Thursday, July 09, 2015

Daily Crime reports As On 09/07/2015 At 19:30 Hrs

ಅಪಘಾತ ಪ್ರಕರಣ
  • ಬ್ರಹ್ಮಾವರ : ದಿನಾಂಕ 09/07/2015 ರಂದು ಮಧ್ಯಾಹ್ನ 12:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ರವೀಂದ್ರ ಬಂಗೇರ (45) ತಂದೆ:ರಾಮ ಮರಕಾಲ ವಾಸ:ಪದ್ಮಾವತಿ ನಿಲಯ 1ನೇ ಮಹಡಿ ಮಾತೃಕೃಪಾ ಕ್ರಾಸ್ ಕೋರ್ಟ್‌ ರಸ್ತೆ ಉಡುಪಿ ತಾಲೂಕು ಇವರು ಮತ್ತು ವಾಣಿಜ್ಯ ತೆರಿಗೆ ನಿರೀಕ್ಷಕರಾದ ಶ್ರೀ ವೆಂಕಟೇಶ ಮಯ್ಯರವರು ಆರೋಪಿ ಟಾಟಾ ಸುಮೊ ಚಾಲಕ ಗಿರೀಶ್ ಅಮೀನ್ ರವರೊಂದಿಗೆ ಕೆಎ 19 ಜಿ 503 ನೇ ಟಾಟಾ ಸುಮೊ ವಾಹನದಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುತ್ತಿರುವಾಗ ಚಾಲಕ ಗಿರೀಶ್ ಅಮೀನ್ ವಾಹನವನ್ನು  ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ವಾಹನವು ಹತೋಟಿ ತಪ್ಪಿ ರಸ್ತೆಯ ಎಡಬದಿಯ ತಗ್ಗಾದ ಜಾಗಕ್ಕೆ ಬಿದ್ದು ಮಣ್ಣಿನ ದಿಣ್ಣೆಗೆ ಗುದ್ದಿ ಬಿದ್ದ ಪರಿಣಾಮ ವಾಹನದಲ್ಲಿದ್ದ ರವೀಂದ್ರ ಬಂಗೇರ ರವರ ಗಲ್ಲಕ್ಕೆ,ಕೆಳ ತುಟಿಗೆ ರಕ್ತಗಾಯವಾಗಿದ್ದು ಅಲ್ಲದೇ ಬಲಕೆನ್ನೆ ಬಲಭುಜ & ಎಡಕಾಲಿನ ಮೊಣಗಂಟಿಗೆ ಗುದ್ದಿದ ನೋವು ಮತ್ತು  ವೆಂಕಟೇಶ ಮಯ್ಯ ರವರ ದವಡೆಗೆ ರಕ್ತ ಗಾಯ, ಎಡಭುಜಕ್ಕೆ ಮೂಳೆ ಮುರಿತದ ಒಳ ಜಖಂ ಮತ್ತು ಎಡ ಮುಂಗೈ,ಬಲ ಕೈ,ತೋಳು ಇತ್ಯಾದಿ ಕಡೆ ಗುದ್ದಿದ ನೋವು ಹಾಗೂ ಆರೋಪಿ ಚಾಲಕ ಗಿರೀಶ್ ಅಮೀನ್ ರವರ ಎಡ ಕೈ  ತೋಳಿನ ಒಳ ಭಾಗಕ್ಕೆ ಗುದ್ದಿದ ನೋವು ಅಗಿರುತ್ತದೆ.ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 138/15 ಕಲಂ: 279, 337,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.       
ಗಂಡಸು ಕಾಣೆ ಪ್ರಕರಣ 
  • ಶಂಕರನಾರಾಯಣ :ಪಿರ್ಯಾದಿದಾರರಾದ ಶ್ರೀಮತಿ ಅನ್ನಪೂರ್ಣ(26) ಗಂಡ:ನಾಗರಾಜ ವಾಸ:ತಿಪ್ಪಸಂದ್ರ ಹೋಬಳಿ ಅಣ್ಣಯ್ಯ ಶಾಸ್ತ್ರೀ ಪಾಳ್ಯ  ಮಾಗಡಿ ತಾಲೂಕು  ರಾಮನಗರ  ಜಿಲ್ಲೆ ಇವರ ಗಂಡ  ನಾಗರಾಜ (31) ಇವರು   ಲಾರಿಯಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು   ದಿನಾಂಕ 10/04/15  ರಂದು  ಬೆಳಿಗ್ಗೆ ಸುಮಾರು 10:00  ಗಂಟೆಗೆ  ಲಾರಿಗೆ  ಹೊಸಕೋಟೆಯಿಂದ ಶಿವಮೊಗ್ಗಕ್ಕೆ  ಲೋಡ್‌ ಇದೆ ಹಾಗೂ ಅಲ್ಲಿಂದ ಮಂಗಳೂರಿಗೆ   ಹೋಗಲು ಇದೆ  ಎಂದು ಮನೆಯಿಂದ  ಹೋಗಿದ್ದು, ಆ ಬಳಿಕ  ದಿನಾಂಕ 14/04/15 ರಂದು  ನಾಗರಾಜ ರವರ  ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಈ ಬಗ್ಗೆ   ವಿಚಾರಿಸಿದಾಗ ದಿನಾಂಕ 14/04/15 ರಂದು ರಾತ್ರಿ ಸಮಯ  ಲಾರಿ ಕುಂದಾಪುರದ  ಹತ್ತಿರದ   ಸಿದ್ದಾಪುರ  ಎಂಬಲ್ಲಿ ಅಪಘಾತವಾಗಿದ್ದು ಈ ಸಮಯ  ಲಾರಿಯ ಮಾಲೀಕರಾದ  ಮಂಜಣ್ಣ ಇವರು  ಸಿದ್ದಾಪುರಕ್ಕೆ  ಹೋಗಿದ್ದು, ಅಲ್ಲಿ  ನಾಗರಾಜ ಲಾರಿ ರಿಪೇರಿ ಮಾಡಿಕೊಂಡು  ದಿನಾಂಕ  16/04/15  ರಂದು  ಬೆಳಿಗ್ಗೆ  09:30  ಗಂಟೆಯವರೆಗೆ ಕುಂದಾಪುರ  ತಾಲೂಕಿನ ಸಿದ್ದಾಪುರದಲ್ಲಿ  ಇದ್ದು ನಂತರ ಅಲ್ಲಿಂದ ಹೋದವರು ವಾಪಾಸು ಊರಿಗೂ ಹೋಗದೇ   ಮನೆಗೂ  ಬಾರದೇ ಕಾಣೆಯಾಗಿರುತ್ತಾರೆ.ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 151/2015 ಕಲಂ: ಗಂಡಸು ಕಾಣೆ ಯಂತೆ  ಪ್ರಕರಣ ದಾಖಲಾಗಿರುತ್ತದೆ. 

No comments: