Saturday, July 04, 2015

Daily Crime Reports As On 04/07/2015 At 07:00 Hrsಅಪಘಾತ ಪ್ರಕರಣ

  • ಕಾರ್ಕಳ:ದಿನಾಂಕ 03/07/2015 ರಂದು 16:00 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾರ್ಕಳ ಬಸ್‌ ನಿಲ್ದಾಣದ ಬಳಿ ಇರುವ ಕೆನರಾ ಬ್ಯಾಂಕ್‌ ಎದುರು ರಸ್ತೆಯಲ್ಲಿ ಪಿರ್ಯಾದಿದಾರರಾದ ಯೋಗೀಶ(20)ತಂದೆ:ಜಯಾನಂದ,ವಾಸ ನಟ್ಟೇಲ್ ಮನೆ, ತೆಳ್ಳಾರು ರಸ್ತೆ,ಕಸಬ ಗ್ರಾಮ ಕಾರ್ಕಳ ತಾಲೂಕು ರವರು ನಡೆದುಕೊಂಡು ತೆರಳುತ್ತಿದ್ದಾಗ ಅವರ ಹಿಂದಿನಿಂದ KA 01 MB 5788 ನೇ ನಂಬ್ರದ ಮಹೀಂದ್ರಾ ಸ್ಕೋರ್ಪಿಯೋ ವಾಹನವನ್ನು ಅದರ ಚಾಲಕ ಮನ್ವಿತ್‌ ಎಂಬಾತನು ವಾಹನವನ್ನು ನಿರ್ಲಕ್ಷ್ಯತನದಿಂದ ಯೋಗಿಶ ರವರ ಬಲ ಕಾಲಿನ ಮೇಲೆ ಚಲಾಯಿಸಿಕೊಂಡು ಹೋದ ಪರಿಣಾಮ ಅವರ ಬಲ ಕಾಲಿನ ಪಾದಕ್ಕೆ ಸಾಮಾನ್ಯ ಸ್ವರೂಪದ ರಕ್ತ ಗಾಯವಾಗಿರುತ್ತದೆ.ಈ ಬಗ್ಗೆ ಕಾರ್ಕಳ ನಗರ ಠಾಣೆ ಅಪರಾಧ ಕ್ರಮಾಂಕ 94/2015 ಕಲಂ 279,337 ಐಪಿಸಿರಂತೆ ಪ್ರಕರಣ  ದಾಖಲಾಗಿರುತ್ತದೆ. 
  • ಕುಂದಾಪುರ:ದಿನಾಂಕ 03/07/2015 ರಂದು ಸಂಜೆ 4:25 ಗಂಟೆಗೆ ಕುಂದಾಪುರ ತಾಲೂಕು,ಕಸಬಾ ಗ್ರಾಮದ  ಬೃಂದಾವನ ಕಟ್ಟಡದ ಬಳಿ, ಆಪಾದಿತ ಗೋವಿಂದ ಎಂಬವರು KA 20 C 5256 ನೇ ಮಿನಿ 407 ಟೆಂಪೋ  ವಾಹನವನ್ನು ಕುಂದಾಪುರ ಪುರಸಭಾ ರಸ್ತೆಯಿಂದ ಬೃಂದಾವನ ಕಟ್ಟಡದ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಕಟ್ಟಡದ ಬದಿಯಲ್ಲಿ ನಿಂತುಕೊಂಡಿದ್ದ 1 ½ ವರ್ಷದ ಗಂಡು ಮಗು ದ್ಯಾಮಣ್ಣನಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ರಸ್ತೆಯಲ್ಲಿ ಬಿದ್ದಾಗ ಮಗುವಿನ ತಲೆಯ ಮೇಲೆ ಮಿನಿ 407 ಟೆಂಪೋದ ಹಿಂಬದಿ ಚಕ್ರ ಹಾದು ಹೋಗಿ ಮಗುವಿನ ತಲೆಗೆ ಗಂಭೀರ ರಕ್ತಗಾಯವಾಗಿದ್ದು,  ದ್ಯಾಮಣ್ಣನನ್ನು  ಚಿಕಿತ್ಸೆ ಬಗ್ಗೆ ಕುಂದಾಪುರ  ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ಆಸ್ಪತ್ರೆಯ ವೈದ್ಯರು  ಪರೀಕ್ಷಿಸಿ ಮಗು ದ್ಯಾಮಣ್ಣ  ಮೃತಪಟ್ಟಿದಾಗಿ  ತಿಳಿಸಿರುತ್ತಾರೆ.ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 81/2015 ಕಲಂ 279,304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣಗಳು

  • ಬೈಂದೂರು:ದಿನಾಂಕ 03/07/2015 ರಂದು ಅಪರಾಹ್ನ  3:15 ಗಂಟೆಯ ಸಮಯಕ್ಕೆ ಸಂತೋಷ ಎ ಕಾಯ್ಕಿಣಿ ಪೊಲೀಸ್‌ ಉಪನಿರೀಕ್ಷಕರು ಬೈಂದೂರು ಠಾಣೆ  ರವರಿಗೆ  ಕುಂದಾಪುರ ತಾಲೂಕು ಶಿರೂರು ಗ್ರಾಮದ ಕೋಟೆಮನೆ ರೈಲ್ವೇ ರಸ್ತೆಯ ಪಕ್ಕದ ಸಾರ್ವಜನಿಕ  ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆ ಎಂದು  ದೊರೆತ ಮಾಹಿತಿಯಂತೆ  ಸಿಬ್ಬಂದಿಯವರ ಜೊತೆಯಲ್ಲಿ ಮಾಹಿತಿ ಬಂದ ಸ್ಥಳಕ್ಕೆ ಸಂಜೆ 04:00 ಗಂಟೆಗೆ ಹೋಗಿ ನೋಡಲಾಗಿ ಸ್ಥಳದಲ್ಲಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದದನ್ನು ಖಚಿತಪಡಿಸಿಕೊಂಡು ಆರೋಪಿತರಾದ ಆರೋಪಿತರಾದ 1) ಗಪೂರ್ ಪ್ರಾಯ: 32 ವರ್ಷ ತಂದೆ:ಇಸ್ಮಾಯಿಲ್ ವಾಸ: ಕರಿಕಟ್ಟೆ ಆರ್ಮಿ ಶಿರೂರು ಗ್ರಾಮ ಕುಂದಾಪುರ ತಾಲೂಕು  2) ರಫೀಕ್ ಪ್ರಾಯ: 31 ವರ್ಷ ತಂದೆ: ಅಮೀರ್ ವಾಸ: ನ್ಯೂ ಕಾಲನಿ ಕೆಸರಕೊಡಿ ಶಿರೂರು ಗ್ರಾಮ ಕುಂದಾಪುರ ತಾಲೂಕು 3)ಕೋಕಾ ಅಸ್ಲಾಂ ಪ್ರಾಯ: 42 ತಂದೆ: ಆದಂ ವಾಸ: ಕೋಕಾ ಮಂಜಿಲ್ ನ್ಯೂ ಕಾಲನಿ ಶಿರೂರು ಗ್ರಾಮ ಕುಂದಾಪುರ ತಾಲೂಕು 4) ಮೂಸಾಜಂಗ್ರು ಪ್ರಾಯ: 38 ವರ್ಷ ತಂದೆ: ಹಮ್ಮದ್ ವಾಸ: ಜಾಮೀಯಾ ಮಸೀದಿ ಬಳಿ ಹಡವಿನಕೋಣೆ ಶಿರೂರು ಗ್ರಾಮ ಕುಂದಾಪುರ ತಾಲೂಕು  ರವರನ್ನು ವಶಕ್ಕೆ ಪಡೆದು ಆಟಕ್ಕೆ ಬಳಸಿದ 1) ಹಳೆಯ ದಿನಪತ್ರಿಕೆ-1 2) ಡೈಮಾನ್‌,ಆಟಿನ್‌. ಇಸ್ಪೀಟ್‌, ಕಳವಾರ್ಚಿತ್ರಗಳಿರುವ 52 ಇಸ್ಪೀಟ್ಎಲೆಗಳು 3) ನಗದು ರೂ 1550/- ಅನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ ಅ ಕ್ರ 183/2015 ಕಲಂ 87 ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ದಿನಾಂಕ 03/07/2015 ರಂದು 18:55 ಗಂಟೆಯ ಸಮಯಕ್ಕೆ ಸಂತೋಷ ಎ ಕಾಯ್ಕಿಣಿ ಪೊಲೀಸ್‌ ಉಪನಿರೀಕ್ಷಕರು ಬೈಂದೂರು ಠಾಣೆ  ರವರಿಗೆ  ಕುಂದಾಪುರ ತಾಲೂಕು ಪ್ಪುಂದ ಗ್ರಾಮದ ಮಾರ್ಕೆಟು ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟಾಡುತ್ತಿದ್ದಾರೆ ಎಂದು ದೊರೆತ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ ಆರೋಪಿತ ಮಹಾಬಲ ದೇವಾಡಿಗ(38) ತಂದೆ: ದಿ.ಮಾಚ ದೇವಾಡಿಗ ವಾಸ: ಬಾಳೆ ಹಿತ್ಲು ಮನೆ ಕೊಲ್ಲೂರು ರಸ್ತೆ ಯಡ್ತರೆ ಗ್ರಾಮ, ಕುಂದಾಪುರ ತಾಲೂಕು  ತನ್ನ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಜುಗಾರಿ ಆಟವನ್ನು ಆಡುತ್ತಿರುವುದಾಗಿ ಒಪ್ಪಿಕೊಂಡ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ  ಆತನು ಮಟ್ಕಾ ಜುಗಾರಿಯಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂ 830/-, ಮಟ್ಕಾ ನಂಬ್ರ ಬರೆದ ಚೀಟಿ -1, ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಬೈಂದೂರು ಠಾಣೆ ಅಪರಾಧ ಕ್ರಮಾಂಕ 184/2015 ಕಲಂ 78(1)(3) ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ

  • ಕುಂದಾಪುರ: ನಾಸೀರ್‌ ಹುಸೇನ್‌ ಪೊಲೀಸ್‌ ಉಪ ನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರಾತ್ರಿ ರೌಂಡ್ಸ್ಕರ್ತವ್ಯದಲ್ಲಿರುವಾಗ ದಿನಾಂಕ 03.07.2015 ರಂದು ಬೆಳಿಗ್ಗೆ 03:30 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಕಟ್ಟುವಿನ ಸಿಗಡಿ ಕೆರೆಯ ಬಳಿ ತಲುಪಿದಾಗ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ) ಶಿವಯ್ಯ ಖಾರ್ವಿ ಪ್ರಾಯ:35 ವರ್ಷ ತಂದೆ:ನಾಗರಾಜ ಖಾರ್ವಿ ವಾಸ:ಅಳಿವೆ ಕೋಡಿ, ತಾರಾಪತಿ, ಪಡುವರಿ ಗ್ರಾಮ ಕುಂದಾಪುರ ತಾಲೂಕು, 2) ಮುರಳಿಧರ ಖಾರ್ವಿ ಪ್ರಾಯ:20 ವರ್ಷ ತಂದೆ: ದಿ.ಆನಂದ ಖಾರ್ವಿ ವಾಸ:ಅಳಿವೆಕೋಡಿ, ತಾರಾಪತಿ, ಪಡುವರಿ ಗ್ರಾಮ, ಕುಂದಾಪುರ ತಾಲೂಕು, 3) ನರಸಿಂಹ @ ನರೇಶ ಪ್ರಾಯ:20 ವರ್ಷ ತಂದೆ: ಬಾಬು ಖಾರ್ವಿ ವಾಸ: ಓಲಗ ಮಂಟಪ, ಉಪ್ಪುಂದ ಗ್ರಾಮ, ಕುಂದಾಪುರ ತಾಲೂಕು ಇವರುಗಳು ತನ್ನ ಇರುವಿಕೆಯನ್ನು ಮರೆಮಾಚಿ ನಿಂತಿದ್ದು, ಅವರ ಇರುವಿಕೆಯ ಬಗ್ಗೆ ಪ್ರಶ್ನಿಸಿದಲ್ಲಿ ಸಮರ್ಪಕವಾದ ಉತ್ತರ ನೀಡದೆ ಇದ್ದುದರಿಂದ ಅವರುಗಳು ಸ್ಥಳದಲ್ಲಿ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಇರಾದೆಯಿಂದ ನಿಂತಿರುವುದು ಎಂದು ಸಂಶಯದಿಂದ ಅವರುಗಳನ್ನು ವಶಕ್ಕೆ ಪಡೆದು ಠಾಣೆಗೆ ತಂದು ದಸ್ತಗಿರಿ ಮಾಡಿ ಕುಂದಾಪುರ ಠಾಣೆ ಅಪರಾಧ ಕ್ರಮಾಂಕ 255/2015 ಕಲಂ: 109 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿದ್ದಾಗಿದೆ.

ಅಸ್ವಾಭಾವಿಕ  ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶಿವಾನಂದ ಜಿ ಕಾಮತ್‌ (50) ತಂದೆ: ಗಣಪತಿ ಡಿ ಕಾಮತ್‌ ವಾಸ: ಗಣೇಶ ಕೃಪಾ ಬಂಕೇಶ್ವರ ರಸ್ತೆ ಬೈಂದೂರು ಯಡ್ತರೆ ಗ್ರಾಮ ಕುಂದಾಪುರ ತಾಲೂಕು ರವರ  ಹೆಂಡತಿ ಸವಿತ(48)  ಎಂಬುವವರು 5-6 ವರ್ಷಗಳಿಂದ ಮಾನಸಿಕ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಸ್ಥಳೀಯ ವೈದ್ಯರಿಂದ ಔಷಧ ತೆಗೆದುಕೊಳ್ಳುತ್ತಿದ್ದರು ಇತ್ತೀಚೆಗೆ ಯಾವುದೇ ಔಷಧ ತೆಗೆದುಕೊಳ್ಳುತ್ತಿರಲಿಲ್ಲ. ಸವಿತ ರವರು ಅವರಿಗೆ ಇರುವ ಮಾನಸಿಕ ಖಿನ್ನತೆ ಕಾಯಿಲೆಯಿಂದ ನೊಂದು ದಿನಾಂಕ 02-07-2015 ರಂದು ರಾತ್ರಿ ವೇಳೆಯಿಂದ ದಿನಾಂಕ 03-07-2015 ರಂದು ಬೆಳಿಗ್ಗೆ 06:45 ಗಂಟೆ ನಡುವಿನ ಸಮಯದಲ್ಲಿ ಶಿವಾನಂದ ಕಾಮತ್ ರವರ ಮನೆಯ ಅಂಗಳದಲ್ಲಿರುವ ಬಾವಿಯ ನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ  ಬೈಂದೂರು ಠಾಣಾ ಯುಡಿಅರ್‌ ಕ್ರಮಾಂಕ 25/2015 ಕಲಂ: 174   ಸಿಅರ್ಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.    

No comments: