Sunday, July 19, 2015

Daily Crime Reports As On 19/07/2015 At 07:00 Hrs



ಅಪಘಾತ ಪ್ರಕರಣ
  • ಮಣಿಪಾಲ: ದಿನಾಂಕ 18/07/15 ರಂದು 10:45 ಗಂಟೆಗೆ ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಮಣಿಪಾಲ ಹೀರೆಬೆಟ್ಟು ಸಾರ್ವಜನಿಕ ರಸ್ತೆಯಲ್ಲಿ ತಾಂಗೋಡೆ 3ನೇ ಕ್ರಾಸ್ ಸಮೀಪ ಆಟೋ ರಿಕ್ಷಾ ನಂಬ್ರ ಕೆಎ 20 ಡಿ 4921 ಇದರ ಚಾಲಕ ಶರತ್‌ ಕುಮಾರ್ ಎಂಬವನು ತನ್ನ ಆಟೋರಿಕ್ಷಾವನ್ನು ಮಣಿಪಾಲ ಕಡೆಯಿಂದ ಟ್ಯಾಪ್ಮಿ ಕಡೆಗೆ ಅಜಾಗರೂಕತೆ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆ ಬದಿಯ ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಮ್ಮದ್‌ ಕಾಲು ಎಂಬವರ ಎಡಕಾಲಿಗೆ ಜಖಂ ಆಗಿರುವುದಾಗಿದೆ.ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 141/2015 ಕಲಂ 279,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು 
  • ಬೈಂದೂರು: ಪಿರ್ಯಾದಿದಾರರಾದ ದೇವೇಂದ್ರ ಪ್ರಭು (35) ತಂದೆ:ದಿ.ಮೋಹನ ಪ್ರಭು ವಾಸ:ಪ್ರಭು ಕೇರಿ ನಾಯ್ಕನಕಟ್ಟೆ ಕೆರ್ಗಾಲು ಗ್ರಾಮ ಕುಂದಾಪುರ ತಾಲೂಕು ಇವರ ದೊಡ್ಡಪ್ಪನ ಮಗನಾದ ಶ್ರೀನಿವಾಸ ಪ್ರಭುರವರು ದಿನಾಂಕ 18/07/2015 ರಂದು 12:30 ಗಂಟೆಗೆ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಯುಡಿಅರ್‌ ಕ್ರಮಾಂಕ 27/2015 ಕಲಂ:74   ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ:10/07/2015 ರಂದು ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಬೈಲು ಮನೆ ಕನ್ನಡ ಕುದ್ರು ಎಂಬಲ್ಲಿ ಪಿರ್ಯಾದಿದಾರರಾದ ಅಶ್ವಿನ್ ಪೂಜಾರಿ ರವರ ತಂಗಿ ಸ್ವಾತಿ (18) ಎಂಬವರು ವಿಷ ಪದಾರ್ಥವನ್ನು ಸೇವಿಸಿದ್ದು, ಚಿಕಿತ್ಸೆ ಬಗ್ಗೆ ಸ್ಥಳಿಯ ಕ್ಲಿನಿಕ್ ಹಾಗೂ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:18/07/2015 ರಂದು ಮಧ್ಯಾಹ್ನ 1:05 ಗಂಟೆಗೆ ಸ್ವಾತಿ ಯವರು ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 29/2015  ಕಲಂ. 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಲ್ಪೆ: ಪಿರ್ಯಾದಿದಾರರಾದ ನಯನ ಕರ್ಕೆರಾ, ತಂದೆ:ಅಣ್ಣಯ್ಯ ಶ್ರೀಯಾನ್, ವಾಸ:ಸಂತೋಷ ನಿವಾಸ, ಕಲ್ಮಾಡಿ ಹೊನೆಕಟ್ಟೆ, ಕೊಡವೂರು ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 18/07/2015 ರಂದು ಬೆಳಿಗ್ಗೆ 08:00 ಗಂಟೆಗೆ ಸುಂದರ ಕರ್ಕೆರ ರವರ ಸಾಂಪ್ರಾದಾಯಿಕ ದೋಣಿಯಲ್ಲಿ ಮೀನುಗಾರಿಕೆಯ ಬಗ್ಗೆ ಇತರೇ 8 ಜನರೊಂದಿಗೆ  ಪಡುಕೆರೆ ದಡದಿಂದ ಹೊರಟು ಪಡುಕರೆ ಸಮುದ್ರದಲ್ಲಿ ಸುಮಾರು 20 ಮಾರು ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ 08:45 ಗಂಟೆಗೆ ಸಮದ್ರದಲ್ಲಿ ಒಂದು ದೊಡ್ಡ ಅಲೆ ಬಂದು ಸಾಂಪ್ರಾದಾಯಿಕ ದೋಣಿಗೆ ಅಪ್ಪಳಿಸಿದ ಪರಿಣಾಮ ದೋಣಿ ಮಗುಚಿ ಬಿದ್ದು ದೋಣಿಯಲ್ಲಿದ್ದ ಎಲ್ಲರೂ ಸಮುದ್ರಕ್ಕೆ ಬಿದ್ದಿರುತ್ತಾರೆ.  ನೀರಿಗೆ ಬಿದ್ದವರಲ್ಲಿ ದೇವು, ನವೀನ್‌, ಅಮಿತ್‌, ಸಂದರ ಕರ್ಕೇರ, ಸಾಜನ್‌ ರವರು ಈಜಿ ದಡಕ್ಕೆ ಬಂದಿದ್ದು, ವಿಜೀತ್‌, ರವೀಂದ್ರ ಕೋಟ್ಯಾನ್ ನೀರಿನಲ್ಲಿ ಮುಳುಗಿದ್ದು, ಅವರಿಗೆ ದಡಕ್ಕೆ ಬರಲು ಆಗದೇ ಇದ್ದು, ಅವರನ್ನು ಅಲ್ಲೆ ಮೀನುಗಾರಿಕೆ ಮಾಡುತ್ತಿದ್ದ ಇತರರು ಸೇರಿ ದಡಕ್ಕೆ ಕರೆದು ತಂದಿರುತ್ತಾರೆ. ನೀರಿಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರವೀಂದ್ರ ಕೋಟ್ಯಾನ್‌ ರವರನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 29/2015, ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಮಟ್ಕಾ ಜುಗಾರಿ ಪ್ರಕರಣ  
  • ಉಡುಪಿ: ದಿನಾಂಕ:18/07/2015 ರಂದು ಬೆಳಿಗ್ಗೆ 10:00 ಗಂಟೆಗೆ ಶ್ರೀ ಗಿರೀಶ್‌ ಕುಮಾರ್ ಎಸ್‌‌ ಪೊಲೀಸ್‌ ಉಪ ನಿರೀಕ್ಷಕರು ಉಡುಪಿ ನಗರ ಪೊಲೀಸ್‌ ಠಾಣೆ ಇವರಿಗೆ ದೊರತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಉಡುಪಿ ಮೂಡನಿಡಂಬೂರು ಸಿಟಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ದಳದಲ್ಲಿ ಮಟ್ಕಾ ಜುಗಾರಿ ಆಟದಲ್ಲಿ ನಿರತರಾಗಿದ್ದ ಉಮೇಶ ಲಿಂಗಪ್ಪ ಕತ್ತಿ (38) ತಂದೆ:ಲಿಂಗಪ್ಪ ಕತ್ತಿ ವಾಸ:ವಿಷ್ಣುಮೂರ್ತಿ ದೇವಸ್ಧಾನದ ಬಳಿ ನಿಟ್ಟೂರು ಪುತ್ತೂರು ಗ್ರಾಮ ಎಂಬವರನ್ನು ವಶಕ್ಕೆ ಪಡೆದು, ಅವರಿಂದ ಮಟ್ಕಾ ಜುಗಾರಿಗೆ ಸಂಗ್ರಹಿಸಿದ ನಗದು ರೂ.2,240/-, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬರೆಯಲು ಬಳಸಿದ ಬಾಲ್‌ ಪೆನ್‌-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಉಡುಪಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  164/2015 ಕಲಂ 78(1)(111) ಕೆಪಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.     



No comments: