Friday, June 19, 2015

Daily Crimes Reports as On 19/06/2015 at 19:30 Hrs



ಅಪಘಾತ ಪ್ರಕರಣ

  • ಪಡುಬಿದ್ರಿ:ದಿನಾಂಕ:14/06/2015 ರಂದು ಬೆಳಿಗ್ಗೆ 06:30 ಗಂಟೆಗೆ ಎರ್ಮಾಳ್ ಬಡಾ ಗ್ರಾಮದ ಎರ್ಮಾಳ್‌ನ ಅಪೂರ್ವ ಬಾರ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ಸರ್ಪುದ್ದೀನ್ (44), ತಂದೆ:ಎ. ಹನೀಫ್ ವಾಸ:ಪೆಂಟಾ ಆರ್ಕೆಡ್, ಪ್ಲ್ಯಾಟ್ ನಂಬ್ರ 101, ರೈಲ್ವೆ ಸ್ಟೇಷನ್ ರಸ್ತೆ, ಇಂದ್ರಾಳಿ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ-20 ಬಿ 1718 ನೇ ಇನೋವಾ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಹಿಂದಿನಿಂದ ಕೆಎ 20 ಝಡ್ 8137 ನೇ ಕಾರಿನ ಚಾಲಕ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸರ್ಪುದ್ದೀನ್‌ರವರ ಕಾರಿನ ಎಡ ಬದಿಯ ಬಾಗಿಲಿಗೆ ಡಿಕ್ಕಿ ಹೊಡೆದ ಪರಿಣಾಮ ಸರ್ಪುದ್ದೀನ್‌ರವರ ಕಾರು ಹತೋಟಿ ತಪ್ಪಿ ರಸ್ತೆಯ ಬಲ ಭಾಗದ ಡಿವೈಡರ್ ಮೇಲೆ ಹತ್ತಿ, ರಸ್ತೆ ಬದಿಯಲ್ಲಿ ಬಿದ್ದ ಪರಿಣಾಮ ಸರ್ಪುದ್ದೀನ್‌ರವರ ಎಡ ತೋಳಿಗೆ ಬಲವಾದ ಜಖಂ ಆಗಿದ್ದು, ಬಲ ಭುಜಕ್ಕೆ, ಕುತ್ತಿಗೆ ಹಾಗೂ ಎದೆಗೆ ಗುದ್ದಿದ ಗಾಯವಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಸರ್ಪುದ್ದೀನ್‌ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 85/15 ಕಲಂ:279, 338  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

ಹುಡುಗಿ ಕಾಣೆ ಪ್ರಕರಣ

  • ಕೋಟ:ಪಿರ್ಯಾದಿದಾರರಾದ ಗೋವಿಂದ ಕುಲಾಲ್ (56) ತಂದೆ:ದಿವಂಗತ ಗಣಪ ಕುಲಾಲ್, ವಾಸ:ಎಂ.ಜಿ.ಕಾಲನಿ, ವಡ್ಡರ್ಸೆ ಗ್ರಾಮ, ಬನ್ನಾಡಿ ಅಂಚೆ, ಉಡುಪಿ ತಾಲೂಕುರವ ಮಗಳು ರೇಶ್ಮಾ (18) ಎಂಬವರು ದಿನಾಂಕ:04/06/2015 ರಂದು ಬೆಳಿಗ್ಗೆ 06:30 ಗಂಟೆಗೆ ಉಡುಪಿ ತಾಲೂಕು ವಡ್ಡರ್ಸೆ ಗ್ರಾಮದ  ಎಂ.ಜಿ ಕಾಲೋನಿ ಎಂಬಲ್ಲಿನ ತನ್ನ ಮನೆಯ ಎದುರಿನ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಎರಡು ದಿನಗಳ ಬಳಿಕ ಪಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ಎರಡು ದಿನಗಳ ಬಳಿಕ ಬರುವುದಾಗಿ ಹೇಳಿದವಳು, ಇದುವರೆಗೂ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 145/2015 ಕಲಂ:ಹುಡುಗಿ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಅಕ್ರಮ ಜಾನುವಾರು ಸಾಗಾಟ ಪ್ರಕರಣ

  • ಬ್ರಹ್ಮಾವರ:ದಿನಾಂಕ:19/06/2014 ರಂದು ಪಿರ್ಯಾದಿದಾರರಾದ ಅನಂತಪದ್ಮನಾಭ ಕೆ.ವಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆರವರು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಪೇತ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಕೆಎ 20 ಎಮ್‌ 4699 ನೇ ಕಾರಿನಲ್ಲಿ ಆರೋಪಿಗಳಾದ 1)ನಿಸಾರ್‌ (28) ತಂದೆ:ಜಿ.ಇಸಾಕ್‌ ಸಾಹೇಬ್‌ ವಾಸ:ಜಾಮಿಯಾ ಮಸೀದಿ ಬಳಿ, ಹೂಡೆ, ಪಡುತೋನ್ಸೆ ಗ್ರಾಮ, ಉಡುಪಿ ತಾಲೂಕು 2)ಸಮೀರ್‌ (21) ತಂದೆ:ಇಕ್ಬಾಲ್‌ ವಾಸ:ಗುಡ್ಡೇರಿ ಕಂಬಳ, ಹೂಡೆ, ಪಡುತೋನ್ಸೆ ಗ್ರಾಮ, ಉಡುಪಿ ತಾಲೂಕು, 3)ಆರೀಫ್, ಕಟಪಾಡಿ ಇವರುಗಳು ಜಾನುವಾರು ಸಾಗಿಸುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಪೇತ್ರಿ ಕಡೆಗೆ ಹೋಗುತ್ತಿದ್ದಾಗ ಮಧ್ಯಾಹ್ನ 12:15 ಗಂಟೆಗೆ ಲಿಟ್ಲರಾಕ್‌ ಶಾಲೆಯ ಬಳಿ ತಲುಪಿದಾಗ ಎದುರಿನಿಂದ ಬರುತ್ತಿದ್ದ ಸದ್ರಿ ಕಾರನ್ನು ನಿಲ್ಲಸಲು ಸೂಚನೆ ನೀಡಿದಾಗ ನಿಲ್ಲಿಸದೇ ಹೇರಂಜೆ ಕಡೆಗೆ ಅತೀ ವೇಗವಾಗಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ, ಹೇರಂಜೆ ಅಣೆಕಟ್ಟು ರಸ್ತೆಯಲ್ಲಿ 12:30 ಗಂಟೆಗೆ ತಲುಪುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ನೀರು ಹೋಗುವ ತೋಡಿಗೆ ಕಾರಿನ ಚಕ್ರ ಹೂತು ಹೋಗಿ ಕಾರು ನಿಂತಿದ್ದು,  ಆರೋಪಿ ಆರೀಫ್, ಕಟಪಾಡಿ ಕಾರಿನಿಂದ ಇಳಿದು ಓಡಿ ಹೋಗಿರುತ್ತಾನೆ. ಕಾರನ್ನು ಪರಿಶೀಲಿಸಿದಾಗ ಆರೋಪಿ ನಿಸಾರ್‌ ಹಾಗೂ ಸಮೀರ್‌ ಇವರುಗಳು ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದು  ಹಿಂಬದಿ ಸೀಟಿನ ಕೆಳ ಬದಿ ಒಂದು ದನದ ಕರು ಇರುವುದು ಕಂಡು ಬಂದಿದ್ದು, ದನದ ಕರುವನ್ನು ಅದರ ಕಾಲುಗಳನ್ನು ನೈಲಾನ್‌ ಹಗ್ಗದಿಂದ ಕಟ್ಟಿ ಕಾಲುಗಳನ್ನು ಮಡಚಿ ಬಗ್ಗಿಸಿ ಹಿಂಸಾತ್ಮಕ ರೀತಿಯಲ್ಲಿ ಮಲಗಿಸಿರುವುದು ಕಂಡು ಬಂದಿರುತ್ತದೆ. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ದನದ ಕರುವನ್ನು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿರುವುದರಿಂದ ಮತ್ತು ಕಾರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಅತೀವೇಗದಿಂದ ಚಲಾಯಿಸಿದ್ದರಿಂದ ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 120/2015 ಕಲಂ 8, 9, 11, ಕರ್ನಾಟಕ ಗೋಹತ್ಯೆ ನಿಷೇದ ಕಾಯ್ದೆ 1964, ಕಲಂ:11 (ಡಿ) ಪ್ರಾಣಿ ಹಿಂಸೆ ನಿಷೇದ ಕಾಯ್ದೆ 1960 ಮತ್ತು ಕಲಂ:192 (ಎ)  ಐ.ಎಮ್.ವಿ. ಕಾಯ್ದೆ ಮತ್ತು ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: