Wednesday, July 01, 2015

Daily Crime Reports As On 01/07/2015 At 17:00 Hrs


ಅಪಘಾತ ಪ್ರಕರಣಗಳು
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ಕುಮಾರಿ ದೀಕ್ಷಾ (16) ತಂದೆ:ದಿನೇಶ ಕುಮಾರ್ ವಾಸ:ರಮೇಶ ಕುಮಾರ ಕಂಪೌಂಡ್‌, ಎಂಜಿಎಂ ಲೇಡೀಸ್ ಹಾಸ್ಟೆಲ್ ಬಳಿ ಉಡುಪಿರವರು ದಿನ ದಿನಾಂಕ 01/07/2015 ರಂದು ಬೆಳಿಗ್ಗೆ ಸುಮಾರು 08:50 ಗಂಟೆಗೆ ತನ್ನ ಸ್ನೇಹಿತೆ ಶ್ವೇತಾಳೊಂದಿಗೆ ಎಂ.ಜಿ.ಎಂ. ಕಾಲೇಜ್‌ಗೆ ಹೋಗುವರೇ ಎಂ.ಜಿ.ಎಂ ಬಸ್ಸು ನಿಲ್ದಾಣದ ಬಳಿ ರಸ್ತೆ ದಾಟಲು ನಿಂತಿದ್ದಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಕೆಎ 20 ಇಜಿ  1400 ನೇ ಮೋಟಾರು ಸೈಕಲ್ ಸವಾರ ಮ್ಯಾನ್ಲಿ ಪ್ರಫುಲ್ಸೋನ್ಸ್ಎಂಬಾತನು ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಕುಮಾರಿ ದೀಕ್ಷಾರವರಿಗೆ ಡಿಕ್ಕಿ ಹೊಡೆದ ಪರಿಣಾಮ, ಕುಮಾರಿ ದೀಕ್ಷಾರವರ ಬೆನ್ನಿಗೆ ಹಾಗೂ ಕಾಲಿನ ತೊಡೆಯ ಹಿಂಬದಿಗೆ ರಕ್ತಗಾಯವಾಗಿದ್ದು, ಶ್ವೇತಾಳಿಗೆ ತರಚಿದ  ಗಾಯವಾಗಿರುತ್ತದೆ. ಅಲ್ಲಿ ಸೇರಿದವರು ಗಾಯಾಳುಗಳನ್ನು ಆದರ್ಶ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿರುವುದಾಗಿದೆ. ಅಪಘಾತಕ್ಕೆ ಕೆಎ 20 ಇಜಿ  1400 ನೇ ಮೋಟಾರು ಸೈಕಲ್ ಸವಾರ ಮ್ಯಾನ್ಲಿ ಪ್ರಫುಲ್ಸೋನ್ಸ್ಎಂಬಾತನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 72/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
  • ಅಮಾಸೆಬೈಲು: ದಿನಾಂಕ:30/06/2015 ರಂದು ಪಿರ್ಯಾದಿದಾರರಾದ ಸುಲೇಮಾನ್  (50) ತಂದೆ:ಹುಸೇನ್ ಗಂಡಿಮನೆ, ಅಜಲಮೊಗರು ಪೋಸ್ಟ್, ಮಣಿನಾಲ್ಕೂರು  ಗ್ರಾಮ, ಬಂಟ್ವಾಳ ತಾಲೂಕುರವರು ಕೆಎ 19 ಸಿ 6415 ನಂಬ್ರದ ಟ್ಯಾಂಕರಿನಲ್ಲಿ ಬೈಕಂಪಾಡಿಯಿಂದ ಡಿಸೇಲ್ ತುಂಬಿಸಿಕೊಂಡು ಗಂಗಾವತಿಗೆ ಹೋಗುವರೇ ಸಿದ್ಧಾಪುರ-ಹೊಸಂಗಡಿ ಮಾರ್ಗವಾಗಿ ಚಾಲಕ ಸುಂದರ ಎಂಬವರು ಟ್ಯಾಂಕರ್ ಚಲಾಯಿಸಿಕೊಂಡು ಹೋಗುತ್ತಿರುವಾಗ ರಾತ್ರಿ 10:00 ಗಂಟೆ ಸುಮಾರಿಗೆ ಹೊಸಂಗಡಿ ಗ್ರಾಮದ ಕೆರೆಕಟ್ಟೆ ಸಮೀಪ ರಸ್ತೆಯ ತಿರುವಿನಲ್ಲಿ ಚಾಲಕ ಸುಂದರನು ಟ್ಯಾಂಕರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಎಡಬದಿಗೆ ಚಲಾಯಿಸಿ ಹತೋಟಿ ತಪ್ಪಿ ಎಡಬದಿಯ ಗದ್ದೆಗೆ ಮಗುಚಿ ಬಿದ್ದು ಪರಿಣಾಮ ಟ್ಯಾಂಕರ ಚಾಲಕ ಸುಂದರನಿಗೆ ತರಚಿದ ಗಾಯವಾಗಿ,  ಟ್ಯಾಂಕರ್ ಜಖಂಗೊಂಡು ಅದರಲಿದ್ದ ಡಿಸೇಲ್ ಸೋರಿಕೆಯಾಗಿರುತ್ತದೆ. ಟ್ಯಾಂಕರ್‌ನಲಿದ್ದ ಸುಲೇಮಾನ್‌ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ.ಈ ಬಗ್ಗೆ ಸುಲೇಮಾನ್‌ರವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣಾ ಅಪರಾಧ ಕ್ರಮಾಂಕ 38/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕುಂದಾಪುರ ಸಂಚಾರ:ದಿನಾಂಕ 01/07/2015 ರಂದು ಬೆಳಿಗ್ಗೆ ಸುಮಾರು 11:45 ಗಂಟೆಗೆ  ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಅಂಕದಕಟ್ಟೆ ಶಾಲೆಯ ಬಳಿ, ಸ್ಟಾರ್ ಇಂಡಿಯ, ಸೆಲೂನ್‌ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ಲ್ಲಿ, ಆಪಾದಿತ KA 20 B 9923ನೇ ಕಾರಿನ ಚಾಲಕ ತನ್ನ ಕಾರನ್ನು ಕುಂದಾಪುರ ಕಡೆಯಿಂದ ಕೋಟೇಶ್ವರ ಕಡೆಗೆ ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಾಲನೆ  ಮಾಡಿಕೊಂಡು, ರಸ್ತೆಯ  ತೀರ  ಬಲಬದಿಗೆ  ಬಂದು, ಪಶ್ಚಿಮ ಬದಿಯ  ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಅಂಚಿನಲ್ಲಿ  ರಸ್ತೆ ದಾಟಲು  ನಿಂತುಕೊಂಡಿದ್ದ  ಪಂಜು ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ, ಪಂಜು ಎಂಬವರ ತಲೆಗೆ, ಮುಖಕ್ಕೆ, ಮೈ ಕೈಗೆ  ರಕ್ತಗಾಯ ಉಂಟಾಗಿ ಅಂಕದಕಟ್ಟೆ  ಸರ್ಜನ್  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು, ಹೆಚ್ಚಿನ  ಚಿಕಿತ್ಸೆ  ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 78/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
ಹುಡುಗಿ ಕಾಣೆ ಪ್ರಕರಣ
  • ಅಮಾಸೆಬೈಲು:ಪಿರ್ಯಾದಿದಾರರಾದ ಲೋಕೇಶ್ ಪೂಜಾರಿ (18) ತಂದೆ:ಕೃಷ್ಠ ಪೂಜಾರಿ ವಾಸ:ಹಟ್ಟಿಮನೆ ಕೊಯಿಲಾಡಿ, ಅಮಾಸೆಬೈಲು   ಗ್ರಾಮ, ಕುಂದಾಪುರ ತಾಲೂಕುರವರ ಅಕ್ಕ ರೇಖಾ ಎಂವಳು ಬಿ.ಕಾಂ ಪದವಿ ಮುಗಿಸಿಕೊಂಡು ಮನೆಯಲ್ಲಿದ್ದವಳು ದಿನಾಂಕ 29/06/2015 ರಂದು  ಬೆಳಿಗ್ಗೆ 09:30 ಗಂಟೆಗೆ ಆಕೆಯ ಸ್ನೇಹಿತೆ ತೊಂಬಟ್ಟುವಿನ ಅನುಷಾ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ  ಹೋದವಳು ಅನುಷಾಳ ಮನೆಗೆ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ, ಈ ಬಗ್ಗೆ ಅಮಾಸೆಬೈಲು ಠಾಣಾ ಅಪರಾಧ ಕ್ರಮಾಂಕ 37/2015 ಕಲಂ:ಹುಡುಗಿ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
ಹಲ್ಲೆ ಪ್ರಕರಣ
  • ಬ್ರಹ್ಮಾವರ:ಪಿರ್ಯಾದಿದಾರರಾದ ಸದಾಶಿವ (48) ತಂದೆ:ದಿವಂಗತ ಗಂಗಾಧರ,ವಾಸ:ಉಗ್ಗೇಲ್‌ ಬೆಟ್ಟು, ಜಂಗಮ ಮಠ, ಕೊಳಲಗಿರಿ ಅಂಚೆ, ಉಪ್ಪೂರು ಗ್ರಾಮ, ಉಡುಪಿ ತಾಲೂಕುರವರು ಉಡುಪಿ ತಾಲೂಕು ಉಪ್ಪೂರು ಗ್ರಾಮದ ಉಪ್ಪೂರು ರಿಕ್ಷಾ ನಿಲ್ದಾಣದಲ್ಲಿ ಸ್ವಂತ ರಿಕ್ಷಾವನ್ನು ಹೊಂದಿ ಅದರಲ್ಲಿ ಬಾಡಿಗೆ ಮಾಡಿಕೊಂಡಿರುತ್ತಾರೆ. ಸದಾಶಿವರವರು ಉಪ್ಪೂರು ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಬಾಡಿಗೆ ಮಾಡದಂತೆ ಹಾಗೂ ಸದಾಶಿವರವರನ್ನು ರಿಕ್ಷಾ ನಿಲ್ದಾಣದಿಂದ ಓಡಿಸುವ ಉದ್ದೇಶದಿಂದ ಸದ್ರಿ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾವನ್ನು ಓಡಿಸಿಕೊಂಡಿರುವ ಆಪಾದಿತ ಭಾಸ್ಕರ್‌ ಹಾಗೂ ದೇವರಾಜ ಇವರುಗಳು ಸಮಾನ ಉದ್ದೇಶವನ್ನು ಹೊಂದಿ ದಿನಾಂಕ:30/06/2015 ರಂದು ಮಧ್ಯಾಹ್ನ 1:00 ಗಂಟೆಗೆ ಸದ್ರಿ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾದಲ್ಲಿ ಕುಳಿತಿದ್ದ ಸದಾಶಿವರವರ ಮೇಲೆ ನೀರನ್ನು ಚೆಲ್ಲಿ ಅವಾಚ್ಯ ಶಬ್ದಗಳಿಂದ ಬೈದು “ನಿನ್ನನ್ನು ಈ ರಿಕ್ಷಾ ನಿಲ್ದಾಣದಿಂದ ಓಡಿಸುತ್ತೇವೆ” ಎಂದು ಹೇಳಿ ಹೊಡೆಯಲು ಮುಂದಾದಾಗ,ಸದಾಶಿವರವರು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದು, ಆಗ ಆರೋಪಿತರುಗಳು ಸದಾಶಿವರವರನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 131/15 ಕಲಂ:341, 323, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: