Friday, July 10, 2015

Daily Crime reports As On 10/07/2015 At 19:30 Hrs


ಅಪಘಾತ ಪ್ರಕರಣ
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ಪ್ರಮೋದ್ (22) ತಂದೆ:ಉದಯ ಪಂಬದ ವಾಸ:ಸಿರಿ ನಿಲಯ, ಹಮ್ಸಾಳೆ ಬೆಟ್ಟು, 52ನೇ ಹೇರೂರು ಗ್ರಾಮ, ಬ್ರಹ್ಮಾವರ ಉಡುಪಿರವರು ದಿನ ದಿನಾಂಕ:10/07/2015 ರಂದು ಬೆಳಿಗ್ಗೆ ಕೆಲಸದ ನಿಮಿತ್ತ ಸಂತೆಕಟ್ಟೆ ಕಡೆಯಿಂದ  ಉಡುಪಿ ಕಡೆಗೆ ಹೋಗುತ್ತಿರುವಾಗ ಹೋಂಡಾ ಶೋರೂಮ್ ಬಳಿ ತಲುಪಿದಾಗ ಸುಮಾರು 06:50 ಗಂಟೆಗೆ ಅದೇ ಮಾರ್ಗದಲ್ಲಿ  ಕೆಎ 19 ಸಿ 4489 ನೇ ನಂಬ್ರದ ಬಸ್ಸು ಚಾಲಕ ರಘುವೀರ್ ಎಂಬವರು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಒಮ್ಮೇಲೆ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ, ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಚಿನ್‌ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ 20 ವೈ 6060 ನೇ ಮೋಟಾರ್ ಸೈಕಲ್ ಬಲಬದಿಗೆ ಡಿಕ್ಕಿ ಹೊಡೆದಿದ್ದು ಸಚೀನ್ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪ್ರಮೋದ್‌ರವರು ಮತ್ತು ಅಲ್ಲಿ ಸೇರಿದವರು ಮೇಲಕ್ಕೆತ್ತಿ ಉಪಚರಿಸಿ ನೋಡಲಾಗಿ ಹಣೆಯ ಬಲಬಾಗದಲ್ಲಿ ಮತ್ತು ಬೆನ್ನಿಗೆ ರಕ್ತಗಾಯವಾಗಿದ್ದು ಕೂಡಲೇ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 77/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ಶ್ರೀಮತಿ ಹೆಚ್‌. ಶೋಭಾ ಶೆಟ್ಟಿ (45) ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಂದಾಪುರ ವಲಯ, ಕುಂದಾಪುರ ತಾಲೂಕುರವರು ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯವರಾಗಿದ್ದು, ಆಪಾದಿತರಾದ ಶ್ರೀಮತಿ ಖುರ್ಷಿದಾ ಬೇಗಂ, ವಾಸ: ಅಂಚೆ ಕಛೇರಿ ಎದುರು, ಕೆ.ಹೆಚ್‌.ಬಿ ಕಾಲೋನಿ, ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕುರವರು ದಿನಾಂಕ:10/04/2006 ರಿಂದ ದಿನಾಂಕ:20/03/2014 ರವರೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸರಕಾರದ ನೀತಿ ನಿಯಮ ಪಾಲಿಸದೇ ಶಾಲೆಯ ಅಭಿವೃದ್ದಿಗೆ ವಿನಿಯೋಗಿಸಬೇಕಾಗಿದ್ದ ಸರಕಾರಿ ಹಣ ಹಾಗೂ ದಾನಿಗಳಿಂದ ಸಂಗ್ರಹಿಸಿದ ಹಣದ ಒಟ್ಟು ರೂಪಾಯಿ 4,39,597/- ಅನ್ನು ದುರುಪಯೋಗಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 263/2015 ಕಲಂ:409 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.     
  • ಬ್ರಹ್ಮಾವರ:ದಿನಾಂಕ:06/07/2015 ರಂದು 23:45 ಗಂಟೆಯಿಂದ 24:00 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು  ನೀಲಾವರ ಗ್ರಾಮದ ನೀಲಾವರ ಕ್ರಾಸ್‌  ಬಳಿ ಪಿರ್ಯಾದಿದಾರರಾದ ರಮೇಶ ಪೂಜಾರಿ (40) ತಂದೆ:ದಿವಂಗತ ಕೃಷ್ಣ ಪೂಜಾರಿ, ವಾಸ:ನೀಲಾವರ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕುರವರು ನೀಲಾವರ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾಗಿ ಆಯ್ಕೆಯಾದ  ಬಗ್ಗೆ ಅವರು ಅಭಿಮಾನಿಗಳು ಹಾಕಿದ ಆಭಿನಂದನಾ ಬ್ಯಾನ‌ನ್ನು ಯಾರೋ ಕಿಡಿಗೇಡಿಗಳು ಕಿತ್ತುಕೊಂಡು ಹೋಗಿರುವುದಾಗಿದೆ. ಈ ಕೃತ್ಯದ ಬಗ್ಗೆ ಮಹೇಶ ಮತ್ತು ದೇವು ಹಾಗೂ ಇತರರ ಮೇಲೆ ಸಂಶಯವಿರುತ್ತದೆ ಎಂಬುದಾಗಿ ರಮೇಶ ಪೂಜಾರಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 140/15 ಕಲಂ 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಕ್ರಮ ಜಾನುವಾರು ಸಾಗಾಟ ಪ್ರಕರಣ
  • ಅಮಾಸೆಬೈಲು:ದಿನಾಂಕ:10/07/2015 ರಂದು ಬೆಳಿಗ್ಗೆ 07:50 ಗಂಟೆಗೆ ಅಮಾಸೆಬೈಲು ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ರಮೇಶ್ ಆರ್. ಪವಾರ್‌ರವರು ಠಾಣೆಯಲ್ಲಿರುವಾಗ, ಮಿರಾಂಡ ಎಸ್ಟೇಟ್ ಎಂಬಲ್ಲಿ KA 20 C 2138 ನೇ ಮಹೇಂದ್ರ ವಾಹನದಲ್ಲಿ ದನವನ್ನು ಕಡಿದು ಮಾಂಸ ಮಾಡುವರೇ ತುಂಬಿಸಿಕೊಂಡು ಹೋಗುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯನ್ನು ಖಚಿತ ಪಡಿಸಿಕೊಂಡು, ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಸದ್ರಿ ಸ್ಥಳದ ಹತ್ತಿರ ತಲುಪುವಾಗ, 08:00 ಗಂಟೆಯ ಸಮಯಕ್ಕೆ ಎದುರಿನಿಂದ  ಬರುತ್ತಿದ್ದ KA 20 C 2138 ನೇ ಮಹೇಂದ್ರ ವಾಹನದಲ್ಲಿ ಕಾಲಿಗೆ ಕುತ್ತಿಗೆಗೆ ಹಿಂಸಾತ್ಮಕ ರೀತಿಯಲ್ಲಿ ಹಗ್ಗ ಕಟ್ಟಿದ್ದ 3 ದೊಡ್ಡ ಗಂಡು ಕರುಗಳು ಮತ್ತು ಒಂದು ಚಿಕ್ಕ ಗಂಡು ಕರು (ಒಟ್ಟು 4 ಜಾನುವಾರು) ಗಳನ್ನು ಸಾಗಿಸುತ್ತಿದ್ದು, ಅಂದಾಜು ಮೌಲ್ಯ ರೂಪಾಯಿ 7,000 ಆಗಿದೆ. ಮಹೇಂದ್ರ ವಾಹನ ನಂಬ್ರ KA-20-C-2138 ನೇಯದು ಇದರ ಅಂದಾಜು ಮೌಲ್ಯ ರೂಪಾಯಿ 1 ಲಕ್ಷ ನೇಯದನ್ನು ಸ್ವಾದೀನ ಪಡಿಸಿಕೊಂಡು ಆರೋಪಿ 1)ಬಸವ ಕುಲಾಲ್ (34) ತಂದೆ:ಕೊರಗ ಕುಲಾಲ್ ವಾಸ:ತಾರೇಮನೆ, ಜಡ್ಡು ಶಂಕರನಾರಾಯಣ ಗ್ರಾಮ, ಕುಂದಾಪುರ ತಾಲೂಕು. 2)ಚಿಕ್ಕ ಮರಕಾಲ (71) ತಂದೆ:ನಂದಿ ಮರಕಾಲ, ವಾಸ:ಕುಪ್ಪಾರು, ಶಂಕರನಾರಾಯಣ, ಕುಂದಾಫುರ ತಾಲೂಕು  3)ಶೇಕರ ಶೆಟ್ಟಿ (67) ತಂದೆ:ದಿವಂಗತ ಜಗನ್ನಾಥ ಶೆಟ್ಟಿ ವಾಸ:ಹೆದ್ದಾರಿ ಗದ್ದೆ, ಅಮಾಸೆಬೈಲು ಗ್ರಾಮ, ಕುಂದಾಪುರ ತಾಲೂಕು ಇವರುಗಳನ್ನು ದಸ್ತಗಿರಿ ಮಾಡಲಾಗಿದೆ. ಓಡಿಹೋದವರ ಹೆಸರು 4) ಅಂತಯ್ಯ ಶೆಟ್ಟಿ ಹೆಗ್ಗೇರಿ ಮತ್ತು ಆತನ ಅಳಿಯ ಆಗಿದ್ದಾರೆ.ಈ ಬಗ್ಗೆ ಅಮಾಸೆಬೈಲು ಠಾಣಾ ಅಪರಾಧ ಕ್ರಮಾಂಕ 40/2015 ಕಲಂ:8,11 ಗೋಹತ್ಯಾ ತಡೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964, ಕಲಂ 11(1) (ಡಿ) ಪ್ರಾಣೆ ಹಿಂಸೆ ತಡೆ ಕಾಯ್ದೆ ಮತ್ತು ಕಲಂ 192 (ಎ)(2) ಮೋಟಾರು ವಾಹನ ಕಾಯ್ದೆ 1988 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಪಡುಬಿದ್ರಿ:ಪಿರ್ಯಾದಿದಾರರಾದ ಉಮೇಶ ಆಚಾರ್ಯ (26), ತಂದೆ:ವ್ಯಾಸರಾಯ ಆಚಾರ್ಯ, ಮುಳ್ಳಗುಡ್ಡೆ, ಉಚ್ಚಿಲ ಪೋಸ್ಟ್, ಬಡಾ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವ ಅಣ್ಣನಾದ ಮಾಧವ ಆಚಾರ್ಯ ಎಂಬವರು ಸುಮಾರು ದಿನದಿಂದ ಜ್ವರ ಬಂದು  ನಿತ್ರಾಣದಿಂದ ಇದ್ದಿದ್ದು, ದಿನಾಂಕ:02/07/2015 ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋದವರು ಮನೆಗೆ ವಾಪಸ್ಸು ಬಂದಿರುವುದಿಲ್ಲ. ದಿನಾಂಕ:04/07/2015 ರಂದು ಬೆಳಿಗ್ಗೆ 9:30 ಗಂಟೆಗೆ ಉಚ್ಚಿಲ ಬಡಾ ಗ್ರಾಮದ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಮೇಲೆ ಹತ್ತಿದ್ದವರು ತಲೆ ತಿರುಗಿ ಅಥವಾ ಆಕಸ್ಮಿಕವಾಗಿ ಅಲ್ಲಿಂದ ಕೆಳಗೆ ಬಿದ್ದು, ಅವರ ಬಲಭುಜ ಮೂಳೆ ಮುರಿತವಾಗಿ, ಮೈಯಲ್ಲಿ ತರಚಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ದಿನಾಂಕ:10/07/2015 ರಂದು ಬೆಳಿಗ್ಗೆ 9:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 20/15 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ನಗರ:ದಿನಾಂಕ:09/07/2015 ರಂದು ರಾತ್ರಿ ಸುಮಾರು 8:00 ಗಂಟೆಗೆ 76 ಬಡಗುಬೆಟ್ಟು ಬಲಾಯಿಪಾದೆ ಎಂಬಲ್ಲಿ ಒಬ್ಬ ಅಪರಿಚಿತ ಗಂಡಸು ಸುಮಾರು 55 ರಿಂದ 60 ವರ್ಷದ, ಮೈಯಲ್ಲಿ ಬಟ್ಟೆ ಇರದೇ ಮಳೆಯಲ್ಲಿ ನೆನೆದುಕೊಂಡಿದ್ದವರನ್ನು ಪಿರ್ಯಾದಿದಾರರಾದ ವಿಜಯ ಪೂಜಾರಿ (48) ತಂದೆ:ವಾಸು ಪೂಜಾರಿ ವಾಸ:76 ಬಡಗುಬೆಟ್ಟು, ಬೈಲೂರು ಉಡುಪಿರವರು 108 ಅಂಬುಲೆನ್ಸ್‌ಗೆ ಕರೆ ಮಾಡಿ ಉಡುಪಿ ಜಿಲ್ಲಾ ಆಸ್ವತ್ರೆಗೆ ಚಿಕಿತ್ಸೆಗೆ ಕಳುಹಿಸಿದ್ದು, ಸದ್ರಿ ಅಪರಿಚಿತ ಗಂಡಸು ರಾತ್ರಿ 9:40 ಗಂಟೆಗೆ ಉಡುಪಿ  ಜಿಲ್ಲಾ ಆಸ್ವತ್ರೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಆತನು ಸರಿಯಾಗಿ ಮಾತಾನಾಡುತ್ತಿರಲಿಲ್ಲ ಹಾಗೂ ಅವನ ವಿಳಾಸ ತಿಳಿದಿರುವುದಿಲ್ಲ.ಈ ಬಗ್ಗೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 34/15 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: