Friday, July 17, 2015

Daily Crime Reports As On 17/07/2015 At 19:30 Hrsಕಳವು ಪ್ರಕರಣ  

  • ಪಡುಬಿದ್ರಿ: ದಿನಾಂಕ 13/07/2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ:14/07/2015 ರಂದು ಬೆಳಿಗ್ಗೆ 8:00 ಗಂಟೆಗೆ ನಡುವೆ ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯಲ್ಲಿರುವ ಸುನಿಲ್.ಆರ್ ಶೆಟ್ಟಿ (39) ತಂದೆ:ರವಿ ಶೆಟ್ಟಿ ವಾಸ:ಮಾತೃ ಛಾಯಾ, ಹೊನ್ನಯ್ಯ ಸದನದ ಬಳಿ ಬೆಂಗ್ರೆ ರಸ್ತೆ ಪಡುಬಿದ್ರಿ ಇವರ ನಡ್ಸಾಲು ಗ್ರಾಮದಲ್ಲಿರುವ ಸುಮಂಗಳ ಸೂಪರ್ ನಜಾರ್ ಅಂಗಡಿಯ ಶೇಟರ್ ಗೆ ಹಾಕಿರುವ ಬೀಗದ ಕೊಂಡಿಯನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಅಂಗಡಿಯಲ್ಲಿ ಮಾರಲು ಇಟ್ಟಿರುವ ಪೋಗ್ ಮಾರ್ಕೋ ಕಂಪೆನಿಯ ಎರಡು ಬಾಟಲಿ ಬಾಡಿ ಸ್ಪ್ರೆ ಮತ್ತು ಮೇಜಿನ ಡ್ರಾಯರ್ ಮೂಲೆಯಲ್ಲಿಟ್ಟಿರುವ ರೂ 300/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ 2 ಬಾಡಿ ಸ್ಪ್ರೆಯ  ಮೌಲ್ಯ ರೂ 390/- ಆಗಿದ್ದು, ಕಳವಾದ ಸೊತ್ತು ಹಾಗೂ ನಗದಿನ ಒಟ್ಟು ಮೌಲ್ಯ ರೂ 690/- ಆಗಿರುತ್ತದೆ.ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 94/2015 ಕಲಂ: 457, 380  ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.No comments: