Tuesday, July 14, 2015

Daily Crime Reports As on 14/07/2015 at 19:30 Hrsಹೆಂಗಸು ಕಾಣೆ ಪ್ರಕರಣ

  • ಕುಂದಾಪುರ: ಪಿರ್ಯಾದುದಾರರಾದ ರಮೇಶ ಖಾರ್ವಿ (38) ತಂದೆ: ನರಸಿಂಹ ಖಾರ್ವಿ ವಾಸ: ಫೆರಿ ರಸ್ತೆ, ಕಸಬಾ ಗ್ರಾಮ, ಕುಂದಾಪುರ ತಾಲೂಕು ಎಂಬವರ ಹೆಂಡತಿ ಮಾಲತಿ ಖಾರ್ವಿ ಪ್ರಾಯ 32 ವರ್ಷ ಎಂಬವರು ಕುಂದಾಪುರದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೇವಾ ಪ್ರತಿನಿಧಿಯಾಗಿ ಕಳೆದ 4 ವರ್ಷಗಳಿಂದ ಕೆಲಸ ಮಾಡುತಿದ್ದು, ದಿನಾಂಕ 08.07.2015 ರಂದು ಬೆಳಿಗ್ಗೆ 10:30 ಗಂಟೆಗೆ ಕುಂದಾಪುರದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಛೇರಿಗೆ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಕಾಣೆಯಾದವರನ್ನು ಸಂಬಂಧಿಕರಲ್ಲಿ ಹಾಗೂ ಆಸುಪಾಸಿನಲ್ಲಿ ಎಲ್ಲಾ ಕಡೆ ವಿಚಾರಿಸಿ ಹುಡುಕಾಡಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ ಎಂಬುದಾಗಿ ರಮೇಶ ಖಾರ್ವಿ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 265/2015 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ದಿವಾಕರ ಶೆಟ್ಟಿ ಹೆಚ್‌ ರವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿದ್ದು ವಿಜಯ ಮಕ್ಕಳ ಕೂಟ ಕಿರಿಯ ಪ್ರಾಥಮಿಕ ಶಾಲೆ, ದೇವಲ್ಕುಂದ ಇವರು ಶಿಕ್ಷಣ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಪ್ರಾಥಮಿಕ ಶಾಲೆ ನಡೆಸಲು ಅನುಮತಿ ಪಡೆದಿದ್ದು, ಹಾಗೂ 2015-16 ನೇ ಸಾಲಿನಲ್ಲಿ 6 ನೇ ತರಗತಿಯನ್ನು ಆರಂಭಿಸಿರುವ ಬಗ್ಗೆ ಇಲಾಖೆಗೆ ದೂರು ಬಂದ ಮೇರೆಗೆ ಪಿರ್ಯಾದಿದಾರರು ಪರಿಶೀಲಿಸಲು ದಿನಾಂಕ 14.07.2015 ರಂದು ಬೆಳಿಗ್ಗೆ 10:00 ಗಂಟೆಗೆ ಶಾಲೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ಅಗತ್ಯ ದಾಖಲೆಗಳು ಲಭ್ಯವಿಲ್ಲದೆ ಇದ್ದುದರಿಂದ ಮಣಿಪಾಲದ ರಜತಾದ್ರಿ ಕಛೇರಿಗೆ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಿ, ಆಫೀಸು ಕೋಣೆಯಲ್ಲಿದ್ದಾಗ ಆಪಾದಿತರಾದ 1) ರಾಘವೇಂದ್ರ ನೆಂಪು, 2) ಮಲ್ಲಾರಿ ಗಣೇಶ, 3) ಅನಿಲ ಬಾಳಿಕೆರೆ, 4) ಐಸ್‌ಕ್ಯಾಂಡಿ ಚಂದ್ರ, 5) ಉದಯ ಜಾಡಿ, 6) ನಾಗ ಹೆಮ್ಮಾಡಿ, 7) ರಿಕ್ಷಾ ರಾಮ ಬಾಳಿಕೆರೆ ಎಂಬವರು ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿ ಬಂದು ಗಲಾಟೆ ಮಾಡಿದ್ದು, ಪಿರ್ಯಾದುದಾರರು ಇದಕ್ಕೆ ಸಂಬಂಧವಿಲ್ಲದಂತೆ ಹೊರಗೆ ಬಂದಾಗ ಆಪಾದಿತರು ಪಿರ್ಯಾದುದಾರರಿಗೆ ಮುಂದೆ ಹೋಗದಂತೆ ಅಡ್ಡಿಪಡಿಸಿ, ಹಲ್ಲೆಗೆ ಪ್ರಯತ್ನಿಸಿ ಸರಕಾರಿ ಅಧಿಕಾರಿಯಾದ ಪಿರ್ಯಾದುದಾರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಈ ಕೃತ್ಯಕ್ಕೆ ಸದ್ರಿ ಶಾಲೆಯ ಮುಖ್ಯ ಶಿಕ್ಷಕಿ ಪ್ರೇರಣೆ ಮಾಡಿರುತ್ತಾರೆ ಎಂಬುದಾಗಿ ದಿವಾಕರ ಶೆಟ್ಟಿ ಹೆಚ್‌ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 266/2015, ಕಲಂ:  143, 147,   341, 353, 120(ಬಿ) ಜೊತೆಗೆ 149 ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.  

ಕಳವಿಗೆ ಪ್ರಯತ್ನ   

  • ಕುಂದಾಪುರ: ಪಿರ್ಯಾದಿದಾರರಾದ ರಾಮಚಂದ್ರ (42) ತಂದೆ: ಸುಬ್ರಾಯ ವಾಸ: ರಂಗನಕೆರೆ, ಹೇರಾಡಿ ಗ್ರಾಮ, ಉಡುಪಿ ತಾಲೂಕು ರವರು ಕ್ಲೀಯರ್‌ ಸೆಕ್ಯೂರ್ಸ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪೆನಿಯಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡಿಕೊಂಡಿದ್ದು, ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಸಿದ್ದಿ ಸಂಕೀರ್ಣ ಕಟ್ಟಡದಲ್ಲಿರುವ ಕರ್ನಾಟಕ ಬ್ಯಾಂಕಿನ ಎ.ಟಿ.ಎಂ ಸುರಕ್ಷತೆಯ ಜವಾಬ್ದಾರಿಯನ್ನು ಸದ್ರಿ ಕಂಪೆನಿಯು ವಹಿಸಿಕೊಂಡಿದ್ದು, ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಭದ್ರತಾ ಕೆಲಸವನ್ನು ನಿರ್ವಹಿಸುತ್ತಿದ್ದು, ದಿನಾಂಕ 13.07.2015 ರಂದು ಸದ್ರಿ ಕಂಪೆನಿಯ ಸೆಕ್ಯೂರಿಟಿ ಗಾರ್ಡ್‌ ಎಂ.ಡಿ ರಾಜು ರವರು ಎ.ಟಿ.ಎಂ ಗೆ ರಾತ್ರಿ ಗಾರ್ಡ್‌ ಕರ್ತವ್ಯದಲ್ಲಿದ್ದು, ದಿನಾಂಕ 14.07.2015 ರಂದು ಬೆಳಗಿನ ಜಾವ 02:45 ಗಂಟೆಗೆ ಓರ್ವ ವ್ಯಕ್ತಿ ತಲೆಗೆ ಹೆಲ್ಮೆಟ್‌ ಧರಿಸಿಕೊಂಡು ಎ.ಟಿ.ಎಂ ಕೋಣೆಗೆ ಪ್ರವೇಶಿಸಿದ್ದು, ಆತನ ಕೈಯಲ್ಲಿ ಮಚ್ಚಿನ ಆಕಾರದ ಆಯುಧವನ್ನು ಹಿಡಿದುಕೊಂಡಿರುವುದನ್ನು ನೋಡಿ ಎಂ.ಡಿ ರಾಜು ರವರು ಹೆದರಿ ಯು.ಪಿ.ಎಸ್‌ ಕೋಣೆಯಲ್ಲಿ ಅವಿತು ಕುಳಿತಿದ್ದು, ಆತನು ಎ.ಟಿ.ಎಂ ಮಿಶಿನ್‌ನಲ್ಲಿದ್ದ ಹಣವನ್ನು ಕಳವು ಮಾಡುವ ಉದ್ದೇಶದಿಂದ ಎ.ಟಿ.ಎಂ ಮಿಶಿನ್‌ನ್ನು ಒಡೆಯಲು ಪತ್ರಯತ್ನಿಸಿದ್ದು, ಸುಮಾರು 15 ನಿಮಿಷಗಳ ಕಾಲ ಪ್ರಯತ್ನಿಸಿ ಹೊರಟು ಹೋಗಿರುತ್ತಾನೆ, ಸದ್ರಿ ವ್ಯಕ್ತಿಯು ಎ.ಟಿ.ಎಂ ಮಿಶಿನ್‌ನ ಮುಂದಿನ ಬಾಗಿಲು ಮತ್ತು ಲಾಕರ್‌ನ್ನು ಜಖಂಗೊಳಿಸಿ ರೂ. 65,000/- ನಷ್ಟವಾಗಿರುತ್ತದೆ ಎಂಬುದಾಗಿ ರಾಮಚಂದ್ರ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 267/2015, ಕಲಂ: 457, 380, 511 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ

ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 14/07/2015 ರಂದು ಪಿರ್ಯಾದಿದಾರರಾದ ಕುಷ್ಟು ಪೂಜಾರಿ (48) ತಂದೆ: ಸುಬ್ಬ ಪೂಜಾರಿ ವಾಸ: ಕಾಮನಮನೆ ನಾಯಕನ ಕಟ್ಟೆ ಕೆರ್ಗಾಲ್‌ ಗ್ರಾಮ ಕುಂದಾಪುರ ತಾಲೂಕು ರವರು ಕೆರ್ಗಾಲ್‌ನಿಂದ ಉಪ್ಪುಂದ ಕಡೆಗೆ ರಾ.ಹೆ 66 ರಲ್ಲಿ ಅವರ ಮೋಟಾರ್‌ ಸೈಕಲ್‌ನಲ್ಲಿ ಸವಾರಿಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 10:40 ಗಂಟೆಯ ವೇಳೆಗೆ ನಂದನವನ ಗ್ರಾಮದ ನಂದನವನ ವಿನಾಯಕ ಗೇರು ಬೀಜ ಪ್ಯಾಕ್ಟರಿಯ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಅವರ ಪರಿಚಯದ ಮಾಸ್ತಿ ಎಂಬುವವರು ಸೈಕಲ್‌ನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದು ಅದೇ ಸಮಯ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ KA 20 Z 0881 ನೇ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಮಾಸ್ತಿಯವರು ಸವಾರಿ ಮಾಡುತ್ತಿದ್ದ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್‌ ಸವಾರ ಮಾಸ್ತಿಯವರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ತಲೆಗೆ ರಕ್ತಗಾಯವಾಗಿರುತ್ತದೆ ಗಾಯಗೊಂಡ ಮಾಸ್ತಿಯವರನ್ನು ಕೆ.ಎಮ್‌.ಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕುಷ್ಟು ಪೂಜಾರಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 193/2015, ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ

ಇತರ ಪ್ರಕರಣ

  • ಕಾರ್ಕಳ: ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 209/2010 ಕಲಂ: 379, 177 ಐ.ಪಿ.ಸಿ ಪ್ರಕರಣದಲ್ಲಿ ಅರೋಪಿಯಾದ ರವಿ ತಂದೆ: ರಾಜ, ಹಾಸನ ರೈಲ್ವೆ  ಸ್ಟೇಷನ್ ಟೆಂಟ್, ಅರಸಿಕೆರೆ ರಸ್ತೆ, ಹಾಸನ ಜಿಲ್ಲೆ ಎಂಬಾತನು ಮಾನ್ಯ ಜಿಲ್ಲಾ ನ್ಯಾಯಾಲಯದ ಸಿ,ಸಿ ನಂಬ್ರ 130/2011 ರಲ್ಲಿ ಜಾಮೀನು ಪಡೆದುಕೊಂಡು, ಆರೋಪಿಯು 10.000/- ಸ್ವಂತ ಜಾಮೀನು ಮುಚ್ಚಳಿಕೆ ಹಾಗೂ ಅಷ್ಟೇ ಮೊತ್ತಕ್ಕೆ ಓರ್ವ ಸರ್ಕಾರಿ ನೌಕರ/ಬ್ಯಾಂಕ್ ಉದ್ಯೋಗಿ/ ಮಹಾನಗರ ಪಾಲಿಕೆ ಉದ್ಯೋಗಿಯ  ಜಾಮೀನು ನೀಡುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದು, ಅದರಂತೆ ಆರೋಪಿಯು ದಿನಾಂಕ: 15.02.2011 ರಂದು ಜಾಮೀನುದಾರ ಆರ್ ಸತೀಶ್, (51) ತಂದೆ: ದಿ.ರಾಮಯ್ಯ, ವಾಸ: ಡೋರ್ ನಂ 264 , 1 ನೇ ಮುಖ್ಯ ರಸ್ತೆ, 2 ನೇ ಅಡ್ಡ್ ರಸ್ತೆ, ಕೆಜೆ ಕೊಪ್ಪಳ, ಮೈಸೂರು ಎಂಬಾತನು ರೈಲ್ವೆ ಮೆಕಾನಿಕಲ್ ವಿಭಾಗದಲ್ಲಿ ಹೆಲ್ಪರ್ ಆಗಿ ಕರ್ತವ್ಯದಲ್ಲಿದ್ದು ಈ ಬಗ್ಗೆ ಸಂಬಂದಿಸಿದ ಮೈಸೂರಿನ ಸೌತ್ ವೆಸ್ಟರ್ನ್ ರೈಲ್ವೆಯ ಸಹಾಯಕ ಸ್ಟೇಶನ್ ಮಾಸ್ಟರ್ ಇವರಿಂದ ವೇತನ ಪ್ರಮಾಣ ಪತ್ರ ಹಾಗೂ ರೈಲ್ವೆ ಇಲಾಖೆಯವರು ನೀಡಿದ ಗುರುತಿನ ಚೀಟಿಯ ನಕಲು ಹಾಗೂ ದಂಡ ಪ್ರಕ್ರಿಯಾ ಕಲಂ 441 (ಎ) ಅಡಿಯಲ್ಲಿ  ಡಿಕ್ಕರೆಶನ್ ಅರ್ಜಿಯನ್ನು ಹಾಜರುಪಡಿಸಿದ್ದು ಸದ್ರಿ ದಾಖಲಾತಿಗಳ ಸತ್ಯಾ ಸತ್ಯತೆಗಳ ಬಗ್ಗೆ ಪರಿಶೀಲಿಸಿದಲ್ಲಿ, ದಾಖಲಾತಿಗಳನ್ನು  ರೈಲ್ವೆ ಇಲಾಕೆಯವರು ನೀಡದೇ ಇದ್ದು ಆರೋಪಿ ಮತ್ತು ಜಾಮೀನುದಾರ ಆರ್ ಸತೀಶ್ ಇವರು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದಿರುವುದಾಗಿದೆ ಎಂಬುದಾಗಿ ಸೆಬಸ್ಟಿನ್  ಚಂದ್ರನ್ ಸೋನ್ಸ್ ಶಿರಸ್ತೆದಾರ್, ಪ್ರದಾನ ವ್ಯವಹಾರ ನ್ಯಾಯಾದೀಶರು ಮತ್ತು ಪ್ರಥಮ ದರ್ಜೆ ದಂಡಾಧಿಕಾರಿಯವರ ನ್ಯಾಯಾಲಯ, ಕಾರ್ಕಳ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2015 ಕಲಂ: 196,199, 200,205,463  ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: