ಕಳವು ಪ್ರಕರಣ
- ಕಾಪು: ದಿನಾಂಕ:11/07/2015 ರಂದು ರಾತ್ರಿ 08.30 ಗಂಟೆಯಿಂದ ದಿನಾಂಕ: 12/07/2015 ರ ಬೆಳಿಗ್ಗೆ 7.30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಉದ್ಯಾವರ ಗಣಪತಿ ದೇವಸ್ಥಾನದ ಬಳಿ ಇರುವ ಪಿರ್ಯಾದಿದಾರರಾದ ಶ್ರೀಮತಿ ಬೇಬಿ (55), ಗಂಡ: ನಾಗೇಶ್ ಕೋಟ್ಯಾನ್, ವಾಸ: ಗರಡಿ ಬಳಿ, ಬೊಳ್ಜೆ, ಉದ್ಯಾವರ ಗ್ರಾಮ, ಉಡುಪಿರವರ ಜನರಲ್ ಸ್ಟೋರ್ನ ಶಟರ್ನ ಬೀಗ ಮುರಿದು ಒಳ ಪ್ರವೇಶಿಸಿ ಒಳಗೆ ಕಪಾಟಿನಲ್ಲಿದ್ದ ನೀಮ ಸ್ಯಾಂಡಲ್ ಸೋಪ್ -6, ಕೋಲ್ಗೇಟ್ ಟೂಥ್ ಪೇಸ್ಟ್ (175 ಗ್ರಾಂ)- 2, ಗೋಲ್ಟ್ ಫ್ಲೇಕ್ ಸಿಗರೇಟ್ ಪ್ಯಾಕೆಟ್- 5, ಟೆನ್ನಿಸ್ ಬಾಲ್- 2, ಎವ್ರಿಡೇ ಬ್ಯಾಟರಿ ಶೆಲ್- 9, ಫೆವಿಕಾಲ್ ಗಂ ಟ್ಯೂಬ್- 9, ಗೋದ್ರೆಜ್ ಹೇರ್ ಡೈ- 7, ಬೂಸ್ಟ್ ಪ್ಯಾಕೆಟ್ – 15, ಫೆವಿ ಕ್ವಿಕ್- 5 ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 1044/- ಆಗಬಹುದು ಎಂಬುದಾಗಿ ಶ್ರೀಮತಿ ಬೇಬಿರವರು ನೀಡಿದ ದೂರಿನಂತೆ ಕಾಫುಪೊಲೀಸ್ ಠಾಣಾ ಅಪರಾಧ ಕ್ರಮಾಂಕ 140/2015 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ
ಪ್ರಕರಣ
- ಕುಂದಾಪುರ: ದಿನಾಂಕ 12/07/2015 ರಂದು ಸಮಯ ಸುಮಾರು ಬೆಳಿಗ್ಗೆ 11:30 ಗಂಟೆಗೆ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಹಳೆ ಬಸ್ ನಿಲ್ದಾಣದ ಬಳಿಯ ಮೀನುಮಾರ್ಕಟ್ ಕ್ರಾಸ್ ಹತ್ತಿರ ಪುರಸಭಾ ರಸ್ತೆಯಲ್ಲಿ ಆಪಾದಿತ ಎರಿಕ್ ಡಿ ಸೋಜಾ ಎಂಬವರು KA 20 U 714 ನೇ ಬೈಕನ್ನು ಕುಂದಾಪುರ ಹೊಸ ಬಸ್ ನಿಲ್ದಾಣದ ಕಡೆಯಿಂದ ಶಾಸ್ತ್ರಿ ಸರ್ಕಲ್ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ ಅದೇ ದಿಕ್ಕಿನಲ್ಲಿ ಅಬ್ದುಲ್ ಖಾದರ್ ಎಂಬವರು ಶಾಸ್ತ್ರಿ ಸರ್ಕಲ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಬಿದ್ದು ಅಬ್ದುಲ್ ಖಾದರ್ ಅವರ ತಲೆಗೆ, ಎಡಕೆನ್ನಗೆ, ಎರಡೂ ಕೈ ಹಾಗೂ ಕಾಲುಗಳಿಗೆ ರಕ್ತಗಾಯ ಮತ್ತು ಒಳ ನೋವು ಹಾಗೂ ಅರಿಕ್ ಡಿ ಸೋಜಾ ರವರ ಬಲ ಕೈ ಹಾಗೂ ಬಲಕಾಲಿಗೆ ಗಾಯ ನೋವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಅಬ್ದುಲ್ ಖಾದರ್ ರವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲುಮಾಡಲಾಗಿದೆ ಎಂಬುದಾಗಿ ಅಸ್ಗರ್ ಅಲಿ (50) ತಂದೆ :ಶೇಕ್ ಮೀರಾ ಸಾಹೇಬ್ ವಾಸ: ಜುಮ್ಮಾ ಮಸೀದಿ ರಸ್ತೆ, BEO Office ಎದುರು, ಕುಂದಾಪುರ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 84/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. .
No comments:
Post a Comment