Friday, July 24, 2015

Daily Crimes Reported As on 24/07/2015 at 17:00 Hrs

ಕಳವು ಪ್ರಕರಣ
  • ಬೈಂದೂರು: ಕುಂದಾಪುರ ತಾಲೂಕು ಕಾಲ್ತೋಡು ಗ್ರಾಮದ ಶ್ರೀ ಮಹಾಲಸಾ ಮಾರಿಕಾಂಬ ದೇವಸ್ಥಾನದ ಅರ್ಚಕರಾದ ರಾಮಯ್ಯರವರು ಎಂದಿನಂತೆ ದಿನಾಂಕ  23/07/2015 ರಂದು ರಾತ್ರಿ 07:30 ಗಂಟೆಗೆ ದೇವರ ಪೂಜೆ ಮುಗಿಸಿ ರಾತ್ರಿ 08:00 ಗಂಟೆಗೆ ದೇವಸ್ಥಾನದ ಬೀಗ ಹಾಕಿ ಮನೆಗೆ ಹೋದವರು ದಿನಾಂಕ 24/07/2015 ರಂದು ಬೆಳಿಗ್ಗೆ 05:00 ಗಂಟೆಗೆ ದೇವಸ್ಥಾನಕ್ಕೆ ಪೂಜೆಗೆಂದು ಬಂದಾಗ ದೇವಸ್ಥಾನದ ಪಶ್ಚಿಮ ದಿಕ್ಕಿನ ಬಾಗಿಲು ತೆರೆದಿದ್ದು, ಉತ್ತರ ದಿಕ್ಕಿನ ಗರ್ಭಗುಡಿಯ ಎರಡು ಬಾಗಿಲುಗಳ ಬೀಗ ಒಡೆದಿರುವುದು ಕಂಡು ಬಂದಿದ್ದನ್ನು ರಾಮಯ್ಯ ಅರ್ಚಕರು ಪಿರ್ಯಾದಿ ಗಣೇಶ್‌ ಶೆಟ್ಟಿ (63) ತಂದೆ: ಅಣ್ಣಪ್ಪ ಶೆಟ್ಟಿ ವಾಸ: ಅಣ್ಣಪ್ಪ ನಿಲಯ ಕಾಲ್ತೋಡು ಗ್ರಾಮ ಕುಂದಾಪುರ ತಾಲೂಕುರವರಿಗೆ ಹಾಗೂ ಇತರರಿಗೆ ತಿಳಿಸಿದಂತೆ ದೇವಸ್ಥಾನದ ಕಮಿಟಿಯವರೊಂದಿಗೆ ದೇವಸ್ಥಾನಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ದೇವಸ್ಥಾನದ ಉತ್ತರ ದಿಕ್ಕಿನ ಗರ್ಭಗುಡಿಯ ಎರಡು ಬಾಗಿಲಿನ ಬೀಗ ಹಾಕುವ ಕೊಂಡಿಯನ್ನು ಯಾವುದೋ ಆಯುಧದಿಂದ ತುಂಡು ಮಾಡಿ ಒಳನುಗ್ಗಿ ಶ್ರೀ ಮಹಾಲಸಾ ಮಾರಿಕಾಂಬ ದೇವರ ಸುಮಾರು 4 ಕೆ.ಜಿ ತೂಕದ ಬೆಳ್ಳಿಯ ಪ್ರಭಾವಳಿ, ಭಂಗಾರದ ಸಣ್ಣ ಮೂಗಿನ ಬೊಟ್ಟು, 16 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಹಾಗೂ ಹಿತ್ತಾಳೆಯ ಒಂದು ನಂದಾ ದೀಪವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 1,45,000 ರೂಪಾಯಿಗಳು ಆಗಬಹುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 204/2015 ಕಲಂ  457, 380 ಐಪಿಸಿಯಂತೆ ಪ್ರಕರಣ ಖಲಿಸಿಕೊಳ್ಳಲಾಗಿದೆ.
ಇತರೇ ಪ್ರಕರಣ
  • ಕೋಟ: ಪಿರ್ಯಾದಿ ರತ್ನಾಕರ ಶ್ರೀಯಾನ್ ಇವರು ದಿನಾಂಕ:05/11/2013 ರಂದು ಕೃಷಿಗೆ ಸಂಬಂಧಿಸಿದಂತೆ ಕೋಟ ಮಯೂರ ಕ್ಲಿನಿಕ್‌ನ ವೈದ್ಯರಾದ ಡಾ.ಕೃಷ್ಣರಾವ್ ರವರಿಂದ ರೂಪಾಯಿ 1,50,000/- ಸಾಲವನ್ನು ಕೇಳಿದ್ದು ಆ ಸಂದರ್ಭದಲ್ಲಿ ಅವರು ಪಿರ್ಯಾದಿದಾರರು ಸಹಿ ಮಾಡಿದ 2 ಖಾಲಿ ಚೆಕ್‌ನ್ನು ಹಾಗೂ ಖಾಲಿ ಲೆಜ್ಜರ್ ಪೇಪರ್‌ ಪಡೆದು ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ರೂಪಾಯಿ 13,500/- ರೂಪಾಯಿಯನ್ನು ಸುಮಾರು 6 ತಿಂಗಳಿಂದ ಪಡೆದು ಕೊಂಡಿದ್ದು ನಂತರ ಪಿರ್ಯಾದಿದಾರಿಗೆ ಮೀನುಗಾರಿಕೆ, ಕೃಷಿಯಲ್ಲಿ ಬಾರೀ ನಷ್ಟ ಉಂಟಾಗಿದ್ದು ಸಾಲದ ಬಡ್ಡಿ ಕಟ್ಟುವರೇ ಅಸಾಧ್ಯವಾದಾಗ ನಿರಂತರ ಪೋನ್ ಕರೆಮಾಡಿ ಜೀವ ಬೆದರಿಕೆ ಕರೆಗಳನ್ನು ಹಾಕುತ್ತಿರುವುದಲ್ಲದೇ ,ಪಿರ್ಯಾದಿದಾರರ ಜಾಗದ ಕಾಗದ ಪತ್ರಗಳನ್ನು ನನಗೆ ತಂದು ಕೊಡು ಇಲ್ಲದಿದ್ದಲ್ಲಿ ನಿನ್ನ ಹೆಂಡತಿಯ ಶಾಲೆಗೆ ಹೋಗಿ ಎಲ್ಲರ ಸಮ್ಮುಖದಲ್ಲಿ ಅವರ ಮರ್ಯಾದೆ ತೆಗೆಯುತ್ತೇನೆ ಎಂದು ಹೇಳಿ ಬಲವಂತವಾಗಿ ಕೃಷಿ ಜಮೀನಿನ ದಾಖಲೆಗಳನ್ನು ವಶಪಡಿಸಿಕೊಂಡು ಅದನ್ನು ಅವರ ಹೆಸರಿಗೆ ವರ್ಗಾವಣೆ ಮಾಡಿಕೊಡಬೇಕೆಂದು ಪದೇ ಪದೇ ಬೆದರಿಕೆ ಹಾಕಿ ಪಿರ್ಯಾದಿದಾರರು ನೀಡಿದ ಖಾಲಿ ಚೆಕ್‌ನಲ್ಲಿ 1 ಚೆಕ್‌ನ್ನು ಉಪಯೋಗಿಸಿ ರೂಪಾಯಿ 4,50,000/-ಮೌಲ್ಯದ ಚೆಕ್‌ ಬೌನ್ಸ್ ಕೇಸ್ ದಾಖಲಿಸಿರುತ್ತಾರೆ. ಅಲ್ಲದೇ ಇನ್ನೊಂದು ಚೆಕ್‌ನ್ನು ಆತನ ಸ್ನೇಹಿತ ಕಾರಂತ ಎನ್ನುವವರಿಂದ ಚೆಕ್ ಬೌನ್ಸ್ ಕೇಸ್‌ ದಾಖಲಿಸುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 171/2015 ಕಲಂ: KARNATAKA MONEY LENDERS ACT 1961 U/s 38,39, KARNATAKA PROHIBITION OF CHARGING EXORBITANT INTEREST ACT 2004 U/s 3,4 & 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ: 22/07/2015 ರಂದು ಸಮಯ ಸುಮಾರು 16:30 ರಿಂದ 17:00 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, ಆರೂರು ಗ್ರಾಮದ, ಕೀರ್ತಿನಗರ ಮತ್ತು ಗರಡಿದಾರಿಯಲ್ಲಿ ಸಾರ್ವಜನಿಕರು ಹಾಕಿದ ಪಂಚಾಯತ್ ಚುನಾವಣೆಯಲ್ಲಿ ವಿಜಯಿ ಆದಂತಹ ಅಭ್ಯರ್ಥಿ ಯವರಿಗೆ ಶುಭಕೋರುವ  ಬ್ಯಾನರ್‌‌ನ್ನು ಆರೋಪಿ ಮನೋಜ್ ಶೆಟ್ಟಿ , ಕುರುಡುಂಜೆ, ಆರೂರು ಗ್ರಾಮ, ಉಡುಪಿ ತಾಲೂಕು  ಈತನು  ಹರಿದು ಹಾಕಿ ಮತ್ತು ಅದೇ ಸಮಯದಲ್ಲಿ ಬ್ಯಾನರಿನಲ್ಲಿ ಫೋಟೋ ಇರುವ ಅಭ್ಯರ್ಥಿಗಳಿಗೆ ನೆರೆಹೊರೆಯ ಮನೆಯವರಿಗೆ ಕೇಳುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಸಮಾಜದ ನೆಮ್ಮದಿ ಹಾಳುಮಾಡಿರುತ್ತಾನೆ ಎಂಬಿತ್ಯಾದಿ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 147/15 ಕಲಂ: 427, 504 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಹಿರಿಯಡ್ಕ : ಪೆರ್ಡೂರು ಗ್ರಾಮದ ರಾಜ್‌ಕುಮಾರ್‌ ಶೆಟ್ಟಿ ಎಂಬವರು ಕರ್ನಾಟಕದ ಗೌರಾವಾನ್ವಿತ ಲೋಕಾಯುಕ್ತ ಬೆಂಗಳೂರು ರವರಿಗೆ ಸ್ಥಳೀಯ ಸುಭಾಸ್‌ ಚಂದ್ರ ಹೆಗ್ಡೆ ಯವರ ವಿರುದ್ದ ಪೆರ್ಡೂರು ಗ್ರಾಮದ ಸ.ನಂ 127/36 ರ ನಿವೇಶನದಲ್ಲಿ ಸುಭಾಶ್‌ ಚಂದ್ರ  ಹೆಗ್ಡೆ ರವರು ನಿವೇಶನದ ಪೈಕಿ  0-10 ಎಕ್ರೆ ನಿವೇಶನವನ್ನು ವಾಸ್ತವ್ಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿರುವುದಾಗಿ ಉಡುಪಿ ತಾಲೂಕು  ತಹಸೀಲ್ದಾರ್ ರವರ ಕಚೇರಿ ಸೀಲ್‌ ಹಾಗೂ ಸಹಿ ಇರುವ ನಕಲಿ ದಾಖಲೆ  ಸೃಷ್ಟಿಸಿ ಪೆರ್ಡೂರು ಗ್ರಾಮ ಪಂಚಾಯತ್‌ಗೆ ಸಲ್ಲಿಸಿ ಪಂಚಾಯತ್‌ನ ಅನುಮತಿ ಪಡೆದು ಕಟ್ಟಡ ನಿರ್ಮಿಸಿದ್ದು, ಸದ್ರಿ 6-64 ಎ1ಬಿ ಕಟ್ಟಡದಲ್ಲಿ ಸುಭಾಶ್‌ ಚಂದ್ರ ಹೆಗ್ಡೆ ಮತ್ತು ಅವರ ಪತ್ನಿ  ಶ್ರೀಮತಿ ಸರಿತಾ ಹೆಗ್ಡೆ  ರವರು ಪಾಲುದಾರರೆಂದು ನಮೂದಿಸಿಕೊಂಡು ಉಡುಪಿಯ ಅಬಕಾರಿ ಡೆಪ್ಯುಟಿ ಕಮಿಶನರ್‌ ಕಚೇರಿಗೆ ಜಂಟಿಯಾಗಿ ಪಿಂಕಿ ವೈನ್ಸ್‌ ಹೆಸರಲ್ಲಿ ಸಿಎಲ್‌ -2 ಮದ್ಯದಂಗಡಿಗೆ ಪರವಾನಿಗೆಗೆ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆದುಕೊಂಡಿರುತ್ತಾರೆ. ಎಂಬುದಾಗಿ ದೂರು ಅರ್ಜಿ ಬರೆದು ರವಾನಿಸಿದ್ದು ಲೋಕಾಯುಕ್ತದಿಂದ ವಿಚಾರಣೆಗೆ ಬಂದ ಸದ್ರಿ  ದೂರಿನ ಕುರಿತು ಉಡುಪಿ ಜಿಲ್ಲಾಧಿಕಾರಿಯವರು  ಬೃಹ್ಮಾವರ ವಿಶೇಷ ತಹಸೀಲ್ದಾರ್‌ ರವರ ಮೂಲಕ  ತನಿಖೆ ನಡೆಸಲಾಗಿ ಸುಭಾಸ್‌ಚಂದ್ರ ಹೆಗ್ಡೆ ರವರು ಪಂಚಾಯತ್‌ಗೆ ಸಲ್ಲಿಸಿದ ಭೂ ಪರಿವರ್ತನಾ ಆದೇಶವು ಸಂಪೂರ್ಣ ನಕಲಿ ಹಾಗೂ ಕೃತಕವಾಗಿ ಸೃಷ್ಟಿಸಿರುವುದೆಂದು ಧೃಡಪಟ್ಟು ಜಿಲ್ಲಾಧಿಕಾರಿರವರಿಗೆ ವರದಿ ಸಲ್ಲಿಸಿದ್ದು,  ನಕಲಿ ದಾಖಲೆ ಸೃಷ್ಟಿಸಿದ ಹಾಗೂ ಅದನ್ನು ನಕಲಿ ಎಂದು ಬುದ್ದಿ ಪೂರ್ವಕವಾಗಿ ತಿಳಿದಿದ್ದರೂ  ಅಸಲಿ ಎಂಬಂತೆ ಸರಕಾರಿ ಕಚೇರಿಗೆ ಹಾಜರುಪಡಿಸಿ ಅಪರಾಧಿಕ ಪಿತೂರಿ ಮೂಲಕ ವಂಚಿಸಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 78/15 ಕಲಂ 120(ಬಿ), 420, 466, 468, 471 ಜೊತೆಗೆ  34  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: