Thursday, July 23, 2015

Daily Crimes Reported As on 23/07/2015 at 07:00 Hrs

ಅಪಘಾತ ಪ್ರಕರಣ
  • ಮಣಿಪಾಲ: ದಿನಾಂಕ 21/07/15 ರಂದು 18:30 ಗಂಟೆಗೆ ಪಿರ್ಯಾದಿದಾರರಾದ ಹರಿಪ್ರಭು ಮೂಲ್ಕಿ, ತಂದೆ:ಎಮ್‌ ವಿಟ್ಟಪ್ಪ ಪ್ರಭು, ವಾಸ:ಫ್ಲಾಟ್‌ ನಂಬ್ರ-101, ಶಾಂಭವಿ ಹೆಬಿಟೆಡ್‌‌, ಪೆರಂಪಳ್ಳಿ ರಸ್ತೆ, ಮಣಿಪಾಲ ಇವರು ತನ್ನ ಹೆಂಡತಿ ಶಾಂತಿ ಪ್ರಭು ಮೂಲ್ಕಿರವರೊಂದಿಗೆ ‘ಮೋರ್‌’ಮಾಲ್‌‌, ಸಿಂಡಿಕೇಟ್‌ ಸರ್ಕಲ್‌ ಬಳಿ ನಡೆದುಕೊಂಡು ಬರುತ್ತಿರುವಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಕೆಎ 20 ವೈ 2931 ನೇದರ ಮೋಟಾರ್ ಸೈಕಲ್‌ ಸವಾರನು ಬೈಕ್‌‌ನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಹರಿಪ್ರಭುರವರ ಹೆಂಡತಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಶಾಂತಿ ಪ್ರಭುರವರು  ರಸ್ತೆಗೆ ಬಿದ್ದಿದ್ದು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 144/2015 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 ಮಟ್ಕಾ ಜುಗಾರಿ ಪ್ರಕರಣ
  • ಬೈಂದೂರು: ದಿನಾಂಕ 22/07/2015 ರಂದು 17:30 ಗಂಟೆಗೆ ಸಂತೋಷ ಎ ಕಾಯ್ಕಿಣಿ ಪೋಲಿಸ್ ಉಪ ನಿರೀಕ್ಷಕರು ಬೈಂದೂರು ಪೊಲೀಸ್‌ ಠಾಣೆ  ಇವರಿಗೆ ಉಪ್ಪುಂದ  ಗ್ರಾಮದ  ಅಂಬಾಗಿಲು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು 17:55 ಗಂಟೆಗೆ ಸಿಬ್ಬಂದಿಯ ಸಹಾಯದಿಂದ ಆಪಾದಿತ ಕುಷ್ಟ ಪೂಜಾರಿ (65) ತಂದೆ: ದಿ.ಮಂಜಯ್ಯ ಪೂಜಾರಿ ವಾಸ: ಕುಪ್ಪನ ಮನೆ ನಾಯ್ಕನಕಟ್ಟೆ ನಂದನವನ ಗ್ರಾಮ ಕುಂದಾಪುರ ತಾಲೂಕು ಇವರನ್ನು ಹಿಡಿದು ವಿಚಾರಿಸಿದ್ದು ಆತನು ತನ್ನ ಸ್ವಂತ ಲಾಭಗೋಸ್ಕರ ಅಕ್ರಮವಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ತಾನು ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿರುತ್ತಾನೆ. ಆಪಾದಿತನನ್ನು ದಸ್ತಗಿರಿ ಮಾಡಿ ಆತನು ಮಟ್ಕಾ ಜುಗಾರಿಯಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂ 320/-, ಮಟ್ಕಾ ನಂಬ್ರ ಬರೆದ ಚೀಟಿ -1, ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 202/2015 ಕಲಂ 78 (3)  ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಶಂಕರನಾರಾಯಣ: ದಿನಾಂಕ: 21/07/2015 ರಂದು 21:15 ಗಂಟೆಗೆ ಪಿರ್ಯಾದಿದಾರರಾದ ಶೇಖರನಾಯ್ಕ (35) ತಂದೆ:ನಾರಾಯಣ ನಾಯ್ಕ ವಾಸ: ಯಡಮೊಗೆ ಗ್ರಾಮ ಕುಂದಾಪುರ ತಾಲೂಕು ಇವರಿಗೆ 1 ನೇ ಆರೋಪಿ ಸಂತೋಷ ನಾಯ್ಕ ಅವಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಈ ಸಮಯ 2 ನೇ ಆರೋಪಿ ಕೊರಗನಾಯ್ಕ ಕತ್ತಿಯಿಂದ ಹಲ್ಲೆ ಮಾಡಿರುತ್ತಾನೆ ಇದರ ಪರಿಣಾಮ ಶೇಖರನಾಯ್ಕರವರ ತಲೆ, ಮುಖ ಹಾಗೂ ಬೆನ್ನಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 158/15 ಕಲಂ: 323, 324, 504, 506 R/W 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: