ಹಲ್ಲೆ ಪ್ರಕರಣ
- ಮಣಿಪಾಲ: ಪಿರ್ಯಾದಿದಾರರಾದ ಗುರುವ ನಾಯ್ಕ (80), ತಂದೆ ದಿ. ಗೋಂದು ನಾಯ್ಕ, ವಾಸ ಸರಳಬೆಟ್ಟು ಭಜನಾ ಮಂದಿರದ ಬಳಿ, ಉಡುಪಿ ತಾಲೂಕು. ಇವರು ಉಡುಪಿ ತಾಲೂಕು ಸರಳಬೆಟ್ಟು ಭಜನಾ ಮಂದಿರದ ಬಳಿಯ ನಿವಾಸಿಯಾಗಿದ್ದು, ದಿನಾಂಕ 23/12/2014 ರಂದು ಮದ್ಯಾಹ್ನ 4:00 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮನೆಯ ಒಳಗಡೆ ಜಗುಲಿಯಲ್ಲಿ ಹೆಂಡತಿಯೊಂದಿಗೆ ಅಡಿಕೆ ಸುಲಿಯುತ್ತಿರುವಾಗ ಆರೋಪಿತ ಭುಜಂಗ ನಾಯ್ಕ ತಂದೆ ಗುರುವ ನಾಯ್ಕ ವಾಸ ಸರಳಬೆಟ್ಟು ಭಜನಾ ಮಂದಿರದ ಬಳಿ, ಉಡುಪಿ ತಾಲೂಕು. ಇವರು ಪಿರ್ಯಾದಿದಾರರ ಮಗ ಭುಜಂಗ ನಾಯ್ಕನು ಬಂದು ಆಸ್ತಿಯಲ್ಲಾ ನನಗೆ ಬೇಕು, ಯಾರಿಗೂ ಪಾಲು ಕೊಡಬಾರದು ಎಂದು ಹೇಳಿದ್ದು, ಅದಕ್ಕೆ ಪಿರ್ಯಾದಿದಾರರು ನಾನು ಎಲ್ಲಾ ಮಕ್ಕಳಿಗೆ ಸರಿಯಾಗಿ ಪಾಲು ಮಾಡಿಕೊಡುತ್ತೇನೆ ಎಂದು ಹೇಳಿದಾಗ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದು ಮರದ ಸೊಂಟೆಯಿಂದ ಪಿರ್ಯಾದಿದಾರರ ಬಲಗೈ ರಟ್ಟೆಗೆ, ಎಡಕೈಗೆ ಹೊಡೆದು ಪಿರ್ಯಾದಿದಾರರು ತಪ್ಪಿಸಿಕೊಳ್ಳುವಾಗ ಸೊಂಟೆಯು ತಲೆಗೆ ಬಿದ್ದು ರಕ್ತಗಾಯವಾಗಿರುತ್ತದೆ ಎಂಬುದಾಗಿ ಗುರುವ ನಾಯ್ಕ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 210/14 ಕಲಂ 504, 324 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಗಂಗೊಳ್ಳಿ: ದಿನಾಂಕ 23/12/2014ರಂದು ತ್ರಾಸಿ ಗ್ರಾಮದ ರಾಮಮಂದಿರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕ ಜುಗಾರಿ ನಡೆಯುತ್ತಿರುವುದಾಗಿ ಪಿ.ಎಸ್,.ಐ ಗೋವರ್ಧನ್ ಎಂ ಗಂಗೊಳ್ಳಿ ಠಾಣೆ ರವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಬೆಳಿಗ್ಗೆ 09;30 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಮಟ್ಕ ಚೀಟಿ ಬರೆದು ಹಣ ಸಂಗ್ರಹಿಸುತ್ತಿದ್ದ 1). ಚಂದ್ರ ಕಾಂತ (52) ತಂದೆ ದಿ. ಗೋವಿಂದರಾಯ ನಾಯಕ, ವಾಸ ರಾಮ ಮಂದಿರ ಹತ್ತಿರ ತ್ರಾಸಿ ಗ್ರಾಮ, 2). ಸದಾಶಿವ (25) ತಂದೆ ಗಣಪತಿ ಖಾರ್ವಿ ವಾಸ ದಾಕು ಹಿತ್ಲು, ಗಂಗೊಳ್ಳಿ, ಗ್ರಾಮ 3). ಈಶ್ವರ ಖಾರ್ವಿ ಗಂಗೊಳ್ಳಿ ಇವರುಗಳು ಮಟ್ಕ ಜುಗಾರಿಯ ಹಣ ಲೈನ್ ಕಲೆಕ್ಷನ್ ಮಾಡುತ್ತಿದ್ದವರನ್ನು ದಸ್ತಗಿರಿಮಾಡಿ ಮಟ್ಕ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು ಹಣ 5300/- ರೂಪಾಯಿ ಮತ್ತು ಮಟ್ಕ ಚೀಟಿ, ಬಾಲ್ ಪೆನ್ನು, KA 47J3056 APACHE FTR-160 ಮೋಟಾರು ಸೈಕಲ್, ನೋಕಿಯೋ ಮೊಬೈಲ್ ಸೆಟ್-1 ನ್ನು ಸ್ವಾಧೀನಪಡಿಸಿಕೊಂಡು ಆಪಾದಿತರ ವಿರುದ್ಧ ಅ.ಕ್ರ 212/2014 ಕಲಂ 78 (1) (111) ಕೆ.ಪಿ.ಏಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಶಂಕರನಾರಯಣ: ಆರೋಪಿ ಆದಿತ್ಯ ಇವರು ತನ್ನ ಬಾಬ್ತು KA 20Z 4833ನಂಬ್ರದ ಹುಂಡೈ ಕಾರನ್ನು ದಿನಾಂಕ 23/12/2014 ರಂದು 12.40 ಗಂಟೆಗೆ ಕುಂದಾಫುರ ತಾಲೂಕು ಸಿದ್ಧಾಪುರ ಗ್ರಾಮದ ಕೆ.ಎಸ್. ನಾಯ್ಕ ಎಂಬವರ ಮನೆಯ ಎದುರು ಕುಂದಾಪುರ ಸಿದ್ಧಾಪುರ ಮುಖ್ಯ ರಸ್ತೆಯ ತಿರುವಿನಲ್ಲಿ ಕುಂದಾಪುರ ಕಡೆಯಿಂದ ಸಿದ್ಧಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿದ್ಧಾಪುರ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ KA 21C 111 ನಂಬ್ರದ ಈಚರ್ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಮತ್ತು ಲಾರಿ ಜಖಂಗೊಂಡು ಅಪಘಾತದಿಂದ ಘಟನಾಸ್ಥಳದಲ್ಲಿ ರಸ್ತೆಯ ಬದಿಯಲ್ಲಿರುವ ಎರಡು ವಿದ್ಯುತ್ ಕಂಬಗಳು ಜಖಂಗೊಂಡಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ರಾಘವೆಂದ್ರ ಪೂಜಾರಿ (30) ತಂದೆ ಗೋವಿಂದ ಪೂಜಾರಿ, ವಾಸ ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಶಂಕರನಾರಯಣ ಠಾಣಾ ಅಪರಾಧ ಕ್ರಮಾಂಕ 198/14 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment