Thursday, July 02, 2015

Daily Crime Reports As On 02/07/2015 At 07:00 Hrsಅಪಘಾತ ಪ್ರಕರಣ

  • ಪಡುಬಿದ್ರಿ:ದಿನಾಂಕ. 01/07/2015 ರಂದು 11:30 ಗಂಟೆಗೆ ತೆಂಕ ಎರ್ಮಾಳ್ ಗ್ರಾಮದ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ  66 ರಲ್ಲಿ ಪಿರ್ಯಾದಿದಾರಾದ ಹರೀಶ್ ಕುಲಾಲ್ 30 ವರ್ಷ ತಂದೆ:ದಿ.ದೇಜಪ್ಪ ಕುಲಾಲ್  ವಾಸ:ದೇವಿ ಕೃಪಾ ಹೌಸ್, ಹೌಸ್ ನಂ. 4-106, ಆಕಾಸ್ ಭವನ ಆನಂದ ನಗರ, ಕಾವೂರು ಪೋಸ್ಟ್ ಮಂಗಳೂರು, ದ.ಕ ಜಿಲ್ಲೆ ರವರ ಅಕ್ಕ ಲಲಿತ ಪ್ರಾಯ(38)  ಗಂಡ:ಜನಾರ್ಧನ ಎಂಬವರು ಕಾರ್ಕಳ ನಗರ ಠಾಣೆಯ ಸಿಬ್ಬಂದಿಯವರಾದ ಯಶವಂತರವರ ಮೋಟಾರು ಸೈಕಲ್ ನಂ. ಕೆಎ 20 ಆರ್ 511 ರಲ್ಲಿ  ಕುಳಿತುಕೊಂಡು ಕಾಪುವಿನಲ್ಲಿರುವ ವಾರಂಟು ಅಸಾಮಿಯವರನ್ನು ಪತ್ತೆಯ ಬಗ್ಗೆ ಸಹಕರಿಸಲು ಹೋಗುತ್ತಿದ್ದಾಗ ಯಶವಂತರವರು ಬೈಕ್ ನ್ನು ಅತೀವೇಗವಾಗಿ ಚಲಾಯಿಸಿಕೊಂಡು ಹೋದ ಪರಿಣಾಮ ಸಹಸವಾರರಾದ ಲಲಿತರವರು ಒಮ್ಮೇಲೆ ವಾಲಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಮತ್ತು ಬಲ ಕಾಲಿಗೆ ಪೆಟ್ಟಾಗಿ ಪ್ರಥಮ ಚಿಕಿತ್ಸೆಯನ್ನು ಪ್ರಶಾಂತ ಆಸ್ಪತ್ರೆಯಲ್ಲಿ ಹಾಗೂ ಹೈ-ಟೆಕ್ ಆಸ್ಪತ್ರೆಯಲ್ಲಿ ಪಡೆದು ಬೈಲೂರಿನ  ಆರೂರ್ ನರ್ಸಿಂಗ್ ಹೋಂ ಗೆ ದಾಖಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಠಾಣಾ ಅಪರಾಧಕ್ರಮಾಂಕ ಅ.ಕ್ರ. 89/15 ಕಲಂ 279,338 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಶಂಕರನಾರಾಯಣ:ದಿನಾಂಕ 01/07/15 ರಂದು  12:30  ಘಂಟೆಗೆ ಕುಂದಾಪುರ  ತಾಲೂಕಿನ ಹಳ್ಳಿಹೊಳೆ  ಗ್ರಾಮದ ಮೈಕೋಡು ಮನೆ ಎಂಬಲ್ಲಿ ಆರೋಪಿತರರಾದ ಶ್ರೀಮತಿ ಚೆನ್ನಮ್ಮ ಹಾಗೂ ಶ್ರೀಮತಿ ಲೀಯಾ ರವರು ಪಿರ್ಯಾದಿದಾರರಾದ ಶ್ರೀಮತಿ ಯಮುನಾ( 75) ಗಂಡ ದಿ.ಸುಬ್ರಹ್ಮಣ್ಯ ವಾಸ:ಮೈಕೋಡು ಹಳ್ಳಿಹೊಳೆ ಗ್ರಾಮ ಕುಂದಾಪುರ ರವರ  ಮನೆಯೊಳಗೆ  ಅಕ್ರಮ ಪ್ರವೇಶ ಮಾಡಿ ಯಮುನಾರವರಿಂದ ಕತ್ತಿಯನ್ನು ತೆಗೆದುಕೊಂಡು  ಹೊರಗೆ ಮನೆಯ ಅಂಗಳದಲ್ಲಿ ನಿಲ್ಲಿಸಿದ ಯಮುನಾರವರ ಮಗನಿಗೆ ಸೇರಿದ ಕೆಎ 20 ಝಡ್‌ 4927  ನೇ  ನಂಬ್ರದ ಕಾರಿನ  ಗ್ಲಾಸ್‌ನ್ನು  ಒಡೆದಿದ್ದು. ಈ ಸಮುಯ ಯಮುನಾರವರು  ಬೊಬ್ಬೆ  ಹಾಕಿದಾಗ  ಜೀವ ಬೆದರಿಕೆ  ಹಾಕಿರುತ್ತಾರೆ ಇದರಿಂದ ಯಮುನಾರವರ ಮಗನಿಗೆ ಸುಮಾರು  20,000/- ರೂ ನಷ್ಟವುಂಟಾಗಿರುತ್ತದೆ. ಈ ಬಗ್ಗೆ ಅಪರಾಧ ಕ್ರಮಾಂಕ 146/15 ಕಲಂ:448,427,506(2) ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಬೈಂದೂರು: ದಿನಾಂಕ 01/07/2015 ರಂದು 18:00 ಗಂಟೆಗೆ ಸುದರ್ಶನ್‌ ಎಮ್‌ ವೃತ್ತ ನಿರೀಕ್ಷಕರು  ವರಿಗೆ ಉಪ್ಪುಂದ ಗ್ರಾಮದ ಶೀತಲ್ ಹೋಟೆಲ್ ನ  ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ  ಬೈಂದೂರು ಠಾಣಾ ಉಪ ನಿರೀಕ್ಷಕರವರನ್ನು ಹಾಗೂ ಸಿಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಮಾಹಿತಿ ಬಂದ ಸ್ಥಳಕ್ಕೆ ಬೇಟಿ ನೀಡಿ ಸ್ಥಳದಲ್ಲಿ ಗೋವಿಂದ ಭಂಡಾರಿ(55) ತಂದೆ-ದಿ. ನಾರಾಯಣ, ವಾಸ-ಜನತಾ ಕಾಲೋನಿ, ಉಪ್ಪುಂದ ಗ್ರಾಮ, ಕುಂದಾಪುರ ತಾಲೂಕು ಎಂಬುವವನು ಸಾರ್ವಜನಿಕರಿಂದ ಅಕ್ರಮ ಮಟ್ಕಾ ಜುಗಾರಿ ಆಟಕ್ಕೆ  ಹಣ ಸಂಗ್ರಹಿಸುತ್ತಿದ್ದದನ್ನು ಖಚಿತಪಡಿಸಿಕೊಂಡು ಆತನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಆತನು ತನ್ನ ಸ್ವಂತ ಲಾಭಗೋಸ್ಕರ ಅಕ್ರಮವಾಗಿ ಮಟ್ಕ ಜುಗಾರಿ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದು ತಾನು ಮಟ್ಕಾ ಜುಗಾರಿ ಆಟದಿಂದ ಸಂಗ್ರಿಸಿದ ಹಣವನ್ನು ಮಹಾಬಲ ದೇವಾಡಿಗ ಯಡ್ತರೆ ಗ್ರಾಮ ಎಂಬಾತನಿಗೆ ನೀಡುತ್ತಿದ್ದು ಆತನು ತನಗೆ 100 ರೂಪಾಯಿಗೆ 15 ರೂಪಾಯಿಯಂತೆ ಕಮೀಷನ್‌ ನೀಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆತನು ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು ಹಣ ರೂ 520-/-, ಮಟ್ಕಾ ನಂಬ್ರ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು-1 ನ್ನು ವಶಪಡಿಸಿಕೊಂಡು ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 181/2015 ಕಲಂ 78(1)(3) ಕೆ.ಪಿ ಕಾಯಿದೆ ರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಣಿಪಾಲ: ದಿನಾಂಕ 01.07.15 ರಂದು ನಾಗೇಶ್‌ ಮೇಸ್ತ, ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ರವರು, ರೌಂಡ್ಸ್‌ ಕರ್ತವ್ಯದಲ್ಲಿದ್ದ ಎ.ಎಸ್.ಐ ಆನಂದ ರವರು ನೀಡಿದ ಮಾಹಿತಿಯಂತೆ ಶಿವಳ್ಳಿ ಗ್ರಾಮದ ಇಂಡಸ್ಟ್ರೀಯಲ್ ಏರಿಯಾದ ರಸ್ತೆಯ ಬಳಿಯಿರುವ ಒಂದು ಗೂಡಂಗಡಿ ಬಳಿ 19:30 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆಪಾದಿತ ದಿನೇಶ (27) ತಂದೆ: ನಾರಾಯಣ ನಾಯ್ಕ, ವಾಸ: ಹೆಗಡೆ ಹೊಳೆ ಬದಿ, ಹೆಗಡೆ ಗ್ರಾಮ, ಕುಮಟಾ ತಾಲೂಕು, ಉತ್ತರ ಕನ್ನಡ ಜಿಲ್ಲೆ, ಹಾಲಿ ವಾಸ: ಮಂಜುನಾಥ ರವರ ಹಾಸ್ಟೇಲ್‌, ಶಾಂತಿನಗರ, 80 ಬಡಗುಬೆಟ್ಟು  ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿದ್ದು, ಈತನು ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ನಿಟ್ಟೂರಿನ ಕರುಣಾಕರ ಎಂಬವರಿಗೆ ನೀಡುತ್ತಿದ್ದು, ನಂಬರ್‌ ವಿಜೇತರಿಗೆ ಹಣವನ್ನು ನೀಡಿ, ಉಳಿದ ಹಣವನ್ನು ತಾನು ಮತ್ತು ಕರುಣಾಕರ ರವರು ಸ್ವಂತಕ್ಕೆ ಉಪಯೋಗಿಸುತ್ತಿರುವುದಾಗಿ ತಿಳಿಸಿದ್ದು,  ಆತನಿಂದ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣ 930/- ರೂಪಾಯಿ, ಮಟ್ಕಾ ನಂಬರ್‌ ಬರೆದ ಚೀಟಿ ಹಾಗೂ ಬಾಲ್‌ ಪೆನ್ನನ್ನು ವಶಪಡಿಸಿಕೊಂಡು ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/15 ಕಲಂ 78(1)(3) ಕೆ.ಪಿ ಕಾಯಿದೆ ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: