Thursday, July 16, 2015

Daily Crime Reports As On 16/07/2015 At 19:30 Hrsಇತರೇ ಪ್ರಕರಣ 
  •  ಗಂಗೊಳ್ಳಿ: ಪಿರ್ಯಾದಿದಾರರಾದ ಲೆಸ್ಲಿ ರೆಬೆಲ್ಲೋ ತಂದೆ:ಮ್ಯಾಕ್ಷೀಮ್ ರೆಬೆಲ್ಲೋ ಸೇನಾಪುರ ಗ್ರಾಮ ಎಂಬವರು ವೃತ್ತಿಯಲ್ಲಿ ಕೃಷಿಕನಾಗಿದ್ದು, ಸೇನಾಪುರ ಗ್ರಾಮದಲ್ಲಿ ಸರ್ವೆ ನಂಬ್ರ:27/13ಬಿ ರಲ್ಲಿ 0.38 ಎಕ್ರೆ ಹಾಗೂ ಸರ್ವೆ ನಂಬ್ರ:22/2ಬಿ ರಲ್ಲಿ 0.28 ಹಾಗೂ ಸರ್ವೆ ನಂಬ್ರ:27/3ಎ2 ರಲ್ಲಿ 1.21 ಹಾಗೂ ಸರ್ವೆ ನಂಬ್ರ 27/15ಎ ರಲ್ಲಿ 0.13 ಎಕ್ರೆ ಜಾಗ ಕೃಷಿ ಭೂಮಿ ಹೊಂದಿರುತ್ತಾರೆ. ಕೃಷಿಯಲ್ಲಿ ಮತ್ತು ಉದ್ಯೋಗದಲ್ಲಿ ತೀವ್ರತರವಾದ ಹಣಕಾಸಿನ ಸಮಸ್ಸೆ ಉಂಟಾಗಿ ದಿನಾಂಕ 17/12/2013 ರಂದು ರೂ 5,00,000/- ಸಾಲವನ್ನು ಉಮೇಶ ಶೆಟ್ಟಿ ಎಂಬವರಿಂದ ಪಡೆದುಕೊಂಡಿರುತ್ತಾರೆ. ಸದ್ರಿ ಹಣವನ್ನು 3 ತಿಂಗಳ ಒಳಗಡೆ ಪಾವತಿಸುವುದಾಗಿ ಅವರೊಳಗಡೆ ಮಾತುಕತೆ ಆಗಿದ್ದು ಭದ್ರತೆಗೆ ಕರ್ನಾಟಕ ಬ್ಯಾಂಕ್ ಲಿ. ಕುಂದಾಪುರ ಶಾಖೆಯ 3 ಬ್ಲ್ಯಾಂಕ್ ಚೆಕ್ ಗಳನ್ನು ನೀಡಿರುತ್ತಾರೆ.  ಲೆಸ್ಲಿ ರೆಬೆಲ್ಲೋ ರವರು ಸದ್ರಿ ಹಣವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಲಾಗದೇ ಒಂದು ವರ್ಷದ ಕಾಲಾವಕಾಶ ಕೇಳಿ ಈ ಬಗ್ಗೆ  ದಿನಾಂಕ 29/01/2014  ರಂದು ಸಾಲ ಮರುಪಾವತಿ ಕರಾರು ಪತ್ರವನ್ನು ಮಾಡಿಕೊಂಡಿರುತ್ತಾರೆ.ಸದ್ರಿ ಕರಾರುಪತ್ರದಿಂದ ಲೆಸ್ಲಿ ರೆಬೆಲ್ಲೋ ರವರ ಹೆಸರಿನಲ್ಲಿಯ ಜಾಗ ಅಕ್ಕಯ್ಯ @ ಅಕ್ಕತಾ ರವರ ಹೆಸರಿಗೆ ಬದಲಾವಣೆಯಾಗಿರುತ್ತದೆ, ಹೀಗಿರುತ್ತಾ ದಿನಾಂಕ 13/07/2015 ರಂದು ಸಂಜೆ 06.00 ಗಂಟೆಗೆ ಸೇನಾಪುರ ಗ್ರಾಮದ ಸೇನಾಪುರ ಎಂಬಲ್ಲಿರುವ ಲೆಸ್ಲಿ ರೆಬೆಲ್ಲೋರವರ ಮನೆಗೆ ಆಪಾದಿತ ಉಮೇಶ ಶೆಟ್ಟಿ ಯವರು  ಶಶಿ, ವಿಶ್ವನಾಥ ಶೆಟ್ಟಿ ಹಾಗೂ ಇನ್ನೊಬ್ಬ ವ್ಯಕ್ತಿಯ ಜೊತೆಯಲ್ಲಿ ಓಮಿನಿ ವಾಹನದಲ್ಲಿ ಬಂದು ಲೆಸ್ಲಿ ರೆಬೆಲ್ಲೋ ರವರಿಗೆ ನೀನು ಈ ಮನೆಯನ್ನು ಒಂದು ವಾರದ ಒಳಗಡೆ ಖಾಲಿಮಾಡಬೇಕು ಇಲ್ಲವಾದಲ್ಲಿ  ರೌಡಿಗಳ ಸಹಾಯದಿಂದ ಜೆ.ಸಿ.ಬಿ ಯನ್ನು ತಂದು ನಿನ್ನನ್ನು  ಹಾಗೂ ನಿನ್ನ ಹೆಂಡತಿ ಮಕ್ಕಳನ್ನು ಬಲತ್ಕಾರಿಂದ ಮನೆಯಿಂದ  ಹೊರಹಾಕಿ ಮನೆಯನ್ನು ದೂಡಿಹಾಕುತ್ತೇವೆ ಎಂದು ಜೀವ ಬೆದರಿಕೆಯನ್ನು ಹಾಕಿರುತ್ತಾರೆ ಹಾಗೂ ಉಮೇಶ ಶೆಟ್ಟಿ ಯವರು  ನನ್ನಿಂದ  ಪಡೆದುಕೊಂಡ ರೂ 5,00,000/-  ಸಾಲವನ್ನು  ನನಗೆ ರೂ 15,00,000/-  ಬಡ್ಡಿ ಸೇರಿ ಒಟ್ಟಿಗೆ 20,00,000/- ರೂ ಹಣವನ್ನು ಒಂದು ವಾರದ ಒಳಗೆ ನೀಡಬೇಕು' ಎಂದು ಬೆದರಿಸಿರುತ್ತಾರೆ.ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 99/2015 ಕಲಂ: 3, 4 Karnataka Prohibition of Charging Exorbitant Interest Act 2004 & ಕಲಂ: 38,39 Karnataka Money landers act 1961 & ಕಲಂ 506, 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: