Wednesday, July 22, 2015

Daily Crimes Reported As on 22/07/2015 at 19:30 Hrs

ಹಲ್ಲೆ ಪ್ರಕರಣಗಳು:
  • ಶಂಕರನಾರಾಯಣ: ದಿನಾಂಕ: 21/07/2015 ರಂದು  21:30 ಗಂಟೆ ಸುಮಾರಿಗೆ ಕುಂದಾಪುರ ತಾಲೂಕು ಯಡಮೊಗೆ ಗ್ರಾಮದ ಕುಮಟಬೇರು ಎಂಬಲ್ಲಿ ಆರೋಪಿ 1) ಸಂತೋಷ ನಾಯ್ಕ ಮತ್ತು 2) ಶೇಖರನಾಯ್ಕರವರು ಪಿರ್ಯಾದಿ ಕೊರಗನಾಯ್ಕ(58) ತಂದೆ:ಕುಷ್ಠನಾಯ್ಕ ವಾಸ; ಕುಮಟಬೇರು ಯಡಮೊಗೆ ಗ್ರಾಮ  ಕುಂದಾಪುರ ತಾಲೂಕುರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಕೊರಗನಾಯ್ಕರವರಿಗೆ ಕತ್ತಿಯಿಂದ ಹಾಗೂ ಕೈಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ, ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣಾ ಅಪರಾದ ಕ್ರಮಾಂಕ 157/15 ಕಲಂ:447, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಹಿರಿಯಡ್ಕ: ದಿನಾಂಕ 21.07.2015 ರಂದು 15.30 ಗಂಟೆಗೆ ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಪಾಡಿಗಾರದ 5 ಸೆಂಟ್ಸ್ ಆರೋಪಿತರಾದ ಸುರೇಶ ಮತ್ತು ಸುನಿಲ್ ಎಂಬವರು ಸಮಾನ ಉದ್ದೇಶದಿಂದ ಒಟ್ಟು ಸೇರಿ ಪಿರ್ಯಾದಿ ಕುಟ್ಟಿ,ಪ್ರಾಯ (35) ತಂದೆ: ದಿ.ಗುಂಡು ಕೊರಗ, ವಾಸ: 5 ಸೆಂಟ್ಸ್ ,ಪಾಡಿಗಾರ,ಪೆರ್ಡೂರು ಗ್ರಾಮ, ಉಡುಪಿ ತಾಲೂಕುರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ವಿನಾಕಾರಣ ಜಗಳ ಮಾಡುತ್ತಾ ಆರೋಪಿತನಾದ ಸುರೇಶ ಬಲಕೈಯನ್ನು ಹಿಡಿದು ತಿರುಚಿ ಸೊಂಟಕ್ಕೆ ತುಳಿದು, ನಂತರ ಆರೋಪಿತನಾದ ಸುನಿಲ್ ಬೆನ್ನಿಗೆ ಎದೆಗೆ ಹಾಗೂ ಕೆನ್ನೆಗೆ ಹೊಡೆದಿರುತ್ತಾನೆ, ಇದರಿಂದ ಗಾಯಗೊಂಡ ಕುಟ್ಟಿರವರು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣಾ ಅಪರಾದ ಕ್ರಮಾಂಕ 77/15 U/s 447,323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,
ಅಪಘಾತ ಪ್ರಕರಣ: 
  • ಹಿರಿಯಡ್ಕ: ದಿನಾಂಕ: 21/07/2015 ರಂದು ಮದ್ಯಾಹ್ನ ಸುಮಾರು 3.45 ಗಂಟೆ ಸಮಯಕ್ಕೆ ಪಿರ್ಯಾದಿ ಡಾ. ಭರತ್‌ ಯಸ್‌.ವಿ. (32) ತಂದೆ: ವೀರಭದ್ರಪ್ಪ  ವಾಸ: ಎನಪೋಯ ಮೆಡಿಕಲ್‌ ಕಾಲೇಜ್‌ ದೇರಳಕಟ್ಟೆ, ಮಂಗಳೂರು ಇವರು ಹೆಂಡತಿ, ತಂದೆ ಮತ್ತು ತಮ್ಮರವರೊಂದಿಗೆ ಕಾರು ನಂಬ್ರ ಕೆಎ 20 ಎಮ್‌ಎ 2006 ನೇಯರಲ್ಲಿ ಡಾ. ಭರತ್‌ ಯಸ್‌.ವಿ ರವರ ಹೆಂಡತಿ ಚಲಾಯಿಸಿಕೊಂಡು ಕಾರ್ಕಳ- ಹಿರಿಯಡ್ಕ ಮಾರ್ಗವಾಗಿ ಬರುತ್ತಿರುವಾಗ ಉಡುಪಿ ತಾಲೂಕು ಬೊಮ್ಮರಬೆಟ್ಟು  ಗ್ರಾಮದ ಕೊಂಡಾಡಿ ಶಾಲೆಯ ಬಳಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ಹತೋಟಿ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದ್ದು, ಇದರಿಂದ  ಡಾ. ಭರತ್‌ ಯಸ್‌.ವಿ.ರವರಿಗೆ ಬಲ ಕೈಗೆ ಹಾಗೂ ಎದೆಗೆ ಮತ್ತು ತಮ್ಮ ಹರ್ಷನಿಗೆ ಎಡ ಭುಜದ ಬಳಿ ತೀವೃ ತರಹದ ಗುದ್ದಿದ ಒಳನೋವು ಹಾಗೂ ತಂದೆ ಮತ್ತು ಹೆಂಡತಿಗೆ ತರಚಿದ ಗಾಯವಾಗಿರುತ್ತದೆ, ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 76/2015 U/s 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: