Thursday, July 16, 2015

Daily Crime Reports As On 16/07/2015 At 07:00 Hrs

ಮನುಷ್ಯ ಕಾಣೆ ಪ್ರಕರಣ
  • ಶಿರ್ವಾ:ಪಿರ್ಯಾದಿದಾರರಾದ ಜೋಸೆಫ್‌ ಕೊರೆಯ (34) ತಂದೆ:ವಿಕ್ಟರ್‌ ಕೊರೆಯ, ವಾಸ:ಹಳೆ ಹಿತ್ಲು ಮನೆ, ಜೋಡು ಪೆಜತ ಮರ, ಶಿರ್ವ ಮಸೀದಿ ಬಳಿ ಶಿರ್ವ ಗ್ರಾಮ, ಉಡುಪಿ ಇವರ ತಂದೆ ಸುಮಾರು ವಿಕ್ಟರ್ ಕೊರೆಯ (70) ಎಂಬವರು ದಿನಾಂಕ: 11/07/2015 ರಂದು ಮದ್ಯಾಹ್ನ 14:30 ಗಂಟೆಗೆ ಮನೆಯಿಂದ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದು, ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.ಈ ಬಗ್ಗೆ ಶಿರ್ವಾ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 58/2015, ಕಲಂ:ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ,  
ಹಲ್ಲೆ ಪ್ರಕರಣ
  • ಬೈಂದೂರು: ದಿನಾಂಕ 14/07/2015 ರಂದು ಮಧ್ಯಾಹ್ನ 04:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ರೇವತಿ ದೇವಾಡಿಗ (25) ತಂದೆ:ಸೋಮ ದೇವಾಡಿಗ ವಾಸ:ಕಟ್ಟೆಮನೆ, ಬಿಜೂರು ಗ್ರಾಮ, ಕುಂದಾಪುರ ತಾಲೂಕು ಮತ್ತು ಅವರ ಅಕ್ಕನ ಮಗನಾದ ಸಚಿನ್ ದೇವಾಡಿಗರವರು ಬಿಜೂರು ಗ್ರಾಮದ ಕಟ್ಟೆಮನೆ ಎಂಬಲ್ಲಿರುವ ಅವರ ಮನೆಯಲ್ಲಿರುವಾಗ ರೇವತಿ ದೇವಾಡಿಗರವರ ಸಂಬಂಧಿಕರಾದ ನರಸಿಂಹ ದೇವಾಡಿಗ, ಗಿರಿಜ ದೇವಾಡಿಗ ಮತ್ತು ಅವರ ಮಗ ರಾಘವೇಂದ್ರ ದೇವಾಡಿಗ ಮಗಳು ಶಾರದಾ ಹಾಗೂ ಅವಳ ಗಂಡ ದಯಾನಂದ ದೇವಾಡಿಗರು ಪಿರ್ಯಾದಿದಾರರು ವಾಸವಾಗಿರುವ ಮನೆಯ ಬಳಿ ಬಂದು ಮನೆಯ ವಿಚಾರವಾಗಿ ಜಗಳ ತೆಗೆದು ಕೂಡಲೇ ಮನೆ ಕಾಲಿ ಮಾಡಬೇಕೆಂದು ಹೇಳಿದ್ದಕ್ಕೆ ರೇವತಿ ದೇವಾಡಿಗರವರು ಆಕ್ಷೇಪಿಸಿದಾಗ ನರಸಿಂಹ ದೇವಾಡಿಗರು ತಾನು ಹಿಡಿದುಕೊಂಡಿದ್ದ ದೊಣ್ಣೆಯಿಂದ ಕೈ ಕಾಲುಗಳಿಗೆ ಹೊಡೆದು ನಂತರ ರಾಘವೇಂದ್ರ, ದಯಾನಂದ, ಗಿರಿಜಾ, ಶಾರದಾ ಇವರುಗಳು ಕೆನ್ನೆಗೆ ಕೈಗಳಿಂದ ಹೊಡೆದು ಬೆನ್ನಿಗೆ ಗುದ್ದಿರುತ್ತಾರೆ ಇದರಿಂದ ರೇವತಿ ದೇವಾಡಿಗರವರು ಬೊಬ್ಬೆ ಹೊಡೆದಾಗ ಅವರ ಅಕ್ಕನ ಮಗನಾದ ಸಚಿನ ದೇವಾಡಿಗನು ಬಂದು ಅವರಿಂದ ಬಿಡಿಸಿರುತ್ತಾನೆ, ನಂತರ ಆರೋಪಿತರು ಸಚಿನನಿಗೂ ಕೂಡ ಕೈಗಳಿಂದ ಕೆನ್ನೆಗೆ ಬಾರಿಸಿ ಕಾಲುಗಳಿಂದ ಹೊಟ್ಟೆಗೆ ತುಳಿದಿರುತ್ತಾನೆ. ನಂತರ ರೇವತಿ ದೇವಾಡಿಗ ಮತ್ತು ಅವರ ಅಕ್ಕನ ಮಗನು ಬೊಬ್ಬೆ ಹೊಡೆದಿದ್ದನ್ನುನ ಕೇಳಿ ಪಕ್ಕದ ಮನೆಯವರಾದ ಸಂತೋಷ ದೇವಾಡಿಗ ಮತ್ತು ಮಂಜುನಾಥ ದೇವಾಡಿಗರವರು ಅಲ್ಲಿಗೆ ಬಂದು ಆರೋಪಿತರುಗಳಿಂದ ಬಿಡಿಸಿದರು, ಆರೋಪಿತರುಗಳು ಹೋಗುವಾಗ ಮನೆ ಕಾಲಿ ಮಾಡದಿದ್ದರೆ ಕೊಲ್ಲವುದಾಗಿ ಬೆದರಿಕೆ ಹಾಕಿರುತ್ತಾರೆ. ಗಾಯಗೊಂಡ ರೇವತಿ ದೇವಾಡಿಗರವರನ್ನುಮತ್ತು ಅವರ ಅಕ್ಕನ ಮಗನನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಈ ಬಗ್ಗೆ  ಬೈಂದೂರು ಪೋಲಿಸ್  ಠಾಣೆ  ಅಪರಾಧ ಕ್ರಮಾಂಕ 196/2015 ಕಲಂ: 324, 354, 323, 506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ಪಿರ್ಯಾದಿದಾರರಾದ ನರಸಿಂಹ ದೇವಾಡಿಗ (25) ತಂದೆ:ದಿ.ಮಾಸ್ತಿ ದೇವಾಡಿಗ ವಾಸ:ಕಟ್ಟೆಮನೆ, ಬಿಜೂರು ಗ್ರಾಮ, ಕುಂದಾಪುರ ತಾಲೂಕು ಇವರು ವಾಸವಿರುವ ಮನೆಯು ಅವರ ತಾಯಿಯ ಹೆಸರಿನಲ್ಲಿದ್ದು ಆ ಮನೆಯನ್ನು ಹಾಗೂ ಜಾಗವನ್ನು ನರಸಿಂಹ ದೇವಾಡಿಗ ರವರಿಗೆ ವಿಷಯ ತಿಳಿಸದೆ  1 ವರ್ಷದ ಹಿಂದೆ ಮಹಾಬಲ ದೇವಾಡಿಗ ಎಂಬುವವರಿಗೆ ಮಾರಾಟ ಮಾಡಿರುತ್ತಾರೆ, ನಂತರದ ದಿನಗಳಲ್ಲಿ ಮನೆ ಹಾಗೂ ತೋಟವನ್ನು ನರಸಿಂಹ ದೇವಾಡಿಗ ರವರೇ ನೋಡಿಕೊಂಡಿರುತ್ತಾರೆ. ದಿನಾಂಕ 14/07/2015 ರಂದು ಸಂಜೆ 04:30 ಗಂಟೆಯ ಸಮಯಕ್ಕೆ ನರಸಿಂಹ ದೇವಾಡಿಗ ರವರು ತೋಟವನ್ನು ನೋಡಿಕೊಂಡಿರುವ ಸಮಯ ಮಹಾಬಲ ದೇವಾಡಿಗ , ರೇವತಿ, ಸಚಿನ್‌ ಮತ್ತು ಗುರುರಾಜ್‌ರವರುಗಳು ಅಲ್ಲಿಗೆ ಬಂದು ಮಹಾಬಲ ದೇವಾಡಿಗನು ನರಸಿಂಹ ದೇವಾಡಿಗರವರಲ್ಲಿ  “ ಈ ಮನೆಯನ್ನು ನಾನು ಕ್ರಯ ಮಾಡಿಕೊಂಡಿದ್ದು ನನ್ನ ಹೆಸರಿನಲ್ಲಿರುತ್ತದೆ, ಇನ್ನು ಮುಂದಕ್ಕೆ ಈ ಜಾಗ ಹಾಗೂ ಮನೆಯ ವಿಚಾರಕ್ಕೆ ಬರಬಾರದು” ಎಂದು ಹೇಳಿದ್ದು ಅದಕ್ಕೆ ನರಸಿಂಹ ದೇವಾಡಿಗರವರು ಈ ಜಾಗವು ತನ್ನ ತಾಯಿಯ ಹೆಸರಿನಲ್ಲಿದ್ದು ನನಗೂ ಸೇರಿದ್ದು ನಾನು ಹಕ್ಕುದಾರನಾಗಿರುತ್ತೇನೆ ಎಂದು ಹೇಳಿದ್ದು  ಆಗ ನರಸಿಂಹ ದೇವಾಡಿಗ ಹಾಗೂ ಮಹಾಬಲ ದೇವಾಡಿಗರಿಗೂ ಮಾತಿಗೆ ಮಾತು ಬೆಳೆದು ಮಹಾಬಲ ದೇವಾಡಿಗನು ತನ್ನ ಕೈಯಲ್ಲಿದ್ದ ಒಂದು ದೊಣ್ಣೆಯಿಂದ ನರಸಿಂಹ ದೇವಾಡಿಗ ರವರ ಎಡಕೈಗೆ, ಬೆನ್ನಿಗೆ ಮತ್ತು ಕುತ್ತಿಗೆಯ ಕೆಳಭಾಗ ಹಾಗೂ ಬಲಕಾಲಿಗೆ ಹೊಡೆದಿರುತ್ತಾನೆ ಅದೇ ಸಮಯ ಅಲ್ಲಿ ಇದ್ದ ಗುರುರಾಜ್‌ ಹಾಗೂ  ರೇವತಿಯವರು ನರಸಿಂಹ ದೇವಾಡಿಗರವರ ಹೊಟ್ಟೆಗೆ ಕಾಲಿನಿಂದ ತುಳಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಆರೋಪಿತರು ಹಲ್ಲೆ ನಡೆಸಿದ್ದರಿಂದ ನರಸಿಂಹ ದೇವಾಡಿಗರವರಿಗೆ ಎಡಕೈಗೆ, ಬೆನ್ನು , ಹೊಟ್ಟೆ ಹಾಗೂ ಕಾಲಿಗೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ  ಕುಂದಾಪುರ ಸರಕಾರಿ ಅಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ  ಬೈಂದೂರು ಪೋಲಿಸ್ ಠಾಣೆ  ಅಪರಾಧ ಕ್ರಮಾಂಕ 197/2015 ಕಲಂ:324, 323, 506, ಜೊತೆಗೆ  34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಇತರೇ ಪ್ರಕರಣ
  • ಕುಂದಾಪುರ: ದಿನಾಂಕ 14/07/2015 ರಂದು ಕುಂದಾಪುರ ತಾಲೂಕು ದೇವಲ್ಕುಂದ ಗ್ರಾಮದ ವಿಜಯ ಮಕ್ಕಳ ಕೂಟ ಕಿರಿಯ ಪ್ರಾಥಮಿಕ ಶಾಲೆಗೆ ಬೆಳಿಗ್ಗೆ 08:15 ಗಂಟೆಗೆ ಆರೋಪಿಗಳಾದ 1) ಜಯಪ್ರಕಾಶ್‌ ಶೆಟ್ಟಿ,2)ಶರತ್‌ ಶೆಟ್ಟಿ,3)ಮೇಘರಾಜ್‌ ಶೆಟ್ಟಿ,4)ಭಾಸ್ಕರ ನಾಯ್ಕ ನಲ್ಲಿಮಕ್ಕಿ,5)ರವಿ ಗಾಣಿಗ ಮಲ್ಲಾರಿ,6)ಚಂದ್ರ ನಾಯ್ಕ ದೇವಲ್ಕುಂದ,7)ಸುಕುಮಾರ ಶೆಟ್ಟಿ,8)ವಸಂತ ಶೆಟ್ಟಿ 9)ಗೋಪಾಲ ಗುಂಜಾಡಿ,10)ಪಿಟ್ಟಿ ನಾಯ್ಕ,11)ಅರುಣ ಶೆಟ್ಟಿ,12)ಶೇಖರ ಶೆಟ್ಟಿ, 13)ದಿವಾಕರ ಶೆಟ್ಟಿ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಶಾಲೆಯ ಗೇಟಿನ ಬೀಗ ಒಡೆದು ಹೊಸ ಬೀಗ ಹಾಕಿ ಶಾಲಾ ಬೋರ್ಡ್‌ನ್ನು ಕಿತ್ತೆಸೆದು, ಶಾಲಾ ಕೊಠಡಿಯ ಬೀಗ ಒಡೆದು ತಮ್ಮದೆ ಆದ ಬೀಗ ಹಾಕಿ, ಮುಖ್ಯೋಪಾಧ್ಯಾಯಿನಿಯನ್ನು ತಳ್ಳಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಬೆದರಿಕೆ ಹಾಕಿ, ಸಿ.ಸಿ ಕ್ಯಾಮರಾವನ್ನು ಹಾಳು ಮಾಡಿದ್ದು, ಡಿ.ಡಿ.ಪಿ.ಐ ದಿವಾಕರ ಶೆಟ್ಟಿ ಯವರು ಬೆಳಿಗ್ಗೆ 09:10 ಗಂಟೆಗೆ ಶಾಲೆಗೆ ಆಗಮಿಸಿ, ಸ್ವಾರ್ಥ ಹಿತಾಸಕ್ತ ಗುಂಪುಗಳ ಪರ ಮಾತನಾಡಿ ವಿದ್ಯಾರ್ಥಿಗಳ ಪೋಷಕರಿಗೆ ‘ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ, ನನ್ನನ್ನು ಕೇಳಿ ನೀವು ಮಕ್ಕಳನ್ನು ಶಾಲೆಗೆ ಸೇರಿಸಿದ್ದೀರಾ’ ಎಂದು ಹೇಳಿದ್ದು, ಆರೋಪಿಗಳು ಶಾಲಾ ಮಕ್ಕಳನ್ನು ಶಾಲೆಯಿಂದ ಹೊರ ಹಾಕಿದ ಪರಿಣಾಮ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥರಾಗಿದ್ದು, ಅವರ ಪೈಕಿ ವಿದ್ಯಾರ್ಥಿಗಳಾದ ತ್ರಿಶಾ (6 ವರ್ಷ) ಮತ್ತು ಸಿಂಚನ (6 ವರ್ಷ) ರವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ  ಕುಂದಾಪುರ ಪೋಲಿಸ್ ಠಾಣೆ  ಅಪರಾಧ ಕ್ರಮಾಂಕ 268/2015, ಕಲಂ:  143, 147, 427, 354, 506, 336 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಶಿರ್ವಾ: ಪಿರ್ಯಾದಿದಾರರಾದ ಸುಂದರ ಮೂಲ್ಯ (56) ತಂದೆ:ದಿ.ಅಣ್ಣಪ್ಪ ಮೂಲ್ಯ ವಾಸ:ಸೂರ್ಯ ನಗರ ಪೈಯ್ಯಾರ್‌, ಕಳತ್ತೂರು ಗ್ರಾಮ ಉಡುಪಿ ತಾಲೂಕು ಇವರ ತಮ್ಮ ಅಪ್ಪು ಮೂಲ್ಯ (52) ಎಂಬವರು ಬೆಳ್ಳೆ ಗ್ರಾಮದ ಪಡುಬೆಳ್ಳೆಯಲ್ಲಿರುವ ವೈ ಎಮ್‌ ಪಾದೆಯ ಬಳಿ ಇರುವ ತನ್ನ ಕುಟುಂಬದ ಮನೆಗೆ ಸಂಕ್ರಮಣದ ನಿಮಿತ್ತ ಪೂಜೆ ಮಾಡಲು ಎರಡು ದಿವಸ ಮೊದಲೇ ಹೋಗಿದ್ದು, ಮನೆಯಲ್ಲಿ ಬೇರೆ ಯಾರೂ ವಾಸ್ತವ್ಯ ಇಲ್ಲದೇ ಇದ್ದು  ದಿನಾಂಕ 15/07/2015 ರಂದು ಮಧ್ಯಾಹ್ನ 1:30 ಗಂಟೆಗೆ ನೆರೆಮನೆಯ ಮೋನಪ್ಪ ಭಂಡಾರಿ ಎಂಬವರು ಸುಂದರ ಮೂಲ್ಯ ರವರಿಗೆ ಕರೆ ಮಾಡಿ ಅಪ್ಪು ಮೂಲ್ಯರವರು ಮನೆಯ ಒಳಗಡೆ ಕೋಣೆಯ ಫ್ಯಾನಿಗೆ ಬಟ್ಟೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ತಿಳಿಸಿದ್ದು, ಈ ಬಗ್ಗೆ ಸುಂದರ ಮೂಲ್ಯ ರವರು ನೀಡಿದ ದೂರಿನಂತೆ ಶಿರ್ವಾ ಪೋಲಿಸ್ ಠಾಣೆ ಯು.ಡಿ.ಆರ್ ಕ್ರಮಾಂಕ 12/2015 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: