Saturday, July 11, 2015

Daily Crime reports As On 11/07/2015 At 7:00 Hrs

ಅಪಘಾತ ಪ್ರಕರಣ
  • ಪಡುಬಿದ್ರಿ :ದಿನಾಂಕ. 10/07/2015 ರಂದು ಬೆಳಿಗ್ಗೆ 9:15 ಗಂಟೆಗೆ ಜಿಎ 08 ಕೆ 1392 ನೇ ಸ್ಕೋರ್ಪಿಯೋ ಕಾರಿನ ಚಾಲಕ ಮಹಮ್ಮದ್ ಹನೀಫ್.ಕೆ.ಎ ಎಂಬವರು ಕಾರನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಹೆಜಮಾಡಿ ಗ್ರಾಮದ ಕನ್ನಂಗಾರ್ ಜಂಕ್ಷನ್ ನಿಂದ ಸ್ವಲ್ಪ ಮುಂದಕ್ಕೆ  ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ  66 ರ ಎಡ ಬಾಗದಲ್ಲಿರುವ ಸಿಮೆಂಟ್ ಮೋರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದು,ಕಾರಿನಲ್ಲಿದ್ದ ಪಿರ್ಯಾದಿದಾರರಾದ ಕೆ.ಎಂ.ಆಲಿ (54) ತಂದೆ:ಮಹಮ್ಮದ್‌  ಹಾಜಿ,ವಾಸ:ಇಸ್ಮಾಯಿಲ್ ಮಂಜಿಲ್ ಕೆ.ಕೆ ಪುರಂ ಹೌಸ್ ಮುಳಿಯಾರ್ ಗ್ರಾಮ ಮತ್ತು ಅಂಚೆ ಕಾಸರಗೋಡು ತಾಲೂಕು,ಕೇರಳ ಜಿಲ್ಲೆ ಇವರ ಬಲಕೈ ಹಾಗೂ ಬಲಕಾಲಿಗೆ ಗುದ್ದಿದ ಗಾಯವಾಗಿರುತ್ತದೆ.ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೆಎ.ಎಂ.ಎ.ಖಾದರ್ ಹಾಜಿಯವರಿಗೆ ಬಲಕಾಲಿಗೆ ಮೂಳೆ ಮುರಿತ ಹಾಗೂ ಎದೆಗೆ ಗುದ್ದಿದ ಗಾಯವಾಗಿರುತ್ತದೆ. ಆಶ್ರಫ್ ರವರಿಗೆ ಎದೆಯ ಎಡಭಾಗಕ್ಕೆ ಗುದ್ದಿದ ಗಾಯ ಹಾಗೂ ಒಳಗಾಯವಾಗಿರುತ್ತದೆ. ಮೈದ್ದೀನ್ ಕುಂಜ್ಞಿಯವರಿಗೆ ಕುತ್ತಿಗೆಗೆ ಹಾಗೂ ಎಡ ಕಾಲಿಗೆ ಗುದ್ದಿದ ಗಾಯವಾಗಿರುತ್ತದೆ ಹಾಗೂ ಸ್ಕೋರ್ಪಿಯೋ ಕಾರಿನ ಚಾಲಕ ಮಹಮ್ಮದ್ ಹನೀಫ್ ಗೆ ಎಡ ಕಾಲಿನ ಮೊಣಗಂಟಿಗೆ ರಕ್ತಗಾಯ ಹಾಗೂ ಬಲಕೈ ಹಾಗೂ ಎರಡು ಕಾಲಿನ ತೊಡೆಗೆ ತರಚಿದ ಗಾಯವಾಗಿರುತ್ತದೆ.ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  93/2015 ಕಲಂ: 279, 338 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹುಡುಗಿ ಕಾಣೆ ಪ್ರಕರಣ
  • ಕೊಲ್ಲೂರು: ದಿನಾಂಕ 10/07/2015 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀಮತಿ  ಗುಲಾಬಿ (31) ಗಂಡ. ರಾಮಕೃಷ್ಣ  ವಾಸ. ಸನ್ಯಾಸಿಬೆಟ್ಟಚಿತ್ತೂರು ಗ್ರಾಮ, ಕುಂದಾಪುರ ತಾಲೂಕು,ಉಡುಪಿ ಜಿಲ್ಲೆ ಇವರ ಅಕ್ಕ ಜಲಜ ರವರ ಮಗಳಾದ  ಕುಮಾರಿ ವಿಸ್ಮಯಳನ್ನು  ಮಾರಣಕಟ್ಟೆಯ ಕಿರಿಯ ಪ್ರಾಥಮಿಕ ಶಾಲೆಗೆಂದು ಕಳುಹಿಸಿದ್ದು ವೆಂಕಟ್ರಮಣ ದೇವಸ್ಥಾನದಿಂದ ಮಾರಣಕಟ್ಟೆಗೆ ಅಡಿಕೆ ಮರಗಳನ್ನು ಅಡ್ಡಲಾಗಿ ಚಕ್ರ ನದಿಯ ಉಪನದಿ ಬ್ರಹ್ಮಕುಂಡ ನದಿಗೆ ಹಾಕಲಾದ  ಕಾಲುಸಂಕವನ್ನು ಬೆಳಿಗ್ಗೆ 08.30 ಗಂಟೆಗೆ ಕುಮಾರಿ ವಿಸ್ಮಯಳು ದಾಟುತ್ತಿದ್ದಂತೆ ನಿನ್ನೆ ರಾತ್ರಿ ಹಾಗೂ ಈ ದಿನ ಬೆಳಿಗ್ಗೆ ಭಾರಿ ಮಳೆ ಬಂದಿರುವುದರಿಂದ ಕಾಲು ಸಂಕದ ಮೇಲಿನ ನೀರಿನ ಹರಿಯುವಿಕೆ ಒಮ್ಮೆಲೆ ಹೆಚ್ಚಾಗಿ ಕಾಲು ಸಂಕದ ಮೇಲೆ ರಭಸವಾಗಿ ಹರಿದು ಬಂದುದರಿಂದ ಕಾಲುಸಂಕ ದಾಟುತ್ತಿದ್ದ ಕುಮಾರಿ ವಿಸ್ಮಯಳು ನೋಡ ನೋಡುತ್ತಿದ್ದಂತೆ ನೀರಿನ ಸಳೆತಕ್ಕೆ ಸಿಕ್ಕಿ ಕೊಚ್ಚೊಯ್ದು ಕಣ್ಮ್ರೆರೆಯಾಗಿರುವುದಾಗಿದೆ.ಈ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 90 /15 ಕಲಂ: ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 

 


No comments: