Saturday, July 18, 2015

Daily Crime Reports As On 18/07/2015 At 07:00 Hrs

ಮಟ್ಕಾ ಜುಗಾರಿ ಪ್ರಕರಣ :
  • ಬ್ರಹ್ಮಾವರ: ಅನಂತಪದ್ಮನಾಭ ಕೆ.ವಿ, ಪಿಎಸ್‌ಐ ಬ್ರಹ್ಮಾವರ ಇವರು ದಿನಾಂಕ: 17/07/2015 ರಂದು 12.40 ಗಂಟೆಗೆ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ ವರ್ತಮಾನದ ಮೇರೆಗೆ ಹೇರೂರು ಗ್ರಾಮದ ಹೇರೂರು ಬ್ರಜ್ಜ್‌ ಬಳಿ ಗೂಡಾಂಗಡಿ ಸಮೀಪ  ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿ  ಮಟ್ಕಾ ಚೀಟಿ ಬರೆದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆರೋಪಿ ರಾಜು ಪೂಜಾರಿ (68) ತಂದೆ: ದಿ. ಕೊಂಬಪೂಜಾರಿ ವಾಸ: ಬಣಾಸಾಲೆಬೆಟ್ಟು, ಹೇರೂರು ಗ್ರಾಮ, ಉಡುಪಿ  ತಾಲೂಕು ಇವರ ವಶದಲ್ಲಿದ್ದ  ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ರೂ 380/- , ಮಟ್ಕಾನಂಬ್ರ ಬರೆದ ಚೀಟಿ-1, ಬಾಲ್ ಪೆನ್-1,ನ್ನು .ಮಹಜರು ಮೂಲಕ ಸ್ವಾಧೀನ ಪಡಿಸಿಕೊಂಡಿದ್ದು ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 142/15 ಕಲಂ: 78 (1)(111) ಕೆ.ಪಿ ಆ್ಯಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು ಸಂತೋಷ ಎ ಕಾಯ್ಕಿಣಿ ಪಿಎಸ್‌ಐ ಬೈಂದೂರು ಪೊಲೀಸ್‌ ಠಾಣೆ ರವರಿಗೆ ದಿನಾಂಕ 17-07-2015 ರಂದು 19-05 ಗಂಟೆಗೆ ಗೋಳಿಹೊಳೆ  ಗ್ರಾಮದ  ಗೋಳಿಹೊಳೆ ಬಸ್ ನಿಲ್ದಾಣದ ಬಳಿ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ನೀಡಿದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ  ನೋಡಲಾಗಿ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು 19-40 ಗಂಟೆಗೆ ನಾನು ಸಿಬ್ಬಂದಿಯ ಸಹಾಯದಿಂದ ಆಪಾದಿತನನ್ನು  ಸುತ್ತುವರಿದು ಹಿಡಿದು ವಿಚಾರಿಸಲಾಗಿ  ಆತನು ತನ್ನ ಸ್ವಂತ ಲಾಭಗೋಸ್ಕರ ಅಕ್ರಮವಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ತಾನು ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ತಾನೇ ಇಟ್ಟುಕೊಳ್ಳುವುದಾಗಿ ಆತನು ತಿಳಿಸಿರುತ್ತಾನೆ. ಆತನು ಮಟ್ಕಾ ಜುಗಾರಿಯಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂ 670/-, ಮಟ್ಕಾ ನಂಬ್ರ ಬರೆದ ಚೀಟಿ -1, ಹಾಗೂ ಬಾಲ್ ಪೆನ್ನು-1 ನ್ನು ಪಂಚರುಗಳ ಸಮಕ್ಷಮ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ 198/2015 ಕಲಂ  78 (3)  ಕೆ.ಪಿ ಕಾಯಿದೆ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಕ್ರಮ ಗೋಮಾಂಸ ಮಾರಾಟ ಪ್ರಕರಣ
  • ಕಾರ್ಕಳ ಗ್ರಾಮಾಂತರ : ದಿನಾಂಕ 17-07-2015 ರಂದು  ಕಾರ್ಕಾಳ ಗ್ರಾಮಾಂತರ ಸರಹದ್ದಿಗೆ ಸೇರಿದ ಕಾರ್ಕಳ ತಾಲೂಕು ದುರ್ಗ ಗ್ರಾಮದ ಶೇಖ ಮಹಮ್ಮದ್ ಸಾಹೇಬ್ ಎಂಬುವರ ವ್ಯಾಸ್ತವ್ಯದ ಮನೆಯಾದ  ಕೆ. ಎಂ ಮಂಜಿಲ್ ಇದರ ಪಕ್ಕದ ಶೆಡ್‌ ನಲ್ಲಿ ಶೇಖ ಮಹಮ್ಮದ್ ಸಾಹೇಬ್ ಹಾಗೂ ಅವರ ಸಂಬಂದಿ ಶಾಹದತ್ ಎಂಬುವನೊಂದಿಗೆ ಸೇರಿ ದನಗಳನ್ನು ಎಲ್ಲಿಂದಲೋ ತಂದು ಅಕ್ರಮವಾಗಿ ಕಡಿದು ಮಾಂಸಮಾಡಿ ಮಾರಾಟ ಮಾಡುತ್ತಿದ್ದಾರೆ. ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಮಹಾದೇವ ಶೆಟ್ಟಿ. ಪಿ.ಎಸ್.ಐ ಕಾರ್ಕಳ ಗ್ರಾಮಾಂತರ ಠಾಣೆ. ಕಾರ್ಕಳ ರವರು ಸ್ಥಳಕ್ಕೆ ಪಂಚಾಯಾತ್ದಾರರೊಂದಿಗೆ 12:30 ಗಂಟೆಗೆ ಹೋಗಿ ದಾಳಿ ಮಾಡಿ ಪರಿಶೀಲಿಸಲಾಗಿ ಆರೋಪಿತರುಗಳಾದ ಶೇಖ ಮಹಮ್ಮದ್ ಸಾಹೇಬ್ ಮತ್ತು  ಶಾಹದತ್ ರವರು  ಮನೆಯಲ್ಲಿದ್ದು ಅವರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ ಮನೆಯ  ಪಕ್ಕದ ಶೇಡ್‌ನಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಸಂಗ್ರಹಿಸಿಟ್ಟಿದ್ದ ದನದ ಚರ್ಮಗಳು 24, ಹಾಗೂ ದನದ ಮಾಂಸ ಮಾಡಲು ಉಪಯೋಗಿಸಿವ ಪರಿಕರಗಳಾದ ಮರದ ತುಂಡು.ಕಬ್ಬಿಣ ಕತ್ತಿ, ಕಬ್ಬಿಣದ ರಾಡ್ 1, ಹುರಿ ಮತ್ತು ನೈಲಾನ್ ಹಗ್ಗಗಳು ಹಾಗೂ ಮನೆಯ ಎದುರು ಮರಕ್ಕೆ ಕಟ್ಟಿ ಹಾಕಿದ 2 ವರ್ಷ ಪ್ರಾಯದ ಜೀವಂತ ದನದ ಗಂಡು ಕರು 1 ಕಂಡು ಬಂದಿದ್ದು, ಇವುಗಳನ್ನು  ಮುಂದಿನ ಕ್ರಮದ ಬಗ್ಗೆ ಸ್ವಾಧಿನ ಪಡಿಸಿಕೊಂಡಿರುವುದಾಗಿದೆ. ಹಾಗೂ ಈ ಕೃತ್ಯ ಮಾಡಿದ ಮೇಲಿನ ಆಪಾದಿತರುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಅಕ್ರವಾಗಿ ದನಗಳನ್ನು ಎಲ್ಲಿಂದಲ್ಲೋ ತಂದು ಕಡಿದು ಮಾಂಸ ಮಾರಾಟ ಮಾಡುತ್ತಾರೆಂದು ತಿಳಿದು ಬಂದಿದ್ದರಿಂದ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ 122/15 ಕಲಂ 4.7.9.11 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ 1964 ಮತ್ತು ಕಲಮ 11(1)(ಡಿ) ಪ್ರಾಣಿ ಹಿಂಸಾ ತಡೆ ಕಾಯ್ದೆ 1960   ಅಧಿನಿಯಮ ದಂತೆ ಪ್ರಕರಣ ದಾಖಲಾಗಿರುತ್ತದೆ.

No comments: