ಅಪಘಾತ ಪ್ರಕರಣಗಳು
- ಕೊಲ್ಲೂರು: ಪಿರ್ಯಾದಿದಾರರಾದ ರಾಜ್ ಕುಮಾರ್ ಮಲ್ಲಪ್ಪ (41) ತಂದೆ ಮಲ್ಲಪ್ಪ ವಾಸ ವಿದ್ಯಾಗಿರಿ ಬಾಗಲಕೋಟೆ ಇವರು ತಮ್ಮ ವಿದ್ಯಾಸಂಸ್ಥೆಯ 49 ಜನ ವಿದ್ಯಾರ್ಥಿಗಳು ಮತ್ತು ಸ್ಟಾಫ್ ರೊಂದಿಗೆ ದಿನಾಂಕ 18.12.2014 ರಂದು ಬಾಗಲಕೋಟೆಯಿಂದ KSRTC ಬಸ್ ನಂಬ್ರ KA 29F 1176ನೇದರಲ್ಲಿ ಪ್ರವಾಸ ಹೊರಟು ದಿನಾಂಕ 19.12.2014 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ದರ್ಶನ ಮುಗಿಸಿಕೊಂಡು ವಾಪಾಸು ಎಲ್ಲರೂ ಅದೇ ಬಸ್ಸಿನಲ್ಲಿ ಧರ್ಮಸ್ಥಳದ ಕಡೆಗೆ ಹೊರಟಿದ್ದು ರಸ್ತೆಯಲ್ಲಿ ವಂಡ್ಸೆಯ ಶಾರ್ಕೆ ಬೊಬ್ಬರ್ಯ ಕ್ರಾಸ್ ಬಳಿ ಸಂಜೆ 06:00ಗಂಟೆಗೆ ತಲುಪುವಾಗ ತಿರವು ಏರು ರಸ್ತೆಯಲ್ಲಿ ಬಸ್ಸನ್ನು ಆಪಾದಿತ ಚಾಲಕ ಶರಣಪ್ಪನು ವೇಗ ಮತ್ತು ನಿರ್ಲಕ್ಷದಿಂದ ಚಲಾಯಿಸಿ ಬಸ್ಸು ರಸ್ತೆ ಬದಿಯ ಚರಂಡಿಗೆ ಸರಿದು ಪಲ್ಟಿಯಾಗಿ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಸ್ಟಾಫ್ ರವೀಂದ್ರ ಇವರ ಕೈಗೆ ಮೂಳೆ ಮುರಿತದ ಗಾಯ ಮತ್ತು ವಿದ್ಯಾರ್ಥಿಗಳಾಗಿದ್ದ ಸಚಿನ ನಜೀರ ಭೀಮಪ್ಪ, ಶರಣಬಸು, ಶಿವಾನಂದ, ವಿಠಲ ಎಂಬವರುಗಳಿಗೆ ತೀವ್ರ ಮತ್ತು ಸಾದಾ ಸ್ವರೂಪದ ಗಾಯ ಉಂಟಾಗಿದ್ದು ಚಿಕಿತ್ಸೆಗೆ ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ರಾಜ್ ಕುಮಾರ್ ಮಲ್ಲಪ್ಪ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 79/14 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಬ್ರಹ್ಮಾವರ: ದಿನಾಂಕ 18/12/2014ರಂದು 18:00 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಎಸ್.ಎಮ್.ಎಸ್ ಚೆರ್ಚ ಬಳಿ ರಾ.ಹೆ 66ರಲ್ಲಿ ಆರೋಪಿ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ 20ಇಇ 1892ನೇದನ್ನು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೀರಾ ಎಂಬುವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ ಎಡಕೈ ತೋಳು ಮತ್ತು ಎಡ ಕಿಬ್ಬೊಟ್ಟೆ ಮೂಳೆಗೆ ಮತ್ತು ಮುಖಕ್ಕೆ ತೀವ್ರ ರಕ್ತ ಗಾಯವಾಗಿರುತ್ತದೆ.ಅಲ್ಲದೇ ಮೋಟಾರು ಸೈಕಲ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ಪುನೀತ್ ರಾಜ್ (24) ತಂದೆ ಗಂಗಾಧರ್ ಕೋಟ್ಯಾನ್ ವಾಸ ನಂದಿಗುಡ್ಡೆ ಚಾಂತಾರು ಗ್ರಾಮ ಇವರು ನೀಡಿದ ದೂರಿನಂತೆ ಬ್ರಹ್ಮವರ ಠಾಣಾ ಅಪರಾದ ಕ್ರಮಾಂಕ 230/2014 ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಶಂಕರನಾರಯಣ: ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಐರ್‌ಬೈಲ್‌ಕಿರ್ಲಾಡಿ ಎಂಬಲ್ಲಿ ವರಾಹಿ ಬಲದಂಡೆ ಕಾಲುವೆ ಯೋಜನೆಯಡಿಯಲ್ಲಿ 11 ನೇ ಮೈಲಿಕಲ್ಲು ಇದರ ಕಾಮಗಾರಿಯನ್ನು ಎಸ್.ಎನ್.ಸಿ ಕಂಪನಿಯವರು ನಡೆಸುತ್ತಿದ್ದಾರಾಗಿ ಸದ್ರಿ ಕಂಪನಿಯವರು ಸ್ಥಳದಲ್ಲಿ ಕಲುವೆಯ ಕಲ್ಲು ಬಂಡೆಗಳನ್ನು ಒಡೆಯಲು ಯಾವುದೇ ಮುಂಜಾಗ್ರತಾ ಕ್ರಮವನ್ನು ವಹಿಸದೇ ನಿರ್ಲಕ್ಷತನದಿಂದ ದಿನಾಂಕ 19/12/2014 ರಂದು ಸಂಜೆ 6:40 ಗಂಟೆಗೆ ಬಂಡೆಗಳನ್ನು ಬ್ಲಾಸ್ಟ್ಮಾಡಿದ ಪರಿಣಾಮ ಬ್ಲಾಸ್ಟಿಂಗಿ ಕಲ್ಲು ಚೂರು ತನಗೆ ತಾಗಿ ಪೆಟ್ಟಾಗಿದ್ದಾಗಿ ಪಿರ್ಯಾದಿದಾರರಾದ ವನಜ ಶೆಡ್ತಿ ಗಂಡ: ಕೃಷ್ಣಯ್ಯ ಶೆಟ್ಟಿ ವಾಸ ಕಿರ್ಲಾಡಿ, ಐರ್‌ಬೈಲ್ ಸಿದ್ದಾಪುರ ಗ್ರಾಮ ಇವರು ನೀಡಿದ ದೂರಿನಂತೆ ಶಂಕರನಾರಯಣ ಠಾಣಾ ಅಪರಾಧ ಕ್ರಮಾಂಕ 194/14 ಕಲಂ EXPLOSIVE ACT188 (U/S 9(B)(1)(b)ಐ.ಪಿ.ಸಿ 1860(286,337) ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಸ್ವಾಭಾವಿಕ
ಮರಣ ಪ್ರಕರಣ
- ಬೈಂದೂರು: ಪಿರ್ಯಾದಿದಾರರಾದ ಸುಬ್ಬಯ್ಯ ಮರಾಠಿ (45) ತಂದೆ ನಾರಾಯಣ ಮರಾಠಿ ವಾಸ ಕ್ಯಾರ್ತೂರು ಗಂಗನಾಡು ಬೈಂದೂರು ಗ್ರಾಮ ಎಂಬುವವರ ತಾಯಿ ಗಂಗೆ ಮರಾಠಿ ಪ್ರಾಯ: 65 ವರ್ಷ ಎಂಬುವವರು ಪ್ರತಿ ದಿನ ಬೆಳಿಗ್ಗೆ ಎದ್ದು ತಮ್ಮ ಗದ್ದೆಯ ಬಳಿ ಹೋಗಿ ಕೃಷಿಯನ್ನು ನೋಡಿ ಕೊಂಡು ಬರುವುದು ವಾಡಿಕೆಯಾಗಿದ್ದು. ಎಂದಿನಂತೆ ದಿನಾಂಕ 20/12/2014 ರಂದು ಬೆಳಿಗ್ಗೆ ಜಾವ 05:00 ಗಂಟೆಗೆ ಎದ್ದು ಗದ್ದೆ ಕಡೆ ಹೋದವರು ದಿನಾಂಕ 20/12/2014 ರಂದು ಬೆಳಿಗ್ಗೆ ಜಾವ 05:00 ಗಂಟೆಯಿಂದ 07:00 ಗಂಟೆಯ ನಡೆವಿನ ಸಮಯದಲ್ಲಿ ಕುಂದಾಪುರ ತಾಲುಕು ಬೈಂದೂರು ಗ್ರಾಮದ ಕ್ಯಾರ್ತೂರು ಗಂಗನಾಡು ಎಂಬಲ್ಲಿರುವ ದಿ| ಗೋವಿಂದ ಮರಾಠಿಯವರ ಜಾಗದಲ್ಲಿರುವ ಕೆರಯ ಬಳಿಯಲ್ಲಿ ನಡೆದುಕೊಂಡು ಹೋಗುವಾಗ ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಉಸಿರುಗಟ್ಟಿ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಸುಬ್ಬಯ್ಯ ಮರಾಠಿ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 44/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಜುಗಾರಿ
ಪ್ರಕರಣ
- ಬೈಂದೂರು: ದಿನಾಂಕ 20/12/2014 ರಂದು ಬೆಳಿಗ್ಗೆ 10:00 ಗಂಟೆಯ ಸಮಯಕ್ಕೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಿಗೆ ಭಾತ್ಮಿದಾರರಿಂದ ಕುಂದಾಪುರ ತಾಲೂಕು ಶಿರೂರು ಗ್ರಾಮದ ಸೆಲ್ಸ ಟ್ಯಾಕ್ಷ ಚೆಕ್‌ಪೋಸ್ಟ ಬಳಿ ಇರುವ ಆಟೋ ರಿಕ್ಷಾ ನಿಲ್ದಾಣದ ಬಳಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಬೈಂದೂರು ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಯವರ ಮತ್ತು ಪಂಚರ ನೆರವಿನಿಂದ ಬೆಳಿಗ್ಗೆ 10:15 ಕ್ಕೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಸೆಲ್ಸ ಟ್ಯಾಕ್ಷ ಚೆಕ್‌ಪೋಸ್ಟ ಬಳಿ ಇರುವ ಆಟೋ ರಿಕ್ಷಾ ನಿಲ್ದಾಣದ ಬಳಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಲ್ಲಿಗೆ ದಾಳಿ ಮಾಡಿ ಆಟವಾಡುತ್ತಿದ್ದ 8 ಜನ ಆರೋಪಿತರುಗಳಾದ 1). ಪ್ರದೀಪ್ (23) ತಂದೆ ಬಾಸ್ಕರ ವಾಸ ಆಲಂದೂರು ಯಡ್ತರೆ ಗ್ರಾಮ, 2). ಈಶ್ವರ (32) ತಂದೆ ಈರಪ್ಪ ಪೂಜಾರಿ ವಾಸ ಗೋಳಿಬೇರು ಶಿರೂರು ಅಂಚೆ ಬೈಂದೂರು ಗ್ರಾಮ 3). ರಮೇಶ್ ಬಾಬು (38) ತಂದೆ ಸುಬ್ರಾಯ ವಾಸ: ಶಿರೂರು ಮಾರ್ಕೇಟ್ ಬಳಿ ಶಿರೂರು ಗ್ರಾಮ, 4) ದಿನೇಶ್ (24) ತಂದೆ ನಾರಾಯಣ ವಾಸ: ಕಡ್ಕೆ ಯಡ್ತರೆ 5) ಸೂರ್ಯ(22) ತಂದೆ ಮಂಜು ವಾಸ: ಆಲಂದೂರು ಯಡ್ತರೆ 6) ನಾಗರಾಜ (31) ತಂದೆ: ದೇವಯ್ಯ ವಾಸ ಕಡ್ಕೆ ಯಡ್ತರೆ 7) ಸುರೇಶ್ (26) ತಂದೆ: ಶಿವಪ್ಪ ಪೂಜಾರಿ ವಾಸ: ಆಲಂದೂರು ಯಡ್ತರೆ ಗ್ರಾಮ 8) ರಾಘವೇಂದ್ರ (32) ತಂದೆ: ನಾರಾಯಣ ವಾಸ: ಆಲಂದೂರು ಯಡ್ತರೆ ಗ್ರಾಮ ಇವರುಗಳನ್ನು ಹಿಡಿದು ಆಟಕ್ಕೆ ಬಳಸಿದ 3200/- ರೂಪಾಯಿ ನಗದು, ಇಸ್ಪಿಟ್ ಕಾರ್ಡ್ -52 ಹಾಗೂ ಹಳೆಯ ನ್ಯೂಸ್ ಪೇಪರ್ -1 ನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 253/2014 ಕಲಂ 87 ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಶುಭಾ ಕಾರಂತ (42) ತಂದೆ ರಾಮಕೃಷ್ಣ ಕಾರಂತ ವಾಸ ಚಿಕನ್ ಸಾಲ್ ರೋಡ್, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ಕುಂದಾಪುರ ಮುನ್ಸಿಪಾಲ್ ರಸ್ತೆಯಲ್ಲಿರುವ ಮಯೂರ ಮೆಡಿಕಲ್ಸ್ ಎಂಬ ಔಷದಿ ಮಾರಾಟದ ಅಂಗಡಿಯನ್ನು ನಡೆಸುತ್ತಿದ್ದು ದಿನಾಂಕ 19/12/2014 ರಂದು ಸಂಜೆ 07:45 ಗಂಟೆಗೆ ಆರೋಪಿತರುಗಳಾದ ಶ್ರೀಮತಿ ಸೌರಭಿ ಗಂಡ ದಿ. ವೆಂಕಟರಮಣ ಪೈ ವಾಸ ಮುನ್ಸಿಪಲ್ ರೋಡ್, ಕಸಬಾ ಗ್ರಾಮ, ಕುಂದಾಪುರ ಮತ್ತು ಇತರ ಇಬ್ಬರು ಹುಡುಗರು. ಪಿರ್ಯಾದಿದಾರರ ಅಂಗಡಿಗೆ ಬಂದು ಉದ್ದೇಶಪೂರ್ವಕವಾಗಿ ಅವಾಚ್ಯೆ ಶಬ್ದಗಳಿಂದ ಬೈದು ಮನೆಗೆ ಕಲ್ಲು ಹೊಡೆಸುವುದಾಗಿ ಅಲ್ಲದೇ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಅದೇ ದಿನ ರಾತ್ರಿ 12:30 ಗಂಟೆ ಸಮಯಕ್ಕೆ ಮನೆಯ ಅಂಗಳಕ್ಕೆ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರ ಮನೆಗೆ ಕಲ್ಲನ್ನು ಬಿಸಾಡಿರುವುದಾಗಿದೆ ಎಂಬುದಾಗಿ ಶ್ರೀಮತಿ ಶುಭಾ ಕಾರಂತ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 390/2014 ಕಲಂ: 504, 506, 447 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment