Monday, July 06, 2015

Daily Crime Reports As On 06/07/2015 At 17:00 Hrs

ಅಪಘಾತ ಪ್ರಕರಣ 
  • ಗಂಗೊಳ್ಳಿ: ದಿನಾಂಕ:05/07/2015 ರಂದು ಚಂದ್ರಶೇಖರ ದೇವಾಡಿಗ, 45 ವರ್ಷ ರವರು ತನ್ನ ಬಾಬ್ತು ಕೆಎ-20-ಡಬ್ಲ್ಯೂ-8111 ನೇ ಮೋಟಾರು ಸೈಕಲ್‌ನಲ್ಲಿ ತನ್ನ ಮಾವ ರಾಮ ದೇವಾಡಿಗ ಎಂಬುವವರನ್ನು ಕುಳ್ಳಿರಿಸಿಕೊಂಡು ಮಾರಣಕಟ್ಟೆ ದೇವಸ್ಥಾನಕ್ಕೆ ಹೋಗಿ ಬರುತ್ತಿರುವಾಗ ಸಂಜೆ 4:00 ಗಂಟೆಗೆ ಬಂಟ್ವಾಡಿಯಿಂದ ಮುಳ್ಳಿಕಟ್ಟೆ ಕಡೆಗೆ ಬರುತ್ತಾ ಹೊಸಾಡು ಗ್ರಾಮದ ಹೊಸಾಡು ಸ.ಹಿ.ಪ್ರಾ ಶಾಲೆಯ ಸಮೀಪ ತಲುಪುವಾಗ ಮುಳ್ಳಿಕಟ್ಟೆ ಕಡೆಯಿಂದ ಬಂಟ್ವಾಡಿ ಕಡೆಗೆ ಹೋಗುತ್ತಿದ್ದ ಕೆಎ-14-ಪಿ-0228 ಸ್ವೀಪ್ಟ್ ಡಿಸೈರ್‌ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತೀರಾ ಬಲಭಾಗಕ್ಕೆ ಹೋಗಿ ಎದುರಿನಿಂದ ಬರುತ್ತಿದ್ದ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ಚಂದ್ರಶೇಖರ ದೇವಾಡಿಗ ಮತ್ತು ಸಹಸವಾರ ರಾಮ ದೇವಾಡಿಗರವರಿಗೆ ಕಾಲಿಗೆ, ತಲೆಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್‌.ಸಿ  ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಚಂದ್ರಶೇಖರ ದೇವಾಡಿಗರವರು ರಾತ್ರಿ 7:55 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 94/2015 ಕಲಂ  279,338,304(ಎ) ಐಪಿಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಬೈಂದೂರು: ಪಿರ್ಯಾದುದಾರರಾದ ಶ್ರೀ ಬಾಲಕೃಷ್ಣ ಶ್ರೀಧರ ಪೈ ರವರು ದಿನಾಂಕ 21-05-2015 ರಂದು ಮಡಗಾವ್ - ಮಂಗಳೂರು ಇಂಟರ್ ಸಿಟಿ ರೈಲು ಗಾಡಿಯಲ್ಲಿ ಜನರಲ್ ಬೋಗಿಯಲ್ಲಿ ಕುಳಿತು ಕಾರವಾರದಿಂದ ಮಂಗಳೂರಿಗೆ ಅವರ  ಹೆಂಡತಿ  ದೀಪಾ ಪೈ ರೊಂದಿಗೆ ಪ್ರಯಾಣಿಸುತ್ತಿರುವಾಗ್ಗೆ, ಎಲ್ಲಾ ಲಗೇಜುಗಳನ್ನು ಪಿರ್ಯಾದಿದಾರರ ಹೆಂಡತಿಯು ಕುಳಿತಿದ್ದ ಸೀಟಿನ ಕೆಳಗೆ ಇಟ್ಟಿರುತ್ತಾರೆ. ಸದರಿ ಬೋಗಿಯು ಖಾಲಿಯಿದ್ದು  ಪಿರ್ಯಾದಿದಾರರ  ಹೆಂಡತಿ ಸೀಟಿನ ಮೇಲೆ ಮಲಗಿದ್ದರು. ಹಾಗೂ ಪಿರ್ಯಾದಿದಾರರು ಅಲ್ಲಿಯೇ ಎರಡು ಸೀಟು ಮುಂದೆ ಕುಳಿತಿದ್ದ ಅವರ ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಿದ್ದರು . ಪಿರ್ಯಾದಿದಾರರ ಹೆಂಡತಿ ಕುಮಟಾ ರೈಲು ನಿಲ್ದಾಣ ಬಿಟ್ಟ ನಂತರ ಮಲಗಿರುತ್ತಾರೆ. ಹಾಗೂ ರೈಲು ಬೈಂದೂರು ನಿಲ್ದಾಣ ಬಿಟ್ಟ ನಂತರ ನಿದ್ರೆಯಿಂದ ಎದ್ದಿರುತ್ತಾರೆ. ಎದ್ದು ನೋಡಲಾಗಿ ಅವರ  ಬಾಬ್ತು ಲೇಡಿಸ್ ವ್ಯಾನಿಟಿ ಬ್ಯಾಗ್  ಕಾಣೆಯಾಗಿದ್ದು ಸದ್ರಿ ಬ್ಯಾಗಿನಲ್ಲಿ 1) 30 ಗ್ರಾಂ ತೂಕದ ಚಿನ್ನದ ಸರ ಮೌಲ್ಯ 1,10,000 ರೂಪಾಯಿ, 2) 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸೂತ್ರ ಮೌಲ್ಯ 40,000 ರೂಪಾಯಿ , 3) ಚಿನ್ನದ ಕಿವಿಯ ಜುಮ್ಕಿ  ಮೌಲ್ಯ 20,000 ರೂಪಾಯಿ 4) ಚಿನ್ನದ ಕಿವಿಯ ರಿಂಗ್‌ ಮೌಲ್ಯ 5000 ರೂಪಾಯಿ 5) ದೀಪಾ ಬಿ ಪೈರವರ ಚಾಲನ ಪರವಾನಿಗೆ 6) ಸ್ಯಾಮ್‌ಸಂಗ್‌ ಮೊಬೈಲ್‌ ಪೋನ್‌ ಮೌಲ್ಯ 6,000,ರೂಪಾಯಿ  7) ಕನ್ನಡಕ ಮೌಲ್ಯ 2,000 ರೂಪಾಯಿ , 8) ಕಪ್ಪು ಛತ್ರಿ ಮೌಲ್ಯ 200 ರೂಪಾಯಿ, 9) ನಗದು ರೂಪಾಯಿ 200 ಕಳವಾಗಿದ್ದು, ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 187/2015 ಕಲಂ 379 ಐಪಿಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
ಜುಗಾರಿ ಪ್ರಕರಣ
  • ಶಿರ್ವಾ: ದಿನಾಂಕ: 05.07.2015 ರಂದು ಶಿರ್ವಾ ಗ್ರಾಮದ ಭೂತೊಟ್ಟು ಜತ್ರಬೆಟ್ಟು  ಹೋಲೋ ಬ್ಲಾಕ್‌ ಫ್ಯಾಕ್ಟರಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಮಾಹಿತಿಯು ಪೊಲೀಸ್‌ ವೃತ್ತ ನಿರೀಕ್ಷಕರು, ಕಾಪು ವೃತ್ತ ಇವರಿಗೆ ಬಂದ ಮಾಹಿತಿಯಂತೆ ಪೊಲೀಸ್‌ ವೃತ್ತ ನಿರೀಕ್ಷಕರು ಕಾಪು ವೃತ್ತರವರ ಆದೇಶದಂತೆ ಬಿ ಲಕ್ಷ್ಮಣ, ಪೊಲೀಸ್‌ ಉಪನಿರೀಕ್ಷಕರು, (ಕ್ರೈಂ) ಕಾಪು ಪೊಲೀಸ್‌ ಠಾಣೆ ರವರು ಸದ್ರಿ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ 17:45 ಗಂಟೆಗೆ ದಾಳಿ ನಡೆಸಿ ಆಪಾದಿತರಾದ 1) ಹಾರೂನ್‌ ರಶೀದ್‌, ಪ್ರಾಯ: 34 ವರ್ಷ, (2) ಇಮ್ತಿಯಾಜ್‌, ಪ್ರಾಯ: 43 ವರ್ಷ, (3) ಇಬ್ರಾಹಿಂ ಪ್ರಾಯ:45 ವರ್ಷ, 4) ಪ್ರಕಾಶ್‌ ರೆಡ್ಡಿ, ಪ್ರಾಯ:30 ವರ್ಷ, 5) ದಯಾನಂದ ಪೂಜಾರಿ, ಪ್ರಾಯ: 42 ವರ್ಷ, ಇವರನ್ನು  ದಸ್ತಗಿರಿ ಮಾಡಿ ಸದ್ರಿಯವರು ಜುಗಾರಿ ಆಟಕ್ಕೆ ಉಪಯೋಗಿಸಿದ ಹಣ ರೂ: 2640/- ರೂಪಾಯಿ, 52 ಎಸ್ಪೇಟ್ ಎಲೆ, ನೆಲಕ್ಕೆ ಹಾಸಿದ್ದ 1 ಪ್ಲಾಸ್ಟಿಕ್‌ ಶೀಟು ಇವುಗಳನ್ನು ಮುಂದಿನ ನಡವಳಿಕೆಯ ಸ್ವಾಧೀನಪಡಿಸಿಕೊಂಡಿದ್ದು, ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 55/15 ಕಲಂ 87 ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಲೆ ಪ್ರಕರಣ
  • ಬ್ರಹ್ಮಾವರ: ದಿನಾಂಕ 05.07.2015 ರಂದು ರಾತ್ರಿ ಉಡುಪಿ ತಾಲೂಕು 33ನೇ ಶಿರೂರು ಗ್ರಾಮದ ಶಿರೂರು ಮೂರ್ಕೈ ಬಳಿಯ ಮದುಮನೆ ಎಸ್ಟೇಟಿನ ಒಳಗೆ ವಾಸವಿರುವ ಆರೋಪಿತರಾದ 1] ನಯನ ದಾಸ್, 2] ಸುಕ್ಲೇಶ್ವರ ಸರೋನಿಯ, 3] ಜಯಂತ ದಾಸ್  ಇವರುಗಳು ಮಂದಾರ್ತಿಯಲ್ಲಿ ವಾಸವಿರುವ ಮಹೇಂದ್ರರಾಜ ಬೋನ್ಸಿ ಎಂಬವರಿಗೆ ದೂರವಾಣಿಯಲ್ಲಿ ಬೈಯುತ್ತಿರುವ ಬಗ್ಗೆ ವಿಚಾರಿಸಲು ಮಹೇಂದ್ರರಾಜ ಬೋನ್ಸಿಯವರು ಪಿರ್ಯಾದಿ ಮ್ರದುಲ್ ಸರೋನಿಯ ಇವರು ಮತ್ತು ಪೂಲನ್ ಬರ್ಮನ್, ಮಿಲನ್ ಬರ್ಮನ್ ಎಂಬವರ ಜೊತೆಯಲ್ಲಿ  ದಿನಾಂಕ 06.07.2015 ರಂದು 01.15 ಗಂಟೆ ಸಮಯಕ್ಕೆ  ಮದುಮನೆ ಎಸ್ಟೇಟ್‌ ನ ಗೇಟಿನ ಬಳಿ ಹೋಗಿ ವಿಚಾರಿಸಿದಾಗ ಆರೋಪಿಗಳು ಸಮಾನ ಉದ್ದೇಶದಿಂದ ಮಹೇಂದ್ರರಾಜ ಬೋನ್ಸಿಯನ್ನು 2 ಮತ್ತು 3ನೇ ಆರೋಪಿಗಳು ಹಿಡಿದುಕೊಂಡು 1ನೇ ಆರೋಪಿ ನಿನ್ನನ್ನು ಕೊಂದೇ ಬಿಡುತ್ತೇನೆ ಎಂದು ಹೇಳಿ ಕೈಯಲ್ಲಿದ್ದ ಕತ್ತಿಯಿಂದ ಬೆನ್ನಿಗೆ ಕಡಿದು ಕತ್ತಿಯ ಹಿಂಬದಿಯಿಂದ ಹಣೆಗೆ ಹೊಡೆದು ತೀವ್ರ ಗಾಯಗೊಳಿಸಿದ್ದು  ಮಹೇಂದ್ರ ರಾಜ ಬೋನ್ಸಿಯನ್ನು ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಾಗ ಸುಮಾರು 02.00 ಗಂಟೆ ಸಮಯಕ್ಕೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 134/15 ಕಲಂ: 302 ಜೊತೆಗೆ 34 ಐಪಿಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ದಿನಾಂಕ 05/07/2015 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಅನೀಶ್‌ ವಿಲಿಯಂ ಫಿಕಾರ್ಢೋ (17) ರವರು ಮದ್ಯಾಹ್ನ 3.30 ಗಂಟೆ ಸುಮಾರಿಗೆ ತನ್ನ ಗೆಳೆಯರೊಂದಿಗೆ ಹೊಸಾಳ ಗ್ರಾಮದ ಜಬ್ಕಳಿ ಹೊಳೆಯಲ್ಲಿ ಈಜಲು ಹೊಳೆಯ ನೀರಿಗೆ ಇಳಿದಿದ್ದು ಸರಿಯಾಗಿ ಈಜಲು ಬಾರದ ಕಾರಣ ಹೊಳೆಯ ನೀರಿನಲ್ಲಿ ಈಜುತ್ತಿರುವಾಗ ನೀರಿನ ಒಳ ಹರಿವಿನ ಸೆಳೆತಕ್ಕೆ ಆಕಸ್ಮಿಕವಾಗಿ ಸಿಕ್ಕಿ ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 37/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ. 
  • ಕಾರ್ಕಳ: ಪದ್ದು ಎಂಬವರು  ಕಾರ್ಕಳ ತಾಲೂಕು ಈದು ಗ್ರಾಮದ  ಗಂಗೀನೀರು ಎಂಬಲ್ಲಿ  ವಾಸ್ತವ್ಯವಿದ್ದು, ಅವರ  ಹೆಂಡತಿ ಒಂದು ವರ್ಷದ ಹಿಂದೆ ಮೃತಪಟ್ಟಿರುತ್ತಾರೆ. ಅವರ  ಮಗನಾದ ಗೋಪಾಲ ಕೂಡ ಅಸೌಖ್ಯದಿಂದ ಇದ್ದು ಅಲ್ಲದೆ ಅವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು ಇದೇ ವಿಚಾರವಾಗಿ ಅವರು  ಮಾನಸಿಕವಾಗಿ ನೊಂದು ತನ್ನ ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ: 05/07/2015 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ: 06/07/2015 ರಂದು ಬೆಳಗ್ಗಿನ ಜಾವ 5:30 ಗಂಟೆಯ ಮದ್ಯಾವದಿಯಲ್ಲಿ ತನ್ನ ಮನೆಯ ಪಕ್ಕದಲ್ಲಿರುವ ಮರದ ಕೊಂಬೆಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್‌ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 14/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

No comments: