Thursday, July 02, 2015

Daily Crime Reports As On 02/07/2015 At 17:00 Hrs

ಹುಡುಗಿ ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಶೇಖಪ್ಪ, ತಂದೆ: ಭರಮಪ್ಪ, ವಾಸ: ಅಮೀನ್‌ಗಡ, ಹುನಗುಂದ ತಾಲೂಕು,ಬಾಗಲಕೋಟೆ ಜಿಲ್ಲೆ ಇವರು  ಸಂಸಾರದೊಂದಿಗೆ ಪ್ರಗತಿನಗರ ಲೇಬರ್‌ ಕಾಲೋನಿಯಲ್ಲಿ ವಾಸವಾಗಿದ್ದುಕೊಂಡು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 30/06/15ರಂದು ಬೆಳಿಗ್ಗೆ 08:15ಗಂಟೆಗೆ ಶೇಖಪ್ಪ ಹಾಗೂ ಅವರ ಹೆಂಡತಿ ಸಂಗವ್ವ ಕೆಲಸದ ಬಗ್ಗೆ ಹೊರಗೆ ಹೋಗಿದ್ದು, ಅವರ ಮಗಳು ಮಂಜುಳಾ(15)ರವರು  ಮನೆಯಲ್ಲಿಯೇ ಇದ್ದು, ಸಂಜೆ 6:30ಗಂಟೆಗೆ ಮನೆಗೆ ಬಂದು ನೋಡಿದಾಗ ಮಂಜುಳಾಳು ಮನೆಯಲ್ಲಿ ಇಲ್ಲದೆ ಇದ್ದು, ಅಕ್ಕಪಕ್ಕದ ಮನೆ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗಲೂ ಮಂಜುಳಾಳು ಪತ್ತೆಯಾಗಿರುವುದಿಲ್ಲ. ಶೇಖಪ್ಪರವರ  ಮಗಳಾದ ಮಂಜುಳಾಳನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದು ಎಂಬುದಾಗಿ ಶೇಖಪ್ಪರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 132/15 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕುಂದಾಪುರ: ಪಿರ್ಯಾದಿದಾರರಾದ ರಘು ಪೂಜಾರಿ (43) ತಂದೆ: ದಿವಂಗತ ಪಂಜು ಪೂಜಾರಿ ವಾಸ: ಮರಕಾಣ ನೇರಳಕಟ್ಟೆ, ಕರ್ಕುಂಜೆ ಗ್ರಾಮ, ಕುಂದಾಪುರ ತಾಲೂಕು ಇವರ  ತಮ್ಮ ರಾಘವೇಂದ್ರ ಪೂಜಾರಿ (33) ರವರು ಕುಂದಾಪುರ ಪ್ರಕಾಶ್‌ ನಾವುಡರ ಆಡಳಿತದಲ್ಲಿರುವ ಕುಂದಾಪುರ ಸರಕಾರಿ ಆಸ್ಪತ್ರೆಯ ವಠಾರದಲ್ಲಿರುವ ಲಕ್ಷ್ಮೀ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 01/06/2015 ರಂದು ಸಂಜೆ 5:30 ಗಂಟೆಗೆ ಲಕ್ಷ್ಮೀ ಕ್ಯಾಂಟೀನ್‌ನ ಹೊಗೆ ಕೊಳವೆಗೆ ಸಿಮೆಂಟ್‌ ಹಾಕಲು ತಗಡು ಸೀಟಿನ ಮಾಡಿಗೆ ಹತ್ತಿ ಕೆಲಸ ಮಾಡುತ್ತಿರುವಾಗ ಆಯತಪ್ಪಿ ಕಾಲು ಜಾರಿ ಬಿದ್ದು, ತಲೆಯ ಹಿಂಭಾಗಕ್ಕೆ ತೀವ್ರ ತರದ ಬೆಟ್ಟಾಗಿ , ಕೋಮಾ ಸ್ಥಿತಿಯಲ್ಲಿದ್ದವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು,  ದಿನಾಂಕ 01/07/2015 ರಂದು ಬೆಳಿಗ್ಗೆ 07:45 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ರಘು ಪೂಜಾರಿ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣಾ ಯು.ಡಿ.ಆರ್‌ ನಂ: 25/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

No comments: