Monday, July 13, 2015

Daily Crime reports As On 13/07/2015 At 07:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಗಂಗೊಳ್ಳಿ:ಪಿರ್ಯಾದಿದಾರರಾದ ಸಂತೋಷ ದೇವಾಡಿಗ ತಂದೆ:ನಾರಾಯಣ ದೇವಾಡಿಗ, ಮಾಚಿ ಮನೆ ನಾಡಗುಡ್ಡೆಯಂಗಡಿ ಗ್ರಾಮ, ಕುಂದಾಪುರ ತಾಲೂಕು ಇವರ ಅಜ್ಜ ಅಣ್ಣಪ್ಪ ದೇವಾಡಿಗ (70) ಎಂಬವರು ದಿನಾಂಕ  12/07/2015 ರಂದು ಅವರ ಮನೆಯಿಂದ ಬೇಸಾಯದ ಗದ್ದೆ ನೋಡಲು ನಾಡಾ ಗ್ರಾಮದ ವೆಂಕಟರಮಣ ದೇವಸ್ಥಾನದ ಬಳಿಯ ಕೆರೆಯ ಬದಿಯ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಮದ್ಯಾಹ್ನ 3.30 ಗಂಟೆಯಿಂದ 5.00 ಗಂಟೆಯ ನಡುವೆ ಆಕಸ್ಮಿಕವಾಗಿ ಕಾಲು ಜಾರಿ ಕರೆಯ ನೀರಿಗೆ ಬಿದ್ದು ಮೃತಪಟ್ಟಿರುತ್ತಾರೆ.ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಯು.ಡಿ.ಆರ್. ಕ್ರಮಾಂಕ 10/2015 ಕಲಂ:174 ಸಿಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: