Sunday, July 12, 2015

Daily Crime reports As On 12/07/2015 At 17:00 Hrsಅಪಘಾತ ಪ್ರಕರಣ
  • ಹಿರಿಯಡ್ಕ: ದಿನಾಂಕ 12/07/15 ರಂದು ಬೆಳಿಗ್ಗೆ 10:25 ಗಂಟೆಗೆ ಪಿರ್ಯಾದಿದಾರರಾದ ಪ್ರಭಾಚಂದ್ರ ಜೈನ್‌ (37) ತಂದೆ:ಗುಣಪಾಲ ಅರಿಗ ವಾಸ; ಪದ್ಮನಿಲಯ, ಪಜಿರೆ ಅಂಚೆ, ಗ್ರಾಮ ವೇಣೂರು ಬೆಳ್ತಂಗಡಿ ತಾಲೂಕು ಇವರು ಕೆಎ 20 ಎ 7837 ನೇ ಬಸ್ಸಿನಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಾ ಹಿರಿಯಡ್ಕ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿರುವಾಗ ಬೊಮ್ಮರಬೆಟ್ಟು ಗ್ರಾಮದ ಕೊಂಡಾಡಿ ಶಾಲೆ ಬಳಿ ತಲುಪುವಾಗ  ಕಾರ್ಕಳ - ಉಡುಪಿ ರಸ್ತೆಯಲ್ಲಿ ಕೆಎ 20 ಆರ್‌ 6263 ನೇ ಮೋಟಾರ್‌ ಬೈಕನ್ನು ಅದರ ಸವಾರ ಹರೀಶ ಶೆಟ್ಟಿ ಎಂಬವರು ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ, ರಸ್ತೆಯಲ್ಲಿ ಬೇರೆ ವಾಹನವನ್ನು ಓವರ್‌ ಟೇಕ್‌ ಮಾಡುತ್ತಾ,  ರಸ್ತೆಯ ತೀರಾ ಬಲಬದಿಗೆ ಬಂದು ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಹರೀಶ ಶೆಟ್ಟಿರವರು ತೀವ್ರ  ಜಖಂ ಗೊಂಡಿದ್ದು, ಅವರನ್ನು ಕೂಡಲೇ 108 ಅಂಬ್ಯುಲೆನ್ಸ್‌ ವಾಹನದಲ್ಲಿ ಹಿರಿಯಡ್ಕ ಆಸ್ಪತ್ರೆಗೆ ಕೊಂಡು ಹೋಗಿ ವೈದ್ಯರಿಗೆ ತೋರಿಸಿದಾಗ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ, ಈ ಬಗ್ಗೆ  ಹಿರಿಯಡ್ಕ ಪೋಲಿಸ್ ಠಾಣೆ ಅಪರಾಧ  ಕ್ರಮಾಂಕ 70 /15 ಕಲಂ 279 304 (A) ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.         
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕಾರ್ಕಳ:ಪಿರ್ಯಾದಿದಾರರಾದ ಸುಶೀಲ,(5೦) ಬೆಳ್ತಂಗಡಿ ತಾಲೂಕು, ಧರ್ಮಸ್ಥಳ  ಗ್ರಾಮ ಅಂಚೆ ಕನ್ಯಾಡಿ ಇವರ ಗಂಡ ಚೆನ್ನಪ್ಪ ಎಂಬವರೊಂದಿಗೆ ತನ್ನ ಮಗಳ ಮನೆಯಾದ ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಎದುರುಗುಡ್ಡೆ ಎಂಬಲ್ಲಿಗೆ ಬಂದಿದ್ದು, ಚೆನ್ನಪ್ಪರವರಿಗೆ ದಿನಾಂಕ:11/07/2015 ರಂದು ಬೆಳಿಗ್ಗೆ 9:00 ಗಂಟೆಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಸಂಜೆ ಸುಮಾರು 6:30 ಗಂಟೆಗೆ ವೈದ್ಯರಲ್ಲಿ  ಹೋಗಲು ಮನೆಯಿಂದ ನಡೆದುಕೊಂಡು ಬರುವಾಗ ಕಾರ್ಕಳ ತಾಲೂಕು ದುರ್ಗಾ ಗ್ರಾಮ ಮಸೀದಿ ಬಳಿ ಕುಸಿದು ಬಿದ್ದರು, ನಂತರ  ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರು  ಪರಿಕ್ಷೀಶಿಸಿ ಚೆನ್ನಪ್ಪರವರು  ಹೃದಯಾಘಾತದಿಂದ  ಮೃತಪಟ್ಟಿದ್ದಾರೆ ಎಂದು ತಿಳಿಸಿರುತ್ತಾರೆ, ಈ ಬಗ್ಗೆ  ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಯು.ಡಿ.ಆರ್ ನಂಬ್ರ 16/15 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಹಿರಿಯಡ್ಕ: ಪಿರ್ಯಾದಿದಾರರಾದ ವೀಣಾ ನಾಯಕ್‌ (29) ಗಂಡ:ನಿತ್ಯಾನಂದ ಪ್ರಭು ವಾಸ:ಕಾಜರಗುತ್ತು, ಶ್ರೀನಿವಾಸ ನಗರ, ಅಂಜಾರು ಗ್ರಾಮ ರವರ ಅಣ್ಣ ರಾಘವೇಂದ್ರ ನಾಯಕ್‌ (31) ರವರು ವಿಪರೀತ ಮದ್ಯ ವೇಸನಿಯಾಗಿದ್ದು, ಕುಡಿತದ ಚಟ ಬಿಡಿಸಲು ಸೂಕ್ತ ಚಿಕಿತ್ಸೆ ಕೊಡಿಸಿದರೂ ಮದ್ಯ ಸೇವನೆ ಚಟ ಬಿಡದೆ ದಿನಾಂಕ:11/07/2015 ರಂದು ಸಂಜೆ 06:00 ಗಂಟೆಯ ಪೂರ್ವದ ವೇಳೆಯಲ್ಲಿ ಅಂಜಾರು ಗ್ರಾಮದ ಶ್ರೀನಿವಾಸ ನಗರದ ತನ್ನ ಮನೆಯಲ್ಲಿ ಮಲ್ಲಿಗೆ ಗಿಡಕ್ಕೆ ಹಾಕುವ ರಾಸಾಯನಿಕ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ  ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ  ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 11/07/15 ರಂದು ರಾತ್ರಿ 10:55 ಗಂಟೆಗೆ ಮೃತಪಟ್ಟಿರುತ್ತಾರೆ, ಈ ಬಗ್ಗೆ  ಹಿರಿಯಡ್ಕ ಪೋಲಿಸ್ ಠಾಣೆ ಯು.ಡಿ.ಆರ್ ನಂಬ್ರ 13 /2015  ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: