Friday, July 10, 2015

Daily Crime reports As On 10/07/2015 At 17:00 Hrs


ಅಪಘಾತ ಪ್ರಕರಣಗಳು
  • ಬ್ರಹ್ಮಾವರ:ದಿನಾಂಕ:09/07/2015 ರಂದು ಸಂಜೆ ಸುಮಾರು 5:45 ಗಂಟೆಗೆ ಉಡುಪಿ ತಾಲೂಕು, ಹೇರೂರು ಗ್ರಾಮದ, ರಾಜೀವ ನಗರ ಎಂಬಲ್ಲಿ ಬ್ರಹ್ಮಾವರ - ಹೆಬ್ರಿಯಲ್ಲಿ ರಸ್ತೆಯಲ್ಲಿ ಹೆಬ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿ ನಾರಾಯಣ ಶೆಟ್ಟಿ ತನ್ನ ಕೆಎ 20 ಪಿ 0252 ನೇ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಬದಿಗೆ ಬಂದು ರಸ್ತೆಯ ಬಲಬದಿಯಲ್ಲಿ ಚಾಂತಾರು ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಶುಭಶ್ರೀರವರಿಗೆ ಡಿಕ್ಕಿ ಹೊಡೆದು,  ಮುಂದೆ ಬಂದು ಬ್ರಹ್ಮಾವರ ಕಡೆಯಿಂದ ಹೆಬ್ರಿ ಕಡೆಗೆ ಕೃಷ್ಣ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ 20 ಸಿ 4264 ಲಾರಿಗೆ ಡಿಕ್ಕಿ ಹೊಡೆದನು. ಶುಭಶ್ರೀರವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಶುಭಶ್ರೀರವರು ರಸ್ತೆಗೆ ಎಸೆಯಲ್ಲಟ್ಟು , ಹಣೆಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರಾದ ಶ್ಯಾಮ (50), ತಂದೆ:ದಿವಂಗತ ಜಗನ್ನಾಥ, ವಾಸ:ರಾಜೀವ ನಗರ, ಕೊಳಂಬೆ, 52ನೇ ಹೇರೂರು ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 139/15 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.    
  • ಕಾಪು:ದಿನಾಂಕ:10/07/2015 ರಂದು ಪಿರ್ಯಾದಿದಾರರಾದ ವಿನಯ ಬಲ್ಲಾಳ್ ತಂದೆ:ದಿವಂಗತ ಶಿವರಾಮ್ ಹೆಗ್ಡೆ ವಾಸ:ಶಿವಾಂಬ, ಮೂಡಬೆಟ್ಟು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ತನ್ನ ಕಾರು ನಂಬ್ರ ಕೆ.ಎ 20 ಪಿ 8545 ನೇದರಲ್ಲಿ ಬೆಳಿಗ್ಗೆ ಸುಮಾರು 9:50 ಗಂಟೆಗೆ ಪಾಂಗಾಳ ವಿಜಯ ಬ್ಯಾಂಕ್ ಬಳಿ ಬಂದು ಉಡುಪಿ ಕಡೆಗೆ ಹೋಗುವರೆ  ಡಿವೈಡರ್‌‌ನಿಂದ ವಾಪಾಸು ತಿರುಗಿಸುತ್ತಿದ್ದಾಗ ಆರೋಪಿ ಪರಮೇಶ್ವರ ಎ.ಡಿ, ಕೆ.ಎ 20 ಬಿ 5747 ನೇ ಬಸ್ಸನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ವಿನಯ ಬಲ್ಲಾಳ್‌ರವರು ಚಲಾಯಿಸುತ್ತಿದ್ದ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುವುದಾಗಿದೆ. ಈ ಬಗ್ಗೆ ವಿನಯ ಬಲ್ಲಾಳ್‌ರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 139/15 ಕಲಂ:279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.    
  • ಕುಂದಾಪುರ ಸಂಚಾರ:ದಿನಾಂಕ:09/07/2015 ರಂದು ರಾತ್ರಿ ಸುಮಾರು 23:45 ಗಂಟೆಗೆ  ಕುಂದಾಪುರ ತಾಲೂಕು ಕಂದಾವರ  ಗ್ರಾಮದ ಮೂಡ್ಲಕಟ್ಟೆ  ಸಟ್ವಾಡಿ ರಾಜ್ಯ ಹೆದ್ದಾರಿಯಲ್ಲಿ ಆಪಾದಿತ KA 13 B 5993 ನೇ ಲಾರಿಯ  ಚಾಲಕ ದರ್ಪನ್‌ ಬಿ.ಆರ್‌ ಎಂಬವರು  ಮಂಗಳೂರು  ಕಡೆಯಿಂದ ಕೊಪ್ಪಳ ಕಡೆಗೆ ಲಾರಿಯನ್ನು  ಅತೀವೇಗ ಹಾಗೂ  ಅಜಾಗರುಕತೆಯಿಂದ  ಚಾಲನೆ  ಮಾಡಿಕೊಂಡು ಬಂದು  ಎದುರುಗಡೆಯಿಂದ  ಬಂದ  ಕಾರೊಂದನ್ನು ನೋಡಿ ರಸ್ತೆಯ ಎಡಬದಿಯ ಮಣ್ಣಿನ ರಸ್ತೆಗೆ ಲಾರಿಯನ್ನು ಚಲಾಯಿಸಿದಾಗ, ಲಾರಿಯು ಚಾಲಕನ ಹತೋಟಿ ತಪ್ಪಿ  ರಸ್ತೆಯ ಎಡಬದಿಯ ನೀರು ಹರಿಯುವ ಜಾಗದಲ್ಲಿ ಎಡ ಮಗ್ಗುಲಾಗಿ ಅಡ್ಡ  ಬಿದ್ದು, ಲಾರಿಯಲ್ಲಿದ್ದ ಕೋಕ್‌ ಲೋಡ್‌ ಲಾರಿಯಿಂದ ನೀರಿಗೆ ಬಿದ್ದು ನಷ್ಟ ಉಂಟಾಗಿದ್ದು, ಲಾರಿಗೆ ಜಖಂ ಆಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರಾದ ರೇವಣ್ಣ (25) ತಂದೆ:ಮಂಜೇಗೌಡ ವಾಸ:ಮೂಡಲಹಿಪ್ಪೆ ಗ್ರಾಮ, ಹೊಳೆನರಸೀಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 83/2015  ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.        
  • ಕೋಟ:ಪಿರ್ಯಾದಿದಾರರಾದ ರಮೇಶ ಮರಕಾಲ (35), ತಂದೆ:ನರಸಿಂಹ ಮರಕಾಲ, ವಾಸ:ಶ್ರೀಗಣೇಶ, ಕೆಳಾಮನೆ, ಸಾಸ್ತಾನ, ಗುಂಡ್ಮಿ  ಗ್ರಾಮ, ಉಡುಪಿ ತಾಲೂಕುರವರು ದಿನಾಂಕ:08/07/2015 ರಂದು ಸಂಜೆ ಸುಮಾರು 6:40 ಗಂಟೆಗೆ ಅವರ ಮೋಟಾರ್ ಸೈಕಲ್‌ನಲ್ಲಿ ಗುಂಡ್ಮಿ ಕಡೆಯಿಂದ ಸಾಸ್ತಾನ ಕಡೆಗೆ ಹೋಗುವರೇ  ಸಾಸ್ತಾನ ಬಸ್ ನಿಲ್ದಾಣದ ಬಳಿ ತಲುಪುವಾಗ ಅವರ ಮುಂದೆ ಕೆ.ಎ 20 ಇ.ಎಫ್ 9710 ನೇ ನಂಬ್ರದ ಮೋಟಾರ್ ಸೈಕಲ್‌ ಸವಾರ ಆತನ ಮೋಟಾರ್‌ ಸೈಕನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಾಸ್ತಾನ ಆಟೋ ರಿಕ್ಷಾ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಮೇಶ ಮರಕಾಲರವರ ತಾಯಿ ರಾ ಮರಕಾಲ್ತಿಯವರಿಗೆ ಢಿಕ್ಕಿ ಹೊಡೆದು ಮೋಟಾರ್ ಸೈಕಲ್‌ ನಿಲ್ಲಿಸದೆ ಓಡಿ ಹೋಗಿರುತ್ತಾನೆ ಅಪಘಾತದ ಪರಿಣಾಮ ರಾ ಮರಕಾಲ್ತಿಯವರು  ರಸ್ತೆಗೆ ಬಿದ್ದು ತಲೆಗೆ ಹಾಗೂ ಎಡ ಕೈಗೆ ತೀವ್ರ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 167/2015 ಕಲಂ:279,338 ಐಪಿಸಿ ಹಾಗೂ 134(ಎ) &(ಬಿ) ಐ.ಎಂ.ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: