Tuesday, July 14, 2015

Daily Crime Reports As On 14/07/2015 At 07:00 Hrs

ಅಪಘಾತ ಪ್ರಕರಣ
  • ಬೈಂದೂರು: ಪಿರ್ಯಾದಿದಾರರಾದ ನಾಗೇಶ ಜೋಗಿ (42) ತಂದೆ:ಅಣ್ಣಪ್ಪಯ್ಯ ಜೋಗಿ, ವಾಸ: ಕಡೆಮನೆ, ಹಳಗೇರಿ ತೆಂಕಬೆಟ್ಟು, ಕಂಬದಕೋಣೆ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 13/07/2015 ರಂದು ಬೆಳಿಗ್ಗೆ 10:30 ಗಂಟೆಗೆ ಅವರ KA 20 W 1506 ನೇ ಮೋಟಾರ್‌ ಸೈಕಲ್‌ನಲ್ಲಿ  ಕಂಬದಕೋಣೆ ಕಡೆಯಿಂದ ಬೈಂದೂರು ಕಡೆಗೆ ಸವಾರಿ ಮಾಡಿಕೊಂಡು  ಕಂಬದಕೋಣೆ ಹೈಸ್ಕೂಲ್‌ನಿಂದ ಸ್ವಲ್ಪ ಮುಂದೆ ಮಂಜುನಾಥ ಬಳೆಗಾರರ ಮನೆಯ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲುಪುತ್ತಿದ್ದಂತೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ KA 16 M 3904 ನೇ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೋ ವಾಹನವನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ರಸ್ತೆಯ ತೀರ ಬಲಬದಿಗೆ ಚಲಾಯಿಸಿ ನಾಗೇಶ ಜೋಗಿಯವರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ನಾಗೇಶ ಜೋಗಿಯವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಅವರ ಹಣೆ, ಮುಖಕ್ಕೆ ರಕ್ತಗಾಯವಾಗಿದ್ದು, ಎಡಬದಿಯ ಭುಜಕ್ಕೆ ಹಾಗೂ ಎಡಕಾಲಿಗೆ ಒಳ ಜಖಂ ಆಗಿರುತ್ತದೆ.ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 192/2015 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಕೋಟ: ದಿನಾಂಕ:10/07/2015 ರಂದು ಪಿರ್ಯಾದಿದಾರರಾದ ಸಿ.ಹರೀಶ್ ರಾಧಾಕೃಷ್ಣ ನಾಯಕ್ (42) ತಂದೆ:ಸಿ.ರಾಧಾಕೃಷ್ಣ ಶೇಷಗಿರಿ ನಾಯಕ್, “ವಾತ್ಸಲ್ಯ” ಕಾರ್ಕಡ ಗ್ರಾಮ ಸಾಲಿಗ್ರಾಮ ಇವರ ಅಕ್ಕ ರಜನಿ ಕಾಮತ್‌ರವರು ಉಡುಪಿ ತಾಲೂಕು ಚಿತ್ರಪಾಡಿ ಗ್ರಾಮದಲ್ಲಿರುವ ಅವರ ಮನೆಗೆ ಬೀಗ ಹಾಕಿ ಅವರ ಅಕ್ಕನ ಮಗಳಾದ ರಂಜಿತಳಿಗೆ ಮನೆ ಕೀಯನ್ನು ನೀಡಿ ಗಂಡನೊಂದಿಗೆ  ತಿರುಪತಿಗೆ ಯಾತ್ರೆಗೆ ಹೋಗಿದ್ದು, ದಿನಾಂಕ:13/07/2015 ರಂದು ಸಂಜೆ 4.30 ಗಂಟೆಗೆ ರಂಜಿತಾಳು ರಜನಿಯವರ ಮನೆಗೆ ನೋಟ್ ಪುಸ್ತಕ ತರಲೆಂದು ಬಂದಾಗ ಮನೆಯ ಎದುರಿನ ಬಾಗಿಲು ಮುರಿದಿದ್ದನ್ನು ಸಿ.ಹರೀಶ್ ರಾಧಾಕೃಷ್ಣ ನಾಯಕ್ ರವರಿಗೆ ತಿಳಿಸಿದಾಗ, ಅವರು ಬಂದು ನೋಡುವಾಗ ಒಳಗಿನ ಬೆಡ್‌ರೂಂನ ಬಾಗಿಲು ತೆರೆದಿದ್ದು, ಒಳಗಿದ್ದ ಕಬ್ಬಿಣದ ಕಪಾಟನ್ನು ಮಲಗಿಸಿದ್ದು, ಅದರ ಲಾಕರ್‌ನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮುರಿದು ಅದರಲ್ಲಿದ್ದ ನಗದು ಹಣ ರೂ.25,000/- ಹಾಗೂ ಲಕ್ಷ್ಮೀ ಪೆಂಡೆಂಟ್- 4 ಗ್ರಾಂ,ವೈಶ್ಯ ಬ್ಯಾಂಕ್‌ನ ಚಿನ್ನದ ನಾಣ್ಯ –4 ಗ್ರಾಂ, ಮುತ್ತಿನ ಸರ- 48 ಗ್ರಾಂ, ಮುತ್ತಿನ ಬಳೆ-32 ಗ್ರಾಂ, ಸಾದಾ ಬಳೆ(4) – 48 ಗ್ರಾಂ, ನವರತ್ನ ಹರಳಿರುವ ಉಂಗುರಗಳು(2)- 16 ಗ್ರಾಂ,1 ಜೊತೆ ಕಿವಿ ಓಲೆ- 4 ಗ್ರಾಂ, 2 ಸಾದಾ ಉಂಗುರ – 8 ಗ್ರಾಂ, 2 ಮಾಟಿ-2 ಗ್ರಾಂ ಹಾಗೂ ತುಳಸಿ ಮಣಿಯ ಕಂಠಿ ಹಾರ-24 ಗ್ರಾಂ ಒಟ್ಟು ಚಿನ್ನಾಭರಣ 24 ಪವನ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಚಿನ್ನಾಭರಣದ ಅಂದಾಜು ಮೌಲ್ಯ ರೂ.4 ಲಕ್ಷ ಆಗಿರುತ್ತದೆ.ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 168/2012 ಕಲಂ: 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಮಹಿಳೆ ಕಾಣೆ  ಪ್ರಕರಣ
  • ಶಂಕರನಾರಾಯಣ: ದಿನಾಂಕ 12/07/15 ರಂದು ಬೆಳಿಗ್ಗೆ 08:30 ಘಂಟೆಯಿಂದ 15:30 ಘಂಟೆಯ ಮಧ್ಯಾವಧಿಯಲ್ಲಿ  ಕುಂದಾಫುರ ತಾಲೂಕಿನ ಬೆಳ್ವೆ ಗ್ರಾಮದ ಬೆಳ್ವೆ ದೇವಸ್ಥಾನದ ಬಳಿಯ ಪಿರ್ಯಾದಿದಾರರಾದ ರಾಜೇಂದ್ರ ಐತಾಳ (27) ತಂದೆ:ದಿ.ಸತ್ಯನಾರಾಯಣ ಐತಾಳ ವಾಸ:ದೇವಸ್ಥಾನದ ಬಳಿ ಬೆಳ್ವೆ ಇವರ ಹೆಂಡತಿ ಶ್ರೀಮತಿ ರಚನಾ @ ದುರ್ಗಾ (20) ಇವರು ಮನೆಬಿಟ್ಟು ಹೋದವರು ವಾಪಾಸು ಮನೆಗೆ  ಬಾರದೆ ಹಾಗೂ ತವರು ಮನೆಯಾದ ಬೆಂಗಳೂರಿಗೂ  ಹೋಗದೇ ಕಾಣೆಯಾಗಿರುತ್ತಾರೆ.ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 152/15 ಕಲಂ:ಮಹಿಳೆ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: