Friday, July 03, 2015

Daily Crime Reports As On 03/07/2015 At 17:00 Hrs


ಅಕ್ರಮ ಗೋ ಸಾಗಾಟ ಪ್ರಕರಣ

  • ಪಡುಬಿದ್ರಿ: ದಿನಾಂಕ. 02.07.2015 ರಂದು ಪಡುಬಿದ್ರಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅಝುಮತ್ ಆಲಿ ಜಿ ರವರು ಪಡುಬಿದ್ರಿ ಪೇಟೆಯಲ್ಲಿ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾಪು ಕಡೆಯಿಂದ ಒಂದು ಬೋಲೇರೋ ಜೀಪು ಅತೀ ವೇಗವಾಗಿ ಪಡುಬಿದ್ರಿ ಕಡೆಗೆ ಬರುತ್ತಿರುವ ಬಗ್ಗೆ ವರ್ತಮಾನ ಬಂದ ಮೇರೆಗೆ ಪಡುಬಿದ್ರಿ ಪೇಟೆ ರಾ.ಹೆ 66 ರಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಕೆಎ-34-ಎಂ-5495 ನೇ ಬಿಳಿ ಬಣ್ಣದ ಬೋಲೇರೋ ಜೀಪು ಅತೀ ವೇಗವಾಗಿ ಬರುತ್ತಿದ್ದನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೇ ಹೋಗಿದ್ದು, ಸದ್ರಿ ಜೀಪನ್ನು ಬೆನ್ನಟ್ಟಿ ಹೋಗಿದ್ದು, ಕಣ್ಣು ತಪ್ಪಿಸಿ ಮುಂದೆ ಹೋಗಿರುತ್ತದೆ. ನಂತರ ಹೆಜಮಾಡಿ ಗ್ರಾಮದ ಎನ್.ಎಸ್. ರಸ್ತೆಯ ಲಕ್ಕಣ್ಣ ತೋಟದ ಬಳಿ ಬಿಳಿ ಜೀಪು ನಿಂತಿರುವುದಾಗಿ ಬಂದ ಮಾಹಿತಿಯಂತೆ ಹೋಗಿ ನೋಡಿದಾಗ ಬೋಲೆರೋ ಜೀಪಿನಲ್ಲಿ ಹಿಂದಿನ ಸೀಟಿನ್ನು ಕಳಚಿ ಒಂದು ದನವನ್ನು ಯಾರೋ ಕಳ್ಳರು ಎಲ್ಲಿಂದಲೋ ಕಳವು ಮಾಡಿಕೊಂಡು ಹಿಂಸಾತ್ಮಕ ರೀತಿಯಲ್ಲಿ ಯಾವುದೇ ಮೇವು ಬಾಯಾರಿಕೆ ನೀಡದೇ ಉಸಿರು ಕಟ್ಟುವ ರೀತಿಯಲ್ಲಿ ಹಗ್ಗದಲ್ಲಿ ಕಟ್ಟಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ವಧೆ ಮಾಡುವರೇ ಕಸಾಯಿಖಾನೆಗೆ ಸಾಗಿಸಲು ಪ್ರಯತ್ನಿಸಿದ್ದು, ಸದ್ರಿ ಬೋಲೇರೋ ಜೀಪನ್ನು ಬೆನ್ನಟ್ಟಿದಾಗ ಪೊಲೀಸರು ಕಂಡು ಅದರಲ್ಲಿದ್ದ ದನಕಳ್ಳರು ಜೀಪನ್ನು ನಿಲ್ಲಿಸಿ ಪರಾರಿಯಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 90/15 ಕಲಂ. ಕಲಂ. 279, 379, 429  ಐ.ಪಿ.ಸಿ. ಮತ್ತು  8, 9, 11 ಕರ್ನಾಟಕ ಗೋ ವಧೆ ಮತ್ತು ಪ್ರತಿಬಂಧಕ ಜಾನುವಾರು ಪರಿರಕ್ಷಣೆ ಅಧಿನಿಯಮ 1964 ಮತ್ತು ಕಲಂ 11(1) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ 1960 ಹಾಗೂ 192 ಐ.ಎಂ.ವಿ ಕಾಯಿದೆಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹೆಬ್ರಿ: ಶಾಂತಲಾ ಪ್ರಭು (45) ಎಂಬುವವರು ಸುಮಾರು 6 ತಿಂಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಅದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 02-07-2015 ರಂದು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯ ಮಧ್ಯಾವಧಿಯಲ್ಲಿ ಚಾರ ಗ್ರಾಮದ, ಮಂಡಾಡಿಜೆಡ್ಡುವಿನಲ್ಲಿನ ಪ್ರಭಾಕರ ಹೆಗ್ಡೆ ಎಂಬುವವರ ಬಾಬ್ತು ಜಾಗದಲ್ಲಿರುವ ತೆರೆದ ಬಾವಿಗೆ ಹಾರಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 23/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಬ್ರಹ್ಮಾವರ:  ದಿನಾಂಕ: 02-07-2015 ರಂದು ಸಂಜೆ ಸುಮಾರು 7:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು, ಹೊಸೂರು ಗ್ರಾಮದ ಕರ್ಜೆ ಎಂಬಲ್ಲಿ ಪಿರ್ಯಾದಿ ಗೋಪಾಲ ನಾಯ್ಕ ಇವರು ಅವರ ಅಂಗಡಿಯಿಂದ ಆದಿಮನೆ ಅಮ್ಜಿ ಎಂಬಲ್ಲಿಗೆ ಹೋಗುತ್ತಿದ್ದಾಗ ಪಿರ್ಯಾದಿದಾರರ ಮಾವನ ಮನೆಯಿಂದ ಅಪ್ಪು ನಾಯ್ಕರ ಹೆಂಡತಿ ಪುಷ್ಪ ರವರ ಬೊಬ್ಬೆ ಕೇಳಿಸಿದ್ದು , ನೋಡಲಾಗಿ ಅಪ್ಪು ನಾಯ್ಕರ ಮನೆಯ ಅಂಗಳದಲ್ಲಿ ಅಪ್ಪು ನಾಯ್ಕ ರಿಗೆ ಜಾಗದ ವಿಚಾರ ಸಂಬಂಧ ಅವರ ಅಣ್ಣ ವೆಂಕಟೇಶನು ಹರಿತವಾದ ವಸ್ತುವಿನಿಂದ ಅಪ್ಪುನಾಯ್ಕರ ಬಲ ತೋಳಿಗೆ, ಎಡ ತೋಳಿಗೆ ಗೀರಿ ಗಾಯಮಾಡಿ ಬಳಿಕ ಪಿರ್ಯಾದಿದಾರರಿಗೆ ಅಪ್ಪು ನಾಯ್ಕರ ಸಹೋದರ  ಶ್ರೀನಿವಾಸನು ಕಲ್ಲಿನಿಂದ ಬಾಯಿಗೆ ಬೀಸಿ ಹೊಡೆದ ಪರಿಣಾಮ ತುಟಿಗೆ ರಕ್ತಗಾಯವಾಗಿ ಹಲ್ಲು ಮುರಿತವಾಗಿ ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 132/15 ಕಲಂ: 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

No comments: