Thursday, July 09, 2015

Daily Crime reports As On 09/07/2015 At 07:00 Hrs

ಅಪಘಾತ ಪ್ರಕರಣಗಳು
  • ಮಣಿಪಾಲ: ಪಿರ್ಯಾದಿದಾರರಾದ ಸತೀಶ್ ಆಚಾರ್ಯ ತಂದೆ:ದಿ.ಭಾಸ್ಕರ ಆಚಾರ್ಯ, ವಾಸ: ವಿಶ್ವಕರ್ಮ ಇಂಡಸ್ಟ್ರೀಸ್ ಹಿಂಭಾಗ ಗುಡ್ಡೆಯಂಗಡಿ ಅಲೆವೂರು, ಉಡುಪಿ ಇವರು  ದಿನಾಂಕ 08/07/15ರಂದು 11:00 ಗಂಟೆಗೆ ಕುಕ್ಕಿಕಟ್ಟೆಯಿಂದ ಅಲೆವೂರು ಕಡೆಗೆ ತನ್ನ ಕೆಎ20 19 ಡಿ 1369ನೇ Tata Ace Tempo ದಲ್ಲಿ ಹೋಗುತ್ತಿರುವಾಗ ಶಾಂತಿ ಗಣಪತಿ ಪೆಟ್ರೋಲ್ ಬಂಕ್ ಎದುರು ತಲುಪುವಾಗ ಎದುರಿನಿಂದ ಒಂದು ಟಿಪ್ಪರ್ ಲಾರಿ ಬರುತ್ತಿದ್ದು ಅದರ ಹಿಂಬದಿಯಲ್ಲಿ ಕೆಎ20 ಈಈ 2615 ನೇ ಸ್ಕೂಟರ್‌ನಲ್ಲಿ ಒಂದು ಹೆಂಗಸನ್ನು ಕುಳ್ಳಿರಿಸಿಕೊಂಡು, ಏಕಾಏಕಿ ಬಲಬದಿಗೆ ಸವಾರಿ ಮಾಡಿಕೊಂಡು ಬಂದು ಸತೀಶ್ ರವರ ಟೆಂಪೋಗೆ ಢಿಕ್ಕಿ ಹೊಡೆದನು ಪರಿಣಾಮ ಸ್ಕೂಟರ್‌ ಸವಾರ ಹಾಗೂ ಹಿಂಬದಿಯಲ್ಲಿ ಕುಳಿತ್ತಿದ್ದ ಹೆಂಗಸು ರಸ್ತೆಗೆ ಬಿದ್ದು ಅವರಿಗೆ ಗಾಯವಾಗಿರುತ್ತದೆ. ಅಲ್ಲದೆ ಸತೀಶ್ ರವರ ವಾಹನದ ಎದುರು ಗಾಜು, ಎಡಬದಿಯ ಹೆಡ್‌‌ಲೈಟ್‌ ಮತ್ತು ಬಂಪರ್‌ಗೆ ಜಖಂ ಆಗಿರುತ್ತದೆ. ಗಾಯಗೊಂಡ ಸ್ಕೂಟರ್ ಸವಾರ ಹಾಗೂ ಮಹಿಳೆಯನ್ನು ಚಿಕಿತ್ಸೆಯ ಬಗ್ಗೆ ಉಡುಪಿಗೆ ಕರೆದುಕೊಂಡು ಹೋಗಿರುವುದಾಗಿದೆ.ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 137/15 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 08/07/15ರಂದು ಬೆಳಿಗ್ಗೆ 10:30ಗಂಟೆಗೆ ಪಿರ್ಯಾದಿದಾರರಾದ ಆಶ್ವತ್‌ ದೇವಾಡಿಗ ತಂದೆ: ಸುಂದರ ದೇವಾಡಿಗ ವಾಸ: ಗುಲಾಬಿ ನಿವಾಸ, ಈಎಮ್‌ಎಚ್‌ಎಸ್‌ ರಸ್ತೆ ಬಳಿ ಕುಂಜಿಬೆಟ್ಟು ಅಂಚೆ, ಉಡುಪಿ ಇವರ ಅಣ್ಣ ವಿಶ್ವನಾಥ ಮತ್ತು ಅತ್ತಿಗೆ ಪ್ರಭಾರವರು ದ್ಚಿಚಕ್ರ ವಾಹನ ನಂಬ್ರ ಕೆಎ20 ಈಈ 2615ನೇದರಲ್ಲಿ ಅಲೆವೂರಿನಿಂದ ಉಡುಪಿ ಕಡೆಗೆ ಕೆಲಸದ ನಿಮಿತ್ತ ಬರುತ್ತಿರುವಾಗ ಅಲೆವೂರು ಪೆಲ್ರೋಲ್‌ ಬಂಕ್‌ ಬಳಿ ತಲುಪಿದಾಗ ಸುಮಾರು 11:00 ಗಂಟೆಗೆ ಎದುರಿನಿಂದ ಟೆಂಪೋ ಏಸ್‌ ನಂಬ್ರ ಕೆಎ 19 ಡಿ 1369ನೇದರ ಚಾಲಕ ತಾನು ಚಲಾಯಿಸುತ್ತಿದ್ದ ಟೆಂಪೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಶ್ವತ್‌ ದೇವಾಡಿಗ ರವರ ಅಣ್ಣ ಸವಾರಿ ಮಾಡಿಕೊಂಡು ಬರುತ್ತಿದ್ದ ದ್ಚಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಶ್ವತ್‌ ದೇವಾಡಿಗ ರವರ  ಅಣ್ಣ ಮತ್ತು ಅತ್ತಿಗೆ ರಸ್ತೆಗೆ ಬಿದ್ದು ರಕ್ತಗಾಯವಾಗಿರು ತ್ತದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 138/15 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಕಾರ್ಕಳ: ದಿನಾಂಕ 07/07/2015 ರಂದು 22:00 ಗಂಟೆಯಿಂದ ದಿನಾಂಕ 08/07/2015 ರ ಬೆಳಿಗ್ಗೆ 5:30 ಗಂಟೆಯ ನಡುವಿನ ಅವಧಿಯಲ್ಲಿ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಎರ್ಮುಂಜೆಪಲ್ಲು, ಶ್ರೀರಾಮ ನಗರ ಎಂಬಲ್ಲಿ ಇರುವ ಪಿರ್ಯಾದಿದಾರರಾದ ಶ್ರೀ ಸೀತಾರಾಮ ಶೆಟ್ಟಿ ( 65) ತಂದೆ: ಚಿನ್ನಯ್ಯ ಶೆಟ್ಟಿ ವಾಸ: ಪ್ರಸೀತ ಗ್ರಹ ಶ್ರೀರಾಮ ನಗರ, ಎರ್ಮುಂಜೆಪಲ್ಲ, ನಿಟ್ಟೆ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ  ವಾಸ್ತವ್ಯದ ಮನೆ ಪ್ರಸೀತ ಗ್ರಹದ ಅಡುಗೆ ಕೋಣೆಯ ಕಿಟಕಿಯ ಸಹಾಯದಿಂದ ಹಿಂಬಾಗಿಲಿನ ಬಾಗಿಲನ್ನು ಯಾರೋ ಕಳ್ಳರು ತೆರೆದು ಒಳಪ್ರವೇಶಿಸಿ ಮನೆಯ ಕೋಣೆಯಲ್ಲಿನ ಗೋಡೆಗೆ ಅಳವಡಿಸಿದ ಮರದ ಸೆಲ್ಪ್ ನಲ್ಲಿ ಇಟ್ಟಿದ್ದ ಚಿನ್ನಯ್ಯ ಶೆಟ್ಟಿಯವರ ಅತ್ತೆಯ ಸುಮಾರು 2.5 ಪವನ್ ತೂಕದ ಚಿನ್ನದ ಸರ,ಹಾಗೂ ಕಪಾಟಿನಲ್ಲಿ ಇದ್ದ 2000/- ರೂ ನಗದು,ಒಟ್ಟು ಮೌಲ್ಯ ಸುಮಾರು 24000/- ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 117/2015 ಕಲಂ 457,380 ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಕೋಟ: ಪಿರ್ಯಾದಿದಾರರಾದ ಇಕ್ಬಾಲ್(28) ತಂದೆ:ಉಸ್ಮಾನ್ ಸಾಹೇಬ್, ವಾಸ:ಉರುಂದಾಡಿ ಗುಡ್ಡೆ, ಪಂಜಿನ ಮೊಗರು, ಕೂಳೂರು ಗ್ರಾಮ, ಮಂಗಳೂರು ಇವರು ದಿನಾಂಕ:07/07/2015ರಂದು ಕುಂದಾಪುರ ತಾಲೂಕು ಜಪ್ತಿ ಗ್ರಾಮದ ನಾರಾಯಣ ಎಂಬುವರಲ್ಲಿ ಕ್ರಯ ಮಾಡಿದ 4 ಜಾನುವಾರುಗಳನ್ನು ಮಂಗಳೂರಿಗೆ ತಗೆದುಕೊಂಡು ಹೋಗುಲು ದಿನಾಂಕ:08/07/2015 ರಂದು ಬೆಳಿಗ್ಗೆ 10:00 ಗಂಟೆಗೆ 4 ಜಾನುವಾರುಗಳನ್ನು ಹೊಂಬಾಡಿ ಮಂಡಾಡಿ ಗ್ರಾಮದ  ಕ್ಯಾಸನ ಮಕ್ಕಿ ಬಾಲಕೃಷ್ಣ ಶೆಟ್ಟಿ ಯವರ ಮನೆ ವಠಾರದಲ್ಲಿ ತಂದು ಕಟ್ಟುತ್ತಿದ್ದಾಗ ಅಲ್ಲಿಯ ಪರಿಸರದವರಾದ ಅಣ್ಣಪ್ಪ ಆಚಾರಿ, ರಾಮ ಕುಲಾಲ್, ರಮೇಶ, ಮಂಜುನಾಥ ಹಾಗೂ ಇತರರು ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಇಕ್ಬಾಲ್ ಮತ್ತು ಹುಸೇನ್ ರವರಿಗೆ ದೊಣ್ಣೆಯಿಂದ ಕೈಕಾಲುಗಳಿಗೆ ಹೊಡೆದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಓಡಿ ಹೋಗಿರುವುದಾಗಿದೆ,ಆಪಾದಿತರು ನಡೆಸಿದ ಹಲ್ಲೆಯಿಂದ ಗಾಯಗೊಂಡು ಚಿಕಿತ್ಸೆ ಬಗ್ಗೆ ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಗೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  143,147,148,504,506,324,149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಂಚನೆ ಪ್ರಕರಣ 
  • ಬೈಂದೂರು: ಆರೋಪಿತರರಾದ 1)ಗೌತಮ್‌ ಕುಮಾರ್‌ 2) ಪವನ್‌ ಕುಮಾರ್‌ ಇವರು ಜೂನ್‌ 2015ರ ಮೊದಲ ವಾರದ  ಉದಯವಾಣಿ ದಿನಪತ್ರಿಕೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಪುರುಷ/ಮಹಿಳೆಯರು ಬೇಕಾಗಿದ್ದಾರೆ ಎಂಬುದಾಗಿ ಜಾಹಿರಾತನ್ನು ನೀಡಿದ್ದು ಪಿರ್ಯಾದಿದಾರರಾದ ನಾಗರತ್ನ (29) ಗಂಡ:ಈಶ್ವರ ವಾಸ:ರೋಷನ್‌ ರಿತಿಕಾ ನಿಲಯ, ಅಗಸ್ತೇಶ್ವರ ಕಾಲನಿ, ಕಿರಿಮಂಜೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರು ಜಾಹಿರಾತಿನಲ್ಲಿರುವ ಮೊಬೈಲ್‌ ಸಂಖ್ಯೆ 08860193650, 09953946409, 7836908864ನೇದಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಂಡಲ್ಲಿ ಅರ್ಜಿ ಪಾರಂ ಕಳುಹಿಸಲು ಗೌತಮ್‌ ಕುಮಾರ್‌ ರವರ ಖಾತೆ ಸಂಖ್ಯೆ 5122101000196 ನೇದಕ್ಕೆ 2,000 ರೂಪಾಯಿ ಹಣವನ್ನು ಜಮೆ ಮಾಡುವಂತೆ ತಿಳಿಸಿದ್ದು ಅದರಂತೆ ನಾಗರಾತ್ನ ರವರು ಹಣ ಜಮೆ ಮಾಡಿದ್ದು ನಂತರ ಕೆಲವು ದಿನಗಳ ಬಳಿಕ ಅವರಿಗೆ “ Ministry of Environment & Forests Government of India”  ಎಂದು ಬರೆದ ನೇಮಕಾತಿ ಪತ್ರ ಅಂಚೆ ಮೂಲಕ ಬಂದಿದ್ದು 7 ದಿನಗಳ ತರಭೇತಿ ಇರುತ್ತದೆ ಎಂದು ನಮೂದು ಇರುತ್ತದೆ. ನಂತರ ನಾಗರಾತ್ನ ರವರು ಕರೆಮಾಡಿ ವಿಚಾರಿಸಿದಾಗ ತರಬೇತಿ ಸಮಯದಲ್ಲಿ ನಿಮಗೆ ಜಾಮೀನಿಗೆ ಲ್ಯಾಪ್‌ಟಾಪ್‌, ಮೊಬೈಲ್‌ ಮತ್ತು ಇತ್ಯಾದಿ ಸಾಮಾಗ್ರಿಗಳನ್ನು ನೀಡಲು ಇದೆ ನೀವು ಅದಕ್ಕೆ 19,500/- ರೂಪಾಯಿ ಗೌತಮ್‌ರವರ ಖಾತೆಗೆ ಜಮೆ ಮಾಡಬೇಕು ತರಬೇತಿ ಮುಗಿದ ಬಳಿಕ ಹಣವನ್ನು ವಾಪಾಸ್ಸು ನೀಡುವುದಾಗಿ ತಿಳಿಸಿದರು. ಅದರಂತೆ ನಾಗರಾತ್ನ ರವರು ಗೌತಮ್‌ರವರ ಖಾತೆಗೆ ಹಣ ಜಮೆ ಮಾಡಿರುತ್ತಾರೆ ನಂತರ ತರಬೇತಿಯ ಬಗ್ಗೆ ವಿಚಾರಿಸಿದಾಗ ವಿಮೆಗೆ 20,500/- ರೂಪಾಯಿ ಹಣವನ್ನು ಗೌತಮ್‌ರವರ ಖಾತೆಗೆ ಜಮೆ ಮಾಡುವಂತೆ ತಿಳಿಸಿದಂತೆ ನಾಗರತ್ನ ರವರು ಹಣವನ್ನು ಜಮೆ ಮಾಡಿದ ನಂತರ ನಾಗರತ್ನರವರ ತಮ್ಮನ ಈಮೇಲ್‌ ಐಡಿಗೆ “ forestdpartment@gmail.com” ಎಂಬ ಮೇಲ್‌ ಐಡಿಯಿಂದ ಹಣವನ್ನು ಸ್ವೀಕರಿಸಿದ ಬಗ್ಗೆ ದಾಖಲಾತಿ ಕಳುಹಿಸಿರುತ್ತಾರೆ. ನಂತರ ಈ ಬಗ್ಗೆ ಕರೆ ಮಾಡಿ ವಿಚಾರಿಸಿದಾಗ ಕೆಲಸ ಕೊಡಬೇಕಾದರೆ 60,000 ರೂಪಾಯಿಯನ್ನು ಕಟ್ಟಬೇಕಾಗುತ್ತದೆ ಎಂದು ತಿಳಿಸಿದ್ದು ಇದರಿಂದ ಅನುಮಾನಗೊಂಡ ನಾಗರಾತ್ನರವರು ಬೈಂದೂರಿನ ಅರಣ್ಯ ಇಲಾಖೆಯಲ್ಲಿ ವಿಚಾರಿಸಿದಾಗ ಆರೋಪಿತರು ನೀಡಿದ ನೇಮಾಕಾತಿ ಪತ್ರ ಸುಳ್ಳು ಎಂಬುದಾಗಿ ತಿಳಿದಿರುವುದಾಗಿದೆ. ಆರೋಪಿತರು ಇದೇ ರೀತಿ ನಾಗರತ್ನರವರ ಪರಿಚಯದ ಕೆರ್ಗಾಲಿನ ರಾಘವೇಂದ್ರ ಎಂಬುವವರಿಗೆ ವೆಬ್‌ಸೈಟ್‌ ಮುಖಾಂತರ ಅರ್ಜಿ ನಮೂನೆಯನ್ನು ಈ ಮೇಲ್‌ ಮಾಡಿ ನೇಮಕಾತಿ ಪತ್ರ ನೀಡಿ ಮೋಸ ಮಾಡಿ ಹಣವನ್ನು ಪಡೆದುಕೊಂಡಿರುವುದಾಗಿದೆ. ಆರೋಪಿತರು ಸರಕಾರಿ ಕೆಲಸ ಕೊಡಿಸುವ ಬಗ್ಗೆ ನಾಗರತ್ನರವರಿಂದ ಹಾಗೂ ಇತರರಿಂದ ಹಣವನ್ನು ಪಡೆದು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಕೇಂದ್ರ ಸರಕಾರದ ಹೆಸರಿನಲ್ಲಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸುಳ್ಳು ಸ್ಪಷ್ಟನೆ ಮಾಡುವ ಉದ್ದೇಶದಿಂದ ಮೊಹರುಗಳನ್ನು ಸೃಷ್ಟಿಸಿಕೊಂಡು ಅರಣ್ಯ ಇಲಾಖೆಯ ಹೆಸರಿನಲ್ಲಿ ಸುಳ್ಳು ವೆಬ್‌ಸೈಟನ್ನು ತಯಾರಿಸಿ ಅದರ ಮುಖೇನ ಅರ್ಜಿದಾರರಿಗೆ ಹಾಗೂ ಇತರರಿಗೆ ವಂಚನೆ ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 191/2015 ಕಲಂ  468, 471, 472, 420 ಐಪಿಸಿ ಜೊತೆಗೆ 66 (ಡಿ) ಐಟಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: