Wednesday, July 01, 2015

Daily Crime Reports As On 01/07/2015 At 19:30 Hrs

 ಅಪಘಾತ ಪ್ರಕರಣಗಳು
  • ಮಣಿಪಾಲ:ದಿನಾಂಕ 01/07/15 ರಂದು ಪಿರ್ಯಾದಿದಾರರಾದ ಬೊಗ್ರ ಸೇರಿಗಾರ, ತಂದೆ:ತುಕ್ರ ಸೇರಿಗಾರ, ವಾಸ:ನಾಗಲಕ್ಷ್ಮಿನಿಲಯ, ಮೂಡು ಅಲೆವೂರು, ಉಡುಪಿ ಇವರು  ತನ್ನ ಕೆಎ 20 ಎಸ್ 8246ನೇ TVS Exel ಮೊಪೆಡ್‌ನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮೂಡು ಅಲೆವೂರು ಆದರ್ಶನಗರದ ಬಳಿ ಬೆಳಿಗ್ಗೆ 08:15 ಕೆ ತಲುಪುವಾಗೆ ಎದುರಿನಿಂದ ಕೆಎ 20 ಈಎಚ್‌ 2499ನೇದರ ಮೋಟಾರ್ ಸೈಕಲ್‌ ಸವಾರ ನೀಲೋತ್ತಮನು ತಾನು ಸವಾರಿ ಮಾಡಿಕೊಂಡು ಬಂದ ಮೋಟಾರ್ ಸೈಕಲ್‌ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಬೊಗ್ರ ಸೇರಿಗಾರರವರು  ಸವಾರಿ ಮಾಡಿಕೊಂಡು ಬಂದ ವಾಹನಕ್ಕೆ ಢಿಕ್ಕಿ ಹೊಡೆದನು. ಪರಿಣಾಮ ರಸ್ತೆಗೆ ಬಿದ್ದು ಅವರ ಬಲಕಾಲಿಗೆ ಮೂಳೆ ಮುರಿತವಾಗಿದ್ದು, ಬಲಕೈಗೆ ಒಳನೋವು ಉಂಟಾಗಿರುತ್ತದೆ. ಪಿರ್ಯಾದಿದಾರರು ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಈ ಬಗ್ಗೆ ಮಣಿಪಾಲ ಪೊಲೀಸ್‌  ಠಾಣಾ ಅಪರಾಧ ಕ್ರಮಾಂಕ 130/15 ಕಲಂ 279,338 ಐಪಿಸಿ & 134(ಎ)(ಬಿ) ಐಎಮ್‌ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ: ಪಿರ್ಯಾದುದಾರರಾದ ರಾಜೇಶ್ ಪೂಜಾರಿ (28) ತಂದೆ:ಸಂಜೀವ್ ಪೂಜಾರಿ ವಾಸ:ಸಂಪಿಗೆ ನಗರ ಉದ್ಯಾವರ, ಕುತ್ಪಾಡಿ ಅಂಚೆ ಉಡುಪಿ. ರವರು ದಿನಾಂಕ:30/06/2015 ರಂದು ಸಂಜೆ 06:00 ಗಂಟೆ ಸಮಯದಲ್ಲಿ ತಮ್ಮ ಸಹೋದ್ಯೋಗಿ ಕಪೀಲ್ ಸುಹಾಲ್‌ನೊಂದಿಗೆ ಬಲಾಯಿಪಾದೆ ಜಂಕ್ಷನ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-66 ರ ಬದಿಯಲ್ಲಿ ನಿಂತುಕೊಂಡಿರುವಾಗ ಕಟಪಾಡಿ ಕಡೆಯಿಂದ ಕೆಎ 01 ಇಕ್ಯೂ 6390 ನೇ ಮೋಟಾರ್ ಸೈಕಲ್ ಸವಾರ ಪ್ರಕಾಶ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜೇಶ್ ಪೂಜಾರಿರವರೊಂದಿಗೆ ನಿಂತುಕೊಂಡಿದ್ದ ಕಪೀಲ್ ಸುಹಾಲ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು ಬಲಕಾಲಿಗೆ ತೀವ್ರತರಹದ ಜಖಂ ಉಂಟಾಗಿದ್ದು ನಡೆಯಲು ಆಗುತ್ತಿರಲಿಲ್ಲ ಕೂಡಲೇ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು ವೈಧ್ಯಾಧಿಕಾರಿಯವರ ಶಿಪಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌  ಠಾಣಾ ಅಪರಾಧ ಕ್ರಮಾಂಕ 73/2015 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: