Wednesday, July 01, 2015

Daily Crime Reports As On 01/07/2015 At 07:00 Hrsಅಪಘಾತ ಪ್ರಕರಣಗಳು

  • ಕುಂದಾಪುರ:ದಿನಾಂಕ 30/06/2015 ರಂದು ಮಧ್ಯಾಹ್ನ 1:00 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ ಸಂತೋಷ ನಗರ ಕ್ರಾಸ್  ಬಳಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಸಂತೋಷ.ಎಂ ಎಂಬವರು KA 20 D 1389 ನೇ ಬಸ್ ನ್ನು  ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ತೀರ ಬಲಬದಿಗೆ ಬಂದು ವಂಡ್ಸೆ ಕಡೆಯಿಂದ ಕುಂದಾಪುರ ಕಡೆಗೆ ವೀರಭದ್ರ ರವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ವಿಶ್ವಾಸ್‌ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 02 ER 8883 ನೇ ಸ್ಕೂಟರ್ ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ  ಪರಿಣಾಮ ವೀರಭದ್ರರವರ ತಲೆಗೆ, ಮುಖಕ್ಕೆ, ಕಾಲುಗಳಿಗೆ ಹಾಗೂ ಮೈ ಕೈಗೆ  ರಕ್ತಗಾಯ ಹಾಗೂ ಒಳ ನೋವು ಆಗಿದ್ದು,  ವಿಶ್ವಾಸ್‌ರವರ ಬಲ ಭುಜ,  ಮುಖ, ತಲೆಗೆ, ಕಾಲುಗಳಿಗೆ ಹಾಗೂ  ಮೈ ಕೈಗೆ  ರಕ್ತಗಾಯ ಹಾಗೂ ಒಳ ನೋವು ಆಗಿ ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ಹೆಚ್ಚಿನ  ಚಿಕಿತ್ಸೆ  ಬಗ್ಗೆ ಉಡುಪಿ ಆದರ್ಶ ಆಶ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ.ಈ ಬಗ್ಗೆ ಕುಂದಾಪುರ ಸಂಚಾರ ಠಾಣೆ ಅಪರಾಧ ಕ್ರಮಾಂಕ 77/2015  ಕಲಂ 279 ,337  ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ:ದಿನಾಂಕ: 30/06/2015 ರಂದು 13:30 ಗಂಟೆಗೆ ಉಡುಪಿ ತಾಲೂಕು,ಪೆಜಮಂಗೂರು ಗ್ರಾಮದ ಪುತ್ತನಕಟ್ಟೆ ಎಂಬಲ್ಲಿ ಆರೋಪಿ ರಾಘವೇಂದ್ರ ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ 20 ಇಸಿ 4062 ರಲ್ಲಿ ಮಗುವನ್ನು ಕುಳ್ಳಿರಿಸಿಕೊಂಡು ಸಾಸ್ತಾವು ದೇವಸ್ಥಾನ ಕಡೆಯಿಂದ ಬರುವ ಅಡ್ಡ ರಸ್ತೆಯಲ್ಲಿ ಮೋಟಾರ್ ಸೈಕಲ್‌ನ್ನು ಅತೀವೇಗವಾಗಿ ಚಲಾಯಿಸುತ್ತಾ  ಕೊಕ್ಕರ್ಣೆ-ಬೆಣಗಲ್ಲು ಮುಖ್ಯ ರಸ್ತೆಗೆ ಬಂದು ಕೆಎ 20 ಇಎಫ್ 8149 ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರಿ ಮಾಡುತ್ತಿದ್ದ ಚೈತ್ರಾ ಎಂಬಾಕೆಗೆ ಹಾಗೂ ಸಹಸವಾರರಾಗಿದ್ದ  ಪಿರ್ಯಾದಿದಾರಾದ ಜಯಂತಿ(42)ಗಂಡ:ಕೃಷ್ಣ,ವಾಸ:ಬೆಣಗಲ್,ಪಡುಬೆಟ್ಟು ಪೆಜಮಂಗೂರು ಗ್ರಾಮ ಕೊಕ್ಕರ್ಣೆ ಅಂಚೆ,ಉಡುಪಿ ತಾಲೂಕು ರವರಿಗೆ ಸಾದಾ ಪ್ರಮಾಣದ ರಕ್ತ ಗಾಯವಾಗಿದ್ದು, ಬೈಕ್ ಸವಾರ ರಾಘವೇಂದ್ರ ಹಾಗೂ ಬೈಕಿನಲ್ಲಿದ್ದ ಮಗುವಿಗೂ ಗಾಯವುಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 130/2015 ಕಲಂ: 279,337  ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.   

ಮಟ್ಕಾ ಜುಗಾರಿ ಪ್ರಕರಣಗಳು

  • ಕುಂದಾಪುರ:ದಿನಾಂಕ 30/06/2015 ರಂದು ಟಿ.ಆರ್‌ ಜೈಶಂಕರ್‌ ಪೊಲೀಸ್‌ ನಿರೀಕ್ಷಕರು ಡಿ.ಸಿ.ಐ.ಬಿ ಉಡುಪಿ ಜಿಲ್ಲೆ ಯವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ವಿನಾಯಕ ಟಾಕೀಸ್‌ ಬಳಿ ಇರುವ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು 3-4 ಜನರನ್ನು ಸೇರಿಸಿಕೊಂಡಿದ್ದು, 1/-ರೂ ಗೆ 70/- ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು 15:15 ಗಂಟೆಗೆ ದಾಳಿ ನಡೆಸಿ ಆರೋಪಿ ಜೊರ್ಜ(42) ತಂದೆ:ದಿ.ಫಿಲಿಪ್‌ ಕರೆಲ್ಲೊ ವಾಸ:ಸೈಂಟ್‌ ಪಿಯೂಸ್‌ ಚರ್ಚ್‌ ಬಳಿ, ಕೋಡಿ ರಸ್ತೆ, ಹಂಗಳೂರು ಗ್ರಾಮ, ಕುಂದಾಪುರ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿದ್ದು,ಆರೋಪಿತನು ತಾನು ಮಟ್ಕಾ-ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ಮಟ್ಕಾ ಬಿಡ್ಡರ್‌ ಸುರೇಶ ಎಂಬವರಿಗೆ ನೀಡಿ ಕಮಿಷನ್ ಪಡೆಯುತ್ತಿರುವುದಾಗಿ ತಿಳಿಸಿದ್ದು,ಮಟ್ಕಾ-ಜುಗಾರಿ ಆಟಕ್ಕೆ ಬಳುಸುತ್ತಿದ್ದ ಮಟ್ಕಾ ಚೀಟಿ-1,ಬಾಲ್ ಪೆನ್ನು-1,ನಗದು ರೂ. 2,545/-ನ್ನು ಸ್ವಾಧೀನಪಡಿಸಿಕೊಂಡಿರುದಾಗಿದೆ.ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 252/2015, ಕಲಂ:78 (i) (iii) KP Act ರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಬಸಪ್ಪ ಪಿಎಸ್‌ಐ ಕೋಟ ಪೊಲಿಸ್‌ ಠಾಣೆ ಇವರಿಗೆ ಬಂದ ಮಾಹಿತಿಯಿಂತೆ ಕೋಟ ಠಾಣಾ ಸರಹದ್ದಿನ ಕೋಟ ಗ್ರಾಮದ ವರುಣಾ ಕೆರೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಓರ್ವ ವ್ಯಕ್ತಿಯು ಅಕ್ರಮವಾಗಿ ಸಾರ್ವಜನಿಕರನ್ನು ಸೇರಿಸಿಕೊಂಡು ತನ್ನ ಸ್ವಂತ ಲಾಭಗೋಸ್ಕರ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ, ಮಟ್ಕಾ ನಂಬ್ರವನ್ನು ಚೀಟಿಯಲ್ಲಿ ಪ್ರತಿಯಾಗಿ ಬರೆಯುತ್ತಿರುವುದಾಗಿ  ಬಂದ  ಮಾಹಿತಿಯಂತೆ   ಠಾಣಾ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆಪಾಧಿತರಾದ ಶಂಕರ ಮೋಗವೀರ  (40)ತಂದೆ:ದಿ: ಶೀನ ಮೋಗವೀರವಾಸ:ಕಲ್ಮಾಡಿ ರಸ್ತೆ ಕೋಟ ತಟ್ಟು ಗ್ರಾಮ ಉಡುಪಿ ತಾಲೂಕು  ಇವರನ್ನು ದಸ್ತಗಿರಿ ಮಾಡಿ, ಮಟ್ಕಾ ಬರೆದ ಚೀಟಿ-1, ಬಾಲ್ ಪೆನ್ನು -1  ಹಾಗೂ ಒಟ್ಟು ನಗದು ರೂಪಾಯಿ  985/- ಯನ್ನು ಸ್ವಾಧೀನ ಪಡಿಸಿಕೊಂಡು ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 158/2015 ಕಲಂ:78(1),(3) ಕರ್ನಾಟಕ ಪೊಲೀಸ್  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರ ಪ್ರಕರಣ
  • ಕುಂದಾಪುರ: ಪಿರ್ಯಾದು ಶ್ರೀಮತಿ ಲೀಲಾ (30) ಗಂಡ: ಅಮೀತ್‌ ಗಂಗಾಧರ್‌ ರಾವ್‌ ಇವರು ಕುಂದಾಪುರ ತಾಲೂಕು ಉಪ್ಪಿನಕುದ್ರು ಗ್ರಾಮದ ಪಂಡಿಮನೆ ಎಂಬಲ್ಲಿ ಖಾಯಂ ವಾಸಿಯಾಗಿದ್ದು, ದಿನಾಂಕ 17.02.2014 ರಂದು ಆಪಾದಿತ ಅಮೀತ್‌ ಗಂಗಾಧರ್‌ ರಾವ್‌ ರವರೊಂದಿಗೆ ಉಡುಪಿ ಅಜ್ಜರಕಾಡುವಿನ ಅರೂರು ಲಕ್ಷ್ಮೀ ನಾರಾಯಣ ಸ್ಮಾರಕ ಪುರಭವನ ದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಬಳಿಕ ಉಪ್ಪಿನಕುದ್ರು ಗ್ರಾಮದ ಪಂಡಿಮನೆ ಎಂಬಲ್ಲಿ ಹಾಗೂ ಮುಂಬೈನಲ್ಲಿ ಆಪಾದಿತನು ಪಿರ್ಯಾದುದಾರರಿಗೆ ಸತತ ಮಾನಸಿಕ ದೌರ್ಜನ್ಯ ನೀಡಿದ್ದು, ರಿಯಾ ಶರ್ಮಾ ಎಂಬಾಕೆಯೊಂದಿಗೆ ಸಂಪರ್ಕ ಹೊಂದಿದ್ದನ್ನು ಪಿರ್ಯಾದುದಾರರು ಪ್ರಶ್ನಿಸಿದ್ದಕ್ಕೆ  ಈ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಿದರೆ ನಿನ್ನ ಗತಿ ನೆಟ್ಟಗಿರುವುದಿಲ್ಲ’ ಎಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 250/2015, ಕಲಂ: 498(ಎ), 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಹುಡುಗಿ ಕಾಣೆ
  • ಕುಂದಾಪುರ: ಪಿರ್ಯಾದಿದಾರರಾದ ರ್ಮೊಹಮ್ಮದ್‌ ನಕೀಬ್‌ (20) ತಂದೆ: ಅಬ್ದುಲ್‌ ರಹೀಂ ವಾಸ: ಮುಲ್ಲೆತೋಟ ಮಕ್ಕಿಮನೆ, ಬಸ್ರೂರು ಗ್ರಾಮ, ಕುಂದಾಪುರ ತಾಲೂಕು ಇವರ ತಂಗಿ ಉಲ್ಫಿಯಾ ಪ್ರಾಯ 18 ವರ್ಷ ಎಂಬವರು ದಿನಾಂಕ 29.06.2015 ರಂದು ಬೆಳಿಗ್ಗೆ 07:15 ಗಂಟೆಗೆ ಅವರು ವಾಸ್ತವ್ಯದ ಮನೆಯಾದ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮುಲ್ಲೆತೋಟ ಮಕ್ಕಿಮನೆ ಎಂಬಲ್ಲಿಂದ ಪಕ್ಕದಲ್ಲೆ ಇರುವ ತನ್ನ ದೊಡ್ಡಮ್ಮನ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಪಿರ್ಯಾದುದಾರರು ಕಾಣೆಯಾದವರನ್ನು ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 251/2015, ಕಲಂ: ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ

1 comment:

Gurudarshan Bhandary said...

Respected Sir,

I am writing this comment to inform you that people are facing life threatening danger from the Express Bus KA.20D.1389 i dont know sir when we are going to killed by this driver pls take action as soon as possible.