ್ದು ತೀವೃವಾಗಿ  ಗಾಯಗೊಂಡಿದ್ದು ಮಣಿಪಾಲ ಕೆ.ಎಮ್.ಸಿ ಆಸ್ವತ್ರೆಗೆ ದಾಖಲಿಸಲಾಗಿದ್ದು, ನಂತರ ಬೆಳಿಗ್ಗೆ 07:30 ಗಂಟೆಗೆ ಚಿಕಿತ್ಸೆ  ಫಲಕಾರಿಯಾಗದೇ  ಮೃತ ಪಟ್ಟಿದ್ದು, ಬಗ್ಗೆ ಆಂದ್ರಪ್ರದೇಶದಲ್ಲಿದ್ದ ಪಿರ್ಯಾದುದಾರರಿಗೆ ದೂರವಾಣಿ ಮೂಲಕ ಮಾಹಿತಿ ಸಿಕ್ಕಿ ಸದ್ರಿಯವರು ಮಣಿಪಾಲ ಆಸ್ವತ್ರೆಗೆ ಭೇಟಿ ನೀಡಿದಲ್ಲಿ ಟಿ.ಪ್ರನೀತ್ ರೆಡ್ಡಿರವರ ಸಾವು ಇತರ ವಿದ್ಯಾರ್ಥಿಗಳು ದೂಡಿ ಆಗಿರಬಹುದು ಎಂಬುದಾಗಿ ಪಿರ್ಯಾದುದಾರರು ಸಂಶಯ ವ್ಯಕ್ತಪಡಿಸಿದ್ದು ಎಂಬಿತ್ಯಾದಿಯಾಗಿದ್ದು. ಈ ಬಗ್ಗೆ ಮಣಿಪಾಲ  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 05/15 ಕಲಂ 174(ಸಿ) ಸಿ ಆರ್ ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: