Thursday, July 09, 2015

Daily Crime reports As On 09/07/2015 At 17:00 Hrsಇತರೇ  ಪ್ರಕರಣ

  • ಗಂಗೊಳ್ಳಿ:  ದಿನಾಂಕ: 09/07/2015 ರಂದು ಬೆಳಿಗ್ಗೆ 10:15 ಗಂಟೆಗೆ ಕೇಶವ ಮತ್ತು ಅಬುಬಕ್ಕರ್ ಎಂಬವರುಗಳು ನಾಡ ಗ್ರಾಮದ ರಾಮನಗರ ಜನತಾ ಕಾಲೋನಿ 5 ಸೆಂಟ್ಸ ಅವರ ಮನೆಯ ಸಮೀಪ ರಸ್ತೆಯ ಮೇಲೆ ನಿಂತುಕೊಂಡು ಪರಸ್ಪರ ಇರ್ವರು ಅವಾಚ್ಯ ಶಬ್ಧಗಳಿಂದ ಬೈದಾಡಿಕೊಳ್ಳುತ್ತಾ, ಕೈಗಳಿಂದ ಹೊಡೆದಾಡಲು ಪ್ರಾರಂಭಿಸಿದ್ದು, ಇವರುಗಳು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಳ್ಳುವುದರಿಂದ ಸಾರ್ವಜನಿಕರ ಶಾಂತಿ ಕದಡುವ ಸಾಧ್ಯತೆ ಇರುವ ಕಾರಣ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 98/1015 ಕಲಂ: 160 ಐಪಿಸಿರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಫಿರ್ಯದಿ ಶ್ರೀನಿವಾಸ್‌ ಆಚಾರ್ಯ, ನಂ 7 ಮಾಂಡವಿ,  ಗೋಕುಲ್‌, ‌ ಕಲ್ಸಂಕ,  ಕುಂಜಿಬೆಟ್ಟು, ಉಡುಪಿ ಇವರ ಮಗಳು ಸುಮಿತಾ ಉಪಾಧ್ಯಾಯ (47) ಸುಮಾರು 25 ವರ್ಷಗಳ ಹಿಂದೆ ಕಾರ್ಕಳ ವಾಸಿ ಸುದರ್ಶನ ಉಪಾಧ್ಯಾಯ ಎಂಬವರೊಂದಿಗೆ ಮದುವೆಯಾಗಿ ಅವರೊಂದಿಗೆ ಚೆನೈಯಲ್ಲಿ ವಾಸವಾಗಿರುತ್ತರೆ ಸದ್ರಿಯವರು  ಸುಮಾರು 10-12 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಈ ಬಗ್ಗೆ ಚೆನೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಅವರಿಗೆ ಇತ್ತೀಚಿಗೆ ಮಾನಸಿಕ ಖಿನ್ನತೆ ಹೆಚ್ಚಾದ ಕಾರಣ ಮನಸಿಕವಾಗಿ ನೊಂದಿದ್ದು  ದಿನಾಂಕ: 09/07/2015ರಂದು ಬೆಳಿಗ್ಗೆ 6:30ಗಂಟೆ ಸಮಯಕ್ಕೆ ಟೆರೇಸ್‌ನಿಂದ ಕಳೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ    ನಗರ  ಪೊಲೀಸ್‌ ಠಾಣಾ ಯು.ಡಿ.ಆರ್‌.ನಂಬ್ರ: 33/15 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ : ದಿನಾಂಕ: 08-07-2015 ರ ಮಧ್ಯಾಹ್ನ 1:00 ಗಂಟೆಯಿಂದ 3:30 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, ಹಾವಂಜೆ ಗ್ರಾಮದ, ಕಂಬಳಕಟ್ಟೆ, ದೇವೆಂದ್ರ ನಿಲಯದ ಸಮೀಪ ಇರುವ ರಾಜಾರಾಮ ಮಧ್ಯಸ್ಥರ ಗದ್ದೆಯ ಅಂಚಿನಲ್ಲಿ ಸಂಜೀವ ಪೂಜಾರಿ , ಪ್ರಾಯ: 51 ವರ್ಷ ಎಂಬವರು ನಡೆದುಕೊಂಡು ಹೋಗುವಾಗ ಕುಸಿದು ಬಿದ್ದು ಮೃತ ಪಟ್ಟಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌.ನಂಬ್ರ: 38/15 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: