Friday, July 03, 2015

Daily Crime Reports As On 03/07/2015 At 07:00 Hrsಅಪಘಾತ ಪ್ರಕರಣಗಳು

  • ಕುಂದಾಪುರ:ದಿನಾಂಕ 02/07/2015 ರಂದು ಮಧ್ಯಾಹ್ನ 3:00 ಗಂಟೆಗೆ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ನೆಂಪು ನೀರ್‌‌ ಕೋಡ್ಲು  ಕ್ರಾಸ್ ಬಳಿ ತಿರುವಿನಿಂದ ಕೂಡಿದ ರಾಜ್ಯ ರಸ್ತೆಯಲ್ಲಿ ಆಪಾದಿತ  ಕೆ. ಆಶ್ರಪ್‌ ಎಂಬವರು KA 28 M 9912  ನೇ ಮಹೀಂದ್ರ ಬೊಲೇರೋ ಜೀಪನ್ನು ನೇರಳ ಕಟ್ಟೆ ಕಡೆಯಿಂದ ವಂಡ್ಸೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ತೀರ ಬಲಬದಿಗೆ ಬಂದು ವಂಡ್ಸೆ ಕಡೆಯಿಂದ ನೇರಳಕಟ್ಟೆ ಕಡೆಗೆ ಎನ್‌.ಆರ್ ಹಸೈನರ್@ ಸದ್ದಾಂ ಎಂಬವರು ಸವಾರಿ ಮಾಡಿಕೊಂಡು  ಬರುತ್ತಿದ್ದ  KA 20 X 126 ನೇ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ  ಪರಿಣಾಮ ಎನ್‌.ಆರ್ ಹಸೈನರ್ @ ಸದ್ದಾಂರವರ ಎಡಕಾಲಿನ ಮುಂಗಾಲು ಗಂಟಿಗೆ,  ಮುಂಗಾಲು ಗಂಟಿನ  ಕೆಳಗೆ ಕೋಲು ಕಾಲಿಗೆ ರಕ್ತಗಾಯ ಹಾಗೂ ಒಳ ನೋವು ಆಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಚಿಕಿತ್ಸೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79/2015  ಕಲಂ 279,337 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ದಿನಾಂಕ: 02/07/2015 ರಂದು ಪಿರ್ಯಾದಿ ಗುಲಾಮ್ ಸಾಹೇಬ್ ಇವರು ತನ್ನ ಮನೆಯಿಂದ ಲಕ್ಷ್ಮೀಂದ್ರ ನಗರಕ್ಕೆ ಕೆಲಸಕ್ಕೆ ಹೋಗುವರೇ ತನ್ನ ಮಗನ ಬಾಬ್ತು  ಸ್ಕೂಟರ್ ನಂಬ್ರ ಕೆಎ 20 ಇಡಿ 5723 ನೇದನ್ನು ಸವಾರಿ ಮಾಡಿಕೊಂಡು ತನ್ನ ಮನೆಯಿಂದ ಪಣಿಯಾಡಿ ರಸ್ತೆ ಮೂಲಕ ಬಂದು ರೈಲ್ವೇ ಸ್ಟೇಶನ್ ರಸ್ತೆ ಮೂಲಕ ಲಕ್ಷ್ಮೀಂದ್ರ ನಗರಕ್ಕೆ ಹೋಗುವರೇ ಇಂದ್ರಾಳಿ ಮಸೀದಿ ಎದುರುಗಡೆಯಿಂದ ಮಣಿಪಾಲ ಉಡುಪಿ ರಸ್ತೆಯನ್ನು ದಾಟುತ್ತಿರುವ ಸಮಯ  ಮಧ್ಯಾಹ್ನ 1.15 ಗಂಟೆಗೆ ಮಣಿಪಾಲ ಕಡೆಯಿಂದ ಕೆಎ 20 ಇಜೆ 3706 ನೇ ದ್ವಿಚಕ್ರ ಚಾಲಕ ಹರ್ಷದ್‌ನು ತನ್ನ ಬಾಬ್ತು ಮೋಟಾರು ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮ 2 ವಾಹನಗಳು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಕೈಗೆ ಓಳಜಖಂ ಹಾಗೂ ಬಲಕಾಲಿಗೆ ರಕ್ತಗಾಯವಾಗಿರುತ್ತದೆ. ಅಲ್ಲದೇ ಅರೋಪಿ ಹಾಗೂ ಅತನ ಸಹಸವಾರನಿಗೂ ಕೂಡಾ ಗಾಯನೋವುಗಳಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2015  ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಲ್ಪೆ: ಪಿರ್ಯಾದಿ ನಬೀಲ್ ಅಹ್ಮದ್ ಇವರು ದಿನಾಂಕ: 01/07/2015 ರಂದು ಮದ್ಯಾಹ್ನ ಸುಮಾರು 04:00 ಗಂಟೆ ಸಮಯಕ್ಕೆ ಅವರ ಮಾವನಾದ ತೌಫಿಕ್‌ ರವರೊಂದಿಗೆ ಕೆಎ-47-ಇ-9467 ನೇ ಹೊಂಡಾ ಎಕ್ಟಿವಾ ದಲ್ಲಿ ಕಲ್ಮಾಡಿ ಜಂಕ್ಷನ್‌‌ನಿಂದ ಸುಮಾರು 500 ಮೀಟರ್  ಹಿಂದೆ ಕಿದಿಯೂರು ರಸ್ತೆಯಲ್ಲಿ ತಲುಪುವಾಗ ಕಲ್ಮಾಡಿ ಜಂಕ್ಷನ್‌ನಿಂದ ಕಿದಿಯೂರು ಕಡೆಗೆ ಬರುತ್ತಿದ್ದ  ಕೆಎ-20-ಎ-5356 ನೇ ಟೆಂಪೋ ರಿಕ್ಷಾ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ನಿಮಿಕ್ತ ಟೆಂಪೋ ರಿಕ್ಷಾದ ಒಳಗಿದ್ದ ವೆಲ್ಡ್‌ ಮಾಡಿದ ಕಬ್ಬಿಣದ ಪೈಪ್‌ ತುಂಡಾಗಿ ಪಿರ್ಯಾದಿದಾರರ ಸ್ಕೂಟರಿನ ಬಲ ಬದಿಗೆ ಬಿದ್ದ ಪರಿಣಾಮ ಸ್ಕೂಟರ್‌ ಸವಾರನು ಆಯ ತಪ್ಪಿ ಸ್ವಲ್ಪ ಮುಂದೆ ಹೋಗಿ ಸ್ಕೂಟರ್‌ ಸಮೇತ ಸವಾರ ಹಾಗೂ ಸಹಸವಾರರು ಬಿದ್ದು, ಸವಾರ ತೌಫಿಕ್‌ ರವರಿಗೆ ಬಲ ಕಾಲಿನ ಬೆರಳಿಗೆ ಮೂಳೆ ಮುರಿತದ ರಕ್ತ ಗಾಯ ಹಾಗೂ ಸಹ ಸವಾರರಾದ ಪಿರ್ಯಾದಿದಾರರಿಗೆ ಕಾಲಿಗೆ ಕೈಗೆ ತರಚಿದ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2015 ಕಲಂ 279, 338  IPC & 134 ( ಬಿ) ಐಎಮ್‌ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 02/07/2015 ರಂದು ಸಮಯ ಸುಮಾರು ಸಂಜೆ 7:00  ಗಂಟೆಗೆ  ಕುಂದಾಪುರ ತಾಲೂಕು ಕಾವ್ರಾಡಿ  ಗ್ರಾಮದ ಕಂಡ್ಲೂರು  ಎಂಬಲ್ಲಿ  ರಾಜ್ಯ  ರಸ್ತೆಯಲ್ಲಿ  ಆಪಾದಿತ  ಗಿರೀಶ ಪೂಜಾರಿ ಎಂಬವರು  KA20-EG-4149ನೇ ಬೈಕನಲ್ಲಿ  ಪಿರ್ಯಾದಿ ಶ್ರೀಕಾಂತ ಇವರನ್ನು ಸಹ ಸವಾರರಾಗಿ  ಕುಳ್ಳೀರಿಸಿಕೊಂಡು ಹುಣ್ಸೆಮಕ್ಕಿ ಯಿಂದ ಜಪ್ತಿ ಮಾರ್ಗವಾಗಿ  ಕಂಡ್ಲೂರು ಕಡೆಗೆ   ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಾಲನೆ  ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ  ಲಕ್ಷ್ಮಣ  ನಾಯ್ಕ ಎಂಬವರಿಗೆ ಡಿಕ್ಕಿ  ಹೊಡೆದ  ಪರಿಣಾಮ ಲಕ್ಷ್ಮಣ ನಾಯ್ಕ, ಹಾಗೂ ಪಿರ್ಯಾದಿ ಹಾಗೂ ಆಪಾದಿತ ಗಿರೀಶ ಪೂಜಾರಿ  ರಸ್ತೆಯಲ್ಲಿ  ಬಿದ್ದು ಗಾಯಗೊಂಡು  ಚಿಕಿತ್ಸೆ  ಬಗ್ಗೆ  ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ  ಚಿಕಿತ್ಸೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2015 ಕಲಂ 279, 338  IPC & 134 ( ಬಿ) ಐಎಮ್‌ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ
  • ಹೆಬ್ರಿ:  ಶಾಂತಲಾ ಪ್ರಭು (45) ಎಂಬುವವರು ದಿನಾಂಕ 02-07-2015 ರಂದು ಮಧ್ಯಾಹ್ನ 12:00 ಗಂಟೆಗೆ ಮಂಡಾಡಿಜೆಡ್ಡು, ಚಾರ ಗ್ರಾಮ, ಕಾರ್ಕಳ ತಾಲೂಕು ಇಲ್ಲಿನ ಮನೆಯಿಂದ ಕಾಣೆಯಾಗಿದ್ದು, ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2015  ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಕುಂದಾಪುರ: ಪಿರ್ಯಾದಿ ಸುರೇಶ್‌ ಪೂಜಾರಿ ಇವರು ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಕೋಟೇಶ್ವರ ಗಾಂಧಿ ಸರ್ಕಲ್‌ ಬಳಿ ಇರುವ ಕೋಟಿಲಿಂಗೇಶ್ವರ ಕಟ್ಟಡದ 1 ನೇ ಮಹಡಿಯಲ್ಲಿ ಸನ್ನಿಧಿ ಮೊಬೈಲ್‌ ಎಂಬ ಮೊಬೈಲ್‌ ಮಾರಾಟ ಮತ್ತು ರಿಪೇರಿ ಅಂಗಡಿಯನ್ನು ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು, ದಿನಾಂಕ 01.07.2015 ರ ರಾತ್ರಿ 9:45 ಗಂಟೆಯಿಂದ ದಿನಾಂಕ 02.07.2015 ರ ಬೆಳಿಗ್ಗೆ 07:37 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸದ್ರಿ ಮೊಬೈಲ್‌ ಅಂಗಡಿಯ ಶೆಟರ್‌ ಡೋರ್‌ಗೆ ಅಳವಡಿಸಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯಲ್ಲಿದ್ದ ಹೊಸ ಮೊಬೈಲ್‌ ಹ್ಯಾಂಡ್‌ ಸೆಟ್‌ಗಳು ಪೆನ್‌ ಡ್ರೈವ್, ಮೆಮೊರಿ ಕಾರ್ಡ್‌ಗಳು, ಹಾಗೂ ರಿಪೇರಿಗೆ ಬಂದ ಹಳೆಯ ಹ್ಯಾಂಡ್‌ಸೆಟ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 4 ಲಕ್ಷ ಆಗಬಹುದು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 254/2015, ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಕಾರ್ಕಳ ತಾಲೂಕಿನ ಕಸಬ ಗ್ರಾಮದ ಮೂರು ಮಾರ್ಗ ಜಂಕ್ಷನ್ ಬಳಿ ಇರುವ ಪಿರ್ಯಾದಿ ವಿನೋದ್ ಕಿಣೆ ಇವರ ಬಾಬ್ತು ಕನೆಕ್ಟ್ ಪಾಯಿಂಟ್ ಎಂಬ ಹೆಸರಿನ ಮೊಬೈಲ್ ಫೋನ್ ಮಾರಾಟದ ಅಂಗಡಿಗೆ ದಿನಾಂಕ 01/07/2015 ರಂದು 20:30 ಗಂಟೆಯಿಂದ ದಿನಾಂಕ 02/07/2015 ರ 06:00 ಗಂಟೆಯ ಮಧ್ಯೆ ಅವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಮುಂಬದಿಯ ಶಟರಿಗೆ ಅಳವಡಿಸಿದ ಬೀಗವನ್ನು ಮುರಿದು, ಒಳ ಪ್ರವೇಶಿಸಿ ಅಂಗಡಿಯಲ್ಲಿದ್ದ ಸ್ಯಾಮ್‌‌‌‌ಸಂಗ್ ಕಂಪೆನಿಯ ವಿವಿಧ ಮಾದರಿಯ 38 ಮೊಬೈಲ್‌ಗಳು , GIONEE ಕಂಪೆನಿಯ ವಿವಿಧ ಮಾದರಿಯ 32 ಮೊಬೈಲ್‌ಗಳು, MICROMAX ಕಂಪೆನಿಯ ವಿವಿಧ ಮಾದರಿಯ 32 ಮೊಬೈಲ್‌ಗಳು, MICROSOFT & NOKIA ಕಂಪೆನಿಯ ವಿವಿಧ ಮಾದರಿಯ 27 ಮೊಬೈಲ್‌ಗಳು, LAVA ಕಂಪೆನಿಯ ವಿವಿಧ ಮಾದರಿಯ 18 ಮೊಬೈಲ್‌ಗಳು, INTEX ಕಂಪೆನಿಯ ವಿವಿಧ ಮಾದರಿಯ 3 ಮೊಬೈಲ್‌ಗಳು, PHILIPS ಕಂಪೆನಿಯ ವಿವಿಧ ಮಾದರಿಯ 2 ಮೊಬೈಲ್‌ಗಳು ಸೇರಿ ಒಟ್ಟು 9,74,500/- ರೂಪಾಯಿ ಬೆಲೆಬಾಳುವ  152 ಮೊಬೈಲ್ ಪೋನ್‌‌ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93 /2015 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ 
  • ಬೈಂದೂರು: ಪಿರ್ಯಾದಿ ದಿನೇಶ ಎಸ್ ಇವರು ದಿನಾಂಕ 02-07-2015 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ಮನೆಯಿಂದ ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆ ಎ 20 ಈಡಿ 0331ನೇದರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿಯ ಬಳಿಯ ಎಂಎಲ್ಎ ಆಫೀಸ್ ಬಳಿಗೆ ಸುಮಾರು 11:10 ಗಂಟೆಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರಿಗೆ ಪರಿಚಯವಿರುವ ಸುರೇಶ್ ಬಟ್ವಾಡಿ ಎಂಬವರು ಅವರ ಬಾಬ್ತು ಮೋಟಾರು ಸೈಕಲ್‌ನಲ್ಲಿ ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ಗೆ ಅಡ್ಡ ಇಟ್ಟು ನೀನು ಚುನಾವಣೆಯಲ್ಲಿ ನನ್ನ ವಿರುದ್ದ ಕೆಲಸ ಮಾಡಿದ್ದಿ ಎಂದು ಅವಾಚ್ಯ ಶಬ್ದಗಳಿಂದ ಬೈದು, ಬೈಕ್‌ನಿಂದ ದೂಡಿ ಕೈಯಿಂದ ಕಪಾಲಕ್ಕೆ ಹೊಡೆದು ಒಂದು ಕಲ್ಲಿನಿಂದ ಪಿರ್ಯಾದಿದಾರರ ಎದೆಗೆ ಹೊಡೆದನು. ಆಪಾದಿತನು ಆತನ ಬೈಕ್‌ನಲ್ಲಿದ್ದ ದೊಣ್ಣೆಯಲ್ಲಿ ತೆಗೆಯಲು ಹೋದಾಗ ಪಿರ್ಯಾದಿದಾರರು ಬೊಬ್ಬೆ ಹಾಕಿದ್ದು, ಆ ಸಮಯ ಪಿರ್ಯಾದಿದಾರರ ತಮ್ಮ ಅಲ್ಲಿಗೆ ಬಂದಿದ್ದು, ಪಿರ್ಯಾದಿದಾರರ ತಮ್ಮ ಬರುವುದನ್ನು ನೋಡಿದ ಆಪಾದಿತನು ಆತನ ಬಾಬ್ತು ಮೋಟಾರು ಸೈಕಲ್‌ನಲ್ಲಿ ಓಡಿ ಹೋಗುತ್ತಾ ನಿನ್ನನ್ನು ಮುಂದಿನ ದಿನಗಳಲ್ಲಿ ನೋಡಿಕೊಳ್ಳುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 182/2015 ಕಲಂ 341,504,323,324,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ವಿಶ್ವನಾಥಪ್ಪ ಗೌಡ ಪ್ರಾಯ 66 ವರ್ಷ ರವರು ದಿನಾಂಕ 01.07.2015 ರಂದು ಸಂಜೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಕಬ್ಬಿಗೆಬೈಲ್‌ ಎಂಬಲ್ಲಿನಿಂದ ಬಸ್ಸಿನಲ್ಲಿ ಕುಂದಾಪುರಕ್ಕೆ ಪ್ರಯಾಣ ಬೆಳೆಸಿ ಮಾರ್ಗ ಮಧ್ಯೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಎಂಬಲ್ಲಿ ಬಸ್ಸಿನಿಂದ ಇಳಿದು ಕಂಡ್ಲೂರು ಹೊಳೆ ಬದಿಗೆ ಹೋದವರು ಆಕಸ್ಮಿಕವಾಗಿ ಹೊಳೆಯ ನೀರಿನಲ್ಲಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 26/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: