Friday, July 24, 2015

Daily Crimes Reported As on 24/07/2015 at 07:00 Hrs


ಹಲ್ಲೆ ಪ್ರಕರಣ

  • ಶಂಕರನಾರಾಯಣ: ದಿನಾಂಕ 23/07/15 ರಂದು 16:00 ಗಂಟೆಗೆ ಕುಂದಾಪುರ ತಾಲೂಕಿನ ಸಿದ್ದಾಪುರ  ಗ್ರಾಮದ ಸತೀಶ  ಬಾರ್ ಬಳಿ ಆರೋಪಿತರಾದ ಪ್ರಭಾಕರ ಕುಲಾಲ್ ಹಾಗೂ ಭುಜಂಗ ಶೆಟ್ಟಿ ಎಂಬವರು ಪಿರ್ಯಾದಿದಾರರಾದ ಶ್ರೀಮತಿ ವಂದನಾ (27) ಗಂಡ:ಮಹೇಶ ಪೈ ವಾಸ:ಕರ್ನಾಟಕ ಬ್ಯಾಂಕ ಬಳಿ ಸಿದ್ದಾಫುರ ಗ್ರಾಮ ಕುಂದಾಪುರ  ತಾಲೂಕು ಇವರ ಅಂಗಡಿ  ಬಳಿ ಬಂದು ಆರೋಪಿತರು ವಂದನಾ ರವರು  ಕಾರನ್ನು  ಚೆಕ್‌ ಮಾಡುತ್ತಿದ್ದಾಗ ಅವರ ಗಂಡನ ಬಗ್ಗೆ  ವಿಚಾರಿಸಿದಾಗ ಅವರು ಹೊರಗಡೆ  ಹೋಗಿದ್ದಾರೆ ಎಂದು  ಹೇಳಿದ್ದು ಆಗ ಆರೋಪಿ ಪ್ರಭಾಕರ ಕುಲಾಲ್ ನಿನ್ನ ಗಂಡ ನನ್ನಲ್ಲಿ ಹಣ ಕೇಳುತ್ತಾನೆ ನನ್ನಲ್ಲಿ ಹಣ ಕೇಳಿದರೇ ಜಾಗ್ರತೆ ಎಂದು ಬೆದರಿಸಿ ಇಲ್ಲಿ ಗ್ಯಾಸಿನ ಕೆಲಸ ಮಾಡಬೇಡಿ  ಕೆಲಸ ಮಾಡಲಿಕ್ಕೆ  ಬಿಡುವುದಿಲ್ಲಾ  ಎಂದು ಹೇಳಿ ವಂದನಾ ರವರನ್ನು  ಕೈಯಿಂದ ದೂಡಿ  ಕೆಲಸಕ್ಕೆ ತಡೆ ಉಂಟು ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ  ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 160 /2015  ಕಲಂ: 341, 504, 323, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ದಿನಾಂಕ 23/07/2015 ರಂದು 16:00 ಗಂಟೆಯಿಂದ 21: 00 ಗಂಟೆಯ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು ಹಂದಾಡಿ ಗ್ರಾಮದ ಬೇಳೂರು ಜಡ್ಡು ಜನತಾ ಕಾಲೋನಿ ಎಂಬಲ್ಲಿ ಪಿರ್ಯಾದಿದಾರರಾದ ರವಿರಾಜ್‌ (61) ತಂದೆ: ಮಂಜುನಾಥ ಗಾಣೆಗ ವಾಸ: ಅಮ್ಮ,ಜನತಾ ಕಾಲೋನಿ ಇವರು ವಾಸವಾಗಿರುವ ಮನೆಯಲ್ಲಿ ಇವರ ಮಗ ಜೀವನ (27) ಎಂಬರವರು ಮನೆಯ ಮಲಗುವ ಕೋಣೆಯಲ್ಲಿ ಸಿಲ್ಲಿಂಗ್‌ ಪ್ಯಾನ್‌ಗೆ ಚೂಡಿದಾರ್ ವೇಲ್‌ನ್ನು ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಯು.ಡಿ.ಆರ್  ನಂಬ್ರ 40/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ 
  • ಬೈಂದೂರು: ದಿನಾಂಕ 23/07/2015 ರಂದು ಸಂತೋಷ ಎ ಕಾಯ್ಕಿಣಿ ಪೋಲಿಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಂಜೆ 05:00 ಗಂಟೆಗೆ ನಾಯ್ಕನಕಟ್ಟೆ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮೂರು ಜನರು ಒಬ್ಬರಿಗೊಬ್ಬರು ಕೈಗಳಿಂದ ದೂಡಾಡಿಕೊಂಡು ಗಲಾಟೆ ಮಾಡಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆಂದು ಮಾಹಿತಿ ಬಂದ್ದಿದ್ದು  ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಸಂಜೆ 05:05  ಗಂಟೆಗೆ ಭೇಟಿ ನೀಡಿ ಪರಿಶೀಲಿಸಿದಾಗ ನಾಯ್ಕನಕಟ್ಟೆ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ 1)  ನಾಗರಾಜ ಪೂಜಾರಿ ಪ್ರಾಯ 22 ವರ್ಷ ತಂದೆ: ಗೋವಿಂದ ಪೂಜಾರಿ ವಾಸ: ಕಾಮನ ಮನೆ,  ಕೆರ್ಗಾಲು ಗ್ರಾಮ  ಕುಂದಾಪುರ ತಾಲೂಕು 2) ವಿಶ್ವನಾಥ ದೇವಾಡಿಗ ಪ್ರಾಯ  25 ವರ್ಷ ತಂದೆ: ಮುತ್ತಪ್ಪ ವಾಸ: ಮಕ್ಕಿ ಮನೆ, ಕೆರ್ಗಾಲು ಗ್ರಾಮ ,ಕುಂದಾಪುರ ತಾಲೂಕು ಮತ್ತು 3)  ಅಜಾದ್ ಪ್ರಾಯ 32 ವರ್ಷ ತಂದೆ: ದಿ. ಮೈದಿನ್ ಬ್ಯಾರಿ,  ಪಾತಿಮ ವಿಲ್ಲ , ಕಡವಿನಬಾಗಿಲು, ಬಿಜೂರು ಗ್ರಾಮ ಕುಂದಾಪುರ ತಾಲೂಕು  ಈ ಮೂರು ಜನರು ಒಬ್ಬರಿಗೊಬ್ಬರು ಕೈಗಳಿಂದ ದೂಡಾಡಿಕೊಂಡು ಗಲಾಟೆ ಮಾಡಿ ಬೈದಾಡಿಕೊಂಡು  ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದವರನ್ನು ಸುತ್ತುವರೆದು ಹಿಡಿದು ಅವರಿಗೆ ಅವರ ತಪ್ಪಿತವನ್ನು ತಿಳಿಯಪಡಿಸಿ ಆರೋಪಿತರನ್ನು ದಸ್ತಗಿರಿ ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 203/2015  ಕಲಂ: 160 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: