Friday, July 17, 2015

Daily Crime Reports As On 17/07/2015 At 07:00 Hrs

ವಂಚನೆ ಪ್ರಕರಣ
  • ಶಿರ್ವಾ: ದಿನಾಂಕ 23/06/2014ರಂದು ಅರೋಪಿ 1) ಅಬ್ದುಲ್  ಆರಿಜ್ ತಂದೆ:ಅಬ್ದುಲ್ ಖಾದರ್, ವಾಸ:ಮನೆ ನಂಬ್ರ 3-28 ಹಳೆ ಪೋಸ್ಟ್ ಆಫೀಸ್‌ ಎದುರು, ಎರ್ಮಾಳ್ ಇವರು ಕೆನರ ಬ್ಯಾಂಕ್ ಮುದರಂಗಡಿ ಶಾಖೆಯಿಂದ  ಏಳು ಲಕ್ಷ ರೂ  ಸಾಲ  ಮಾಡಿ ಅದರಲ್ಲಿ  ಕಾರು ಖರೀದಿ ಮಾಡಿ ತದ ನಂತರ ಬ್ಯಾಂಕಿನ ಕರಾರಿನಂತೆ ಯಾವುದೇ ಸಾಲದ ಕಂತುಗಳನ್ನು ಪಾವತಿ ಮಾಡದೇ ಮತ್ತು  ಖರೀದಿ ಮಾಡಿದ ಕಾರನ್ನು ಆರ.ಟಿ.ಓ ಕಛೇರಿಯಲ್ಲಿ ನೋಂದಣಿ ಮಾಡದೇ ತನ್ನ ಸುಳ್ಳು ವಿಳಾಸ ನೀಡಿ ಈಗ ಕಾರು ಸಮೇತ ಮೋಸ ವಂಚನೆ ಮಾಡುವ ಉದ್ದೇಶದಿಂದ ತಪ್ಪಿಸಿಕೊಂಡಿದ್ದು  ಆರೋಪಿ 2) ಪುರುಷೋತ್ತಮ ಸಾಲಿಯಾನ್, ತಂದೆ:ಸೀತಾರಾಮ ಬಂಗೇರ ವಾಸ:ಭಾಗ್ಯಶ್ರೀ ನಿವಾಸ, ಸಾಂತೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಜಾಮೀನುದಾರನಾಗಿದ್ದು  ಈತನು ಒಂದನೇ ಅರೋಪಿ ಅಬ್ದುಲ್  ಆರಿಜ್ ಗೆ ಸಹಕರಿಸಿರುತ್ತಾನೆ.ಈ ಬಗ್ಗೆ ಶಿರ್ವಾ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 59/2015 ಕಲಂ: 415, 417, 419,420,421, 422, 423,424,425,426  ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ
  • ಹಿರಿಯಡ್ಕ:  ದಿನಾಂಕ 16/07/2015 ರಂದು ಶ್ರೀ ಆನಂದ ನಾಯ್ಕ್‌ ಎ.ಎಸ್‌.ಐ  ಹಿರಿಯಡ್ಕ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದು, ದಿನಾಂಕ: 17/07/2015 ರಂದು ಬೆಳಗ್ಗಿನ ಜಾವ 3 ಗಂಟೆಯ ಸಮಯಕ್ಕೆ ರೌಂಡ್ಸ್‌ ಮಾಡುತ್ತಾ ಅಂಜಾರು ಗ್ರಾಮದ ಓಂತಿಬೆಟ್ಟು ಜಂಕ್ಷನ್‌ ತಲುಪುವಾಗ ಅಲ್ಲಿಯ ಬಸ್‌ ಸ್ಟಾಂಡ್‌ ಕಟ್ಟಡದ ಒಳಗೆ ಇಬ್ಬರು ಅವಿತು ಕುಳಿತಿದ್ದು, ಕೂಡಲೇ ಜೀಪನ್ನು ನಿಲ್ಲಿಸಿ ಟಾರ್ಚ್‌ ದೀಪದ ಬೆಳಕು ಹಾಯಿಸಿದಾಗ ಇಬ್ಬರು ತಮ್ಮ ಮುಖವನ್ನು ಬಟ್ಟೆಯಿಂದ ಮರೆ ಮಾಚಿಕೊಂಡಿರುವುದು ಕಂಡು ಬಂತು. ಅವರ ಹೆಸರು ವಿಳಾಸ ವಿಚಾರಿಸಿದಾಗ 1. ಹಮೀದ್ (42) ತಂದೆ: ಮಹಮ್ಮದ್‌ ವಾಸ: ಚಿಕ್ಕನ್‌ ಕೆರೆ, ಮಣೂರು, ಕೋಟ, ಉಡುಪಿ ತಾಲೂಕು 2. ಪ್ರಶಾಂತ್‌ ದೇವಾಡಿಗ (38) ತಂದೆ: ಶಂಕರ ದೇವಾಡಿಗ ವಾಸ:ಚಿತ್ರಾಪುರ, ಶಿರಾಲಿ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ ಎಂದು ತಿಳಿಸಿದ್ದು ಅವರ ಇರುವಿಕೆಗೆ ಸರಿಯಾದ ಕಾರಣ ತಿಳಿಸದೇ ಇದ್ದು, ಅವರು ಯಾವುದೋ ಬೇವಾರಂಟು ತಕ್ಷೀರು ಎಸಗುವ ಉದ್ದೇಶದಿಂದ ಹೊಂಚು ಹಾಕಿಕೊಂಡಿರುವ ಅನುಮಾನವಿದ್ದು ಅವರನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 73/15 ಕಲಂ: 96 (ಬಿ) (ಸಿ) KP Act ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: