Tuesday, July 14, 2015

Daily Crime Reports As On 14/07/2015 At 17:00 Hrs



ಮಟ್ಕಾ ಜುಗಾರಿ  ಪ್ರಕರಣ

  • ಕಾಪು: ಜಗದೀಶ್ ರೆಡ್ಡಿ ಪಿ.ಎಸ್.ಐ. (ಕಾ.ಸು.) ಕಾಪು ಪೊಲೀಸ್ ಠಾಣೆ ಇವರು ಪ್ರತಿವಾದಿ ರಫೀಕ್ @ ಇಸಾಕ್ (31) ತಂದೆ: ಸಾಬಾನ್ ಬ್ಯಾರಿ ವಾಸ: ಸುಬಾಶ್ ನಗರ ಅಬ್ದುಲ್ ಸಾಹೇಬರ ಮನೆ ಹತ್ತಿರ, ಕುರ್ಕಾಲು ಗ್ರಾಮ ಉಡುಪಿ ತಾಲೂಕು ಇವರು  ಕಾಪು ಠಾಣಾ ವ್ಯಾಪ್ತಿಯಲ್ಲಿ ತನ್ನ ಸ್ವಂತ ಲಾಭಕ್ಕೊಸ್ಕರ ಮಟ್ಕಾ ದಂಧೆಯನ್ನು ಮಾಡಿಸಿ ಸಾರ್ವಜನಕರಿಂದ ಹಣ ವಸೂಲಿ ಮಾಡುತ್ತಿದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಈತನನ್ನು ಮಟ್ಕಾ ಪರಿಕರಗಳೊಂದಿಗೆ ದಿ. 02-06-2015  ರಂದು ದಸ್ತಗಿರಿ ಮಾಡಿ ಆತನ ಮೇಲೆ  ಕಾಪು ಠಾಣಾ ಅ.ಕ್ರ  116/2015  ಕಲಂ 78 (i) (iii) ಕೆ.ಪಿ.ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಆದರೂ ಪ್ರತಿವಾದಿಯು ತನ್ನ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದು ಕಾಪು ಪರಿಸರದಲ್ಲಿ ಗುಟ್ಟಾಗಿ  ಮಟ್ಕಾ ದಂಧೆ ನಡೆಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಬಂದಿರುತ್ತದೆ. ಇದರಿಂದ ಪರಿಸರದಲ್ಲಿ ಸಾರ್ವಜನಿಕರ ನೆಮ್ಮದಿ ಬದುಕಿಗೆ ಭಂಗವನ್ನುಂಟು ಆಗುವ ಸಾಧ್ಯತೆ ಇರುತ್ತದೆ.ಅಲ್ಲದೇ ಈತನು ಗುಟ್ಟಾಗಿ ಮಟ್ಕಾ ದಂಧೆಯನ್ನು ಮುಂದುವರಿಸಿಕೊಂಡು ಹೋಗಿ ಸಾರ್ವಜನಿಕರ ನೆಮ್ಮದಿ ಬದುಕಿಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುವುದರಿಂದ ಪರಿಸರದಲ್ಲಿ ಮುಂದಕ್ಕೆ ಸಾರ್ವಜನಿಕರ ನೆಮ್ಮದಿ ಬದುಕಿಗೆ ಭಂಗವಾಗದಂತೆ ಪ್ರತಿವಾದಿಯಿಂದ ಒಳ್ಳೆಯ ನಡತೆಯ ಬಗ್ಗೆ ಗರಿಷ್ಠ  ಕಾಲಾವಧಿಯ ವರೆಗೆ ಜಾಮೀನು ಮುಚ್ಚಳಿಕೆಯನ್ನು ಪಡೆದುಕೊಳ್ಳುವಂತೆ ಮಾನ್ಯ ನ್ಯಾಯಾಲಯದಲ್ಲಿ ವರದಿ ನಿವೇದಿಸಿದ್ದು ಈ ಬಗ್ಗೆ ಕಾಪು  ಪೋಲಿಸ್ ಠಾಣೆ ಯಲ್ಲಿ ಅಪರಾಧ ಕ್ರಮಾಂಕ 141/2015 ಕಲಂ 110 116(3)  151 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಹಿರಿಯಡ್ಕ:  ದಿನಾಂಕ: 13/07/2015 ರಂದು ಮಧ್ಯಾಹ್ನ   ಸುಮಾರು 2:30 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಬೊಮ್ಮರಬೆಟ್ಟು   ಗ್ರಾಮದ  ಬಜೆ ರಸ್ತೆಯ ಶೇಡಿಗುರಿ ಎಂಬಲ್ಲಿ ಅಂಕುಡೊಂಕಿನ ತಿರುವಿನ ರಸ್ತೆಯಲ್ಲಿ ಫಿರ್ಯಾದುದಾರರಾದ ದಿನೇಶ್‌ ಕುಲಾಲ್‌ ಪ್ರಾಯ: 33 ವರ್ಷ ತಂದೆ: ದಿ.ಶೇಖರ್‌ ಕುಲಾಲ್‌ ವಾಸ: ಕೊಳಕೆಬೈಲು ಮನೆ, ಹೊಸಂಗಡಿ, ಪೆರ್ಡೂರು ಗ್ರಾಮ,   ಉಡುಪಿ  ಇವರು ಆರೋಪಿ ಚಲಾಯಿಸುತ್ತಿದ್ದ ಕೆಎ 20 ಇಎ 3813 ನೇ ಯಮಹಾ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿರುವಾಗ ಆರೋಪಿತನು ಅಂಕುಡೊಂಕಿನ ತಿರುವಿನ ರಸ್ತೆಯಲ್ಲಿ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಬೈಕ್‌ ನಿಯಂತ್ರಣ ತಪ್ಪಿ ಎದುರುನಿಂದ ಬರುತ್ತಿದ್ದ ಕೆಎ 20 ಬಿ 9484 ನೇ 407 ಟೆಂಪೋದ ಬಲ ಭಾಗಕ್ಕೆ ಡಿಕ್ಕಿ ಆಗಿ ಇಬ್ಬರೂ  ರಸ್ತೆಗೆ ಬಿದ್ದು ಪಿರ್ಯಾದಿಗೆ  ಎಡ ಭುಜದ ಬಳಿ  ತೀವೃ ತರಹದ ಗುದ್ದಿದ ಒಳ ಜಖಂ ಆಗಿ ಬಲಕಾಲಿನ ಹೆಬ್ಬೆರಳು ಜಜ್ಜಿ ಹೋಗಿರುತ್ತದೆ. ಮತ್ತು ಆರೋಪಿಗೆ ಕುತ್ತಿಗೆಯ ಹಿಂಬದಿ ತೀವೃ ತರಹದ ಗುದ್ದಿದ ಒಳನೋವು ಆಗಿ ಬಲ ಕೈ ಮೂಳೆ ಮುರಿತವಾಗಿ ಸ್ವತ: ಗಾಯಗೊಂಡಿರುತ್ತಾರೆ.  ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 72/2015 U/s 279,338 ಐ,ಪಿ,ಸಿರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಹಿರಿಯಡ್ಕ: ದಿನಾಂಕ: 13/07/2015 ರಂದು ಸಂಜೆ ಸುಮಾರು 4.15  ಗಂಟೆ ಸಮಯಕ್ಕೆ ಉಡುಪಿ ತಾಲೂಕು ಅಂಜಾರು  ಗ್ರಾಮದ ಓಂತಿಬೆಟ್ಟು ರಿಕ್ಷಾ ಸ್ಟಾಂಡ್‌ ಬಳಿ  ಫಿರ್ಯಾದುದಾರರಾದ  ಶ್ರೀ ಶ್ರೀದರ ಆಚಾರ್ಯ  ಪ್ರಾಯ:54   ವರ್ಷ ತಂದೆ: ದಿ: ಭುಜಂಗ ವಾಸ: ಬುಕ್ಕಿಗುಡ್ಡೆ ಪೆರ್ಡೂರು ಗ್ರಾಮ  ಉಡುಪಿ ಇವರು ಅಂಜಾರು  ಕಡೆಗೆ ಹೋಗಲು ರಸ್ತೆಯ ಬದಿ ನಡೆದುಕೊಂಡು ಹೋಗುವಾಗ ಆರೋಪಿಯು ತನ್ನ ಕೆಎ20ಎಕ್ಸ್3436 ನೇ ಹೋಂಡಾ  ಬೈಕನ್ನು ಉಡುಪಿ ಕಡೆಯಿಂದ ಹಿರಿಯಡ್ಕ  ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರ ಎಡ ಬದಿಗೆ  ಡಿಕ್ಕಿ ಹೊಡೆದ ಪರಿಣಾಮ ಎಡಕಾಲಿನ ಕೋಲುಭಾಗಕ್ಕೆ ಮೂಳೆ ಮುರಿತವಾಗಿರುತ್ತದೆ.ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/2015 U/s 279,338 ಐ,ಪಿ,ಸಿರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ ಗ್ರಾಮಾಂತರ: ದಿನಾಂಕ: 13/07/2015 ರಂದು  ಬೆಳಿಗ್ಗೆ 8:30 ಗಂಟೆಗೆ  ಪಿರ್ಯಾದುದಾರರಾದ  ಸುಶೀಲ ಶೆಟ್ಟಿಗಾರ್ (50)  ಗಂಡ: ಕೃಷ್ಣ ಶೆಟ್ಟಿಗಾರ್ ವಾಸ: ಜತ್ತಿಬೆಟ್ಟು ಮನೆ, ಈದು ಗ್ರಾಮ ಮತ್ತು ಅಂಚೆ  ಕಾರ್ಕಳ ತಾಲೂಕು ಇವರು  ಕೆಲಸದ ಬಗ್ಗೆ ಕಾರ್ಕಳ ತಾಲೂಕು ಈದು ಗ್ರಾಮದ   ಮಂಜೊಟ್ಟು ಕಾಲು ಸಂಕದ ಬಳಿ  ರಸ್ತೆಯ  ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ್ ಸೈಕಲ್ ನಂಬ್ರ KA12R 4702 ನೇಯದನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ರಸ್ತೆಗೆ  ಬಿದ್ದು ಸಾದಾ ಸ್ವರೂಪದ ರಕ್ತಗಾಯವಾಗಿರುತ್ತದೆ. ಸುಶೀಲ ಶೆಟ್ಟಿಗಾರ್ ರವರು ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 119 /2015 U/s 279,337 ಐ,ಪಿ,ಸಿರಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ ನಗರ : ಫಿರ್ಯಾದಿದಾರರಾದ ಪ್ರದೀಪ ಕಾಮತ್‌‌ (27)  ತಂದೆ ದಿ ಮಂಜುನಾಥ ಕಾಮತ್‌ ವಾಸ: 7-1-30 ಸಿ ಹಳೇ ಬೆಂಕಿ ಪಟ್ಟಿಗೆ ಕಾರ್ಖಾನೆ ಹತ್ತಿರ ಚಿಟ್ಪಾಡಿ ಉಡುಪಿ 76 ಬಡಗುಬೆಟ್ಟು ಇವರು  ತಾಯಿ ಶ್ರೀಮತಿ 65 ಎಂಬವರೊಂದಿಗೆ ಚಿಪ್ಪಾಟಿಯ ಹಳೆ ಬೆಂಕಿ ಪೆಟ್ಟಿಗೆ ಕಾರ್ಖಾನೆ ಹತ್ತಿರ ವಾಸವಾಗಿದ್ದು ಪಿರ್ಯಾದಿದಾರರು ಹಾಗೂ ಅವರ ಮನೆಯವರು  ದಿನಾಂಕ 13/07/2015 ರಂದು ರಾತ್ರಿ 9:30 ಗಂಟೆಗೆ ಊಟ ಮಾಡಿ ಮಲಗಿದ್ದು ದಿನಾಂಕ 14/07/2015 ರಂದು ರಾತ್ರಿ 2:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ತಾಯಿಯವರಾದ ಶ್ರೀಮತಿರವರು ಉಸಿರಾಟದ ತೊಂದರೆ ಪಡುತ್ತಿರುವುದನ್ನು ಕಂಡು ಪಿರ್ಯಾದಿದಾರರು ತನ್ನ ವಾಹನದಲ್ಲಿ ಉಡುಪಿ ಟಿ ಎಂ ಎ ಪೈ ಆಸ್ವತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಮೃತ ಶ್ರೀಮತಿರವರು  ಹೃದಯಾಘಾತದಿಂದ ಅಥವಾ ಯಾವುದೇ  ಖಾಯಿಲೆಯಿಂದ  ಮೃತ ಪಟ್ಟಿರುವುದಾಗಿದೆ. ಎನ್ನುದಾಗಿ ಪ್ರದೀಪ ಕಾಮತ್‌ ರವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 35/2015 U/s 174 ಸಿ.ಆರ್‌,ಪಿ,ಸಿರಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ:

  • ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣಾ ಸರಹದ್ದಿಗೆ ಸೇರಿದ ಬೆಳ್ಮಣ್ ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ 13.07.2015 ರಂದು ಮಧ್ಯಾಹ್ನ 12:00 ಗಂಟೆಗೆ  ಈ ಕೇಸಿನ ಪಿರ್ಯಾದಿ ದೇವಸ್ಥಾನ ಅರ್ಚಕರಾದ  ಶ್ರೀ ನಾಗೇಂದ್ರ ಭಟ್ ರವರು ದೇವರ ಪೂಜೆ ಮಾಡಿ ದೇವಸ್ಥಾನದ ಮುಂಬಾಗಿಲು ಮತ್ತು ಗರ್ಭ ಗುಡಿಗೆ ಬೀಗ ಹಾಕಿ ಹೋಗಿದ್ದು ಮತ್ತೆ ಸಂಜೆ 6:00 ಗಂಟೆಗೆ ವಾಪಾಸ್ಸು ದೇವಾಸ್ಥಾನಕ್ಕೆ ಪೂಜೆ ಮಾಡಲು ಬಂದು ನೋಡಿದಾಗ ದೇವಸ್ಥಾನದ ಮುಂಬಾಗಿಲಿಗೆ ಹಾಕಿದ್ದ ಬೀಗದ ಬದಲು ಬೇರೆ ಬೀಗವನ್ನು ಹಾಕಿದ್ದು ಅದನ್ನು ದೇವಸ್ತಾನದಲ್ಲಿದ ಭಕ್ತರ ಸಹಾಯದಿಂದ ಒಡೆದು ಒಳಗೆ ಹೋಗಿ ನೋಡಲಾಗಿ ಗರ್ಭ ಗುಡಿಯ ಬಾಗಿಲಿಗೆ ಹಾಕಿದ್ದ ಬೀಗದ ಚಿಲಕದ ಕೊಂಡಿಯನ್ನು ಯಾರೋ ಮುರಿದು ಒಳಗೆ ಹೋಗಿ ಗರ್ಭ ಗುಡಿಯ ಶ್ರೀ ದುರ್ಗಾ ಪರಮೇಶ್ವರಿ ದೇವರ ಮೈ ಮೇಲೆಯಿದ್ದ ನಿತ್ಯ ಅಲಂಕಾರದ ಬೆಳ್ಳಿಯ ಮತ್ತು ಚಿನ್ನದ ಒಡೆವೆಗಳಾದ 1) ಬೆಳ್ಳಿಯ ಕಿರೀಟ ಸುಮಾರು 450 ಗ್ರಾಂ ಹಾಗೂ ಮಧ್ಯದಲ್ಲಿ ಶ್ರೀ ಎಂದು ಇದ್ದ 1 ಪವನ ಬಂಗಾರದ ತಗಡು 2) ಬೆಳ್ಳಿಯ 50 ಗ್ರಾಂ ತೂಕದ ದೇವರ ದೃಷ್ಟಿಯ ಕಣ್ಣುಗಳು ಮೂಗು ಹಣೆಯಲ್ಲಿ ನಾಮ 3) ಬೆಳ್ಳಿಯ ಸೊಂಟ ಪಟ್ಟಿ ಸುಮಾರು 250 ಗ್ರಾಂ ಇದರ ಮದ್ಯದಲ್ಲಿ ಹೂವಿನ ಚಿತ್ರವಿರುವ 1 ಪವನ ಬಂಗಾರದ ತಗಡು 4) ಬಂಗಾರದ ಸುಮಾರು 3 ಪವನ ತೂಕದ ಮಿಶ್ರಿ ಸರ 5)   ಬಂಗಾರದ  ಸುಮಾರು 1.1/2 ಪವನ ತೂಕದ  1 ಎಳೆಯ ಸರ 6)ಬಂಗಾರದ  ಸುಮಾರು 5 ಪವನ ತೂಕದ  2 ಎಳೆಯ ಅವಲಕ್ಕಿ  ಸರ 7) ಬಂಗಾರದ  ಸುಮಾರು 3.1/2 ಪವನ ತೂಕದ 3 ಎಳೆಯ  ಸರ 8) ಕರಿಮಣಿ ಸರ 2 ತಾಳಿಇದ್ದು ಸುಮಾರು 2 ಪವನ ಬಂಗಾರದ ಸರ 9) ಬಂಗಾರದ  ಸುಮಾರು 2.1/2 ಪವನ ತೂಕದ 5 ಪದಕವಿದ್ದ   ಸರ  ಇದರ ಒಟ್ಟು ಅಂದಾಜು ಬೆಲೆ ಸುಮಾರು 3 ಲಕ್ಷ ರೂಪಾಯಿ ಬೆಲೆಯ ಮೇಲಿನ ಬೆಳ್ಳಿ ಮತ್ತು ಬಂಗಾರದ ಒಡೆವೆಗಳನ್ನು ಯಾರೋ ಕಳ್ಳರು ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 6:00 ಗಂಟೆ ಒಳಗೆ ದೇವಸ್ಥಾನದ ಬೀಗ ಮುರಿದು ಕಳವು ಮಾಡಿಕೊಂಡು ಹೊಗಿರುತ್ತಾರೆ ಎಂಬುದಾಗಿ ನಾಗೇಂದ್ರ ಭಟ್ (30) ತಂದೆ: ಕರುಣಾಕರ ವಾಸ: ವಿಘ್ನೇಶ್ ಭಟ್ ,ದೇವಸ್ಯ ಮನೆ, ಬೆಳ್ಮಣ್  ಗ್ರಾಮ ಕಾರ್ಕಳ ತಾಲೂಕು  ರವರು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ  ಅಪರಾಧ ಕ್ರಮಾಂಕ 120/15 ಕಲಂ 454,380 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. 

ಜೀವ ಬೆದರಿಕೆ ಪ್ರಕರಣ:

  • ಶಂಕರ ನಾರಾಯಣ: ದಿನಾಂಕ 13.07.15 ರಂದು 15:00 ಘಂಟೆಗೆ  ಆರೋಪಿ ಆರೋಪಿ ಶೇಖರ ಶೆಟ್ಟಿ  ಅರೆಕಲ್ಲು ಮನೆ ಯಡಮೊಗ್ಗೆ  ಗ್ರಾಮಇವರು ಫಿರ್ಯಾಧಿ ಶೇಖರ  ಶೆಟ್ಟಿ ಪ್ರಾಯ  ತಂದೆ. ದಿ. ಶೀನಪ್ಪ ಶೆಟ್ಟಿ ವಾಸ. ಸಾಲಿಗದ್ದೆ ಮನೆ ಯಡಮೊಗ್ಗೆ  ಗ್ರಾಮ ಕುಂದಾಪುರ  ತಾಲೂಕು   ಇವರ ಮನೆಯಾದ ಕುಂದಾಫುರ  ತಾಲೂಕಿನ  ಯಡಮೊಗ್ಗೆ   ಗ್ರಾಮದ ಸಾಲಿಗದ್ದೆ ಎಂಬಲ್ಲಿಗೆ ಬಂದು  ತೆಂಗಿನ ಗಿಡ ಕೇಳಿದ್ದು. ಈ ಸಮಯ   ಫಿರ್ಯಾಧಿದಾರರು 1 ಸಣ್ಣದು ಹಾಗೂ ಇನ್ನೊಂದು ದೊಡ್ಡ ಗಿಡ ತೆಗೆದುಕೊಂಡು  ಹೋಗಿ ಎಂದು ಹೇಳಿದಾಗ ಆರೋಪಿಯು  2 ದೊಡ್ಡ ತೆಂಗಿನ ಗಿಡ ಕೊಡಬೇಕು ಎಂದು ಹೇಳಿದಾಗ ಫಿರ್ಯಾಧಿದಾರರು  2 ದೊಡ್ಡ ತೆಂಗಿನ ಗಿಡ ಕೊಡಲು ನಿರಾಕರಿಸಿದಾಗ  ಆರೋಫಿಯು ಕೋಗೊಂಡು  ಫಿರ್ಯಾಧಿದಾರರಿಗೆ ಮರದ ದೊಣ್ಣೆಯಿಂದ ಬಲಕಣ್ಣಿನ ಬಳಿ ಹಾಗೂ ಬಲ ಹಣೆಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು  ಜೀವ ಬೆದರಿಕೆ   ಹಾಕಿರುವುದಾಗಿ ಶೇಖರ  ಶೆಟ್ಟಿ ರವರು ಶಂಕರ ನಾರಾಯಣ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಕ್ರಮಾಂಕ 153 /15 ಕಲಂ: 324,504,506 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. 

No comments: