Saturday, July 04, 2015

Daily Crime Reports As On 04/07/2015 At 19:30 Hrs



ಅಪಘಾತ ಪ್ರಕರಣ 
  • ಕಾರ್ಕಳ :ದಿನಾಂಕ  04/07/2015 ರಂದು  ಮಧ್ಯಾಹ್ನ 13:30 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ  ಕೂಡಬೆಟ್ಟು  ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 162  ರಲ್ಲಿ  ಆರೋಪಿ  ಲಾರಿ ನಂಬ್ರ TN 37 BP 7438  ನೇಯದನ್ನು ಬಜಗೋಳಿ ಕಡೆಯಿಂದ ಮಾಳ ಕಡೆಗೆ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರಿಗೆ ಬರುತ್ತಿದ್ದ ಪಲ್ಸರ್ ಮೋಟಾರ್ ಸೈಕಲ್ ನಂಬ್ರ KA 20 EG 8173ನೇಯದಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಮೋಟಾರ್ ಸೈಕಲ್ ಸವಾರ ಅಕ್ಷಯ್ ಎಂಬವರಿಗೆ ತಲೆಗೆ ಮತ್ತು ಬಲಗಾಲಿಗೆ ತೀವ್ರ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಮೋಟಾರ್ ಸೈಕಲ್ ಸವಾರ ಅಕ್ಷಯ್ ರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ  ಅಪರಾಧ ಕ್ರಮಾಂಕ 115/15  ಕಲಂ 279.304(A)   ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರ 
  • ಹೆಬ್ರಿ:ಪಿರ್ಯಾದಿದಾರರಾದ ರಾಮ ನಾಯ್ಕ್ (35), ತಂದೆ ದಿ.ಕಾಳು ನಾಯ್ಕ್‌ ವಾಸ:ಕೊಂಡೆಜೆಡ್ಡು, ಚಾರ ಗ್ರಾಮ, ಕಾರ್ಕಳ ತಾಲೂಕು ಇವರ ತಮ್ಮ ರಾಘವೇಂದ್ರ ನಾಯ್ಕ್‌ (30) ಎಂಬುವವರು ವಿಪರೀತ ಮದ್ಯ ಪಾನ ಮಾಡುವ ಚಟ ಹೊಂದಿದ್ದು, ಕೆಲಸಕ್ಕೆ ಹೋಗದೇ ಮನೆಯವರನ್ನು ಪೀಡಿಸಿ ಹಣವನ್ನು ಕೇಳಿ ಪಡೆದು ಕುಡಿಯುತ್ತಿದ್ದು, ಮದ್ಯಪಾನ ಮಾಡಲು ಹಣ ಹೊಂದಿಸಲಾಗದೆ ದಿನಾಂಕ 04/07/2015 ರಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯ ಮಧ್ಯಾವಧಿಯಲ್ಲಿ ತಮ್ಮ ವಾಸದ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದವರನ್ನು ಚಿಕಿತ್ಸೆ ಬಗ್ಗೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ತಂದಾಗ ಸಮಯ ಸುಮಾರು 3:00 ಗಂಟೆಗೆ ಮೃತಪಟ್ಟಿರುವುದಾಗಿದೆ ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆ ಯು.ಡಿ.ಆರ್‌. ಕ್ರಮಾಂಕ 24/15 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ವಂಚನೆ ಪ್ರಕರಣ 
  • ಮಣಿಪಾಲ:ದಿನಾಂಕ 28/07/14 ರಂದು ಆರೋಪಿಗಳಾದ 1] ನೆಬಿಸಾ (30) ಗಂಡ : ಅಶ್ರಫ್ವಾಸ: ಮನೆ ನಂ – 4-631, ನೇತಾಜಿ ನಗರ, 80 ಬಡಗುಬೆಟ್ಟು, ಉಡುಪಿ 2] ಅಶ್ರಫ್ ವಾಸ: ಮನೆ ನಂ – 4-631, ನೇತಾಜಿ ನಗರ, 80 ಬಡಗುಬೆಟ್ಟು, ಉಡುಪಿ 80 ಬಡಗುಬೆಟ್ಟು ಗ್ರಾಮ ರವರು ನೇತಾಜಿನಗರದಲ್ಲಿರುವ ತಮ್ಮ ಮನೆಯಲ್ಲಿ  ಪಿರ್ಯಾಧಿದಾರರಾದ ವಿಶ್ವನಾಥ ಬಂಗೇರ (32)ತಂದೆ: ದಿ|| ಮಹಾಬಲ ಬಂಗೇರ ವಾಸ: ಮಾರಿಕಾಂಬ  ನಗರ, ತೊಟ್ಟಂ, ಮಲ್ಪೆ ರವರೊಂದಿಗೆ ವ್ಯವಹಾರ ನಡೆಸಿ  ರೂ 2,00,000/- ನ್ನು ಪಡೆದು ಸದ್ರಿ ದಿನಾಂಕದಿಂದ 6 ತಿಂಗಳೊಳಗೆ ಮರುಪಾವತಿ ಮಾಡುವುದಾಗಿ ನಂಬಿಸಿ ಪಿರ್ಯಾಧಿದಾರರನ್ನು ನಂಬಿಸಲು ಪೂರಕವಾಗಿ ಕರಾರು ಪತ್ರವನ್ನು ಬರೆದುಕೊಟ್ಟಿದ್ದು, ನಂತರ ಅವಧಿ ಪೂರ್ಣಗೊಂಡರೂ ಮರುಪಾವತಿಸದೆ ದಿನಾಂಕ 04/02/15 ರಂದು ಪಿರ್ಯಾಧಿಗೆ ವಂಚಿಸುವ ಸಲುವಾಗಿ ಯಾರದೋ ಖಾತೆಗೆ ಸೇರಿದ ಚೆಕ್ ನ್ನು ನೀಡಿ ವಂಚಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 133/15  ಕಲಂ 120(ಬಿ) , 406,420 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ  ದಾಖಲಾಗಿರುತ್ತದೆ
ಮಟ್ಕಾ ಜುಗಾರಿ ಪ್ರಕರಣಗಳು 
  • ಬ್ರಹ್ಮಾವರ: ದಿನಾಂಕ 04/06/2015 ರಂದು 12.25 ಗಂಟೆಗೆ ಅನಂತಪದ್ಮನಾಭ ಕೆ.ವಿ, ಉಪನಿರೀಕ್ಷಕರು  ಬ್ರಹ್ಮಾವರ ಠಾಣೆ ರವರು  ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ ವರ್ತಮಾನದ ಮೇರೆಗೆ ಉಪ್ಪೂರು ಗ್ರಾಮದ ಕೊಳಲಗಿರಿ ಗಿರಿ ಬಾರ್ & ರೆಸ್ಟೋರೆಂಟಿನ ಎದುರು ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿ  ಮಟ್ಕಾ ಚೀಟಿ ಬರೆದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆರೋಪಿ ಸುದಾಕರ ಪೂಜಾರಿ (54) ತಂದೆ: ದಿ. ಬೊಗ್ರ ಪೂಜಾರಿ, ವಾಸ: ಕಾನ್ವೆಂಟ್ ರಸ್ತೆ ಕೊಳಲಗಿರಿ ಅಂಚೆ ಹಾವಂಜೆ ಗ್ರಾಮ, ಉಡುಪಿ  ತಾಲೂಕು  ರವರ  ವಶದಲ್ಲಿದ್ದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ರೂ 810/-, ಮಟ್ಕಾನಂಬ್ರ ಬರೆದ ಚೀಟಿ-1, ಬಾಲ್ ಪೆನ್-1,ನ್ನು  ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್  ಠಾಣೆ ಅಪರಾಧ ಕ್ರಮಾಂಕ 133/15 ಕಲಂ: 78 (1)(111) ಕೆ.ಪಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ:ದಿನಾಂಕ 04/07/2015 ರಂದು ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರವರಾದ ಶ್ರೀಕಾಂತ ಕೆ  ರವರಿಗೆ ಮಟ್ಕಾ ಜುಗಾರಿ ಆಟದ ಬಗ್ಗೆ  ದೊರತ ಖಚಿತ ಮಾಹಿತಿಯಂತೆ ಅವರು 11:25 ಗಂಟೆಗೆ ಉಡುಪಿ ಅಂಬಲಪಾಡಿ ಗ್ರಾಮದ ಅಂಬಲಪಾಡಿ ಬಸ್ ನಿಲ್ದಾಣದ ಬಳಿ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದಲ್ಲಿ ನಿರತನಾಗಿದ್ದ ಕೃಷ್ಣ ಪೂಜಾರಿ(43)ತಂದೆ:ಮಹಾಬಲ ಪೂಜಾರಿ ವಾಸ:ನಂದ ನಿವಾಸ ಕಂಬಳಕಟ್ಟ ಕಡೆಕಾರು ಗ್ರಾಮ ಉಡುಪಿ ತಾಲೂಕು ಎಂಬವವನ್ನು ವಶಕ್ಕೆ ಪಡೆದು ಆತನಿಂದ ಮಟ್ಕಾ ಜುಗಾರಿಗೆ ಸಂಗ್ರಹಿಸಿದ ನಗದು ರೂ. 460/-,ಮಟ್ಕಾ ನಂಬ್ರ ಬರೆದ ಚೀಟಿ- 2 , ಹಾಗೂ ಬರೆಯಲು ಬಳಸಿದ ಬಾಲ್‌ ಪೆನ್‌-1 ನ್ನು ಮಹಜರು ಮುಖಾಂತರ ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಉಡುಪಿ ನಗರ ಪೋಲಿಸ್  ಠಾಣೆ ಪರಾಧ ಕ್ರಮಾಂಕ  159/2015 ಕಲಂ 78 (1) (111) KP ACT  ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: