Friday, July 03, 2015

Daily Crime Reports As On 03/07/2015 At 19:30 Hrs


ಅಪಘಾತ ಪ್ರಕರಣ
  • ಕೊಲ್ಲೂರು: ದಿನಾಂಕ 02/07/15 ರಂದು ಪಿರ್ಯಾದಿದಾರರಾದ ಪಿ. ನಾರಾಯಣ ನಾಯ್ಕ (63) ತಂದೆ; ಶೀನ ನಾಯ್ಕ ವಾಸ; ನ್ಯಾಗಳಮನೆ ಚಿತ್ತೂರು ಗ್ರಾಮ ಕುಂದಾಪುರ ತಾಲೂಕುರವರು ತನ್ನ ಮಗಳು ರೋಹಿಣಿ ಎಸ್.ತೋಳಾರ್ (39) ರವರೊಂದಿಗೆ ತನ್ನ ಮನೆಯಿಂದ ನಂದ್ರೋಳಿ- ವಂಡ್ಸೆ ರಸ್ತೆಯಿಂದಾಗಿ ವಂಡ್ಸೆ ಕಡೆಗೆ ತರಕಾರಿ ತರಲೆಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೆಳಗ್ಗೆ 09:30 ಗಂಟೆಗೆ  ನಂದ್ರೋಳಿ ಕಡೆಯಿಂದ  ವಂಡ್ಸೆ ಕಡೆಗೆ  KA 20 EA 9812 ನೇ ಮೊಟಾರು ಸೈಕಲ್‌  ಚಾಲಕನಾದ  ಮಣಿಂದರ ಗಾಣಿಗ ರವರು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಭಾಗಕ್ಕೆ ಚಲಾಯಿಸಿಕೊಂಡು ಬಂದು ರೋಹಿಣಿ ಎಸ್.ತೋಳಾರ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಮಣ್ಣು ರಸ್ತೆಗೆ ಬಿದ್ದು ಎಡ ಮೊಣಕಾಲಿಗೆ ಮತ್ತು ಎಡ ಭುಜಕ್ಕೆ ಒಳ ಪೆಟ್ಟಾಗಿರುತ್ತದೆ ಎಂಬುದಾಗಿ ಪಿ. ನಾರಾಯಣ ನಾಯ್ಕರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣಾ ಅಪಾರಾಧ ಕ್ರಮಾಂಕ 87/2015 ಕಲಂ: 279, 337 ಐಪಿಸಿಯಂತೆ  ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಂಚನೆ ಪ್ರಕರಣ
  • ಹಿರಿಯಡ್ಕ: ಪಿರ್ಯಾದಿದಾರರಾದ  ಕೆ.ರವಿಶಂಕರ (41), ತಂದೆ: ದಿವಂಗತ ಪಿ.ಬಾಲಕೃಷ್ಣ, ವಾಸ:  ಬಸ್ತಿ ಮೈದಾನ, ಬೊಮ್ಮಾರಬೆಟ್ಟು ಗ್ರಾಮ, ಹಿರಿಯಡ್ಕ, ಉಡುಪಿ ತಾಲೂಕುರವರು ಧರ್ಮಸ್ಥಳ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, ಬ್ಯಾಂಕ್ ಖಾತೆಯಿಂದ ಎ.ಟಿ.ಎಮ್ ಕಾರ್ಡಿನ ಸೀಕ್ರೆಟ್ ಕೋಡ್ ನ್ನು ಯಾರೋ ಹ್ಯಾಕ್ ಮಾಡಿ ದಿನಾಂಕ: 26/06/2015 ರಂದು ರೂಪಾಯಿ  366.31/, ದಿನಾಂಕ: 27/06/2015 ರಂದು ರೂಪಾಯಿ 8,220.11/-, ರೂಪಾಯಿ 732.63/- ಹಾಗೂ ರೂಪಾಯಿ 16191.13/-.ಹೀಗೆ  ಒಟ್ಟು ರೂಪಾಯಿ 25,510.18/- ನ್ನು ಯಾರೋ ವಿದೇಶದಲ್ಲಿ ಪಿರ್ಯಾದಿದಾರರ ಖಾತೆಯಿಂದ ನಗದೀಕರಿಸಿ ಮೋಸ ಮಾಡಿರುತ್ತಾರೆ. ಈ ಬಗ್ಗೆ  ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  69/2015 ಕಲಂ 66(ಡಿ) IT Act, 420 ಐಪಿಸಿಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

No comments: