Wednesday, June 03, 2015

Press Note



ಪತ್ರಿಕಾ ಪ್ರಕಟಣೆ
ಸ್ಪರ್ಧಿಗಳು ಹಾಗೂ ಕಾರ್ಯಕತರ ಅವಗಾಹನೆಗೆ
          ಮಾನ್ಯ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆರವರು ಜಿಲ್ಲೆಯಲ್ಲಿ ದಿನಾಂಕ: 05/06/2015 ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆ ಸಂಬಂಧ ದಿನಾಂಕ: 05/06/2015 ರ ಪೂರ್ವಾಹ್ನ 06:00 ಗಂಟೆಯಿಂದ ದಿನಾಂಕ: 06/06/2015 ರ ಪೂರ್ವಾಹ್ನ 06:00 ಗಂಟೆ ವರೆಗೆ ಸಿಆರ್‌ಪಿಸಿ ಕಲಂ 144 ರ ಅನ್ವಯ ಉಡುಪಿ ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆಯನ್ನು ಜ್ಯಾರಿ ಮಾಡಿರುತ್ತಾರೆ. ಈ ಪ್ರತಿಬಂಧಕಾಜ್ಞೆ ಜ್ಯಾರಿ ಇರುವ ಸಂದರ್ಭದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ವಿಜಯೋತ್ಸವ, ಕರಾಳೋತ್ಸವ, ಪ್ರತಿಭಟನಾ ಮೆರವಣಿಗೆ ಹಾಗೂ ವಿಜಯೋತ್ಸವದ ಅಂಗವಾಗಿ ಸಾರ್ವಜನಿಕ ಸಭೆ- ಸಮಾರಂಭವನ್ನು ಮಾಡುವುದನ್ನು ನಿಷೇಧಿಸಲಾಗಿರುತ್ತದೆ. ಸದ್ರಿ ನಿಷೇಧಾಜ್ಞೆಯು ಸರ್ಕಾರದಿಂದ ಅಥವಾ ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ಅನ್ವಯವಾಗುವುದಿಲ್ಲ.
ಸಾರ್ವಜನಿಕರ ಅವಗಾಹನೆಗೆ
          ಜಿಲ್ಲೆಯಲ್ಲಿ ದಿನಾಂಕ: 05/06/2015 ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆ ಸಂಬಂಧ ದಿನಾಂಕ: 05/06/2015 ರ ಪೂರ್ವಾಹ್ನ 06:00 ಗಂಟೆಯಿಂದ ಮತ ಎಣಿಕೆ ಕಾರ್ಯ ಮುಗಿಯುವವರೆಗೂ ಮತ ಎಣಿಕೆ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯೊಳಗೆ ಮಾತ್ರ ಅನ್ವಯವಾಗುವಂತೆ ಸಂಬಂಧಪಟ್ಟ ತಾಲೂಕು ದಂಡಾಂಧಿಕಾರಿಗಳು ಅಧಿಕಾರವನ್ನು ಚಲಾಯಿಸಿ ಸಿಆರ್‌ಪಿಸಿ ಕಲಂ 144 ರ ಅನ್ವಯ ಪ್ರತಿಬಂಧಕಾಜ್ಞೆಯನ್ನು ಜ್ಯಾರಿ ಮಾಡಿ ಆದೇಶವನ್ನು ಹೊರಡಿಸಲು ಮಾನ್ಯ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆರವರು ಕುಂದಾಪುರ, ಉಡುಪಿ ಹಾಗೂ ಕಾರ್ಕಳ ದಂಡಾಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.

No comments: