Thursday, July 23, 2015

Daily Crimes Reported As on 23/07/2015 at 17:00 Hrs


ವಂಚನೆ ಪ್ರಕರಣ:
  • ಕಾಪು: ಪಿರ್ಯಾದಿ ಅಕ್ಷಯ್ (22) ತಂದೆ: ದಿವಂಗತ ಗುರುದತ್ತ ಮೂಲ್ಯ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ ಇನ್ನಂಜೆ ಗ್ರಾಮ ಉಡುಪಿ ರವರು ನಿರುದ್ಯೋಗಿಯಾಗಿದ್ದು, ದಿನಾಂಕ 05/06/2015 ರಂದು ಅರಣ್ಯ ಇಲಾಖೆಯಲ್ಲಿ ಕೆಲಸ ಇದೆ, 08860193650 ನೇದಕ್ಕೆ ಕರೆಮಾಡಿ ಎಂಬುದಾಗಿ ಉದಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಣೆ ಬಂದ ಮೇರೆಗೆ,  ಅಕ್ಷಯ್ ರವರು ದಿ 06/06/2015 ರಂದು ಕರೆ ಮಾಡಿದಲ್ಲಿ ನಿಮಗೆ ಅರಣ್ಯ ಇಲಾಖೆಯುಲ್ಲಿ ಕೆಲಸ ಕೊಡಿಸುತ್ತೇನೆ ನೀವು ರೂಪಾಯಿ 2,000/- ಹಣವನ್ನು ಕೆನರಾ ಬ್ಯಾಂಕ್‌‌ ಖಾತೆ ನಂಬ್ರ 5122101000196 ದಕ್ಕೆ ಕಳುಹಿಸಿ ಎಂದು ತಿಳಿಸಿದ ಮೇರೆಗೆ, ದಿನಾಂಕ 15/06/2015 ರಂದು ಶಂಕರಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿ ರೂಪಾಯಿ 2,000/- ಹಣವನ್ನು ಕಟ್ಟಿ ಸದ್ರಿ ನಂಬ್ರಕ್ಕೆ ಫೋನ್ ಮಾಡಿದಲ್ಲಿ ನಿಮಗೆ ಪತ್ರ ಬರುತ್ತದೆ ಎಂದು ತಿಳಿಸಿದ್ದು, ಅದರಂತೆ ದಿನಾಂಕ 29/06/2015 ರಂದು ಕೆಲವು ಪತ್ರಗಳು ಬಂದಿದ್ದು, ಅದರಲ್ಲಿ ತಿಳಿಸಿದಂತೆ ದಿನಾಂಕ: 06/07/2015 ರಂದು ಬೆಂಗಳೂರಿಗೆ ಹೋಗಿ, ಅದೇ ನಂಬ್ರಕ್ಕೆ ಫೋನ್ ಮಾಡಿದಲ್ಲಿ ನೀವು ಎಕ್ಸ್ ಸ್ ಬ್ಯಾಂಕ್ ಖಾತೆ ನಂಬ್ರ 914010045986520 ದಕ್ಕೆ ಹಣ ಪಾವತಿಸಿ ಎಂದು ತಿಳಿಸಿದ ಮೇರೆಗೆ ಅಕ್ಷಯ್ ರವರು ರೂಪಾಯಿ 19,500/- ಮತ್ತು 2 ದಿನಗಳ ಬಳಿಕ ರೂಪಾಯಿ 20,500/- ನ್ನು ಪಾವತಿಸಿರುತ್ತಾರೆ. ನಂತರ ಉದ್ಯೋಗದ ಕರೆ ಬರುತ್ತದೆ ಎಂದು ಆರೋಪಿಗಳು ತಿಳಿಸಿದ್ದು, ಇದುವರೆಗೂ ಆರೋಪಿಯಿಂದ ಯಾವುದೇ ಉದ್ಯೋಗಕ್ಕೆ ಕರೆ ಬಾರದೇ ಇದ್ದು, ಅಲ್ಲದೇ ಹಣವೂ ವಾಪಾಸು ನೀಡಿದೇ ವಂಚನೆ ಮಾಡಿರುತ್ತಾರೆ, ಈ ಬಗ್ಗೆ ಕಾಪು ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 145/2015 ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ: 
  • ಪಡುಬಿದ್ರಿ: ದಿನಾಂಕ 22/07/2015 ರಂದು ಮದ್ಯಾಹ್ನ 12:30 ಗಂಟೆಗೆ ಬಡಾ ಗ್ರಾಮದ ಉಚ್ಚಿಲ ಪೇಟೆ ಎಕ್ಸ್ಪ್ರೆಸ್ ಬಸ್ ನಿಲ್ದಾಣದ ಬಳಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿ ಚಂದ್ರಹಾಸ 27 ವರ್ಷ, ತಂದೆ:- ದಿವಂಗತ ತಿಮ್ಮಪ್ಪ ವಾಸ ಸೈಟ್ ನಂ. 1-ಎಂ.ಆರ್.ಪಿ.ಎಲ್ ಕಾಲನಿ, ಚೇಳಾರು ಪದವು, ಸುರತ್ಕಲ್, ಮಂಗಳೂರು . ಜಿಲ್ಲೆರವರು ಹೊಂಡಾ ಮೆಟ್ರಿಕ್ ದ್ವಿಚಕ್ರ ವಾಹನದ ನಂಬ್ರ ಕೆಎ 19 ಇಎಪ್ 0303 ನ್ನು ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಎಕಮುಖ ರಸ್ತೆಯ ವಿರುದ್ದ ದಿಕ್ಕಿನಿಂದ ಕೆಎ 20 ಎಕ್ಸ್ 4887 ನೇ ನಂಬ್ರದ ಡಿಸ್ಕವರಿ ಮೋಟಾರು ವಾಹನವನ್ನು ಆರೋಪಿ ಅಬ್ದುಲ್ ರಜಾಕ್ ಎಂಬವರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಸವಾರಿ ಮಾಡಿಕೊಂಡು ಬಂದು ಚಂದ್ರಹಾಸರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಡ ಕೆನ್ನೆ, ಹಲ್ಲಿಗೆ,  ಎಡ ಕೈಗೆ ರಕ್ತ ಗಾಯವಾಗಿರುತ್ತದೆ, ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 97/2015 ಕಲಂ;279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಫುರ: ದಿನಾಂಕ 14/07/15 ರಂದು ಸಮಯ ಸುಮಾರು ರಾತ್ರಿ 09:30 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ  ಗ್ರಾಮದ  ಜಾಲಾಡಿ  ಎಂಬಲ್ಲಿ  ರಾಷ್ಟ್ರೀಯ ಹೆದ್ದಾರಿ 66  ರಸ್ತೆಯಲ್ಲಿ ಯಾವುದೋ  ನೊಂದಣಿ ನಂಬ್ರ  ತಿಳಿದು ಬಾರದ ವಾಹನ ಚಾಲಕನು  ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಾಲನೆ  ಮಾಡಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ  ವ್ಯಕ್ತಿಗೆ ಡಿಕ್ಕಿ  ಹೊಡೆದ ಪರಿಣಾಮ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ.ಎಂಬುದಾಗಿ ರವಿ ಪ್ರಾಯ 32   ವರ್ಷ ತಂದೆ :ಕುಪ್ಪ ವಾಸ:   ಕೊಲ್ಲೂರು ರಸ್ತೆ,  ಹೆಮ್ಮಾಡಿ ಗ್ರಾಮ,ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 87/2015 ಕಲಂ 279,337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹುಡುಗಿ ಕಾಣೆ ಪ್ರಕರಣ
  • ಬ್ರಹ್ಮಾವರ: ದಿನಾಂಕ: 20/07/2015 ರಂದು ಬೆಳಿಗ್ಗೆ 7:30 ಗಂಟೆಗೆ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಯಳ್ಳಂಪಳ್ಳಿ 5 ಸೆಂಟ್ಸ್ ಎಂಬಲ್ಲಿಯ  ಪಿರ್ಯಾದಿ ಲಕ್ಷ್ಮೀ (42) ಗಂಡ: ಸುರೇಶ ವಾಸ: 5 ಸೆಂಟ್ಸ್ ಯಳ್ಳಂಪಳ್ಳಿ ಚೇರ್ಕಾಡಿರವರ ಮಗಳಾದ ಅನುಷಾ (17) ಎಂಬುವರು ಕೆಲಸಕ್ಕೆಂದು ಮನೆಯಿಂದ ಯಳ್ಳಂಪಳ್ಳಿ ಗೇರು ಬೀಜ ಪ್ಯಾಕ್ಟರಿಗೆ  ಹೋದವಳು ಕೆಲಸಕ್ಕೂ ಹೋಗದೆ ಮನೆಗೂ ಬಾರದೆ  ಕಾಣೆಯಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 146/15 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ದಿನಾಂಕ: 17/07/2015 ರಂದು ಮಧ್ಯಾಹ್ನ ಸಮಯ ಸುಮಾರು 12:15 ಗಂಟೆಗೆ ಉಡುಪಿ ತಾಲೂಕು, ಚಾಂತಾರು ಗ್ರಾಮದ , ಬ್ರಹ್ಮಾವರ ಮಾರಿ ಗುಡಿ ಬಳಿ ಪಿರ್ಯಾದಿ ಗೋಪಾಲ ನಾಯ್ಕ (39), ತಂದೆ: ದಿ|| ಶೀನ ನಾಯ್ಕ,, ವಾಸ: ಆರೂರು , ಅಡ್ಜಿಲ್, ಆರೂರು ಗ್ರಾಮ, ಉಡುಪಿರವರ ತಮ್ಮನಾದ ವಿಠ್ಟಲ್ ನಾಯ್ಕ (35) ಎಂಬವರು  ಪ್ರಥ್ವಿ ಪ್ಯಾಲೇಸ್ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿರುವಾಗ 3ನೇ ಮಹಡಿಯಿಂದ ಆಕಸ್ಮಿಕವಾಗಿ ಪರಜಿಯಿಂದ ಕಾಲು ಜಾರಿ ಕೆಳಗೆ ಬಿದ್ವವರನ್ನು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು,  ನಂತರ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್ಸಿ ಆಸ್ಪತ್ರೆಗೆ ದಾಖಲಿಸಿದ್ದು,  ದಿನಾಂಕ:22/07/2015 ರಂದು ರಾತ್ರಿ 11:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ, ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣಾ ಯು.ಡಿ.ಆರ್ ನಂಬ್ರ 39/2015 ಕಲಂ: 174 ಸಿ.ಆರ್.ಪಿ.ಸಿ. ಪ್ರಕರಣ ದಾಖಲಾಗಿರುತ್ತದೆ. 
ಮಟ್ಕಾ ಜುಗಾರಿ ಪ್ರಕರಣ
  • ಕುಂದಾಪುರ: ದಿನಾಂಕ 22/07/2015 ರಂದು ಟಿ. ಆರ್‌. ಜೈ ಶಂಕರ್ಪಿಐ ಡಿಸಿಐಬಿ ಉಡುಪಿರವರು ಕಚೇರಿಯಲ್ಲಿರುವಾಗ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಶಾಂತಾ ದುರ್ಗಾ ಕಟ್ಟಡದ 1 ನೇ ಮಹಡಿಯಲ್ಲಿ ಹಣವನ್ನು ಪಣವನ್ನಾಗಿ ಇಸ್ಪೀಟು ಜುಗಾರಿ ಆಡುತ್ತಿರುವುದಾಗಿ 18:00 ಗಂಟೆಗೆ ಬಂದ ಖಚಿತ ಮಾಹಿತಿ ಮೇರೆಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ರವರಿಂದ ಮೌಖಿಕ ಆದೇಶದೊಂದಿಗೆ ಸಿಬ್ಬಂದಿಯವರೊಂದಿಗೆ ಬಂದು ಮಾನ್ಯ ಪೊಲಿಸ್ ಉಪಾಧೀಕ್ಷಕರು ಕುಂದಾಪುರ ಉಪ- ವಿಭಾಗರವರಿಂದ ಸರ್ಚ ವಾರಂಟನ್ನು ಪಡೆದುಕೊಂಡು 19:50 ಗಂಟೆಗೆ ದಾಳಿ ನಡೆಸಿ  ಇಸ್ಪೀಟು ಜುಗಾರಿ ಆಟ ನಿರತ 21 ಜನ ಆಪಾದಿತರುಗಳಾದ 1 ಪ್ರಶಾಂತ್‌,  2. ಬಸವ ದೇವಾಡಿಗ,  3. ಪ್ರವೀಣ್‌ ಶೆಟ್ಟಿ, 4. ಸುರೇಶ, 5. ಮಹೇಶ, 6 ಶಂಕರ, 7. ಗಣೇಶ್, 8. ನಾಗರಾಜ, 9. ಭಾಸ್ಕರ, 10 ಪ್ರಕಾಶ್‌, ‌11. ರಾಮಚಂದ್ರ, 12 ಸಂತೋಷ,  13 ಸುಧಾಕರ, 14. ರಾಘವೇಂದ್ರ,  15. ಚಂದ್ರ,  16. ಗುರುರಾಜ್‌,  17. ಹರೀಶ್‌,  18 ರಾಘವೇಂದ್ರ, 19 ಲೋಕೆಶ್‌‌,  20 ಅರುಣ್‌ ಮರಕಾಲ,  21 ಕೃಷ್ಣ ಇವರುಗಳಾದ ಮಹಜರು ಮುಖೇನ ದಸ್ತಗಿರಿ ಮಾಡಿ ಅವರು ಆಟಕ್ಕೆ ಉಪಯೊಗಿಸಿದ ರೂ 25,415/- ನ್ನು156 ಇಸೀಟು ಎಲೆಗಳನ್ನು, 21  ಕುರ್ಚಿಗಳನ್ನು, ತಲಾ 10 ಸ್ಟೀಲ್ ಕಫ್‌‌ ಗಳಿರುವ 3 ವೃತ್ತಾಕಾರದ ಟೇಬಲ್ಗಳನ್ನು ಮಹಜರು ಮುಖೇನ  ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 275/2015, ಕಲಂ 79, 80 ಕೆ.ಪಿ ಆ್ಯಕ್ಟ  ನಂತೆ  ಪ್ರಕರಣ ದಾಖಲಾಗಿರುತ್ತದೆ.

No comments: