Wednesday, July 22, 2015

Daily Crimes Reported As on 22/07/2015 at 17:00 Hrs


ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 22/07/2015 ರಂದು ಬೆಳಿಗ್ಗೆ 11-45 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಲ್ಲಾರ್ ಪಟ್ಣಹಿತ್ಲು ಎಂಬಲ್ಲಿ ಫಿರ್ಯಾದಿ ಹರಿಶ್ಚಂದ್ರ ತೆಂಡುಲ್ಕರ್ ಇವರು ರಸ್ತೆ ಬದಿಯಲ್ಲಿ ನಿಂತಿದ್ದಾಗ ಮಲ್ಲಾರ್ ನಿಂದ ಮುಳ್ಳೂರು ಕಡೆಗೆ ಓರ್ವ ಮೋಟಾರ್ ಸೈಕಲ್ ಸವಾರ ತನ್ನ ಬಾಬ್ತು ಮೋಟಾರ್ ಸೈಲ್ ನಂಬ್ರ ಕೆ ಎ 20 ಎಕ್ಸ್ 1094ನೇ ಯದನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಮುಳ್ಳೂರಿನಿಂದ ಮಲ್ಲಾರ್ ಕಡೆಗೆ ಬಸ್ಸು ನಂಬ್ರ ಕೆ ಎ 19 ಬಿ 8485 ನೇಯದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಢಿಕ್ಕಿಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ಸವಾರ ರಸ್ತೆಗೆ ಬಿದ್ದು ಬಲಕಾಲು ಮತ್ತು ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 126/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ಪಿರ್ಯಾದಿ ಹಂಸರಾಜ್ ಶೆಟ್ಟಿ  ಇವರು ದಿನಾಂಕ 22/07/2015 ರಂದು ಕೆಲಸದ ನಿಮಿತ್ತಾ ತನ್ನ ಬಾಬ್ತು ಕಾರು ನಂಬ್ರ ಕೆಎ 20 ಎಂಎ 808 ನೇದರಲ್ಲಿ ಬೆಳಿಗ್ಗೆ 9.00 ಗಂಟೆಗೆ ಮಂಗಳೂರಿಗೆ ಹೊರಟು ಸಮಯ ಸುಮಾರು 9.45 ಗಂಟೆಗೆ ಕರಾವಳಿ ಬೈಪಾಸ್ ತಲುಪಿ ಸಿಗ್ನಲ್‌ನಲ್ಲಿ ನಿಲ್ಲಿಸಿರುವಾಗ ತನ್ನ ಹಿಂಬದಿಯಿಂದ  ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಓರ್ವ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದನು ಪರಿಣಾಮ ಕಾರಿನ ಬಲಬದಿಯ ಹಿಂಬದಿ ಜಖಂಗೊಂಡಿರುತ್ತದೆ.  ಅಪಘಾತ ಮಾಡಿದ ಲಾರಿ ನಂಬ್ರ ನೋಡಲಾಗಿ  ಎಂಹೆಚ್‌ 04 ಎಫ್‌ ಯು0019 ಆಗಿರುತ್ತದೆ. ಅದರ ಚಾಲಕನ ಹೆಸರು ಅರವಿಂದ ಪಾಂಡೆ ಎಂದು ತಿಳಿಯಿತು, ಸದ್ರಿ ಅಪಘಾತಕ್ಕೆ ಎಂಹೆಚ್‌ 04 ಎಫ್‌ ಯು0019  ನೇ ಲಾರಿ ಚಾಲಕನ ಅತೀವೇಗಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣಾ ಅಪರಾದ ಕ್ರಮಾಂಕ 79/2015 ಕಲಂ. 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ಮಾಳ ಗ್ರಾಮದ ಹುಕ್ರಟ್ಟೆ ಎಂಬಲ್ಲಿ ವಾಸ್ತವ್ಯವಿರುವ 48 ವರ್ಷ ಪ್ರಾಯದ ಹಿಲಾರಿ ಫೆರ್ನಾಂಡೀಸ್ ರವರು ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ: 22/07/2015 ರಂದು ಬೆಳಿಗ್ಗೆ 5:00 ಗಂಟೆಯ ನಂತರ ತನ್ನ ವಾಸ್ತವ್ಯದ ಮನೆಯ  ಬಾವಿಯ ರಾಟೆಯ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೋಲಿಸ್ ಠಾಣಾ ಯುಡಿಅರ್‌  17/15 ಕಲಂ: 174 ಸಿಅರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಣಿಪಾಲ: ಸುಶ್ಮಿತಾ(20 ವರ್ಷ) ಎಂಬವರು ದಿನಾಂಕ: 21-07-2015 ರಂದು ಆಕೆಯು ತನ್ನ ತಾಯಿ ಮನೆಯಾದ ಉಡುಪಿ ತಾಲೂಕು ಅಲೆವೂರು ಗ್ರಾಮದ ಪಡು ಅಲೆವೂರು ದುರ್ಗಾ ನಗರದಲ್ಲಿರುವ ಮನೆಯಲ್ಲಿ ಯಾವುದೋ ವೈಯಕ್ತಿಕ ಕಾರಣದಿಂದ ಸಂಜೆ 7-00 ಗಂಟೆ ಸಮಯಕ್ಕೆ ಮನೆಯ ಕೋಣೆಯ ಒಳಗೆ ಜಂತಿಗೆ ಸೀರೆಯನ್ನು ಕಟ್ಟಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣಾ ಯುಡಿಅರ್‌  30/15 ಕಲಂ: 174 ಸಿಅರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ, 

No comments: